ಚಾರ್ಜ್​ಶೀಟ್ ಆದ್ಮೆಲೆ ದರ್ಶನ್​ಗೆ ಮತ್ತೊಂದು ಸಂಕಷ್ಟ.. ಸಿನಿಮಾ ಮಾಡೋರಿಗೂ ಆಘಾತಕಾರಿ ವಿಚಾರ..!

author-image
Ganesh
Updated On
ಚಾರ್ಜ್​ಶೀಟ್ ಆದ್ಮೆಲೆ ದರ್ಶನ್​ಗೆ ಮತ್ತೊಂದು ಸಂಕಷ್ಟ.. ಸಿನಿಮಾ ಮಾಡೋರಿಗೂ ಆಘಾತಕಾರಿ ವಿಚಾರ..!
Advertisment
  • ದರ್ಶನ್ ಹಾಕಿ ಚಿತ್ರ ಮಾಡೋರು ಇನ್ಮೇಲೆ ಇದನ್ನ ಗಮನಿಸಲೇಬೇಕು
  • ಮಹತ್ವದ ನಿರ್ಧಾರಕ್ಕೆ ಮುಂದಾಗಿರುವ ಪೊಲೀಸ್ ಅಧಿಕಾರಿಗಳು
  • ರೆಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ದರ್ಶನ್

ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಅಂಡ್ ಗ್ಯಾಂಗ್ ಜೈಲು ಸೇರಿದೆ. ತನಿಖೆಯನ್ನು ಪೂರ್ಣಗೊಳಿಸಲಿರುವ ಅಧಿಕಾರಿಗಳು ಸದ್ಯದಲ್ಲಿ ಕೋರ್ಟ್​ಗೆ ಚಾರ್ಜ್​ಶೀಟ್ ಸಲ್ಲಿಕೆ ಮಾಡಲಿದ್ದಾರೆ.

ಚಾರ್ಜ್​ಶೀಟ್ ಸಲ್ಲಿಕೆ ಆದಮೇಲೆ ದರ್ಶನ್​ಗೆ ಮತ್ತೊಂದು ಸಂಕಷ್ಟ ಎದುರಾಗಲಿದೆ ಎನ್ನಲಾಗಿದೆ. ಈ ವಿಚಾರ ಚಿತ್ರರಂಗಕ್ಕೂ ಕೂಡ ಆಘಾತಕಾರಿ ಎಂದು ಹೇಳಲಾಗುತ್ತಿದೆ. ಮುಂದೆ ದರ್ಶನ್ ಅವರನ್ನು ಹಾಕಿಕೊಂಡು ಚಿತ್ರ ಮಾಡೋರು ಇನ್ಮೇಲೆ ಇದನ್ನು ಗಮನಿಸಲೇಬೇಕು.

ಚಾರ್ಜ್ ಶೀಟ್ ಬಳಿಕ ಪಾಸ್ ಪೋರ್ಟ್ ರದ್ದಾಗಲಿದೆ. ಕೊಲೆ ಆರೋಪಿ ಪ್ರಭಾವಿ ಆಗಿರುವ ಕಾರಣ ಪಾಸ್ ಪೋರ್ಟ್ ರದ್ಧತಿಗೆ ಪತ್ರ ಬರೆಯಲು ಪೊಲೀಸರು ಚಿಂತನೆ ನಡೆಸಿದ್ದಾರೆ. ಕೊಲೆ ಆರೋಪಿ ಬೇರೆ ದೇಶಗಳಿಗೆ ಎಸ್ಕೇಪ್ ಆಗಬಹುದು ಎಂಬ ಕಾರಣದಿಂದ ಪಾಸ್ ಪೋರ್ಟ್ ರದ್ದು ಮಾಡಲು ಪತ್ರ ಬರೆಯುತ್ತಾರೆ ಎನ್ನಲಾಗಿದೆ.

ಇದನ್ನೂ ಓದಿ:ಬೆಂಗಳೂರಲ್ಲಿ ಮತ್ತೊಂದು ಬರ್ಬರ ಕೊಲೆ.. 17 ವರ್ಷದ ಬಾಲಕನ ತಲೆಗೆ ರಾಡ್​ನಿಂದ ಹೊಡೆದು ಹತ್ಯೆ..

ಆತ ಎಷ್ಟೇ ಪ್ರಭಾವಿ, ಗಣ್ಯನಾಗಿದ್ದರೂ ಪೊಲೀಸರಿಗೆ ಹಾಗೂ ಕಾನೂನಿಗೆ ಆತ ಆರೋಪಿಯಷ್ಟೇ. ಕೃತ್ಯವನ್ನು ಎಸೆಗಿರುವ ವ್ಯಕ್ತಿ ಪರಾರಿಯಾಗದಂತೆ ನೋಡಿಕೊಳ್ಳಬೇಕಿದೆ. ಈ ಹಿನ್ನೆಲೆಯಲ್ಲಿ ಪಾಸ್ ಪೋರ್ಟ್ ರದ್ದು ಮಾಡಲು ಪೊಲೀಸರು ಮುಂದಾಗಿದ್ದಾರೆ. ಒಂದು ವೇಳೆ ದರ್ಶನ್ ಜೈಲಿನಿಂದ ರಿಲೀಸ್ ಆದ ಬಳಿಕ ಯಾರಾದರೂ ಸಿನಿಮಾ ಮಾಡಬೇಕು ಅಂದರೆ ದೇಶದಲ್ಲಿಯೇ ಮಾಡಬೇಕಿದೆ. ವಿದೇಶದಲ್ಲಿ ಚಿತ್ರೀಕರಣದ ಕನಸನ್ನ ಕೈಬಿಡಬೇಕಾದ ಅನಿವಾರ್ಯತೆ ಎದುರಾದರೂ ಅಲ್ಲಗಳೆಯುವಂತಿಲ್ಲ.

ಇದನ್ನೂ ಓದಿ:ಭಾರತ vs ಆಸ್ಟ್ರೇಲಿಯಾ ಪಂದ್ಯ ರದ್ದು ಸಾಧ್ಯತೆ.. ಅಭಿಮಾನಿಗಳಿಂದ ಈಗಲೇ ಬೇಸರ.. ಕಾರಣ ಇಲ್ಲಿದೆ

ಸದ್ಯ ವಿದೇಶದಲ್ಲಿ ಚಿತ್ರೀಕರಣ ಮಾಡುವ ಟ್ರೆಂಡ್ ಇದೆ. ಪೂರ್ತಿ ಆಗದಿದ್ರೂ ಒಂದು ಹಾಡನ್ನಾದರೂ ವಿದೇಶದಲ್ಲಿ ಚಿತ್ರೀಕರಣ ಮಾಡುವ ಟ್ರೆಂಡ್ ಚಿತ್ರರಂಗದಲ್ಲಿದೆ. ಮುಂದಿನ ದಿನಗಳಲ್ಲಿ ವಿದೇಶಿ ಚಿತ್ರೀಕರಣ ಮಾಡಿದರೆ ಅದಕ್ಕೆ ನ್ಯಾಯಾಲಯದ ಅನುಮತಿ ಅಗತ್ಯ ಇದೆ. ನ್ಯಾಯಾಲಯ ಅನುಮತಿ ನೀಡಿದರೆ ಮಾತ್ರ ವಿದೇಶಕ್ಕೆ ತೆರಳಬಹುದು. ಆದರೆ ಪಾಸ್ ಪೋರ್ಟ್ ರದ್ದು ಮಾಡಿದರೆ ವಿದೇಶಿ ಕನಸೂ ಭಗ್ನ ಆಗಲಿದೆ.

ಇದನ್ನೂ ಓದಿ:DK ಶಿವಕುಮಾರ್​ಗೆ ಧರಿಸಿದ್ದ ಶಾಲೇ ಸಂಕಷ್ಟ.. ‘ಶಾಲು ಅಸ್ತ್ರ’ ಪ್ರಯೋಗಿಸಿದ ಬಿಜೆಪಿ, ಏನದು..

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment