ಟೀಮ್​​ ಇಂಡಿಯಾ, ಇಂಗ್ಲೆಂಡ್​​ ಮಧ್ಯೆ ಮಹತ್ವದ ಸರಣಿ; ಕರ್ನಾಟಕದ ಸ್ಟಾರ್​​ ಆಟಗಾರರಿಗೆ ಜಾಕ್​ಪಾಟ್​​

author-image
Ganesh Nachikethu
Updated On
ಟೀಮ್​ ಇಂಡಿಯಾಗೆ ಮತ್ತೊಂದು ಶಾಕ್​​: R ಅಶ್ವಿನ್​ ಬೆನ್ನಲ್ಲೇ ನಿವೃತ್ತಿ ಘೋಷಿಸಿದ ಸ್ಟಾರ್​ ಕ್ರಿಕೆಟರ್​
Advertisment
  • ಬಹುನಿರೀಕ್ಷಿತ 2025ರ ಐಸಿಸಿ ಚಾಂಪಿಯನ್ಸ್​ ಟ್ರೋಫಿ ಆರಂಭ
  • ಈ ಮುನ್ನವೇ ನಡೆಯಲಿರೋ ಇಂಗ್ಲೆಂಡ್​ ವಿರುದ್ಧ ಏಕದಿನ ಟೂರ್ನಿ
  • ಟೀಮ್​ ಇಂಡಿಯಾದಲ್ಲಿ ಕರ್ನಾಟಕದ ಸ್ಟಾರ್​ ಆಟಗಾರರಿಗೆ ಸ್ಥಾನ!

ಇತ್ತೀಚೆಗೆ ಆಸ್ಟ್ರೇಲಿಯಾ ವಿರುದ್ಧ ನಡೆದ 5 ಪಂದ್ಯಗಳ ಟೆಸ್ಟ್​ ಸರಣಿಯಲ್ಲಿ ಟೀಮ್​ ಇಂಡಿಯಾ ಹೀನಾಯ ಸೋಲು ಕಂಡಿದೆ. ಮುಂದೆ ಇಂಗ್ಲೆಂಡ್​​ ವಿರುದ್ಧ ಏಕದಿನ ಸರಣಿ ನಡೆಯಲಿದ್ದು, ಬಲಿಷ್ಠ ಟೀಮ್​ ಇಂಡಿಯಾ ಪ್ರಕಟಿಸಲು ಬಿಸಿಸಿಐ ಮುಂದಾಗಿದೆ.

ಇಂಗ್ಲೆಂಡ್ ವಿರುದ್ಧ ಕಣಕ್ಕಿಳಿಯೋ ಟೀಮ್​​ ಇಂಡಿಯಾ ಆಟಗಾರರೇ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿ ಭಾಗವಾಗಲಿದ್ದಾರೆ. ಹೀಗಾಗಿ ಟೀಮ್​ ಇಂಡಿಯಾದಲ್ಲಿ ಯಾರಿಗೆ ಅವಕಾಶ ಸಿಗಲಿದೆ? ಅನ್ನೋ ಕುತೂಹಲ ಹೆಚ್ಚಾಗಿದೆ. ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿ ಆಡಲು ಕರ್ನಾಟಕದ ಇಬ್ಬರು ಸ್ಟಾರ್ ಆಟಗಾರರು ಎದುರು ನೋಡುತ್ತಿದ್ದಾರೆ.

ಸ್ಟಾರ್​ ಆಟಗಾರರಿಗೆ ಕೊಕ್​ ಸಾಧ್ಯತೆ

ಆಸ್ಟ್ರೇಲಿಯಾ ಪ್ರವಾಸದಲ್ಲಿ ಟೀಮ್ ಇಂಡಿಯಾ ಟಾಪ್ ಆರ್ಡರ್ ಬ್ಯಾಟಿಂಗ್ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿಲ್ಲ. ಕ್ಯಾಪ್ಟನ್​ ರೋಹಿತ್​ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಶುಭ್ಮನ್​​ ಗಿಲ್​​ ಸೇರಿದಂತೆ ಸ್ಟಾರ್​ ಆಟಗಾರರೇ ಫಾರ್ಮ್​​ ಸಮಸ್ಯೆ ಎದುರಿಸುತ್ತಿದ್ದಾರೆ. ಈ ಹೊತ್ತಲ್ಲೇ ಇವರಿಗೆ ಕೊಕ್​​ ನೀಡಿ ದೇಶೀಯ ಟೂರ್ನಿಯಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿರೋ ಮಾಯಾಂಕ್ ಅಗರ್ವಾಲ್, ಕರುಣ್ ನಾಯರ್ ಅವರಿಗೆ ಅವಕಾಶ ನೀಡಬಹುದು.

publive-image

ಮಯಾಂಕ್​​​ ಅಗರ್ವಾಲ್​​

ವಿಜಯ್ ಹಜಾರೆ ಟ್ರೋಫಿಯಲ್ಲಿ ಕರ್ನಾಟಕ ಕ್ಯಾಪ್ಟನ್​​​ ಮಯಾಂಕ್​​ ಅಗರ್ವಾಲ್​ ಅಮೋಘ ಪ್ರದರ್ಶನ ನೀಡಿದ್ರು. ಇವರು ಬ್ಯಾಕ್​ ಟು ಬ್ಯಾಕ್​​ ಶತಕ ಸಿಡಿಸಿ ಕರ್ನಾಟಕದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದೆ. ಮಯಾಂಕ್​​ ಈವರೆಗೆ ಆಡಿರೋ 7 ಪಂದ್ಯಗಳಲ್ಲಿ 4 ಶತಕ ಹಾಗೂ 1 ಅರ್ಧಶತಕದ ಜತೆಗೆ 613 ರನ್ ಕಲೆಹಾಕಿದ್ದಾರೆ.

ಕರುಣ್ ನಾಯರ್

ಕರ್ನಾಟಕದ ಮಾಜಿ ಕ್ರಿಕೆಟರ್​​ ಕರುಣ್​ ನಾಯರ್​​ ವಿದರ್ಭ ತಂಡವನ್ನು ಲೀಡ್​ ಮಾಡುತ್ತಿದ್ದಾರೆ. ಇವರಯ ಕೂಡ ವಿಜಯ್ ಹಜಾರೆ ಟ್ರೋಫಿಯಲ್ಲಿ ಅಬ್ಬರಿಸುತ್ತಿದ್ದಾರೆ. ಮಯಾಂಕ್ ಜತೆಗೆ 500ಕ್ಕೂ ಹೆಚ್ಚು ರನ್​ ಬಾರಿಸಿದ ದಾಖಲೆಯನ್ನು ಕರುಣ್ ನಾಯರ್ ಸೃಷ್ಟಿಸಿದ್ದಾರೆ. ಕರುಣ್ ನಾಯರ್ 5 ಇನಿಂಗ್ಸ್​ಗಳಲ್ಲಿ 4 ಶತಕ ಸಿಡಿಸಿದ್ದು, 542 ರನ್ ಕಲೆಹಾಕಿದ್ದಾರೆ.

ಇದನ್ನೂ ಓದಿ:ICC ಚಾಂಪಿಯನ್ಸ್ ಟ್ರೋಫಿ; ಟೀಮ್​ ಇಂಡಿಯಾಗೆ ಮಾಸ್ಟರ್​ ಸ್ಟ್ರೋಕ್​​ ಕೊಟ್ಟ ಬುಮ್ರಾ; ಏನಾಯ್ತು?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment