newsfirstkannada.com

ಆಪ್ತ ಸ್ನೇಹಿತನಿಗೆ ಗೆಟೌಟ್ ಎಂದ ಗಂಗೂಲಿ.. ಕನ್ನಡಿಗ ದ್ರಾವಿಡ್​​ಗೆ ಮತ್ತೊಂದು ದೊಡ್ಡ ಜವಾಬ್ದಾರಿ..!?

Share :

Published July 15, 2024 at 12:34pm

Update July 15, 2024 at 1:28pm

    ದ್ರಾವಿಡ್​​​​​​​​​​​​​​​​​​​ಗೆ ಮಣೆ ಹಾಕಲು ಐಪಿಎಲ್ ಫ್ರಾಂಚೈಸಿಗಳೆಲ್ಲ ಇನ್ನಿಲ್ಲದ ಕಸರತ್ತು

    ಡೆಲ್ಲಿ ಕ್ಯಾಪಿಟಲ್ಸ್​ನ ನೂತನ ಕೋಚ್​ ಯಾರಾಗ್ತಾರೆ, ಐಪಿಎಲ್ ಕುತೂಹಲ

    'ನಿರುದ್ಯೋಗಿ' ರಾಹುಲ್​ ದ್ರಾವಿಡ್​ ಡೆಲ್ಲಿ ತಂಡಕ್ಕೆ ಕರೆ ತರ್ತಾರಾ ದಾದಾ..?

ಡೆಲ್ಲಿ ಕ್ಯಾಪಿಟಲ್ಸ್ ತಂಡದ ಹೆಡ್ ಕೋಚ್ ಸ್ಥಾನದಿಂದ ರಿಕಿ ಪಾಂಟಿಂಗ್​ಗೆ ಗೇಟ್​ಪಾಸ್​ ನೀಡಲಾಗಿದೆ. ಈ ವಿಷ್ಯ ಹೊರಬಿದ್ದಿದ್ದೆ ತಡ, ಚಾಂಪಿಯನ್​ ಕೋಚ್​ ರಾಹುಲ್ ದ್ರಾವಿಡ್ ಡೆಲ್ಲಿ ಕ್ಯಾಪಿಟಲ್ಸ್​ ಸೇರ್ತಾರಾ ಎಂಬ ಚರ್ಚೆ ಶುರುವಾಗಿದೆ. ಇದಕ್ಕೆ ಕಾರಣ ಡೆಲ್ಲಿ ಕ್ಯಾಪಿಟಲ್ಸ್​​ನ ಡೈರೆಕ್ಟರ್​ ಸೌರವ್​ ಗಂಗೂಲಿ. ಗಂಗೂಲಿಯ ಈ ಒಂದು ಮಾತು ಭಾರೀ ಬಿಸಿಬಿಸಿ ಚರ್ಚೆಗೆ ಕಾರಣವಾಗಿದೆ.

ಇದನ್ನೂ ಓದಿ: ರಾತ್ರಿ ಮಲಗಿದ್ದ ವೇಳೆ ಭಾರೀ ದುರಂತ.. ಅಂಬಲಪಾಡಿ ಶೆಟ್ಟಿ ಬಾರ್ ಮಾಲೀಕ ಸಾವು

ಐಪಿಎಲ್​ ಸೀಸನ್​-18ರ ಆರಂಭಕ್ಕೆ ಬರೋಬ್ಬರಿ 8 ತಿಂಗಳು ಬಾಕಿಯಿದೆ. ಡಿಸೆಂಬರ್​​ ಆರಂಭದಲ್ಲಿ ಮೆಗಾ ಹರಾಜು ನಡೆಯಲಿದೆ. ಅದಕ್ಕೂ ಮುನ್ನವೇ ಐಪಿಎಲ್ ತಂಡಗಳಲ್ಲಿ ಬದಲಾವಣೆ ಪರ್ವ ಶುರುವಾಗಿದೆ. ಡೆಲ್ಲಿ ಕ್ಯಾಪಿಟಲ್ಸ್​ ಫ್ರಾಂಚೈಸಿ ಹೆಡ್​ಕೋಚ್​ ರಿಕಿ ಪಾಂಟಿಂಗ್​ಗೆ ಕೊಕ್​ ಕೊಟ್ಟು, ಮೇಜರ್​ ಸರ್ಜರಿಗೆ ಮುಂದಾಗಿದೆ.

ಇದನ್ನೂ ಓದಿ: ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆ ಮೂಗಲ್ಲಿ ರಕ್ತ, ಬಾಯಲ್ಲಿ ನೊರೆ.. ಕ್ಷಣದಲ್ಲೇ ಸಾವು; ವೈದ್ಯರ ವಿರುದ್ಧ ಆರೋಪ

2018ರಿಂದ ಹೆಡ್ ಕೋಚ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ರಿಕಿ ಪಾಂಟಿಂಗ್​ಗೆ ಡೆಲ್ಲಿ ಫ್ರಾಂಚೈಸಿ ಗೇಟ್​​​​ಪಾಸ್ ನೀಡಿದೆ. ಈ ಬೆನ್ನಲ್ಲೇ ಡೆಲ್ಲಿ ಕ್ಯಾಪಿಟಲ್ಸ್ ಮುಂದಿನ ಕೋಚ್ ಯಾರ್ ಆಗ್ತಾರೆ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ಡೆಲ್ಲಿ ಫ್ರಾಂಚೈಸಿಯ ಡೈರೆಕ್ಟರ್​ ಆಫ್​ ಆಪರೇಶನಲ್​ ಹೆಡ್​ ಸೌರವ್ ಗಂಗೂಲಿ ನೀಡಿರುವ ಒಂದು ಹೇಳಿಕೆ, ಟೀಮ್​ ಇಂಡಿಯಾದ ಮಾಜಿ ಕೋಚ್​ ರಾಹುಲ್ ದ್ರಾವಿಡ್, ಡೆಲ್ಲಿ ತಂಡದ ಕೋಚ್ ಹುದ್ದೆಗೇರ್ತಾರಾ ಎಂಬ ಅನುಮಾನ ಹುಟ್ಟಿ ಹಾಕಿದೆ.

‘ಭಾರತೀಯ ಕೋಚ್​ನ ನೋಡುವಂತೆ ಕೇಳಬೇಕು’

ನಾನು 2025ರ ಐಪಿಎಲ್​​ಗೆ ಯೋಜನೆ ರೂಪಿಸಬೇಕಿದೆ. ಒಮ್ಮೆಯಾದ್ರೂ ಡೆಲ್ಲಿ ಕ್ಯಾಪಿಟಲ್ಸ್​ ಐಪಿಎಲ್ ಟ್ರೋಫಿ ಗೆಲ್ಲಲು ಬಯಸುತ್ತೇನೆ. ಮೆಗಾ ಹರಾಜು ನಡೆಯಲಿದ್ದು, ಈಗಿನಿಂದ ಯೋಜನೆ ರೂಪಿಸಲು ಮುಂದಾಗಿದ್ದೇನೆ. ರಿಕಿ ಪಾಂಟಿಂಗ್ ಡೆಲ್ಲಿ ಕ್ಯಾಪಿಟಲ್ಸ್ ಕೋಚ್ ಆಗಿರುವುದಿಲ್ಲ. ನಾನು ಫ್ರಾಂಚೈಸಿ ಜೊತೆ ಮಾತನಾಡಬೇಕು. ಹುದ್ದೆಗೆ ಭಾರತೀಯ ಕೋಚ್​ನ ನೋಡಲು ಕೇಳಬೇಕು.

ಗಂಗೂಲಿ, DC ಡೈರೆಕ್ಟರ್

ಗಂಗೂಲಿ ನೀಡಿರುವ ಭಾರತೀಯ ಕೋಚ್​ನ ನೋಡಬೇಕು ಎಂಬ ಹೇಳಿಕೆಯೆ ಹೊಸ ಚರ್ಚೆಗೆ ನಾಂದಿಯಾಡಿದೆ. ಟೀಮ್​ ಇಂಡಿಯಾಗೆ ವಿಶ್ವಕಪ್​ ಗೆಲ್ಲಿಸಿಕೊಟ್ಟ ರಾಹುಲ್​ ದ್ರಾವಿಡ್​ಗೆ ಸಿಕ್ಕಾಪಟ್ಟೆ ಡಿಮ್ಯಾಂಡ್​ ಶುರುವಾಗಿದ್ದು, ಗಂಗೂಲಿ ಕೂಡ ಗಾಳ ಹಾಕ್ತಾರಾ ಅನ್ನೋ ಚರ್ಚೆ ಶುರುವಾಗಿದೆ.

ದ್ರಾವಿಡ್​ ಹೆಡ್ ಕೋಚ್ ಆಗಲು ಕಾರಣವೇ ದಾದಾ..!

ರಾಹುಲ್ ದ್ರಾವಿಡ್ ಆ್ಯಂಡ್ ಸೌರವ್ ಗಂಗೂಲಿ.. ಭಾರತೀಯ ಕ್ರಿಕೆಟ್ ಕಂಡ ದಿಗ್ಗಜ ಆಟಗಾರರು. ಈ ಇಬ್ಬರು ಟೀಮ್ ಇಂಡಿಯಾಗೆ ನೀಡಿದ ಕೊಡುಗೆ ಅಪಾರ. ಎಲ್ಲಕ್ಕಿಂತ ಹೆಚ್ಚಾಗಿ ಆಪ್ತ ಸ್ನೇಹಿತರು. ಈ ರಾಹುಲ್ ದ್ರಾವಿಡ್, ಟೀಮ್ ಇಂಡಿಯಾದ ಹೆಡ್ ಕೋಚ್ ಆಗಲು ಮುಖ್ಯ ಕಾರಣವೇ ಸೌರವ್ ಗಂಗೂಲಿ. ಅಂದು ಬಿಸಿಸಿಐ ಅಧ್ಯಕ್ಷ ಸ್ಥಾನದಲ್ಲಿದ್ದ ಗಂಗೂಲಿ, ಆಪ್ತ ಸ್ನೇಹಿತ ರಾಹುಲ್​ ದ್ರಾವಿಡ್​ ಬೆನ್ನು ಬಿದ್ದಿದ್ದರು. ಟೀಮ್ ಇಂಡಿಯಾಗೆ ದ್ರಾವಿಡ್​​​​​​​​ರಂಥ ಸ್ಟ್ರಿಕ್ಟ್​ ಮಾಸ್ಟರ್​ ಬೇಕು ಎಂಬ ಕಾರಣಕ್ಕೆ ಹಠ ಹಿಡಿದು ದ್ರಾವಿಡ್ ಕಾಡಿ ಬೇಡಿ ಒಪ್ಪಿಸಿ, ಕೋಚ್​​​​​​​​​​​​​​​​​​​​​​​ ಹುದ್ದೆಗೆ ಕರೆತಂದಿದ್ರು. ನಂತರ ಆಗಿದ್ದೆಲ್ಲ ಈಗ ಇತಿಹಾಸ.

ಆಪ್ತ ಸ್ನೇಹಿತನಿಗೆ ಗಾಳ ಹಾಕ್ತಾರಾ ಕೊಲ್ಕತ್ತಾ ಪ್ರಿನ್ಸ್​..?

ಸದ್ಯ ದ್ರಾವಿಡ್​​​​​​​​​​​​​​​​​​​ಗೆ ಮಣೆ ಹಾಕಲು ಐಪಿಎಲ್ ಫ್ರಾಂಚೈಸಿಗಳು ಇನ್ನಿಲ್ಲದ ಕಸರತ್ತು ನಡೆಸ್ತಿವೆ. ಈ ನಡುವೆ ರಿಕಿ ಪಾಂಟಿಂಗ್ ನಿರ್ಗಮನದಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಹೆಡ್ ಕೋಚ್ ಹುದ್ದೆ ಖಾಲಿಯಾಗಿದೆ. ತಂಡದ ಡೈರೆಕ್ಟರ್​ ಆಗಿರೋ ಗಂಗೂಲಿ, ಭಾರತೀಯ ಕೋಚ್​ನ ನೇಮಿಸೋ ಪ್ರಸ್ತಾಪ ಇಟ್ಟಿದ್ದು, ಬಹುತೇಕ ದ್ರಾವಿಡ್​ಗೆ ಗಾಳ ಹಾಕೋ ಲೆಕ್ಕಾಚಾರದಲ್ಲಿದ್ದಾರೆ. ವರ್ಷದಲ್ಲಿ ಕೇವಲ 3 ತಿಂಗಳ ಅವಧಿಯ ಕಾರ್ಯವಾಗಿರೋದ್ರಿಂದ ದಾದಾ ಆಫರ್​ ಮಾಡಿದ್ರೆ, ದ್ರಾವಿಡ್​ ಒಪ್ಪೋ ಸಾಧ್ಯತೆ ಹೆಚ್ಚಿದೆ.

ಇದನ್ನೂ ಓದಿ: ಗರ್ಭ ಧರಿಸಿಲ್ಲ, ಮರಿನೂ ಹಾಕಿಲ್ಲ.. ಆದ್ರೂ ಹಾಲು ಕೊಡುತ್ತೆ ಈ 3 ತಿಂಗಳ ಮೇಕೆ ಮರಿ..!

ಡೆಲ್ಲಿ ಕ್ಯಾಪಿಟಲ್ಸ್​ ಫ್ರಾಂಚೈಸಿಗೂ ದ್ರಾವಿಡ್​ಗೂ ಇದೆ ನಂಟು.!

ಈ ಹಿಂದೆ ರಾಹುಲ್​ ದ್ರಾವಿಡ್​ ಡೆಲ್ಲಿ ಡೇರ್​​ಡೆವಿಲ್ಸ್​ ತಂಡದ ಮೆಂಟರ್​ ಆಗಿದ್ರು. 2 ವರ್ಷಗಳ ಕಾಲ ತಂಡದ ಮೆಂಟರ್​ ಆಗಿ ಫ್ರಾಂಚೈಸಿ ಜೊತೆಗೆ ಕೆಲಸ ಮಾಡಿದ್ದಾರೆ. ಮ್ಯಾನೇಜ್​ಮೆಂಟ್​ ತಂಡದ ವಾತಾವರಣ ಹಾಗೂ ಕೆಲ ಆಟಗಾರರ ಜೊತೆಗೆ ದ್ರಾವಿಡ್​ ಉತ್ತಮ ಒಡನಾಟ ಹೊಂದಿದ್ದಾರೆ. ಹೀಗಾಗಿ ದ್ರಾವಿಡ್​ ಕೋಚ್ ಆದ್ರೆ, ತಂಡಕ್ಕೆ ಪ್ಲಸ್​ ಪಾಯಿಂಟ್​ ಆಗಲಿದೆ.

ಸೌರವ್ ಗಂಗೂಲಿ ಹೊಸ ಕೋಚ್ ಆಗ್ತಾರಾ..?

ಹಲವು ವರ್ಷಗಳಿಂದ ಗಂಗೂಲಿ, ಡೆಲ್ಲಿ ಕ್ಯಾಪಿಟಲ್ಸ್​ ತಂಡದೊಂದಿಗಿದ್ದಾರೆ. ಫ್ರಾಂಚೈಸಿಯ ಕಲ್ಚರ್ ಬಗ್ಗೆ ಚೆನ್ನಾಗಿಯೇ ಅರಿತಿದ್ದಾರೆ. ಹೀಗಾಗಿ ಡೈರೆಕ್ಟರ್​ ಹುದ್ದೆಯ ಜೊತೆಗೆ ಹೆಡ್​ ಕೋಚ್​ ಜವಾಬ್ದಾರಿಯನ್ನ ಗಂಗೂಲಿ ನಿಭಾಯಿಸಿದ್ರೂ, ಅಚ್ಚರಿ ಪಡಬೇಕಿಲ್ಲ. ಡೆಲ್ಲಿ ಕ್ಯಾಪಿಟಲ್ಸ್​ನ ನೂತನ ಕೋಚ್​ ಯಾರಾಗ್ತಾರೆ ಅನ್ನೋದು ಕ್ರಿಕೆಟ್​ ವಲಯದಲ್ಲಿ ತೀವ್ರ ಕುತೂಹಲವನ್ನ ಹುಟ್ಟು ಹಾಕಿದೆ. ದ್ರಾವಿಡ್​ ಕೋಚ್​ ಗಾದಿಗೇರ್ತಾರಾ? ಗಂಗೂಲಿ ಜವಾಬ್ದಾರಿ ವಹಿಸಿಕೊಳ್ತಾರಾ? ಅಥವಾ ಸರ್​​ಪ್ರೈಸ್​​ ರೀತಿಯಲ್ಲಿ ಬೇರೆಯವರ ಎಂಟ್ರಿಯಾಗುತ್ತಾ? ಎಂದು ಕಾದು ನೋಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಆಪ್ತ ಸ್ನೇಹಿತನಿಗೆ ಗೆಟೌಟ್ ಎಂದ ಗಂಗೂಲಿ.. ಕನ್ನಡಿಗ ದ್ರಾವಿಡ್​​ಗೆ ಮತ್ತೊಂದು ದೊಡ್ಡ ಜವಾಬ್ದಾರಿ..!?

https://newsfirstlive.com/wp-content/uploads/2024/07/DRAVID-3.jpg

Load More