ಐಪಿಎಲ್​​ 2025: ಆರ್​​ಸಿಬಿ ತಂಡಕ್ಕೆ ಮಯಾಂಕ್​ ಅಗರ್ವಾಲ್​ ಎಂಟ್ರಿ; ಹೇಗೆ?

author-image
Ganesh Nachikethu
Updated On
ಮಯಾಂಕ್​​ರನ್ನೇ ಆರ್​ಸಿಬಿ ಸೆಲೆಕ್ಟ್ ಮಾಡಿದ್ದು ಯಾಕೆ..? ಅಸಲಿ ಕಾರಣ ಇಲ್ಲಿದೆ..
Advertisment
  • ಬಹುನಿರೀಕ್ಷಿತ 2025ರ ಇಂಡಿಯನ್​ ಪ್ರೀಮಿಯರ್​​ ಲೀಗ್​
  • ಮೆಗಾ ಲೀಗ್​ ಆರಂಭಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ
  • ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡಕ್ಕೆ ಸ್ಟಾರ್​ ಎಂಟ್ರಿ

ಬಹುನಿರೀಕ್ಷಿತ 2025ರ ಇಂಡಿಯನ್​ ಪ್ರೀಮಿಯರ್​​ ಲೀಗ್​ ಆರಂಭಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಇವೆ. ಹೇಗಾದ್ರೂ ಮಾಡಿ ಕಪ್​ ಗೆಲ್ಲಲೇಬೇಕು ಎಂದು ಎಲ್ಲಾ ಐಪಿಎಲ್​ ತಂಡಗಳು ಭರ್ಜರಿ ತಯಾರಿ ಆರಂಭಿಸಿವೆ. ಈಗಾಗಲೇ ಮೆಗಾ ಟೂರ್ನಿಗೆ ಡೇಟ್​ ಅನೌನ್ಸ್​ ಆಗಿದ್ದು, ಸಂಪೂರ್ಣ ವೇಳಾಪಟ್ಟಿ ರಿಲೀಸ್​ ಆಗಬೇಕಿದೆ.

ಇತ್ತೀಚೆಗೆ ನಡೆದ ಐಪಿಎಲ್​ ಮೆಗಾ ಹರಾಜಿನಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಸೇರಿದಂತೆ ಎಲ್ಲಾ ತಂಡಗಳು ತಮಗೆ ಬೇಕಾದ ಸ್ಟಾರ್​ ಆಟಗಾರರನ್ನು ಖರೀದಿ ಮಾಡಿವೆ. ಈ ಮೂಲಕ ಬಲಿಷ್ಠ ತಂಡಗಳನ್ನು ಕಟ್ಟಿಕೊಂಡಿವೆ.

ಐಪಿಎಲ್ ಹರಾಜಿನಲ್ಲಿ ಅನ್‌ಸೋಲ್ಡ್‌ ಆದವರ ಲಿಸ್ಟ್​ ಕೂಡ ದೊಡ್ಡದಿದೆ. ಪೃಥ್ವಿ ಶಾ, ಡೇವಿಡ್ ವಾರ್ನರ್, ಕೇನ್ ವಿಲಿಯಮ್ಸನ್‌, ಶಾರ್ದೂಲ್ ಠಾಕೂರ್, ಜಾನಿ ಬೇರ್‌ಸ್ಟೋ, ಡೇರಲ್‌ ಮಿಚೆಲ್‌, ಮಯಾಂಕ್‌ ಅಗರ್ವಾಲ್​ ಸೇರಿದಂತೆ ಹಲವು ಸ್ಟಾರ್​ ಆಟಗಾರರು ಐಪಿಎಲ್​​ ಮಾಲೀಕರ ಚಿತ್ತ ಕದಿಯುವಲ್ಲಿ ವಿಫಲರಾಗಿದ್ದಾರೆ. ಈ ಎಲ್ಲರೂ ಮತ್ತೊಂದು ಅವಕಾಶಕ್ಕಾಗಿ ಕಾಯುತ್ತಿದ್ದಾರೆ.

ಅನ್​ಸೋಲ್ಡ್​ ಆಟಗಾರರಿಗೆ ಸಿಗುತ್ತಾ ಚಾನ್ಸ್​​?

ಆಕ್ಷನ್​​ನಲ್ಲಿ ಅನ್​ಸೋಲ್ಡ್​ ಆದವರಿಗೆ ಚಾನ್ಸ್​ ಹೇಗೆ ಸಿಗುತ್ತೆ? ಅನ್ನೋ ಪ್ರಶ್ನೆ ಶುರುವಾಗಿದೆ. ತಂಡದ ಯಾವುದೇ ಆಟಗಾರರ ಗಾಯದಿಂದ ಟೂರ್ನಿಗೆ ಅಲಭ್ಯರಾದಲ್ಲಿ ಇವರ ಬದಲಿಗೆ ಅನ್​ಸೋಲ್ಡ್​ ಆದ ಆಟಗಾರರಿಗೆ ಅವಕಾಶ ಸಿಗುತ್ತದೆ. ಈ ಮಧ್ಯೆ ಆರ್​​ಸಿಬಿ ಫ್ಯಾನ್ಸ್​ಗೆ ಗುಡ್​​ನ್ಯೂಸ್​ ಒಂದಿದೆ.

ಮಯಾಂಕ್‌ ಅಗರ್ವಾಲ್​​ ಆರ್​​ಸಿಬಿಗೆ!

ಕಳೆದ ಬಾರಿ ಸನ್​ರೈಸರ್ಸ್​ ಹೈದರಾಬಾದ್ ತಂಡದ ಪರ ಆಡಿದ್ದ ಮಯಾಂಕ್​ ಅಗರ್ವಾಲ್​​​ ರನ್​ ಕಲೆ ಹಾಕುವಲ್ಲಿ ವಿಫಲರಾಗಿದ್ದರು. ಹೀಗಾಗಿ ಮೆಗಾ ಹರಾಜಿನಲ್ಲಿ ಇವರನ್ನು ಯಾರು ಖರೀದಿ ಮಾಡಲಿಲ್ಲ. ಇದಾದ ಬಳಿಕ ನಡೆದ ವಿಜಯ್ ಹಜಾರೆ ಏಕದಿನ ಟೂರ್ನಿಯಲ್ಲಿ ಮಯಾಂಕ್​​ ಸ್ಥಿರ ಪ್ರದರ್ಶನ ನೀಡಿ ರನ್‌ ಕಲೆ ಹಾಕಿದ್ದಾರೆ. ಟೂರ್ನಿಯಲ್ಲಿ ಗರಿಷ್ಠ ರನ್ ಸಾಧಕರ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದರು. ಸದ್ಯ ಆರ್​​ಸಿಬಿ ತಂಡದಲ್ಲಿ ಯಾರಿಗಾದ್ರೂ ಗಾಯ ಆದಲ್ಲಿ ಮಯಾಂಕ್​​ ಅವರನ್ನು ಸೇರಿಸಿಕೊಳ್ಳಬಹುದು. ಇವರಿಗೆ ಐಪಿಎಲ್‌ನಲ್ಲಿ ತಂಡವನ್ನು ಮುನ್ನಡೆಸಿದ ಅನುಭವ ಇದೆ.

ಇದನ್ನೂ ಓದಿ:ಸ್ಪೆಷಲ್ ಕಾಂಟ್ರ್ಯಾಕ್ಟ್​ ಹಿಂದೆ ಬಿದ್ದು ಕೈಸುಟ್ಟುಕೊಂಡ BCCI; ಕನಸು ಭಗ್ನಗೊಂಡಿದ್ದು ಹೀಗೆ..

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment