ಕಾನೂನು ವಿಚಾರದಲ್ಲಿ ವಿಘ್ನ, ಉದ್ಯೋಗದಲ್ಲಿ ಬಡ್ತಿ ಸಾಧ್ಯತೆ; ಇಲ್ಲಿದೆ ಇಂದಿನ ಭವಿಷ್ಯ!

author-image
Veena Gangani
Updated On
ಪ್ರೇಮಿಗಳಿಗೆ ಶುಭದಿನ; ಯಾವುದೇ ಕಾರಣಕ್ಕೂ ಆತುರದ ನಿರ್ಧಾರ ಬೇಡ; ಇಲ್ಲಿದೆ ಇಂದಿನ ಭವಿಷ್ಯ
Advertisment
  • ಸರ್ಕಾರಿ ಉದ್ಯೋಗಿಗಳಿಗೆ ಸಮಸ್ಯೆ ಉಂಟಾಗಬಹುದು
  • ಪ್ರೀತಿ ಪಾತ್ರರೊಂದಿಗೆ ಉತ್ತಮ ಬಾಂಧವ್ಯ ಹೆಚ್ಚಾಗಲಿದೆ
  • ಆಸ್ತಿಯಿಂದ ಲಾಭ ಖಚಿತ ಆದರೆ ನಿಧಾನವಾಗಬಹುದು

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

ಶ್ರೀ ವಿಶ್ವಾವಸುನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ಪಂಚಮಿ ತಿಥಿ, ಮೂಲ ನಕ್ಷತ್ರ, ರಾಹುಕಾಲ ಶುಕ್ರವಾರ ಬೆಳಗ್ಗೆ 10.30 ರಿಂದ 12.00 ರವರೆಗೆ
ಇರಲಿದೆ.

ಮೇಷ ರಾಶಿ

publive-image

  • ಸರ್ಕಾರಿ ಉದ್ಯೋಗಿಗಳಿಗೆ ಸಮಸ್ಯೆ ಉಂಟಾಗಬಹುದು
  • ಇಂದು ಉನ್ನತ ಸ್ಥಾನಮಾನ ಸಿಗಲಿದೆ
  • ವ್ಯಾವಹಾರಿಕವಾಗಿ ಉತ್ತಮವಾದ ಸಮಯ
  • ಉದ್ಯೋಗದಲ್ಲಿ ನಿರಾಸಕ್ತಿ ಉಂಟಾಗಬಹುದು
  • ಹಣಕಾಸಿನ ಸವಾಲು ಎದುರಾಗಬಹುದು
  • ರಾಜಕೀಯ ವಿಚಾರಗಳು ಬೇಡ
  • ಇಷ್ಟ ದೇವತಾ ಪ್ರಾರ್ಥನೆ ಮಾಡಿ

ವೃಷಭ

publive-image

  • ಪ್ರೀತಿ ಪಾತ್ರರೊಂದಿಗೆ ಉತ್ತಮ ಬಾಂಧವ್ಯ ಹೆಚ್ಚಾಗಲಿದೆ
  • ಪ್ರಯಾಣದ ಅನಿವಾರ್ಯತೆ ಕಾಣಬಹುದು
  • ಸಾಯಂಕಾಲದ ಹೊತ್ತಿಗೆ ಶುಭ ಸುದ್ಧಿ ಸಿಗಲಿದೆ
  • ನಿರೀಕ್ಷೆಗೆ ಮೀರಿ ಖರ್ಚು ಆಗಲಿದೆ
  • ಮೇಲಾಧಿಕಾರಿಗಳಿಂದ ಕಿರುಕುಳ ಆಗಬಹುದು
  • ಬೇರೆ ಬೇರೆ ವಿಚಾರಗಳಲ್ಲಿ ಆಸಕ್ತಿ ಬರಬಹುದು
  • ಶ್ರೀರಾಮ ಚಂದ್ರನನ್ನು ಪ್ರಾರ್ಥನೆ ಮಾಡಿ

ಮಿಥುನ

publive-image

  • ಸ್ವಪ್ರಯತ್ನದಿಂದ ಕಾರ್ಯಸಿದ್ಧಿಯಾಗಬಹುದು
  • ಆಸ್ತಿಯಿಂದ ಲಾಭ ಖಚಿತ ಆದರೆ ನಿಧಾನವಾಗಬಹುದು
  • ಆರೋಗ್ಯದಲ್ಲಿ ಏರುಪೇರು ಉಂಟಾಗಬಹುದು
  • ಆರ್ಥಿಕ ಪ್ರಗತಿಗೆ ದಾರಿ ಇದೆ ಆದರೆ ಗೊಂದಲವಾಗಬಹುದು
  • ಕುಟುಂಬದಲ್ಲಿ ವಾಗ್ವಾದ ಉಂಟಾಗಬಹುದು
  • ಶತ್ರುಭಾದೆಯಿಂದ ಬೇಸರವಾಗಬಹುದು
  • ಈಶ್ವರನ ಆರಾಧನೆ ಮಾಡಿ

ಕಟಕ

publive-image

  • ಕಾನೂನು ವಿಚಾರದಲ್ಲಿ ವಿಘ್ನಗಳು ಬರಬಹುದು
  • ವಿವಾದದಿಂದ ಆದಷ್ಟು ದೂರವಿರಿ
  • ಸ್ವಂತ ಉದ್ಯಮಿಗಳಿಗೆ ಅನುಕೂಲವಿದೆ
  • ಅಧಿಕಾರಿಗಳಿಂದ ಅಹಿತವಾದ ಆದೇಶ ಬರಬಹುದು
  • ಕುಟುಂಬದಲ್ಲಿನ ಸಮಸ್ಯೆ ಬೇಸರ ತರಲಿದೆ
  • ಹಲವಾರು ಯೋಜನೆಗಳು ನಿರ್ಧಾರವಾಗುವ ಸಮಯ
  • ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಸಿಂಹ

publive-image

  • ಪ್ರತಿಭೆಗೆ ತಕ್ಕ ಪ್ರತಿಫಲ ಇರಲಿದೆ
  • ವ್ಯಾವಹಾರಿಕವಾಗಿ ದೂರದೃಷ್ಠಿ ಇದ್ದರೆ ಒಳ್ಳೆಯದು
  • ವಿರೋಧಿಗಳಿಗೆ ಸರಿಯಾದ ಉತ್ತರ ಕೊಡುತ್ತೀರಿ
  • ಹಿರಿಯರಿಂದ ಧನ ಸಹಾಯವಾಗಬಹುದು
  • ಮಾತಿನ ಮೇಲೆ ಹಿಡಿತವಿರಲಿ
  • ಉದ್ಯೋಗದಲ್ಲಿ ಬಡ್ತಿ, ಪ್ರಶಂಸೆ ಪಡೆಯುತ್ತೀರಿ
  • ಸುಬ್ರಹ್ಮಣ್ಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಕನ್ಯಾ

publive-image

  • ತಂದೆ ಮಕ್ಕಳ ಬಾಂಧವ್ಯ ಗಟ್ಟಿಯಾಗಲಿದೆ
  • ಆರೋಗ್ಯದಲ್ಲಿ ತುಂಬಾ ಏರುಪೇರಾಗಬಹುದು
  • ವೈಯಕ್ತಿಕ ಪ್ರತಿಷ್ಠೆಗಳಿಂದ ಎಲ್ಲವನ್ನು ಮರೆಯುತ್ತೀರಿ
  • ನಿರುದ್ಯೋಗಿಗಳಿಗೆ ಉದ್ಯೋಗಾವಕಾಶವಿದೆ
  • ಅಪರೂಪದ ಅತಿಥಿಗಳಿಗೆ ಅವಮಾನವಾಗಬಹುದು
  • ಅಸಂತೋಷದ ವಾತಾವರಣದಲ್ಲಿ ಬದುಕುತ್ತೀರಿ
  • ದುರ್ಗಾದೇವಿಯನ್ನು ಪ್ರಾರ್ಥನೆ ಮಾಡಿ

ತುಲಾ

publive-image

  • ಆಸ್ತಿ ನಷ್ಟವಾಗುವ ಅಪಾಯವಿದೆ
  • ಅವಕಾಶಗಳು ಕೈ ತಪ್ಪುವ ಸಾಧ್ಯತೆ ಇದೆ
  • ಆರೋಗ್ಯದಲ್ಲಿ ಚೇತರಿಕೆ ಆಗಲಿದೆ
  • ಬೇರೆಯವರಿಗೆ ಸಹಾಯ ಮಾಡುತ್ತೀರಿ
  • ವಿವಾಹ ಯೋಗ ಕೂಡಿ ಬರಲಿದೆ
  • ಉದ್ಯೋಗ ಬದಲಾವಣೆಗೆ ಸುಸಮಯ
  • ಶರಭೇಶ್ವರನನ್ನು ಪ್ರಾರ್ಥನೆ ಮಾಡಿ

ವೃಶ್ಚಿಕ

publive-image

  • ಆತುರದ ನಿರ್ಧಾರ ತೊಂದರೆಯಾಗಬಹುದು
  • ಋಣಬಾಧೇ ನಿವೃತ್ತಿಯಾಗುವುದರಿಂದ ನೆಮ್ಮದಿ ಸಿಗಬಹುದು
  • ನಿಮ್ಮ ವಿರುದ್ಧವಾಗಿ ಆಲೋಚಿಸುವವರೇ ಹೆಚ್ಚು
  • ಮಕ್ಕಳ ವಿಚಾರದಲ್ಲಿ ಎಚ್ಚರಿಕೆಯಿಂದಿರಿ
  • ಮಾನಸಿಕ ಅಸ್ಥಿರತೆ ತುಂಬಾ ಕಾಡಬಹುದು
  • ರಾಜಕೀಯವಾಗಿ ಲಾಭಗಳನ್ನು ನಿರೀಕ್ಷಿಸಬೇಡಿ
  • ನರಸಿಂಹ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಧನಸ್ಸು

publive-image

  • ಅತಿಯಾಗಿ ಆಲೋಚನೆ ಮಾಡಿ ಮನೋವಿಕಾರವಾಗಬಹುದು
  • ಪರೀಕ್ಷೆಗಳಲ್ಲಿ ಅಪಯಶಸ್ಸನ್ನು ಹೊಂದುತ್ತೀರಿ
  • ಇಂದು ವ್ಯಾಪಾರಸ್ಥರಿಗೆ ಲಾಭವಿದೆ
  • ಬಹುಮಾನದ ರೂಪದಲ್ಲಿ ಹಣ ನಿಮ್ಮದಾಗಬಹುದು
  • ಅನುಮಾನವಿರುವ ವ್ಯಕ್ತಿಗಳಿಂದ ಅಂತರ ಕಾಯ್ದುಕೊಳ್ಳಿ
  • ಮಹಾಗಣಪತಿಯನ್ನು ಪ್ರಾರ್ಥನೆ ಮಾಡಿ

ಮಕರ

publive-image

  • ಮನೆಯ ವಾತಾವರಣ ಚೆನ್ನಾಗಿಲ್ಲ ಗಮನಿಸಿ
  • ತಾಯಿ ಆರೋಗ್ಯದಲ್ಲಿ ಏರುಪೇರು ಉಂಟಾಗಬಹುದು
  • ವಿವಾದಗಳಿಂದ ಸ್ವಲ್ಪ ದೂರ ಉಳಿಯಿರಿ
  • ಮಾನಸಿಕ ವ್ಯಥೆಯಿಂದ ಬೇಸರ ಉಂಟಾಗಬಹುದು
  • ಸಹೋದ್ಯೋಗಿಗಳು ವಂಚಿಸಬಹುದು
  • ಆರ್ಥಿಕ ಕುಸಿತದಿಂದ ನೋವಾಗಬಹುದು
  • ಶುಭಕಾರ್ಯ ನಿಂತು ಹೋಗಬಹುದು
  • ಕುಲದೇವತಾ ಪ್ರಾರ್ಥನೆ ಮಾಡಿ

ಕುಂಭ

publive-image

  • ಎಲ್ಲರ ಮನಸ್ಸನ್ನು ಗೆಲ್ಲಲು ಪ್ರಯತ್ನಿಸುತ್ತೀರಿ ಆದರೆ ಸಫಲವಾಗುವುದಿಲ್ಲ
  • ಸಾಲ ಮಾಡಬೇಕಾದ ಪರಿಸ್ಥಿತಿ ಬೇಡ
  • ಮನೆಯಲ್ಲಿ ಅಶಾಂತಿ ವಾತಾವರಣ
  • ರಾಜಕೀಯ ಭರವಸೆಗೆ ಕಟ್ಟುಬಿದ್ದು ಸೋಲನ್ನು ಅನುಭವಿಸುತ್ತೀರಿ
  • ಮಾನಸಿಕ ನಿಯಂತ್ರಣವಿಲ್ಲದಿದ್ದರೆ ಹಿನ್ನಡೆಯಾಗಬಹುದು
  • ಸ್ವಲ್ಪ ಶತ್ರುಕಾಟವು ನಿಮ್ಮನ್ನ ಬಾಧಿಸುತ್ತದೆ
  • ನವಗ್ರಹರನ್ನು ಪ್ರಾರ್ಥನೆ ಮಾಡಿ

ಮೀನ 

publive-image

  • ಮಾತು ನಿಮ್ಮ ವ್ಯವಹಾರ ಹಾಗೂ ಸಂಬಂಧವನ್ನು ಹಾಳು ಮಾಡಬಹುದು
  • ದಾಂಪತ್ಯ ಸಮಸ್ಯೆ ಹೆಚ್ಚಾಗಿ ಕಾಡಬಹುದು
  • ಹಣಕಾಸಿನ ಸ್ಥಿತಿಯಲ್ಲಿ ಅನಕೂಲವಿದೆ
  • ಪಿತ್ರಾರ್ಜಿತ ಆಸ್ತಿ ವಿಚಾರವೇ
  • ಮಹಾಲಕ್ಷ್ಮಿಯನ್ನು ಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

Advertisment