/newsfirstlive-kannada/media/post_attachments/wp-content/uploads/2025/04/ARYA.jpg)
ರಾಜಸ್ಥಾನ್ ವಿರುದ್ಧ ರಾಯಲ್ ಜಯ ಸಾಧಿಸಿದ ಆರ್ಸಿಬಿ ಇದೀಗ ಪಂಜಾಬ್ಗೆ ಪಂಚ್ ಕೊಡೋಕೆ ರೆಡಿಯಾಗಿದೆ. ಹೋಮ್ಗ್ರೌಂಡ್ನಲ್ಲಿ ಮೊದಲ ಗೆಲುವಿನ ಹುಡುಕಾಟದಲ್ಲಿರೋ ಆರ್ಸಿಬಿ, ಪಂಜಾಬ್ ಕಿಂಗ್ ಮಣಿಸುವ ಕನಸಿನಲ್ಲಿದೆ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆರ್ಸಿಬಿ ಗೆದ್ದು ಬೀಗಬೇಕಂದ್ರೆ ಪಂಜಾಬ್ ಪವರ್ನ ಕಟ್ ಮಾಡಬೇಕಿದೆ. ಅದರಲ್ಲೂ ವಿಶೇಷವಾಗಿ ಸ್ಫೋಟಕ ಬ್ಯಾಟರ್ ಪ್ರಿಯಾಂಶ್ ಆರ್ಯ.
ಆರಂಭಿಕನಾಗಿ ಕಣಕ್ಕಿಳಿಯೋ ಈ ಯಂಗ್ ಲೆಫ್ಟಿ ಬ್ಯಾಟರ್ ಪ್ರಿಯಾಂಶ್, ಮೊದಲ ಬಾಲ್ನಿಂದಲೇ ಬೌಲರ್ಗಳ ಮೇಲೆ ದಂಡಯಾತ್ರೆ ನಡೆಸ್ತಾರೆ. ಪಂಜಾಬ್ ಸಕ್ಸಸ್ ಸಿಕ್ರೇಟ್ ಆಗಿರುವ ಈ ಡೆಲ್ಲಿ ಬಾಯ್, 6 ಪಂದ್ಯಗಳಿಂದ 216ರ ಬ್ಯಾಟಿಂಗ್ ಸ್ಟ್ರೈಕ್ರೇಟ್ನಲ್ಲಿ 216 ರನ್ ಸಿಡಿಸಿದ್ದಾರೆ.
ಇದನ್ನೂ ಓದಿ: ಕೋಚ್ಗಳ ಮೇಲೆ ಸಿಟ್ಟು ತೀರಿಸಿಕೊಂಡ BCCI.. ಟಿ ದಿಲೀಪ್ ಸೇರಿ ಹಲವರಿಗೆ ಗೇಟ್ಪಾಸ್..!
ಅಷ್ಟ ದಿಕ್ಕುಗಳಿಗೂ ಚೆಂಡಿನ ದರ್ಶನ ಮಾಡಿಸೋ ಈತನಿಗೆ, ಚಿನ್ನಸ್ವಾಮಿಯ ಚಿಕ್ಕ ಗ್ರೌಂಡ್ ನಿಜಕ್ಕೂ ಹೇಳಿ ಮಾಡಿಸಿದಂತಿದೆ. ಅಕಸ್ಮಾತ್ ಇಲ್ಲಿ ಪ್ರಿಯಾಂಶ್ ಸಿಡಿದು ನಿಂತ್ರೆ, ಆರ್ಸಿಬಿಗೆ ಸಂಕಷ್ಟ ತಪ್ಪಿದ್ದಲ್ಲ. ಹೀಗಾಗಿ ಈತನಿಗೆ ಆರಂಭದಲ್ಲೇ ಪೆವಿಲಿಯನ್ ಹಾದಿ ತೋರಿಬೇಕಿದೆ. ಈ ನಿಟ್ಟಿನಲ್ಲಿ ಗೇಮ್ಪ್ಲಾನ್ ಮಾಡಬೇಕಿದೆ.
ಈ ಬಾರಿಯ ಮೆಗಾ ಹರಾಜಿನಲ್ಲಿ ಪ್ರಿಯಾಂಶು ಆರ್ಯ ಅವರನ್ನು ಪಂಜಾಬ್ ಕಿಂಗ್ಸ್ ಖರೀದಿಸಿದೆ. ದೇಸಿಯ ಕ್ರಿಕೆಟ್ನಲ್ಲಿ ಇವರ ಆರ್ಭಟ ಗಮನಿಸಿದ್ದ ಪ್ರೀತಿ ಜಿಂಟಾ, ಬರೋಬ್ಬರಿ 3.80 ಕೋಟಿ ರೂಪಾಯಿಗೆ ಖರೀದಿ ಮಾಡಿದೆ. ಇವರ ಬೇಸ್ ಪ್ರೈಸ್ 30 ಲಕ್ಷ ರೂಪಾಯಿ ಆಗಿತ್ತು. ಇನ್ನು ನಾಳೆ ಸಂಜೆ 7.30ಕ್ಕೆ ಬೆಂಗಳೂರಿನ ಎಂ. ಚಿನ್ನಸ್ವಾಮಿ ಮೈದಾನದಲ್ಲಿ ಪಂದ್ಯ ನಡೆಯಲಿದೆ.
ಇದನ್ನೂ ಓದಿ: PBKS ಆರ್ಸಿಬಿಗೂ ಕಂಟಕ.. ಎಲ್ಲೋ ಇದ್ದ ಪಂಜಾಬ್ ಹಣೆಬರಹ ಬದಲಾಯಿಸಿದ್ದು ಇವರೇ..!
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್