ವಿದ್ಯೆ, ಉದ್ಯೋಗ, ವ್ಯವಹಾರದಲ್ಲಿ ಹಿನ್ನಡೆ ದಿನ.. ಈ ರಾಶಿಯವರು ತುಪ್ಪದ ದೀಪ ಹಚ್ಚಿ; ಇಲ್ಲಿದೆ ಇಂದಿನ ಭವಿಷ್ಯ!

author-image
Veena Gangani
Updated On
ಪ್ರೇಮಿಗಳಿಗೆ ಶುಭದಿನ; ಯಾವುದೇ ಕಾರಣಕ್ಕೂ ಆತುರದ ನಿರ್ಧಾರ ಬೇಡ; ಇಲ್ಲಿದೆ ಇಂದಿನ ಭವಿಷ್ಯ
Advertisment
  • ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆ ಕಾಡಬಹುದು ತಾತ್ಸಾರ ಮಾಡಬೇಡಿ
  • ನಿಮ್ಮ ಕಾರ್ಯಕ್ಷೇತ್ರದಲ್ಲಿ, ವಿದ್ಯಾಸ್ಥಳಗಳಲ್ಲಿ ಹೊಸ ಅನುಭವ ಸಿಗುವ ದಿನ
  • ಸಂಗೀತ-ಭರತ ನಾಟ್ಯದ ಬಗ್ಗೆ ಒಲವಿರುವವರಿಗೆ ಉತ್ತಮ ಅವಕಾಶವಿದೆ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

ಶ್ರೀ ವಿಶ್ವಾವಸುನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ಪಂಚಮಿ ತಿಥಿ, ಮೂಲ ನಕ್ಷತ್ರ, ರಾಹುಕಾಲ ಶುಕ್ರವಾರ ಬೆಳಗ್ಗೆ 10.30 ರಿಂದ 12.00 ರವರೆಗೆ ಇರಲಿದೆ.

ಮೇಷ ರಾಶಿ

publive-image

  • ಆಸೆ ಇದ್ರು ಅನುಮಾನವಿರುವ ಸಂಸ್ಥೆಗಳಲ್ಲಿ ಹಣ ಹೂಡಿಕೆ ಮಾಡಬೇಡಿ ನಷ್ಟವಾಗಬಹುದು
  • ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆ ಕಾಡಬಹುದು ತಾತ್ಸಾರ ಮಾಡಬೇಡಿ
  • ಮಕ್ಕಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ
  • ಮನೆಯಲ್ಲಿ ಅಗತ್ಯ ವಸ್ತುಗಳ ಸ್ಥಾನ ಪಲ್ಲಟದಿಂದ ಕೋಪ ಬರಬಹುದು
  • ನಿಮ್ಮ ಕೋಪದಿಂದ ಎಲ್ಲರೊಂದಿಗೆ ನಿಷ್ಠುರವಾಗುವ ಸಾಧ್ಯತೆಯಿದೆ
  • ದುರ್ಗಾದೇವಿ ಪ್ರಾರ್ಥನೆ ಮಾಡಿ

ವೃಷಭ

publive-image

  • ನಿಮ್ಮ ಕಾರ್ಯಕ್ಷೇತ್ರದಲ್ಲಿ, ವಿದ್ಯಾಸ್ಥಳಗಳಲ್ಲಿ ಹೊಸ ಅನುಭವ ಸಿಗುವ ದಿನ
  • ವ್ಯವಹಾರದಲ್ಲಿ ದೊಡ್ಡ ಬದಲಾವಣೆ ಕಾಣಬಹುದು
  • ಮೃದುವಾದ ನಡವಳಿಕೆಯಿಂದ ಜನರ ಪ್ರೀತಿ-ವಿಶ್ವಾಸ ಗಳಿಸುತ್ತೀರಿ
  • ಸಂಗೀತ-ಭರತ ನಾಟ್ಯದ ಬಗ್ಗೆ ಒಲವಿರುವವರಿಗೆ ಉತ್ತಮ ಅವಕಾಶವಿದೆ
  • ನಿಮ್ಮ ಮಾತು ಬೇರೆಯವರಿಗೆ ದಾರಿದೀಪ ಆಗಬಹುದು ಸರಿಯಾಗಿ ಮಾರ್ಗದರ್ಶನ ಮಾಡಿ
  • ನಟರಾಜನನ್ನು ಪ್ರಾರ್ಥನೆ ಮಾಡಿ

ಮಿಥುನ

publive-image

  • ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರದಲ್ಲಿ ಹಿನ್ನಡೆಯ ದಿನ
  • ನಿಮ್ಮ ಅತಿಯಾದ ಆತ್ಮವಿಶ್ವಾಸದಿಂದ ತೊಂದರೆ ಸಾಧ್ಯತೆಯಿದೆ
  • ನಿಮ್ಮ ನಂಬಿಕೆಯೇ ಅಹಂಕಾರವಾಗಿ ಪರಿವರ್ತಿತವಾಗಬಹುದು
  • ಅನಗತ್ಯ ವಿಷಯಗಳನ್ನು ಬೇಡ, ದೂರವಿಟ್ಟರೆ ಒಳ್ಳೆಯದು
  • ಕೆಟ್ಟ ಸಹವಾಸವಿರುವ ಜನರಿಂದ ಅವಮಾನ ಆಗಬಹುದು
  • ಸಾಯಂಕಾಲ ಮನೆಯಲ್ಲಿ ಸಣ್ಣ ತೊಂದರೆ ಕಾಣುವ ಸಾಧ್ಯತೆಯಿದೆ
  • ತುಳುಸಿ ಗಿಡದ ಮುಂದೆ ತುಪ್ಪದ ದೀಪ ಹಚ್ಚಿ

ಕಟಕ

publive-image

  • ಸಾಮಾಜಿಕ ಕಾರ್ಯಕ್ಷೇತ್ರಗಳಲ್ಲಿ ಗುರುತಿಸಿಕೊಂಡವರಿಗೆ ಪ್ರತಿಷ್ಠೆ ಹೆಚ್ಚಾಗುವ ದಿನ
  • ಧಾರ್ಮಿಕ ಕಾರ್ಯಗಳಿಗೆ ಹಣದ ಸಹಾಯ ಮಾಡುತ್ತೀರಿ
  • ನಿಮ್ಮ ಕಾರ್ಯ ಒತ್ತಡದಿಂದ ಸಮಯ ಪರಿಪಾಲನೆ ಮಾಡದೇ ಜನರ ಬೇಸರಕ್ಕೆ ಗುರಿಯಾಗುತ್ತೀರಿ
  • ಅಲ್ಪರನ್ನು ತಿರಸ್ಕಾರ ಮಾಡಬೇಡಿ ಅವರಿಂದಲೇ ನಿಮಗೆ ಗೌರವ
  • ಶಿವಾರಾಧನೆ ಮಾಡಿ

ಸಿಂಹ

publive-image

  • ನಿಮ್ಮ ಸಂಗಾತಿ, ಸ್ನೇಹಿತರ ಖುಷಿಗೆ ಕಾರಣರಾಗುತ್ತೀರಿ
  • ಮನೆಯಲ್ಲಿ ಕೆಲವು ಅನಿರೀಕ್ಷಿತ ಬದಲಾವಣೆಗಳಾಗಬಹುದು
  • ಮನೆಯಲ್ಲಿ ಹಲವು ಜನರ ಸಮಾಗಮಾವಾಗಬಹುದು
  • ನಿಮ್ಮ ಸಾಧನೆಗೆ ಗಂಭೀರವಾದ ಪ್ರಶಂಸೆ ಸಿಗಬಹುದು
  • ಹಿರಿಯರ ಆಶೀರ್ವಾದ, ಮಾರ್ಗದರ್ಶನ ಸಿಗುವ ಸದವಕಾಶವಿದೆ
  • ಕುಟುಂಬದಲ್ಲಿ ಸಂತೋಷದ ವಾತಾವರಣ ಇರುತ್ತದೆ ಅದನ್ನು ಉಳಿಸಿಕೊಳ್ಳಿ
  • ದೊಡ್ಡವರನ್ನು ಗೌರವಿಸಿ ಆಶೀರ್ವಾದ ಪಡೆಯಿರಿ

ಕನ್ಯಾ

publive-image

  • ಬೇರೆಯವರ ಮಾತಿನಿಂದ ನಿಮ್ಮ ಜೀವನ ಶೈಲಿಯಲ್ಲಿ ಬದಲಾವಣೆ ಪರ್ವ ಸಾಧ್ಯತೆ
  • ವಿದ್ಯಾರ್ಥಿಗಳಿಗೆ ಶಿಕ್ಷಕರು, ಉದ್ಯೋಗಿಗಳಿಗೆ ಮೇಲಾಧಿಕಾರಿಗಳು ತುಂಬಾ ಅಭಿನಂದನೆ ಸಲ್ಲಿಸುತ್ತಾರೆ
  • ನಿಮ್ಮಲ್ಲಾಗುತ್ತಿರುವ ಬದಲಾವಣೆಗೆ ಹಲವಾರು ಜನ ಮೆಚ್ಚುಗೆ ಪಡುತ್ತಾರೆ
  • ಯಾವುದೇ ಕಾರಣಕ್ಕೂ ದುರಹಂಕಾರ ಬೇಡ
  • ಕುಬೇರನನ್ನು ಪ್ರಾರ್ಥನೆ ಮಾಡಿ

ತುಲಾ

publive-image

  • ಕಾನೂನಿನ ವಿಚಾರದಲ್ಲಿ ಸಣ್ಣ ಸಮಸ್ಯೆ ಎದುರಾಗುವ ಸಾಧ್ಯತೆ
  • ಬೇರೆಯವರ ಮಾತನ್ನು ನಂಬಿ ಇಕ್ಕಟ್ಟಿಗೆ ಸಿಕ್ಕಿಹಾಕಿಕೊಳ್ಳುತ್ತೀರಿ
  • ನಿಮ್ಮ ಕೆಲಸದ ಬಗ್ಗೆ ಗಮನಕೊಡಲು ಸಾಧ್ಯವಾಗದ ಪರಿಸ್ಥಿತಿ ಇರುತ್ತದೆ
  • ಮನೆಯಲ್ಲಿ ಆತಂಕದ ವಾತಾವರಣ ಇರುತ್ತದೆ
  • ವಿದ್ಯಾರ್ಥಿಗಳಿಗೆ ಶಾಲೆಯಿಂದ ಬಿಟ್ಟು ಕಳುಹಿಸುತ್ತಾರೆಂಬ ಭಯ ಕಾಡಬಹುದು
  • ನಿಮ್ಮ ತಪ್ಪಿನ ಅರಿವು ಮಾಡಿಕೊಂಡು ಕ್ಷಮೆಯಾಚಿಸಿದರೆ ಒಳ್ಳೆಯದು
  • ಬನಶಂಕರಿ ದೇವಿಯನ್ನು ಪ್ರಾರ್ಥನೆ ಮಾಡಿ

ವೃಶ್ಚಿಕ

publive-image

  • ಇಂದು ದಾಂಪತ್ಯದಲ್ಲಿ ಸಾಮರಸ್ಯದ ದಿನ
  • ಅನ್ಯೋನ್ಯವಾಗಿ ದೂರದೂರಿಗೆ ಹೊಗಲು ಅವಕಾಶವಿದೆ
  • ಸಂಸಾರದಲ್ಲಿ ಯಾವುದೇ ಭೇದಭಾವ ಇಲ್ಲದೆ ಇನ್ನಷ್ಟು ಹತ್ತಿರವಾಗುವ ದಿನ
  • ಪ್ರಯಾಣದ ವೇಳೆ ಅಶುಭ ವಾರ್ತೆ ಕೇಳಿ ಸಂತೋಷಕ್ಕೆ ಭಂಗ, ಅರ್ಧದಾರಿಯಲ್ಲಿ ವಾಪಸಾಗಬಹುದು
  • ನಿರ್ಮಾಣ ಹಂತದಲ್ಲಿರುವ ಕಟ್ಟಡಕ್ಕೆ ಹಾನಿಯಾಗಬಹುದು
  • ವೈಯಕ್ತಿಕ ಜೀವನಕ್ಕೆ ಪ್ರಾಮುಖ್ಯತೆ ಸಿಗುವುದಿಲ್ಲ
  • ಶನೈಶ್ಚರನನ್ನು ಪ್ರಾರ್ಥನೆ ಮಾಡಿ

ಧನಸ್ಸು

publive-image

  • ನಿಮ್ಮ ಸೋಮಾರಿತನದಿಂದ ಕೆಲಸಗಳ ಮುಂದೂಡಿ, ನಷ್ಟ ಅನುಭವಿಸುತ್ತೀರಿ
  • ಭವಿಷ್ಯದಲ್ಲಿ ಉಳಿದ ಕೆಲಸಗಳೆಲ್ಲಾ ವಿಳಂಬವಾಗುತ್ತವೆ
  • ಮನೆಗೆ ಬಂದ ಅತಿಥಿಗಳ ಸೇವೆಯಲ್ಲಿಯೇ ನಿಮ್ಮ ಸಮಯ ಕಳೆದುಹೊಗುತ್ತದೆ
  • ಭೂಮಿಗೆ- ಆಸ್ತಿಗೆ ಸಂಬಂಧಪಟ್ಟ ಮಾತುಕತೆ ನಡೆಯಬಹುದು ಆದರೆ ಫಲವಿಲ್ಲ
  • ಭೂವರಾಹ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಮಕರ

publive-image

  • ಅಪೂರ್ಣವಾಗಿ ಉಳಿದ ಕೆಲಸಗಳನ್ನು ಮುಗಿಸಲು ಪ್ರಯತ್ನ ಮಾಡಿ
  • ಮಕ್ಕಳಿಗೆ ಶಿಸ್ತು ಕಲಿಸಿ, ಇಲ್ಲದಿದ್ದರೆ ಅವರಿಂದ ಅವಮಾನವಾಗಬಹುದು
  • ಹಿಂದೆ ಮಾಡಿದ್ದ ಹೂಡಿಕೆಯಿಂದ ಇಂದು ಲಾಭ ಸಿಗುವ ಸೂಚನೆ
  • ಇಂದು ಹಣದ ದುರುಪಯೋಗ ಮಾಡಬೇಡಿ
  • ದೊಡ್ಡ ಸಂಸ್ಥೆಯವರು ನಿಮ್ಮನ್ನು ಭೇಟಿ ಮಾಡುವ ಸಾಧ್ಯತೆಯಿದೆ
  • ಮಹಾವಿಷ್ಣುವನ್ನು ಪ್ರಾರ್ಥನೆ ಮಾಡಿ

ಕುಂಭ

publive-image

  • ಎಲ್ಲಾ ಕೆಲಸಗಳಲ್ಲಿ ಹೋರಾಟ ಮಾಡಬೇಕಾದ ದಿನ ಆದರೆ ವ್ಯರ್ಥ ಪ್ರಯತ್ನ
  • ಅನುಚಿತವಾದ ಕೆಲಸಗಳನ್ನು ಆರಂಭ ಮಾಡುತ್ತೀರಿ
  • ನಿಮ್ಮ ಮಾತು ಹಿತ-ಮಿತವಾಗಿರಿಲಿ ಯಾವುದೇ ಕಾರಣಕ್ಕೂ ಕೋಪ ಬೇಡ
  • ಯಾವುದೇ ಕೆಲಸ ಮಾಡಿದರೂ ಫಲಿತಾಂಶ ಶೂನ್ಯವಾಗಿರುತ್ತದೆ
  • ಆರೋಗ್ಯ ಹಾಗೂ ಆಹಾರದ ಬಗ್ಗೆ ಗಮನಹರಿಸಿ
  • ತಾಪಸಮನ್ಯುವನ್ನು ಪ್ರಾರ್ಥನೆ ಮಾಡಿ

ಮೀನ 

publive-image

  • ಉದ್ಯೋಗದ ದೃಷ್ಟಿಯಿಂದ ವರ್ಗಾವಣೆಯಾಗುವ ಸೂಚನೆ ಇದೆ
  • ತಂದೆ-ತಾಯಿ, ಮಕ್ಕಳು ಕೆಲಸದ ನಿಮಿತ್ತ ಬೇರೆಯಾಗುವ ಸಂದರ್ಭ ಬರಬಹುದು
  • ಮನಸ್ಸಿಗೆ ತುಂಬಾ ಬೇಸರವಾಗುವ ದಿನ
  • ಸರಿಯಾದ ತೀರ್ಮಾನಕ್ಕೆ ಬರದೆ ತೊಳಲಾಟವಾಗಬಹುದು
  • ಬುದ್ಧಿವಂತಿಕೆಯಿಂದ ವ್ಯವಹರಿಸಿದರೆ ಮಾತ್ರ ಶುಭವಿದೆ
  • ಸಾಯಿಬಾಬಾರನ್ನು ಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

Advertisment