ಮಾಯಾ ಬಾಲಚಂದ್ರ ಸಾಧನೆ ಯಾವುದೇ ಕ್ಷೇತ್ರಕ್ಕೂ ಮೀಸಲಾಗಿಲ್ಲ.. ಮಾದರಿ ಮಹಿಳೆಗೆ ‘ಮಹಿಳಾ ಮಾಣಿಕ್ಯ’ ಗೌರವ

author-image
Bheemappa
Updated On
ಮಾಯಾ ಬಾಲಚಂದ್ರ ಸಾಧನೆ ಯಾವುದೇ ಕ್ಷೇತ್ರಕ್ಕೂ ಮೀಸಲಾಗಿಲ್ಲ.. ಮಾದರಿ ಮಹಿಳೆಗೆ ‘ಮಹಿಳಾ ಮಾಣಿಕ್ಯ’ ಗೌರವ
Advertisment
  • ಮಾಯಾ ಬಾಲಚಂದ್ರ ಮೂಲತಃ ಯಾವ ಊರಿನವರು ನಿಮ್ಗೆ ಗೊತ್ತಾ?
  • ಹಲವು ವಿಭಾಗದಲ್ಲಿ ತಮ್ಮನ್ನು ತೊಡಗಿಸಿಕೊಂಡ ಮಾಯಾ ಬಾಲಚಂದ್ರ
  • ಸಾಧನೆಯಲ್ಲಿ ಎತ್ತಿದ ಕೈ, ಮಹಿಳಾ ಸಾಧಕಿಯಾಗಿ ಇತರರಿಗೆ ಇವ್ರು ಮಾದರಿ

ಇವರ ಸಾಧನೆ ಯಾವುದೇ ಒಂದು ಕ್ಷೇತ್ರಕ್ಕೆ ಮೀಸಲಾಗಿಲ್ಲ. ಸಾಹಿತ್ಯ ಕ್ಷೇತ್ರ, ಸಂಗೀತ, ಯೋಗ ಕ್ಷೇತ್ರ, ಮಹಿಳಾ ಸಂಘಟನೆಯಲ್ಲೂ ಇದೆ. ಪರಿಸರ, ಕಾನೂನು ಜಾಗೃತಿಯಂತಹ ಹಲವು ಕ್ಷೇತ್ರಗಳಲ್ಲಿ ಇವರು ಸಾಧನೆ ಮಾಡಿದ್ದಾರೆ. ಸೃಜನಶೀಲತೆಯಿಂದಲೇ ಹಲವು ವಿಭಾಗಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು, ಮಾದರಿ ಮಹಿಳೆಯಂದು ಖ್ಯಾತರಾಗಿರೋರು, ಮಾಯಾ ಬಾಲಚಂದ್ರ.

[caption id="attachment_114108" align="alignnone" width="800"]publive-image ರಾಜಮಾತೆ ಪ್ರಮೋದಾದೇವಿ, ಮಾಯಾ ಬಾಲಚಂದ್ರ ಹಾಗೂ ವಚನಾನಂದ ಶ್ರೀ[/caption]

ಇವರು ಸಪ್ತಸ್ವರ ಸಂಗೀತ ವಿದ್ಯಾಲಯ ಸ್ಥಾಪಿಸಿ, ಆಸಕ್ತರಿಗೆ ಕರ್ನಾಟಕ ಶಾಸ್ತ್ರೀಯ ಸಂಗೀತ ತರಬೇತಿ ನೀಡುತ್ತಿದ್ದಾರೆ. ದಾಸ ಸಾಹಿತ್ಯ ಕ್ಷೇತ್ರದಲ್ಲಂತೂ ಇವರು ಮುಂಚೂಣಿಯಲ್ಲಿದ್ದಾರೆ. ದಾಸ ಸಾಹಿತ್ಯ ಪರಿಷತ್ತಿನ ಕೋಲಾರ ಜಿಲ್ಲಾ ಘಟಕ ಅಧ್ಯಕೆಯಾಗಿ, ಗ್ರಾಮೀಣ ಪ್ರದೇಶದಲ್ಲಿ ಮಹಿಳಾ ಕಲಾ ತಂಡಗಳ ರಚಿಸಿ, ತರಬೇತಿಯನ್ನೂ ಸಹ ನೀಡಿದ್ದಾರೆ.

ವಿಶೇಷ ಅಂದ್ರೆ, ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೂಡ ಆಗಿದ್ದಾರೆ. ಹೀಗೆ ಸಾಹಿತ್ಯ ಮತ್ತು ಸಂಗೀತ ಕ್ಷೇತ್ರದ ಹಲವು ಸಂಘ ಸಂಸ್ಥೆಗಳಲ್ಲಿ ಮಾಯಚಂದ್ರ ಅವರು ಸಕ್ರಿಯರಾಗಿದ್ದಾರೆ.

ಇದನ್ನೂ ಓದಿ: UPSC ಅಲ್ಲಿ ಕರ್ನಾಟಕದಿಂದ ನಂಬರ್-1 ಶ್ರೇಣಿ, ಈಗ ಮಂಡ್ಯದ ಸಿಇಓ.. ನ್ಯೂಸ್‌ ಫಸ್ಟ್‌ ಮಹಿಳಾ ಮಾಣಿಕ್ಯ ನಂದಿನಿ ಕೆ.ಆರ್‌!

[caption id="attachment_114106" align="alignnone" width="800"]publive-image ಮಾಯಾ ಬಾಲಚಂದ್ರ ಮಾತನಾಡುವ ವೇಳೆ ವಚನಾನಂದ ಶ್ರೀ ಇದ್ದರು[/caption]

ಮೂಲತಃ ಅಚ್ಚ ಮಲೆನಾಡಿನ ಶೃಂಗೇರಿಯವರಾದ ಇವರು, ಕೋಲಾರದ ಬಯಲು ನಾಡನ್ನ ಕರ್ಮಭೂಮಿಯನ್ನಾಗಿಸಿಕೊಂಡಿದ್ದಾರೆ. ಕನ್ನಡದ ದಿನಪತ್ರಿಕೆಯಲ್ಲಿ ಅಂಕಣ ಬರಹಗಾರ್ತಿಯಾಗಿರುವ ಇವರು, ಅಧ್ಯಾತ್ಮ ಕಥಾಂಜಲಿ, ಚಿತ್ತ ವಿಹಾರ ಅಂಕಣಗಳ ಮೂಲಕ ಅನೇಕ ವಿಚಾರಗಳ ಬಗ್ಗೆ, ಜಾಗೃತಿ ಮೂಡಿಸಿದ್ದಾರೆ. ವೈವಿದ್ಯ ಪ್ರತಿಭೆಗಳ ಮೂಲಕ, ಮಹಿಳಾ ಸಮುದಾಯದ ಮಾದರಿಯಾಗಿರುವ ಮಾಯಚಂದ್ರ, ನ್ಯೂಸ್‌ಫಸ್ಟ್‌ನ ಮಹಿಳಾ ಮಾಣಿಕ್ಯ.

ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment