Advertisment

ಭೂಲಾಭದ ಯೋಗ, ಉತ್ತಮ ಕಾರ್ಯಕ್ಕೆ ದೃಢವಾದ ಸಂಕಲ್ಪ; ಇಲ್ಲಿದೆ ಇಂದಿನ ರಾಶಿ ಭವಿಷ್ಯ!

author-image
admin
Updated On
ಪ್ರೇಮಿಗಳಿಗೆ ಶುಭದಿನ; ಯಾವುದೇ ಕಾರಣಕ್ಕೂ ಆತುರದ ನಿರ್ಧಾರ ಬೇಡ; ಇಲ್ಲಿದೆ ಇಂದಿನ ಭವಿಷ್ಯ
Advertisment
  • ವ್ಯವಹಾರದಲ್ಲಿ ಅಧಿಕ ಲಾಭ, ಇಂದು ಹೆಚ್ಚು ಶ್ರಮದ ದಿನ
  • ವೃತ್ತಿಯಲ್ಲಿ ಅಭಿವೃದ್ಧಿ ಕಾಣುವುದರಿಂದ ಯಶಸ್ಸು ಹೊಂದುತ್ತೀರಿ
  • ವಿದ್ಯಾಭ್ಯಾಸದಲ್ಲಿ ಪ್ರಗತಿ ಕಾಣುತ್ತೀರಿ, ಉದ್ಯೋಗದಲ್ಲಿ ಅನುಕೂಲ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

Advertisment

ಶ್ರೀ ವಿಶ್ವಾವಸುನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖ ಮಾಸ, ಕೃಷ್ಣ ಪಕ್ಷ, ಚತುರ್ಥಿ ತಿಥಿ, ಮೂಲ ನಕ್ಷತ್ರ, ರಾಹುಕಾಲ ಶುಕ್ರವಾರ ಬೆಳಗ್ಗೆ 10.30 ರಿಂದ 12.00 ರವರೆಗೆ

ಮೇಷ ರಾಶಿ

publive-image

  • ಸಾಂಸಾರಿಕವಾದ ಸಾಮರಸ್ಯದಿಂದ ಸಮಾಧಾನ ಸಿಗಲಿದೆ
  • ಇಂದು ಆಕಸ್ಮಿಕ ಧನಲಾಭ ಆಗಲಿದೆ
  • ತಾಳ್ಮೆ ಇರಲಿ ದುಡುಕುತನ ಬೇಡ
  • ಅತಿಯಾದ ಸಂತೋಷದ ಹಿಂದೆ ದುಃಖವಿದೆ
  • ಆದಾಯದ ಮೂಲ ಹೆಚ್ಚಾಗಲಿದೆ
  • ಬಂಧುಗಳಲ್ಲಿ ಅವಿಶ್ವಾಸ ಬೇಸರ ಆಗಬಹುದು
  • ಕುಲದೇವತಾ ಪ್ರಾರ್ಥನೆ ಮಾಡಿ

ವೃಷಭ

publive-image

  • ಹಳೆಯ ವ್ಯವಹಾರಗಳು ಇಂದು ಇತ್ಯರ್ಥವಾಗಬಹುದು
  • ಗುರಿ ಸಾಧನೆಯ ಸಂಕಲ್ಪವನ್ನು ಮಾಡಿ
  • ವಿದ್ಯಾರ್ಥಿಗಳಿಗೆ ಸವಾಲು ಇರಲಿದೆ
  • ಬೇರೆಯವರ ವಿಚಾರದಿಂದ ಸಮಸ್ಯೆಯಾಗಬಹುದು
  • ನೌಕರಿಯ ಸ್ಥಳದಲ್ಲಿ ಯಾವುದೇ ರೀತಿಯ ಮುಂದಾಳತ್ವ ಬೇಡ
  • ಹಿರಿಯರ ಮನಸ್ಸನ್ನು ಗೆಲ್ಲುತ್ತೀರಿ
  • ನವಗ್ರಹರ ಆರಾಧನೆ ಮಾಡಿ
Advertisment

ಮಿಥುನ

publive-image

  • ವ್ಯವಹಾರದಲ್ಲಿ ಅಧಿಕ ಲಾಭ ಕಾಣಬಹುದು
  • ಇಂದು ಹೆಚ್ಚು ಶ್ರಮದ ದಿನ
  • ದೂರ ಪ್ರಯಾಣಕ್ಕೆ ಆದ್ಯತೆ ಬೇಡ
  • ಕಬ್ಬಿಣ ವ್ಯಾಪಾರಿಗಳಿಗೆ ನಷ್ಟ ಆಗಬಹುದು
  • ಬಂಧುಗಳಲ್ಲಿ ಸಂಬಂಧದ ಮಾತು ನಡೆಯಲಿದೆ
  • ಮಂಗಳಕಾರ್ಯಕ್ಕೆ ಸಿದ್ಧತೆಯ ಸಮಯ
  • ಗಣಪತಿಯನ್ನು ಪ್ರಾರ್ಥನೆ ಮಾಡಿ

ಕಟಕ

publive-image

  • ಉದ್ಯೋಗದಲ್ಲಿ ಸ್ಥಾನಮಾನ ಹೆಚ್ಚಾಗಲಿದೆ
  • ಸ್ನೇಹಿತರ ಭೇಟಿ ಆದರೆ ಅಸಮಾಧಾನ ಆಗಲಿದೆ
  • ಆರೋಗ್ಯದ ಬಗ್ಗೆ ಗಮನಹರಿಸಿ
  • ಹಿರಿಯರ ಆಗಮನದಿಂದ ಸಮಾಧಾನ ಸಿಗಲಿದೆ
  • ಇಂದು ಭೂಲಾಭದ ಯೋಗವಿದೆ
  • ಉತ್ತಮ ಕಾರ್ಯಕ್ಕೆ ದೃಢವಾಧ ಸಂಕಲ್ಪ ಮಾಡಿ
  • ಶಿವರಾಧನೆಯನ್ನು ಮಾಡಿ

ಸಿಂಹ

publive-image

  • ಸ್ವಾಭಿಮಾನವಿರಲಿ ಆದರೆ ಸಿಟ್ಟು ಬೇಡ
  • ಮನೆಯಲ್ಲಿ ಅಶಾಂತಿಗೆ ಕಾರಣರಾಗಬೇಡಿ
  • ಸಣ್ಣ ಪುಟ್ಟ ಆಶ್ಚರ್ಯಕರ ಬೆಳವಣಿಗೆಗಳನ್ನು ನೋಡುತ್ತೀರಿ
  • ಇಂದು ಆರ್ಥಿಕವಾಗಿ ಸಮಾಧಾನ
  • ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಕಡೆ ಗಮನಹರಿಸಿ
  • ಉದ್ಯೋಗದಲ್ಲಿ ಸಮಾಧಾನವಿಲ್ಲ
  • ಇಷ್ಟ ದೇವತಾ ಪ್ರಾರ್ಥನೆ ಮಾಡಿ
Advertisment

ಕನ್ಯಾ

publive-image

  • ಮಾನಸಿಕ ಅಸ್ಥಿರತೆಯ ಅನುಭವ ಆಗುತ್ತದೆ
  • ಸ್ವಂತ ಉದ್ಯಮಿಗಳಿಗೆ ಅನುಕೂಲವಿದೆ
  • ಸ್ತ್ರೀಯರಿಗೆ ಮಾನಸಿಕವಾದ ಸಮಾಧಾನವಿಲ್ಲ
  • ದಾಂಪತ್ಯದಲ್ಲಿ ಬಿರುಕು ಹೆಚ್ಚಾಗಲಿದೆ
  • ಆಸ್ತಿಯ ವಿಚಾರ ಬಗೆ ಹರಿಯುವುದಿಲ್ಲ
  • ಮಕ್ಕಳಿಂದ ವಿರೋಧ ವ್ಯಕ್ತವಾಗಬಹುದು
  • ದುರ್ಗಾರಾಧನೆಯನ್ನು ಮಾಡಿ

ತುಲಾpublive-image

  • ವೃತ್ತಿಯಲ್ಲಿ ಅಭಿವೃದ್ಧಿ ಕಾಣುವುದರಿಂದ ಯಶಸ್ಸು ಹೊಂದುತ್ತೀರಿ
  • ಸ್ಥಳ ಬದಲಾವಣೆಯ ಸೂಚನೆ ಇದೆ
  • ದಾಯಾದಿ ಕಲಹ ತಲೆ ದೋರಬಹುದು
  • ಈ ದಿನ ವಿಪರೀತ ಖರ್ಚು ಆಗಲಿದೆ
  • ವಿಷ್ಣು ಸಹಸ್ರನಾಮವನ್ನು ಶ್ರವಣ ಮಾಡಿ

ವೃಶ್ಚಿಕ

publive-image

  • ಅಧಿಕಾರಿಗಳಿಂದ ಪ್ರಶಂಸೆ ಸಿಗಲಿದೆ
  • ನಿರುದ್ಯೋಗಿಗಳಿಗೆ ಮಾನಸಿಕ ಹಿಂಸೆಯಾಗಬಹುದು
  • ಪುಣ್ಯಕ್ಷೇತ್ರ ದರ್ಶನಕ್ಕೆ ಯೋಜನೆ ಹಾಕುತ್ತೀರಿ
  • ಮನೆಯ ವಾತಾವರಣ ಚೆನ್ನಾಗಿರುವುದಿಲ್ಲ
  • ಭವಿಷ್ಯದ ಚಿಂತೆಯಿಂದ ದಿನ ಕಳೆಯುತ್ತೀರಿ
  • ತಾಳ್ಮೆಯಿಂದ ವರ್ತಿಸಿ ಒಳ್ಳೆಯದಾಗಲಿದೆ
  • ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ
Advertisment

ಧನಸ್ಸು

publive-image

  • ವಿದ್ಯಾಭ್ಯಾಸದಲ್ಲಿ ಪ್ರಗತಿ ಕಾಣುತ್ತೀರಿ
  • ಮನೆಯಲ್ಲಿ ಅಶಾಂತಿಯ ವಾತಾವರಣ
  • ಉದ್ಯೋಗದಲ್ಲಿ ಅನುಕೂಲವಿದೆ
  • ಭೂ ಸಂಬಂಧ ವಿಚಾರದಲ್ಲಿ ಕಿರಿಕಿರಿಯಾಗಲಿದೆ
  • ಮಾನಸಿಕವಾಗಿ ಸಮಾಧಾನ ಇರುವುದಿಲ್ಲ
  • ಬಂಧುಗಳ ಮನೆಗೆ ಭೇಟಿ ನೀಡುವ ಸಾಧ್ಯತೆ ಇದೆ
  • ಗಣಪತಿಯನ್ನು ಪ್ರಾರ್ಥನೆ ಮಾಡಿ

ಮಕರ

publive-image

  • ಇಂದು ಶತ್ರುಗಳಿಂದ ಸಮಸ್ಯೆಯಾಗಬಹುದು
  • ಪ್ರಯಾಣದ ಸಾಧ್ಯತೆ ಹೆಚ್ಚಾಗಿದೆ
  • ಹಣ ಬಂದರೂ ಸಮಾಧಾನವಿಲ್ಲ
  • ಉತ್ತಮ ಕಾರ್ಯಕ್ಕೆ ಸಂಕಲ್ಪ ಮಾಡುತ್ತೀರಿ
  • ಉನ್ನತ ಸ್ಥಾನಮಾನ ದೊರೆಯಬಹುದು
  • ಹಲವಾರು ಜನರ ಟೀಕೆಗೆ ಒಳಗಾಗುತ್ತೀರಿ
  • ಲಕ್ಷ್ಮಿ ನಾರಾಯಣ ಹೃದಯ ಸ್ತೋತ್ರವನ್ನು ಶ್ರವಣ ಮಾಡಿ

ಕುಂಭ

publive-image

  • ಸಾಲದ ಬಾಧೆ ತುಂಬಾ ಇರುವ ದಿನ
  • ಅನಾವಶ್ಯಕ ವಿಚಾರಗಳಿಂದ ದೂರ ಇರಿ
  • ಇಂದು ಧನವ್ಯಯ ಆಗಬಹುದು
  • ವಿವಾಹ ಯೋಗಕ್ಕೆ ಭಂಗ ಬರಬಹುದು
  • ವಿದ್ಯಾರ್ಥಿಗಳಿಗೆ ಸಂಕಷ್ಟ ಬರಬಹುದು
  • ಅವಿವಾಹಿತರು ಸರಿಯಾದ ನಿರ್ಧಾರ ಮಾಡಬೇಕು
  • ಗೋಸೇವೆಯನ್ನು ಮಾಡಿ
Advertisment

ಮೀನ 

publive-image

  • ಇಂದು ಶಾಂತಿ ಇಲ್ಲದ ವಾತಾವರಣ
  • ಮನಸ್ಸಿನಲ್ಲಿ ಭಯದ ವಾತಾವರಣ
  • ಈ ದಿನ ಶತ್ರುಗಳ ಕಾಟ ತಪ್ಪಿದ್ದಲ್ಲ
  • ಕೆಲಸ ಕಾರ್ಯಗಳಲ್ಲಿ ನಿರೀಕ್ಷಿತ ಜಯ ಸಿಗಲಿದೆ
  • ಸಮಾಜದಲ್ಲಿ ಗೌರವ ಸಿಗಲಿದೆ
  • ಹಣಕಾಸಿನ ವಿಚಾರದಲ್ಲಿ ಸಮಸ್ಯೆಯಾಗಬಹುದು
  • ನವಗ್ರಹರ ಆರಾಧನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ                          

Advertisment
Advertisment
Advertisment