Advertisment

MAXimumBlockbuster: ಕಿಚ್ಚ ಸುದೀಪ್ ಫ್ಯಾನ್ಸ್‌ಗೆ ಗುಡ್‌ ನ್ಯೂಸ್‌; ನಾಳೆಯಿಂದ ಮ್ಯಾಕ್ಸ್ ಮ್ಯಾಕ್ಸಿಸಂ ಫಿಕ್ಸ್‌!

author-image
admin
Updated On
MAXimumBlockbuster: ಕಿಚ್ಚ ಸುದೀಪ್ ಫ್ಯಾನ್ಸ್‌ಗೆ ಗುಡ್‌ ನ್ಯೂಸ್‌; ನಾಳೆಯಿಂದ ಮ್ಯಾಕ್ಸ್ ಮ್ಯಾಕ್ಸಿಸಂ ಫಿಕ್ಸ್‌!
Advertisment
  • ಎಲ್ಲಾ ಚಿತ್ರಮಂದಿರಗಳಲ್ಲಿ ಮ್ಯಾಕ್ಸ್‌ ಫಾಸ್ಟ್ ಫಿಲ್ಲಿಂಗ್ ಪ್ರದರ್ಶನ
  • ಮ್ಯಾಕ್ಸ್‌ ಕಥೆ, ಡೈರೆಕ್ಷನ್, ಸುದೀಪ್ ಆ್ಯಕ್ಟಿಂಗ್‌ಗೆ ಫುಲ್ ಮಾರ್ಕ್ಸ್‌!
  • ಸುದೀಪ್ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟ ಮ್ಯಾಕ್ಸ್‌ ತಂಡ

ಸ್ಯಾಂಡಲ್‌ವುಡ್ ಬಾದ್‌ ಷಾ ಕಿಚ್ಚ ಸುದೀಪ್ ಅಭಿನಯದ ಮ್ಯಾಕ್ಸ್‌ ಸಿನಿಮಾ ರಾಜ್ಯಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಅಭಿಮಾನಿಗಳು ಮ್ಯಾಕ್ಸ್‌ ಸಿನಿಮಾದ ಕಥೆ, ಡೈರೆಕ್ಷನ್, ಸುದೀಪ್ ಮಾಸ್ ಆ್ಯಕ್ಟಿಂಗ್‌ಗೆ ಫುಲ್ ಮಾರ್ಕ್ಸ್‌ ಕೊಟ್ಟಿದ್ದಾರೆ. ಮ್ಯಾಕ್ಸ್ ಬಿಡುಗಡೆಯಾದ ಮೊದಲ ದಿನದಿಂದ ಇಲ್ಲಿಯವರೆಗೂ ಎಲ್ಲಾ ಚಿತ್ರಮಂದಿರದಲ್ಲಿ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ.

Advertisment

ಬೆಂಗಳೂರು ನಗರದಲ್ಲಿ ಮ್ಯಾಕ್ಸ್ ಬಿಡುಗಡೆಯಾದ ಎಲ್ಲಾ ಚಿತ್ರಮಂದಿರಗಳಲ್ಲಿ ಫಾಸ್ಟ್ ಫಿಲ್ಲಿಂಗ್ ಪ್ರದರ್ಶನ ಕಾಣುತ್ತಿದೆ. ಮ್ಯಾಕ್ಸ್ ಬ್ಲಾಕ್‌ಬಸ್ಟರ್ ಪ್ರದರ್ಶನ ಕಾಣುತ್ತಿರುವ ಮಧ್ಯೆ ಚಿತ್ರ ತಂಡ ಅಭಿಮಾನಿಗಳಿಗೆ ಗುಡ್‌ನ್ಯೂಸ್‌ ಕೊಟ್ಟಿದೆ.

ಇದನ್ನೂ ಓದಿ: ನಟ ದರ್ಶನ್, ಕಿಚ್ಚ ಸುದೀಪ್ ಅಭಿಮಾನಿಗಳ ಮಧ್ಯೆ ಮತ್ತೆ ವಾರ್! ಬಾಸಿಸಂ ಕಾಲ‌ ಮುಗಿತಾ? VIDEO 

Advertisment


">December 26, 2024

ಮ್ಯಾಕ್ಸ್ ಸಿನಿಮಾ ಪ್ರದರ್ಶನಕ್ಕೆ ರಾಜ್ಯಾದ್ಯಂತ ಭಾರೀ ಬೇಡಿಕೆ ಉಂಟಾಗಿದೆ. ನಾಳೆಯಿಂದ ಮ್ಯಾಕ್ಸ್ ಚಿತ್ರತಂಡ 75 ಥಿಯೇಟರ್‌ನಲ್ಲಿ ಹೆಚ್ಚುವರಿಯಾಗಿ 350 ಶೋ ಪ್ರದರ್ಶನ ಮಾಡಲು ಮುಂದಾಗಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಮ್ಯಾಕ್ಸ್ ಚಿತ್ರತಂಡ ಮ್ಯಾಕ್ಸ್‌ ಸಿನಿಮಾಗೆ ಮ್ಯಾಕ್ಸಿಮಮ್‌ ರೆಸ್ಪಾನ್ಸ್‌ ಸಿಗುತ್ತಾ ಇರೋದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.

ಮ್ಯಾಕ್ಸ್ ಸಿನಿಮಾ ಬಿಡುಗಡೆಯಾದ ಮೊದಲ ದಿನ ಭರ್ಜರಿ ರೆಸ್ಪಾನ್ಸ್ ಸಿಕ್ಕಿತ್ತು. 2ನೇ ದಿನ ಕೂಡ ಉತ್ತಮ ಪ್ರತಿಕ್ರಿಯೆ ಸಿಗುತ್ತಾ ಇದೆ. ಸಿನಿಮಾ ನೋಡಿದ ಅಭಿಮಾನಿಗಳು ಇದು ಫ್ಯಾಮಿಲಿ ಬ್ಲಾಕ್‌ಬಸ್ಟರ್‌ ಹಾಗೂ ಮತ್ತೊಮ್ಮೆ ನೋಡುವ ಸಿನಿಮಾ ಎಂದು ಗ್ಯಾರಂಟಿ ಕೊಡುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment