Advertisment

ಭೂಮಿ ಖರೀದಿ, ಆರ್ಥಿಕ ಲಾಭ.. ಈ ರಾಶಿಯವರಿಗೆ ಇಂದು ಜಾಕ್‌ಪಾಟ್‌ ಸುದ್ದಿ; ಇಲ್ಲಿದೆ ಇಂದಿನ ರಾಶಿ ಭವಿಷ್ಯ!

author-image
admin
Updated On
ಪ್ರೇಮಿಗಳಿಗೆ ಶುಭದಿನ; ಯಾವುದೇ ಕಾರಣಕ್ಕೂ ಆತುರದ ನಿರ್ಧಾರ ಬೇಡ; ಇಲ್ಲಿದೆ ಇಂದಿನ ಭವಿಷ್ಯ
Advertisment
  • ಅನಿರೀಕ್ಷಿತ ಪ್ರಯಾಣ ಮಾಡುವುದರಿಂದ ಹಣ ಖರ್ಚು ಆಗಲಿದೆ
  • ನಿಮ್ಮ ಕಾರ್ಯಕ್ಷೇತ್ರದಲ್ಲಿ ಅದ್ಭುತವಾದ ಯಶಸ್ಸನ್ನು ಕಾಣುತ್ತೀರಿ
  • ಸಂಗಾತಿ, ಸ್ನೇಹಿತರು, ಬಂಧುಗಳಿಂದ ನಿಮ್ಮ ಕೆಲಸಕ್ಕೆ ಉತ್ತಮ ಬೆಂಬಲ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

Advertisment

ಶ್ರೀ ವಿಶ್ವಾವಸುನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜ್ಯೇಷ್ಠ ಮಾಸ, ಶುಕ್ಲಪಕ್ಷ, ಪಂಚಮಿ ತಿಥಿ, ಪುಷ್ಯಾ ನಕ್ಷತ್ರ, ರಾಹುಕಾಲ ಶನಿವಾರ ಬೆಳಗ್ಗೆ 9.00ರಿಂದ 10.30 ರವರೆಗೆ

ಮೇಷ ರಾಶಿ

publive-image

  • ಆಲೋಚನೆ ಮತ್ತು ತತ್ವ ಸಿದ್ಧಾಂತಗಳಿಂದ ಜನರನ್ನ ಪ್ರಭಾವಶಾಲಿಯನ್ನಾಗಿಸುವ ಸಾಧ್ಯತೆ ಇದೆ
  • ಮಾರ್ಕೆಂಟಿಂಗ್‌ನಲ್ಲಿರುವವರಿಗೆ ಉತ್ತಮ ಅವಕಾಶಗಳಿರುತ್ತದೆ
  • ನಿಮ್ಮ ಕಾರ್ಯಕ್ಷೇತ್ರದಲ್ಲಿ ಅದ್ಭುತವಾದ ಯಶಸ್ಸನ್ನು ಕಾಣುತ್ತೀರಿ
  • ಭೂಮಿ ಖರೀದಿ, ಆರ್ಥಿಕ ಲಾಭ ಆಗಲಿದೆ
  • ಬಡ ವಿದ್ಯಾರ್ಥಿಗಳಿಗೆ ನಿಮ್ಮ ಕೈಲಾದ ಸಹಾಯ ಮಾಡಿ

ವೃಷಭ

publive-image

  • ಸಂಗಾತಿ, ಸ್ನೇಹಿತರು, ಬಂಧುಗಳಿಂದ ನಿಮ್ಮ ಕೆಲಸಕ್ಕೆ ಉತ್ತಮ ಬೆಂಬಲ ಸಾಧ್ಯತೆ
  • ಆಹಾರ ಸೇವನೆಗೆ ತುಂಬಾ ಹಣ ಖರ್ಚು ಮಾಡುತ್ತೀರಿ
  • ನಿಮ್ಮ ಜೀವನ ಶೈಲಿಯಲ್ಲಿ ಸಣ್ಣ ಪುಟ್ಟ ಬದಲಾವಣೆಯಾಗಬಹುದು
  • ಉದ್ಯೋಗಿಗಳಿಗೆ ಮೇಲಾಧಿಕಾರಿಗಳ ಒತ್ತಡ ಹಿಂಸೆಯಾಗುತ್ತದೆ
  • ಕೋರ್ಟ್ ವಿವಾದಗಳು ಹೆಚ್ಚಾಗಬಹುದು
  • ಈಶ್ವರನನ್ನು ಪ್ರಾರ್ಥನೆ ಮಾಡಿ
Advertisment

ಮಿಥುನ

publive-image

  • ನಿಮ್ಮ ಕೆಲಸದಲ್ಲಿ ವ್ಯತ್ಯಯ ಕಾಣಬಹುದು
  • ದಿಢೀರ್​ ಶೀತ, ತಲೆ ನೋವು, ಆಯಾಸ ನಿಮ್ಮನ್ನ ಕಾಡಬಹುದು ಎಚ್ಚರಿಕೆ ಇರಲಿ
  • ಹೃದಯ ಸಂಬಂಧಿ ತೊಂದರೆಯಿರುವವರು ಗಮನವಿಟ್ಟು ಕಾರ್ಯಕ್ಷೇತ್ರದಲ್ಲಿ ತೊಡಗಿಸಿಕೊಳ್ಳಿ
  • ಅವಕಾಶವಿದ್ದರೆ ವಿಶ್ರಾಂತಿ ಪಡೆಯಿರಿ
  • ಕುಟುಂಬದಲ್ಲಿ ಸಮಸ್ಯೆಗಳು ಕಾಡಬಹುದು
  • ಕೆಲಸಕ್ಕೆ ಸಂಬಂಧಿಸಿದ ಹಣವು ನಿಮ್ಮ ಕೈ ಸೇರಲಿದೆ
  • ಯಜ್ಞೇಶ್ವರನನ್ನು ಪ್ರಾರ್ಥಿಸಿ

ಕಟಕ

publive-image

  • ಮನೆಯಲ್ಲಿ ಏನೇ ಸಮಸ್ಯೆಗಳಿದ್ದರು ಜಗಳ ಮಾಡಬೇಡಿ
  • ಮನಸ್ಸಿನಲ್ಲಿ ತುಂಬಾ ಭಯ ಮನೆ ಮಾಡಿರುತ್ತದೆ
  • ಬೇರೆಯವರ ಸಲಹೆಗೆ ಹೆಚ್ಚಿನ ಮಾನ್ಯತೆ ಬೇಡ
  • ಪ್ರೇಮಿಗಳಿಗೆ ಆಘಾತ ಆಗಬಹುದು
  • ಹೊಸ ಒಪ್ಪಂದವಿದ್ದರೆ ಮುಂದೂಡಿದರೆ ಒಳ್ಳೆಯದು
  • ಮನೆಯಿಂದ ಹೊರಗಡೆ ಹೊರಡುವಾಗ ಶಾಂತವಾಗಿರಿ
  • ಯಾವುದೇ ವಿಚಾರಗಳಿಗೆ ಭಯ ಬೇಡ
  • ಕಾಲಭೈರವರ ಸ್ಮರಣೆ ಮಾಡಿ

ಸಿಂಹ

publive-image

  • ಉದ್ಯೋಗದಲ್ಲಿ ನಿಮ್ಮ ಸೇವೆ ಗುರುತಿಸಲ್ಪಡುತ್ತದೆ
  • ಕೊಡುಗೆಗಳು ನಿಮಗೆ ದೊರೆಯಲಿದೆ
  • ಹೊಸ ಜನರ ಸಂಪರ್ಕ ಆಗಬಹುದು
  • ಕೌಟುಂಬಿಕ ಸಾಮರಸ್ಯ ಇರಲಿದೆ
  • ಅನುಭವಿಗಳ ಆದೇಶ ಸಿಗಬಹುದು
  • ಮಕ್ಕಳಿಂದ ಉತ್ತಮ ಸಮಾಚಾರ ಖುಷಿ ಕೊಡುತ್ತದೆ
  • ಕುಟುಂಬಕ್ಕೆ ಹೊಸಬರ ಪರಿಚಯ ಆಗಲಿದೆ
  • ಕುಲದೇವರ ಪ್ರಾರ್ಥನೆ ಮಾಡಿ
Advertisment

ಕನ್ಯಾ

publive-image

  • ನಿಮ್ಮ ವೈಯಕ್ತಿತ ವಿಚಾರಗಳು ಸಾಮಾಜಿಕವಾಗಿ ಅವಮಾನಿತರಾಗುತ್ತೀರಿ
  • ಅರ್ಧಕ್ಕೆ ನಿಂತ ಕೆಲಸದಿಂದ ಹಣ ನಷ್ಟವಾಗುವ ಸಾಧ್ಯತೆ
  • ಮನೆಯಲ್ಲಿರುವ ವಸ್ತು ಉಪಯೋಗಕ್ಕೆ ಬರದೆ ಹಣ ನಷ್ಟವಾಗಬಹುದು
  • ನಿಮ್ಮ ಕೆಲಸಕ್ಕಾಗಿ ಬೇರೆಯವರನ್ನ ಅವಲಂಬಿಸಬೇಡಿ
  • ಆರ್ಥಿಕ ಹೊಡೆತ ಮನಸ್ಸಿಗೆ ಆತಂಕ ಆಗಬಹುದು
  • ಗಜಲಕ್ಷ್ಮಿಯನ್ನ ಆರಾಧನೆ ಮಾಡಿ
  • ದೇವಿಗೆ ಹಾಲು, ಜೇನುತುಪ್ಪದ ಅಭಿಷೇಕ ಮಾಡಿಸಿ

ತುಲಾpublive-image

  • ಹಳೆಯ ಸಾಲದ ಬಾಕಿಗೆ ಇವತ್ತು ಮೂಹೂರ್ತ ಒದಗಿ ಬರಬಹುದು
  • ಮೇಲಾಧಿಕಾರಿಗಳಿಂದ ನಿಮ್ಮ ಕಾರ್ಯವೈಖರಿಗೆ ತೃಪ್ತರಾಗುತ್ತಾರೆ
  • ದೊಡ್ಡವರಿಗೆ ನೀವು ಹತ್ತಿರವಾಗುತ್ತೀರಿ
  • ಇಂದು ಕಿರಿಯರಿಗೆ ನಿಮ್ಮ ಬಗ್ಗೆ ಹೆದರಿಕೆ, ಗೌರವ ಹೆಚ್ಚಾಗಬಹುದು
  • ಅವಸರದಿಂದ ಯಾವುದೇ ಕೆಲಸ ಮಾಡಬೇಡಿ
  • ದೊಡ್ಡವರ ಆರೋಗ್ಯದ ಬಗ್ಗೆ ತುಂಬಾ ನಿಗಾವಹಿಸಿ
  • ಬೂದಗುಂಬಳಕಾಯಿ ದಾನ ಮಾಡಿ

ವೃಶ್ಚಿಕ

publive-image

  • ಅನಿರೀಕ್ಷಿತ ಪ್ರಯಾಣ ಮಾಡುವುದರಿಂದ ಹಣ ಖರ್ಚು ಆಗಲಿದೆ
  • ನೀವು ಬೇರೆಯವರಿಗೆ ಸಹಾಯ ಮಾಡುತ್ತೀರಿ ಆದರೆ ಗೌರವ ಸಿಗುವುದಿಲ್ಲ
  • ಮನಸ್ಸಿಗೆ ಬೇಜಾರು ಆಗುವುದರಿಂದ ಇಡಿ ದಿನ ಅದೇ ಯೋಚನೆಯಲ್ಲಿರುತ್ತೀರಿ
  • ಇಂದು ಅರ್ಜೀಣ ಸಮಸ್ಯೆ ಉಂಟಾಗಬಹುದು
  • ರಾಜಕೀಯ ಸಂಬಂಧವಿರುವ ವ್ಯಕ್ತಿಗಳಿಂದ ತೊಂದರೆಯ ಸೂಚನೆ ಇದೆ
  • ನಿಮ್ಮ ಮನಸ್ಥಿತಿ ಬದಲಾಗಬಹುದು
  • ನಿಮ್ಮ ನಿರ್ಧಾರಗಳನ್ನು ಬಹಳ ಯೋಚನೆ ಮಾಡಿ ತೆಗೆದುಕೊಳ್ಳಿ
  • ಬಲಿಷ್ಠರ ಜೊತೆ ಸೆಣಸಾಟಕ್ಕೆ ಹೋಗದೆ ಇದ್ದರೆ ಒಳ್ಳೆಯದು
  • ಬೆಟ್ಟದ ಮೇಲಿರುವ ನರಸಿಂಹನನ್ನ ಆರಾಧಿಸಿ
Advertisment

ಧನಸ್ಸು

publive-image

  • ಈ ದಿನ ಬಹಳ ಓಡಾಟವನ್ನು ಮಾಡುತ್ತೀರಿ
  • ಸಾಯಂಕಾಲದ ಹೊತ್ತಿಗೆ ಕುಟುಂಬದವರ ಜೊತೆ ಹೊರಗೆ ಹೋಗಬಹುದು
  • ನಿಮ್ಮ ಕಠಿಣ ಪರಿಶ್ರಮ ನಿಮಗೆ ತೃಪ್ತಿ ಕೊಡಲಿದೆ
  • ನಿಮ್ಮ ಕುಟುಂಬದವರ ಸದಸ್ಯರ ಜೊತೆ ಸಂತೋಷವಾಗಿರುತ್ತೀರಿ
  • ರಾತ್ರಿ ಮನೆಗೆ ಮರಳುವಾಗ ಜಾಗ್ರತೆವಹಿಸಿ
  • ತಾಪಸಮನ್ಯುವನ್ನು ಆರಾಧಿಸಿ

ಮಕರ

publive-image

  • ವಿದ್ಯಾರ್ಥಿಗಳು, ಇಲಾಖಾ ಪರೀಕ್ಷೆಗಳನ್ನು ಬರೆದವರಿಗೆ ಫಲಿತಾಂಶ ಬರಬಹುದು ಎಂಬ ಕುತೂಹಲವಿರಲಿದೆ
  • ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಮ ಫಲಿತಾಂಶ ಸಿಗದೇ ಬೇಸರ ಸಾಧ್ಯತೆ
  • ನಿಮ್ಮ ಪರಿಶ್ರಮ ವ್ಯರ್ಥ ಆಯ್ತು ಅಂತ ಅನಿಸುತ್ತದೆ
  • ಮಾತುಬಾರದ ಮಕ್ಕಳಿಗೆ ಶಸ್ತ್ರ ಚಿಕಿತ್ಸೆ ಮಾಡಿಸುವುದರಿಂದ ಪ್ರಗತಿ ಕಾಣಬಹುದು
  • ಸುಬ್ರಹ್ಮಣ್ಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಕುಂಭ

publive-image

  • ಆಸ್ತಿ ಖರೀದಿಯ ಬಗ್ಗೆ ಹೆಚ್ಚು ಗಮನ ನೀಡುವ ಸಾಧ್ಯತೆ
  • ಷೇರುಪೇಟೆಯಲ್ಲಿ ಹಣ ಹೂಡಿಕೆ ಮಾಡಲು ಮುಂದಾಗಬಹುದು
  • ಹೊಟ್ಟೆಕಿಚ್ಚಿಗೋಸ್ಕರ ಬೇರೆಯವರ ಪಾಲಾದರೆ ಆಸ್ತಿ ಖರೀದಿಗೆ ಮುಂದಾಗುತ್ತೀರಿ
  • ಮಾರುಕಟ್ಟೆಯ ಬೆಲೆಗಿಂತ ಹೆಚ್ಚು ಹಣಕೊಟ್ಟು ಭೂಮಿಯನ್ನ ಖರೀದಿಸುವ ಸಾಧ್ಯತೆ
  • ಆಸ್ತಿಗಾಗಿ ಹೆಚ್ಚು ಹಣವ್ಯಯ ಮಾಡುವ ಸಾಧ್ಯತೆ
  • ವಿದ್ಯಾರ್ಥಿಗಳ ಹೊಸ ಆಲೋಚನೆಗಳಿಗೆ ಯಶಸ್ಸು ಸಿಗುತ್ತದೆ
  • ಭೂವರಾಹ ಸ್ವಾಮಿಯನ್ನು ಆರ್ಚನೆ ಮಾಡಿ
Advertisment

ಮೀನ 

publive-image

  • ವ್ಯಾಪಾರದ ದೃಷ್ಟಿಯಿಂದ, ಆಸ್ತಿಯ ದೃಷ್ಠಿಯಿಂದ, ಬಂಧುಗಳ ಭೇಟಿಗಾಗಿ ತಕ್ಷಣ ಪ್ರಯಾಣ ಮಾಡುವ ಸಾಧ್ಯತೆ
  • ಕುಟುಂಬದ ಸದಸ್ಯರ ಜೊತೆ ಜಗಳವನ್ನು ಮಾಡಿಕೊಳ್ಳುತ್ತೀರಿ
  • ಆಹಾರ ಸೇವನೆಯಲ್ಲಿ ವ್ಯತ್ಯಯವಾಗಿ ಆರೋಗ್ಯದಲ್ಲಿ ತೊಂದರೆ ಸಾಧ್ಯತೆ
  • ನಿಮ್ಮ ಆಲೋಚನೆಗಳು ಬೇರೆಯವರ ಮೇಲೆ ಒತ್ತಡ ಆಗಬಾರದು
  • ಸರ್ಕಾರಿ ಕೆಲಸಗಳಿಂದ ಕಿರಿಕಿರಿಯಾಗುವ ಸಾಧ್ಯತೆ ಇದೆ
  • ಇಂದು ನಿಮಗೆ ತಾಳ್ಮೆ ಇರಲಿ
  • ಶ್ರೀ ರಾಮಚಂದ್ರನನ್ನು ಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ                           

Advertisment
Advertisment
Advertisment