/newsfirstlive-kannada/media/post_attachments/wp-content/uploads/2024/09/Smartphone-1.jpg)
ಸ್ಮಾರ್ಟ್‌ಫೋನ್‌ಗಳಿಗೆ ಭಾರೀ ಡಿಮ್ಯಾಂಡ್ ಇದೆ. ಹೀಗಾಗಿ ಅವುಗಳ ಬೆಲೆ ಹೆಚ್ಚುತ್ತಲೇ ಇದೆ. ಪ್ರತಿದಿನ ಹೊಸ ಹೊಸ ಕಂಪನಿಗಳು ಸ್ಮಾರ್ಟ್‌ಫೋನ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಿವೆ. ಹೀಗಾಗಿ 2025ರಲ್ಲಿ ಸ್ಮಾರ್ಟ್‌ಫೋನ್‌ಗಳು ಮತ್ತಷ್ಟು ದುಬಾರಿಯಾಗಬಹುದು. ಅದಕ್ಕೆ ಮೂರು ದೊಡ್ಡ ಕಾರಣಗಳಿವೆ.
ಇದನ್ನೂ ಓದಿ:Smartphone ಜೀವಿತಾವಧಿ ಗೊತ್ತೇ..? ನೀವು ಒಂದು ಫೋನ್ ಎಷ್ಟು ವರ್ಷ ಬಳಸಬಹುದು?
ಯಾಕೆ ಮೊಬೈಲ್ ಬೆಲೆ ಏರಿಕೆ?
- ಉತ್ತಮ ಘಟಕಗಳಿಗೆ ಹೆಚ್ಚುತ್ತಿರುವ ಬೆಲೆ
- 5G ನೆಟ್ವರ್ಕ್ ಎಂಟ್ರಿ
- AI ತಂತ್ರಜ್ಞಾನ
ಕೌಂಟರ್‌ಪಾಯಿಂಟ್ (Counterpoint) ಸಂಶೋಧನೆ ಪ್ರಕಾರ.. ಸ್ಮಾರ್ಟ್‌ಫೋನ್‌ಗಳ ಸರಾಸರಿ ಬೆಲೆ 2024 ರಲ್ಲಿ 3% ಮತ್ತು 2025 ರಲ್ಲಿ 5% ರಷ್ಟು ಹೆಚ್ಚಾಗಬಹುದು. ಏಕೆಂದರೆ ಜನರು ಹೆಚ್ಚು ಶಕ್ತಿಶಾಲಿ ಪ್ರೊಸೆಸರ್ ಮತ್ತು AI ಹೊಂದಿರುವ ದುಬಾರಿ ಫೋನ್‌ಗಳನ್ನು ಖರೀದಿಸ್ತಿದ್ದಾರೆ ಎಂದು ಹೇಳಿದೆ.
ಇದನ್ನೂ ಓದಿ:ನಿತ್ಯ ಮುಂಜಾನೆ ತುಳಸಿ ಎಲೆಯನ್ನು ತಿನ್ನುವುದರಿಂದ ಆಗುವ ಪ್ರಯೋಜನಗಳು ಏನು?
AI ಬಳಕೆ ಹೆಚ್ಚಾಗುತ್ತಿದ್ದಂತೆಯೇ ದೊಡ್ಡ ದೊಡ್ಡ ಟೆಕ್ ಕಂಪನಿಗಳು ಎಐಗೆ ಒತ್ತು ನೀಡುತ್ತಿವೆ. ಎಐ ತಂತ್ರಜ್ಞಾನದಿಂದಾಗಿ ಸ್ಮಾರ್ಟ್‌ಫೋನ್‌ಗಳು ದುಬಾರಿಯಾಗುತ್ತಿವೆ. AI ಫೀಚರ್ಸ್ ಜನರು ತುಂಬಾ ಇಷ್ಟಪಡ್ತಿದ್ದಾರೆ. ಹಾಗಾಗಿ ಸ್ಮಾರ್ಟ್ಫೋನ್ ತಯಾರಿಕಾ ಕಂಪನಿಗಳು ಹೆಚ್ಚು ಶಕ್ತಿಶಾಲಿ CPU, NPU ಮತ್ತು GPU ನೊಂದಿಗೆ ಚಿಪ್‌ಗಳನ್ನು ತಯಾರಿಸುತ್ತಿವೆ. ಈ ಚಿಪ್‌ಗಳ ಬೆಲೆ ಸಾಮಾನ್ಯವಾಗಿ ಸಾಕಷ್ಟು ಹೆಚ್ಚಾಗಿರುತ್ತದೆ. ಇದರಿಂದ ಫೋನ್ ಬೆಲೆಯೂ ಕೂಡ ಹೆಚ್ಚಾಗುತ್ತದೆ. 4nm ಮತ್ತು 3nm ನಂತಹ ಚಿಪ್‌ಗಳನ್ನು ತಯಾರಿಸಲು ಹೊಸ ತಂತ್ರಜ್ಞಾನಗಳಿಂದಾಗಿ ಘಟಕಗಳ ಬೆಲೆಯೂ ಹೆಚ್ಚುತ್ತಿದೆ. ಸಾಫ್ಟ್‌ವೇರ್ ರಚಿಸಲು ಮತ್ತು ಸುಧಾರಿಸಲು ಕಂಪನಿಗಳು ಹೆಚ್ಚಿನ ಹಣ ಖರ್ಚು ಮಾಡಬೇಕಾಗುತ್ತದೆ.
ಸ್ಮಾರ್ಟ್‌ಫೋನ್‌ಗಳು ಅಪ್‌ಗ್ರೇಡ್..!
ತಂತ್ರಜ್ಞಾನವು ಅಪ್ಡೇಟ್ ಆಗುತ್ತಿದ್ದಂತೆಯೇ ಸ್ಮಾರ್ಟ್‌ಫೋನ್‌ಗಳು ಸಹ ಅಪ್‌ಗ್ರೇಡ್ ಆಗುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ಹೆಚ್ಚುತ್ತಿರುವ ಬೆಲೆಗಳ ಜತೆಗೆ ಉತ್ತಮ ಫೋನ್ಗಳೂ ಮಾರುಕಟ್ಟೆಗೆ ಬರುತ್ತಿವೆ.
ಇದನ್ನೂ ಓದಿ:ಕೊನೆಗೂ ಮೌನ ಮುರಿದ ಕೆಎಲ್ ರಾಹುಲ್; LSG ತಂಡದಿಂದ ಹೊರ ಬಂದಿರುವ ಹಿಂದಿನ ಸತ್ಯ ರಿವೀಲ್..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ