newsfirstkannada.com

ಅಫ್ಘಾನಿಸ್ತಾನ ವಿರುದ್ಧ ಮ್ಯಾಕ್ಸ್​ವೆಲ್ ಮ್ಯಾಜಿಕ್..​ 21 ಬೌಂಡ್ರಿ, 10 ಸಿಕ್ಸರ್​​​​​​​​​​​​​​​​ ಬಾರಿಸಿದ ಆಸ್ಟ್ರೇಲಿಯನ್​ ಬ್ಯಾಟ್ಸ್​ಮನ್

Share :

Published November 8, 2023 at 8:55am

    ವಾಂಖೆಡೆಯಲ್ಲಿ ವಂಡರ್ ಸೃಷ್ಟಿಸಿದ ಮ್ಯಾಕ್ಸ್​ವೆಲ್

    ಅಜೇಯ 201 ರನ್​ಗಳಿಸಿ ಮಿಂಚಿದ ಗ್ಲೆನ್ ಮ್ಯಾಕ್ಸಿ

    8ನೇ ವಿಕೆಟ್​​ಗೆ ಕಮಿನ್ಸ್​ ಜೊತೆ 202 ರನ್​ ಜೊತೆಯಾಟ

ವಾಂಖೆಡೆ ಮೈದಾನದಲ್ಲಿ ಮ್ಯಾಕ್ಸ್​ವೆಲ್ ವಂಡರ್​ಫುಲ್ ಬ್ಯಾಟಿಂಗ್ ನಡೆಸಿದ್ರು. ಅಘ್ಘಾನಿಸ್ತಾನ ತಂಡವನ್ನ ಏಕಾಂಗಿಯಾಗಿ ಬಗ್ಗು ಬಡಿದು ಮ್ಯಾಕ್ಸಿ, ಅಫ್ಘನ್ನರ ಗೆಲುವಿನ ಕನಸು ನುಚ್ಚುನೂರು ಮಾಡಿದ್ರು. ಮ್ಯಾಕ್ಸ್​ವೆಲ್​ರ ಅಜೇಯ ದ್ವಿಶತಕದ ಆಟ, ಆಸ್ಟ್ರೇಲಿಯಾ ತಂಡವನ್ನ ವಿಶ್ವಕಪ್ ಸೆಮೀಸ್​​ಗೂ ಕೊಂಡೊಯ್ತು.!!

ಟಾಸ್ ಗೆದ್ದ ಅಘ್ಘನ್ ನಾಯಕ ಹಶ್ಮತ್​ವುಲ್ಲಾ ಶಾಹೀದಿ, ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದ್ರು. ಇಬ್ರಾಹಿಂ ಝದ್ರಾನ್​ರ ಅಜೇಯ ಶತಕದ ನೆರವಿನಿಂದ ಅಫ್ಘಾನಿಸ್ತಾನ, 50 ಓವರ್​ಗಳಲ್ಲಿ 5 ವಿಕೆಟ್ ನಷ್ಟಕ್ಕೆ 291 ರನ್ ಗಳಿಸಿತು.

292 ರನ್​​​ಗಳ ಸವಾಲನ್ನ ಬೆನ್ನಟ್ಟಿದ ಆಸ್ಟ್ರೇಲಿಯಾ, ಕೇವಲ 91 ರನ್ ​​​ಗಳಿಸುವಷ್ಟರಲ್ಲೇ 7 ವಿಕೆಟ್ ಕಳೆದುಕೊಂಡು ಸೋಲಿನ ಸುಳಿಗೆ ಸಿಲುಕಿತ್ತು.

8ನೇ ವಿಕೆಟ್​​ಗೆ ಮ್ಯಾಕ್ಸ್​ವೆಲ್ ಮತ್ತು ನಾಯಕ ಪ್ಯಾಟ್​ ಕಮಿನ್ಸ್, ಅಜೇಯ 202 ರನ್​​​ಗಳ ದಾಖಲೆಯ ಜೊತೆಯಾಟವಾಡಿದ್ರು. ಒಂದೆಡೆ ಮ್ಯಾಕ್ಸ್​ವೆಲ್, ಅಫ್ಘನ್ ಬೌಲರ್​ಗಳನ್ನ ಮನಬಂದಂತೆ ದಂಡಿಸ್ತಿದ್ರೆ, ಮತ್ತೊಂದೆಡೆ ಪ್ಯಾಟ್ ಕಮಿನ್ಸ್​, ಮ್ಯಾಕ್ಸಿಗೆ ಸೂಪರ್ ಸಾಥ್​ ನೀಡಿದ್ರು.

ಎರಡು ಜೀವದಾನ ಪಡೆದ ಮ್ಯಾಕ್ಸ್​ವೆಲ್, ವಾಂಖೆಡೆ ಮೈದಾನದಲ್ಲಿ ಭರ್ಜರಿ ದ್ವಿಶತಕ ಸಿಡಿಸಿ ಸಂಭ್ರಮಿಸಿದರು.

ಲೋವರ್​​ ಬ್ಯಾಕ್ ಇಂಜುರಿ ಮತ್ತು​ ಹ್ಯಾಮ್​​ಸ್ಟ್ರಿಂಗ್ ಇಂಜುರಿ ನಡುವೆಯೂ ಛಲಬಿಡದ ಹೋರಾಟ ನಡೆಸಿದ ಮ್ಯಾಕ್ಸಿ, ಏಕಾಂಗಿ ಹೋರಾಟ ನಡೆಸಿ ಆಸ್ಟ್ರೇಲಿಯಾಗೆ ಗೆಲುವು ತಂದುಕೊಟ್ರು.

ಅಂತಿಮವಾಗಿ ಆಸ್ಟ್ರೇಲಿಯಾ, ಇನ್ನೂ 19 ಎಸೆತಗಳು ಬಾಕಿ ಇರುವಂತೆ, ಗೆಲುವಿನ ನಗೆ ಬೀರಿತು. ಮ್ಯಾಕ್ಸ್​ವೆಲ್ 21 ಬೌಂಡರಿ ಮತ್ತು 10 ಭರ್ಜರಿ ಸಿಕ್ಸರ್​ಗಳ ನೆರವಿನಿಂದ ಅಜೇಯ 201 ರನ್ ಗಳಿಸಿದರು.

ಈ ಗೆಲುವಿನೊಂದಿಗೆ ಆಸ್ಟ್ರೇಲಿಯಾ ಸೆಮಿಫೈನಲ್​ಗೆ ಎಂಟ್ರಿ ಕೊಟ್ರೆ, ಅಫ್ಘಾನಿಸ್ತಾನ ಆಘಾತಕ್ಕೆ ಒಳಗಾಯ್ತು..

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಫ್ಘಾನಿಸ್ತಾನ ವಿರುದ್ಧ ಮ್ಯಾಕ್ಸ್​ವೆಲ್ ಮ್ಯಾಜಿಕ್..​ 21 ಬೌಂಡ್ರಿ, 10 ಸಿಕ್ಸರ್​​​​​​​​​​​​​​​​ ಬಾರಿಸಿದ ಆಸ್ಟ್ರೇಲಿಯನ್​ ಬ್ಯಾಟ್ಸ್​ಮನ್

https://newsfirstlive.com/wp-content/uploads/2023/11/Maxwell.jpg

Load More