newsfirstkannada.com

ಭಾರತದ ಸ್ನೇಹಿತನಿಂದಲೂ ರಾಮ ಜಪ.. ಪ್ರಾಣ ಪ್ರತಿಷ್ಠಾಪನೆ ದಿನ ನೌಕರರಿಗೆ 2 ಗಂಟೆ ಬ್ರೇಕ್ ಘೋಷಿಸಿದ ದ್ವೀಪರಾಷ್ಟ್ರ..!

Share :

Published January 13, 2024 at 8:06am

    ಅಲ್ಲಿರುವ ಹಿಂದೂ ನೌಕರರಿಗೆ 2 ಗಂಟೆ ಕೆಲಸದಿಂದ ವಿರಾಮ

    ಜ. 22 ರಂದು ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆ ನಡೆಯಲಿದೆ

    ದೇಶದಲ್ಲಿ ಹಬ್ಬದ ವಾತಾವರಣ, ಸುಂದರ ಕ್ಷಣಕ್ಕಾಗಿ ಕಾತುರ

ಅಯೋಧ್ಯೆ ರಾಮಮಂದಿರ ಲೋಕಾರ್ಪಣೆಗೆ ಸಕಲ ಸಿದ್ಧತೆಗಳು ಜೋರಾಗಿ ನಡೆಯುತ್ತಿವೆ. ದೇಶದಲ್ಲಿ ದೊಡ್ಡ ಹಬ್ಬವನ್ನು ಬರಮಾಡಿಕೊಳ್ಳುವ ಎಕ್ಸೈಟ್​​ನಲ್ಲಿ ಜನವರಿ 22ಕ್ಕಾಗಿ ಭಕ್ತರು ಕಾಯುತ್ತಿದ್ದಾರೆ. ಮರ್ಯಾದಾ ಪುರುಷೋತ್ತಮನ ನಾಮ ಜಪ ಕೇವಲ ಭಾರತಕ್ಕೆ ಮಾತ್ರ ಸೀಮಿತವಾಗಿಲ್ಲ. ದೇಶ, ವಿದೇಶಗಳಲ್ಲೂ ಪಸರಿಸಿದೆ.

ಇದೀಗ ಭಾರತದ ಸ್ನೇಹಿತ ಮಾರಿಷಸ್, ಅಲ್ಲಿರುವ ಹಿಂದೂಗಳಿಗೆ ಗುಡ್​ನ್ಯೂಸ್ ನೀಡಿದೆ. ಇತ್ತೀಚೆಗೆ ಮಾರಿಷಸ್ ಸನಾತನ ಧರ್ಮ ಟೆಂಪಲ್ ಫೆಡರೇಶನ್, ಪ್ರಧಾನಿ ಪ್ರವಿಂದ್ ಕುಮಾರ್ ಜಗನ್ನಾಥ್​ಗೆ (Pravind Jugnauth) ಪತ್ರ ಬರೆದಿತ್ತು. ರಾಮ ಮಂದಿರ ಪ್ರಾಣ ಪ್ರತಿಷ್ಠಾಪನಾ ಸಮಾರಂಭವು ಹಿಂದೂ ಧರ್ಮಕ್ಕೆ ಬಹಳ ವಿಶೇಷವಾಗಿದೆ. ಹೀಗಾಗಿ ಜನವರಿ 22 ರಂದು ಅಯೋಧ್ಯೆಯಲ್ಲಿ ನಡೆಯಲಿರುವ ಕಾರ್ಯಕ್ರಮ ವೀಕ್ಷಿಸಲು ಎರಡು ಗಂಟೆಗಳ ವಿರಾಮವನ್ನು ದೇಶದಲ್ಲಿರುವ ಹಿಂದೂಗಳಿಗೆ ನೀಡಬೇಕು ಎಂದು ಮನವಿ ಮಾಡಿಕೊಂಡಿತ್ತು.

ಈ ಮನವಿಯನ್ನು ಪುರಸ್ಕರಿಸಿರುವ ಮಾರಿಷಸ್ ಸರ್ಕಾರ.. ಅಯೋಧ್ಯೆ ರಾಮ ಮಂದಿರದ ಉದ್ಘಾಟನೆ ದಿನದಂದು ಅಲ್ಲಿರುವ ಹಿಂದೂಗಳಿಗೆ ವಿಶ್ರಾಂತಿ ನೀಡಿದೆ. ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಸಮಯದಲ್ಲಿ ಅಲ್ಲಿರುವ ಎಲ್ಲಾ ಹಿಂದೂ ನೌಕರರಿಗೆ ಎರಡು ಗಂಟೆಗಳ ಕಾಲ ವಿರಾಮ ಘೋಷಣೆ ಮಾಡಿದೆ. ಎರಡು ಗಂಟೆಗಳ ವಿಶೇಷ ರಜೆಯನ್ನು ನೀಡಲು ಕ್ಯಾಬಿನೆಟ್ ಒಪ್ಪಿಗೆ ನೀಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಭಾರತದ ಸ್ನೇಹಿತನಿಂದಲೂ ರಾಮ ಜಪ.. ಪ್ರಾಣ ಪ್ರತಿಷ್ಠಾಪನೆ ದಿನ ನೌಕರರಿಗೆ 2 ಗಂಟೆ ಬ್ರೇಕ್ ಘೋಷಿಸಿದ ದ್ವೀಪರಾಷ್ಟ್ರ..!

https://newsfirstlive.com/wp-content/uploads/2024/01/rama-mandira-6.jpg

Load More