ವ್ಯವಹಾರದಲ್ಲಿ ದೊಡ್ಡ ಸಾಧನೆ, ವಿದ್ಯಾರ್ಥಿಗಳಿಗೆ ಶುಭಸುದ್ದಿ; ಇಲ್ಲಿದೆ ಇಂದಿನ ಭವಿಷ್ಯ!

author-image
Veena Gangani
Updated On
ಪ್ರೇಮಿಗಳಿಗೆ ಶುಭದಿನ; ಯಾವುದೇ ಕಾರಣಕ್ಕೂ ಆತುರದ ನಿರ್ಧಾರ ಬೇಡ; ಇಲ್ಲಿದೆ ಇಂದಿನ ಭವಿಷ್ಯ
Advertisment
  • ನಿರ್ಮಾಣ ಹಂತದಲ್ಲಿರುವ ಕಟ್ಟಡದ ಬಗ್ಗೆ ಮಾತುಕತೆ ಆಗಲಿದೆ
  • ನಿಮ್ಮ ಸ್ವಭಾವವು ಜನರಿಗೆ ಸ್ಫೂರ್ತಿದಾಯಕವಾಗಿರಲಿದೆ
  • ಮಧುಮೇಹಿಗಳಿಗೆ ತುಂಬಾ ತೊಂದರೆಯ ಸೂಚನೆಯಿದೆ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

ಶ್ರೀ ವಿಶ್ವಾವಸುನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ಪಂಚಮಿ ತಿಥಿ, ಮೂಲ ನಕ್ಷತ್ರ, ರಾಹುಕಾಲ ಭಾನುವಾರ ಸಂಜೆ 4.30 ರಿಂದ 6.00 ರವರೆಗೆ  ಇರಲಿದೆ.

ಮೇಷ ರಾಶಿ

publive-image

  • ಪುಣ್ಯಕ್ಷೇತ್ರದ ದರ್ಶನಕ್ಕಾಗಿ ಹೋಗಬಹುದು
  • ಹೊಸ ಜವಾಬ್ದಾರಿಗಳು ನಿಮ್ಮ ಮೇಲೇರುತ್ತವೆ
  • ಸಾಮಾಜಿಕ ಕೆಲಸಗಳಲ್ಲಿ ಆಸಕ್ತಿ ಇರುವುದಿಲ್ಲ
  • ಪೋಷಕರಿಗೆ ದುಃಖದ ದಿನವಾಗಬಹುದು
  • ನಿರ್ಮಾಣ ಹಂತದಲ್ಲಿರುವ ಕಟ್ಟಡದ ಬಗ್ಗೆ ಮಾತುಕತೆ ಆಗಲಿದೆ
  • ಆಭರಣಗಳ ಬಗ್ಗೆ ಕಾಳಜಿವಹಿಸಿ
  • ಲಲಿತಾ ಪರಮೇಶ್ವರಿಯನ್ನು ಪ್ರಾರ್ಥನೆ ಮಾಡಿ

ವೃಷಭ

publive-image

  • ನಿಮ್ಮ ಸ್ವಭಾವವು ಜನರಿಗೆ ಸ್ಫೂರ್ತಿದಾಯಕವಾಗಿರಲಿದೆ
  • ವ್ಯವಹಾರದಲ್ಲಿ ದೊಡ್ಡ ಮೋಸವಾಗಬಹುದು
  • ಇಂದು ಆರ್ಥಿಕ ನಷ್ಟ ಉಂಟಾಗಬಹುದು
  • ಹೊಸ ಕೆಲಸಕ್ಕೆ ಉತ್ತಮ ದಿನವಲ್ಲ
  • ಧಾರ್ಮಿಕ ಚಟುವಟಿಕೆ ಆತ್ಮ ಸ್ಥೈರ್ಯ ತುಂಬಬಹುದು
  • ಉಮಾ ಮಹೇಶ್ವರನನ್ನು ಆರಾಧನೆ ಮಾಡಿ

ಮಿಥುನ

publive-image

  • ಸಹೋದ್ಯೋಗಿಗಳ ಸಹಕಾರ ಇಲ್ಲದಿರುವುದರಿಂದ ಬೇಸರವಾಗಬಹುದು
  • ಮಧುಮೇಹಿಗಳಿಗೆ ತುಂಬಾ ತೊಂದರೆಯ ಸೂಚನೆಯಿದೆ ಜಾಗ್ರತೆವಹಿಸಿ
  • ಮನೆಯವರಿಗೆ ಆತಂಕ ಉಂಟಾಗಬಹುದು
  • ಯಾರನ್ನೂ ಕೂಡ ಅತಿಯಾಗಿ ನಂಬಬಾರದು
  • ಹಳೆಯ ವಿಚಾರಗಳು ನಿಮಗೆ ಒತ್ತಡ ತರಬಹುದು
  • ಮಕ್ಕಳ ಬಗ್ಗೆ ಕಾಳಜಿವಹಿಸಿ
  • ವಿಷ್ಣುವಿನ ಮಂತ್ರ ಜಪಿಸಿ

ಕಟಕ

publive-image

  • ಮನೆಗೆ ಗಣ್ಯವ್ಯಕ್ತಿಗಳು ಬರಬಹುದು
  • ಮನೆಯಲ್ಲಿ ಸಂತೋಷದ ವಾತಾವರಣ ಇರಲಿದೆ
  • ವ್ಯವಹಾರದಲ್ಲಿ ದೊಡ್ಡ ಸಾಧನೆಗೆ ಅವಕಾಶವಿದೆ
  • ಸರ್ಕಾರಿ ನೌಕರರಿಗೆ ಬಡ್ತಿ ಸಿಗಬಹುದು
  • ಖಾಸಗಿ ಉದ್ಯೋಗಿಗಳ ಕಾರ್ಯಕ್ಷೇತ್ರ ವಿಸ್ತರಣೆಯಾಗಬಹುದು
  • ಸ್ನೇಹಿತರೊಂದಿಗೆ ಚರ್ಚೆ ಮಾಡುವುದರಿಂದ ಸಮಾಧಾನ ಆಗಲಿದೆ
  • ಗೋಮಾತೆಯನ್ನು ಪ್ರಾರ್ಥನೆ ಮಾಡಿ

ಸಿಂಹ

publive-image

  • ಸ್ಥಳ ಬದಲಾವಣೆಯಿಂದ ಅನುಕೂಲವಿದೆ
  • ವ್ಯಾಪಾರದಲ್ಲಿ ಹಿನ್ನೆಡೆ, ಪದಾರ್ಥಗಳ ಬೆಲೆ ವ್ಯತ್ಯಯ
  • ಆದಾಯದ ಜಾಡು ಹಿಡಿದು ಹೋದಲ್ಲಿ ಸಫಲತೆಯಿದೆ
  • ಮಾನಸಿಕ ಸಮಾಧಾನ ಇರುವುದಿಲ್ಲ
  • ಜನರನ್ನ ಮೆಚ್ಚಿಸಲು ಪಡಬೇಕಾಗುತ್ತದೆ
  • ಸಾಯಂಕಾಲಕ್ಕೆ ಸ್ವಲ್ಪ ನೆಮ್ಮದಿಯ ನಿಟ್ಟುಸಿರು
  • ಐಶ್ವರ್ಯಲಕ್ಷ್ಮಿಯನ್ನ ಪ್ರಾರ್ಥನೆ ಮಾಡಿ

ಕನ್ಯಾ

publive-image

  • ಹಣ್ಣು ವ್ಯಾಪಾರಿಗಳಿಗೆ ಲಾಭದ ದಿನ
  • ದೊಡ್ಡ ಉದ್ಯೋಗಸ್ಥರಿಗೆ ರಾಷ್ಟ್ರ ಮಟ್ಟದಲ್ಲಿ ಹಿನ್ನಡೆಯಾಗಬಹುದು
  • ಇಂದು ಧನಾಗಮನದ ಸೂಚನೆಯಿದೆ
  • ಶೈಕ್ಷಣಿಕವಾಗಿ ಗುಣಮಟ್ಟ ಕಾಪಾಡಿಕೊಳ್ಳಬಹುದು
  • ಆತ್ಮೀಯರ ಭೇಟಿ, ಭೋಜನ ಸುಖವೆನಿಸುತ್ತದೆ
  • ಮಕ್ಕಳು ಜಾಗ್ರತೆಯಲ್ಲಿದ್ದರೆ ಒಳ್ಳೆಯದು
  • ಸುಬ್ರಹ್ಮಣ್ಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ತುಲಾ

publive-image

  • ಮನೆಯಲ್ಲಿ ಶುಭಕಾರ್ಯಗಳು ಸ್ಥಗಿತವಾಗುವ ಭಯ ಕಾಡಬಹುದು
  • ಮನೆಯವರಲ್ಲಿ ಪರಸ್ಪರ ಹೊಂದಾಣಿಕೆಯಿರುವುದಿಲ್ಲ
  • ಸಾಲದ ವಿಚಾರದಲ್ಲಿ ತೊಂದರೆಯಾಗಬಹುದು
  • ಇಂದು ವ್ಯವಹಾರದಲ್ಲಿ ಬದಲಾವಣೆಯಾಗಲಿದೆ
  • ಲೆಕ್ಕ ಪರಿಶೋಧಕರಿಗೆ ಲಾಭದ ದಿನ
  • ಹವಾಮಾನ ವೈಪರೀತ್ಯದಿಂದ ಆರೋಗ್ಯದಲ್ಲಿ ವ್ಯತ್ಯಯ ಉಂಟಾಗಬಹುದು
  • ಶರಭೇಶ್ವರನನ್ನು ಪ್ರಾರ್ಥನೆ ಮಾಡಿ

ವೃಶ್ಚಿಕ

publive-image

  • ನಿಂತು ಹೋಗಿದ್ದ ಕೆಲಸ ಪುನರಾರಂಭವಾಗಲಿದೆ
  • ಸ್ನೇಹಿತರ ಸಹಾಯದಿಂದ ಹಿಂದೆ ಸರಿಯಬಾರದು
  • ಚಿತ್ರರಂಗದವರಿಗೆ ಉತ್ತಮವಾದ ಕಾಲ
  • ಗುತ್ತಿಗೆದಾರರಿಗೆ ಹಿನ್ನಡೆಯಾಗಬಹುದು
  • ಅನುಭವಿಗಳ ಮಾತು ವಿರುದ್ಧವಾಗಿ ಪರಿಣಮಿಸಬಹುದು
  • ಹಣದ ವಿಚಾರದಲ್ಲಿ ಕೋಪ ಬರಬಹುದು
  • ಗುರು ದತ್ತಾತ್ರೇಯರನ್ನು ಪೂಜಿಸಿ

ಧನಸ್ಸು

publive-image

  • ಸಹೋದ್ಯೋಗಿಗಳ ಸ್ವಭಾವ ಅಥವಾ ವರ್ತನೆ ಬೇಸರ ತರಬಹುದು
  • ಹಲ್ಲಿಗೆ ಸಂಬಂಧಿಸಿದ ತೊಂದರೆ ಅಥವಾ ನೋವು ಕಾಣಬಹುದು
  • ರಾಜಕೀಯ ವ್ಯಕ್ತಿಗಳು ಸಂಪರ್ಕಕ್ಕೆ ಬಂದು ಸಹಾಯ ಮಾಡಬಹುದು
  • ವಿದ್ಯಾರ್ಥಿಗಳಿಗೆ ಸ್ವಲ್ಪ ಸಮಸ್ಯೆಗಳಾಗಬಹುದು
  • ಅನಾವಶ್ಯಕ ವಿಚಾರಗಳಿಂದ ಮನಸ್ತಾಪ ಉಂಟಾಗಬಹುದು
  • ಶತ್ರುಗಳ ವಿರುದ್ಧ ಹೋರಾಟ ಮಾಡಬೇಡಿ ಶಾಂತವಾಗಿರಿ
  • ಪಾರಿಜಾತ ಸರಸ್ವತಿಯನ್ನು ಪ್ರಾರ್ಥನೆ ಮಾಡಿ

ಮಕರ

publive-image

  • ಸಾಮಾಜಿಕವಾಗಿ ನಿಮ್ಮ ಹೆಸರು ಪರಿಗಣಿಸಲ್ಪಡುತ್ತದೆ
  • ಮನೆ ಅಥವಾ ಉದ್ಯೋಗ ಎರಡೂ ಕಡೆಗಳಲ್ಲಿ ಸಮಸ್ಯೆ ಕಾಣಲಿದೆ
  • ಆರೋಗ್ಯದ ಬಗ್ಗೆ ಕಾಳಜಿವಹಿಸಿ
  • ಹೊಟ್ಟೆಕಿಚ್ಚಿನ ಜನ ನಿಮ್ಮನ್ನು ದೂಷಿಸಬಹುದು
  • ಅಲ್ಪ ತೃಪ್ತಿಯ ಕೆಲಸವನ್ನು ಮಾಡಬೇಡಿ
  • ಮನೆಯ ಅಲಂಕಾರಕ್ಕೆ ಹಣ ಖರ್ಚು ಆಗಲಿದೆ
  • ಕುಲದೇವತಾರಾಧನೆ ಮಾಡಿ

ಕುಂಭ

publive-image

  • ಬಂಧುಗಳಲ್ಲಿ ಪರಸ್ಪರ ವಿರೋಧ ಉಂಟಾಗಬಹುದು
  • ಮಂಗಳ ಕಾರ್ಯ ನಿಂತು ಹೋಗುವ ಭಯ ಇರುತ್ತದೆ
  • ಹಣದ ಸಮಸ್ಯೆ ಇಲ್ಲದಿದ್ದರೂ ವಿನಾಕಾರಣ ವೆಚ್ಚ
  • ಮಾನಸಿಕ ಅದಃ ಪತನವಾಗುವುದು
  • ಸಮಾಜದಲ್ಲಿ ಅವಮಾನ, ಅಪಕೀರ್ತಿ ದಿನ
  • ಕುಟುಂಬದವರಲ್ಲಿ ಮಾತುಕತೆ ತುಂಬಾ ಪರಿಣಾಮಕಾರಿಯಾಗಿರುತ್ತದೆ
  • ವೆಂಕಟರಮನನ್ನ ಪ್ರಾರ್ಥನೆ ಮಾಡಿ

ಮೀನ 

publive-image

  • ಶಾಂತಿಯಾಗಿರುವುದು, ಮೌನವಾಗಿರುವುದು ನಿಮಗೆ ಉತ್ತಮ
  • ಉದ್ಯೋಗ ಆಕಾಂಕ್ಷಿಗಳಿಗೆ ಶುಭ ಸುದ್ದಿ ಸಿಗಬಹುದು
  • ಲೇಖಕರಿಗೆ, ಪುಸ್ತಕ ವ್ಯಾಪಾರಸ್ಥರಿಗೆ ಅನುಕೂಲಕರ ದಿನ
  • ಹಳೆಯ ಬಾಕಿ ಅಥವಾ ನಿರೀಕ್ಷೆಯಲ್ಲಿದ್ದ ವಿಚಾರ ಮುನ್ನೆಲೆಗೆ ಬರಬಹುದು
  • ನಿಮ್ಮ ಆರೋಗ್ಯ ಗಮನಿಸಿ ತಾತ್ಸಾರ ಮಾಡಬೇಡಿ
  • ಹಳೆಯ ನೆನಪುಗಳು ಕಾಡಬಹುದು
  • ಚೌಡೇಶ್ವರಿಯನ್ನ ಕೆಂಪು ಹೂಗಳಿಂದ ಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

Advertisment