IPL Auction; ಓರ್ವ ಕನ್ನಡಿಗ, ಮಹಾರಾಷ್ಟ್ರದ ಈ ಪ್ಲೇಯರ್​ ಅನ್​ಸೋಲ್ಡ್​

author-image
Bheemappa
Updated On
IPL Auction; ಓರ್ವ ಕನ್ನಡಿಗ, ಮಹಾರಾಷ್ಟ್ರದ ಈ ಪ್ಲೇಯರ್​ ಅನ್​ಸೋಲ್ಡ್​
Advertisment
  • ಸೌದಿ ಅರೇಬಿಯಾದ ಜೆಡ್ಡಾದಲ್ಲಿ 2ನೇ ದಿನದ ಹರಾಜು ಪ್ರಕ್ರಿಯೆ
  • ಆಕ್ಷನ್​ನಲ್ಲಿ ಅನ್​ಸೋಲ್ಡ್​ ಆದ ಓರ್ವ ಕನ್ನಡಿಗ, ಯುವ ಪ್ಲೇಯರ್
  • ಕಳೆದ ಬಾರಿ ಹೈದ್ರಾಬಾದ್ ಟೀಮ್​ನಲ್ಲಿ ಬ್ಯಾಟ್ ಬೀಸಿದ್ದ ಕನ್ನಡಿಗ

ಐಪಿಎಲ್ ಹರಾಜು ಪ್ರಕ್ರಿಯೆ ಎಲ್ಲರ ಕುತೂಹಲ ಕೆರಳಿಸಿದ್ದು ಅಚ್ಚರಿಯ ಖರೀದಿಗಳು ನಡೆದಿವೆ. ರಿಷಬ್ ಪಂತ್ 27 ಕೋಟಿ ರೂಪಾಯಿಗೆ ಲಖನೌ ಸೂಪರ್ ಜೈಂಟ್ಸ್ ತಂಡದ ಪಾಲಾಗಿದ್ದಾರೆ. ಶ್ರೇಯಸ್ ಅಯ್ಯರ್ ಅವರು ಪಂಜಾಬ್ ಕಿಂಗ್ಸ್ ತಂಡ ಸೇರಿಕೊಂಡಿದ್ದು ಅತಿ ಹೆಚ್ಚು ಹಣ ಪಡೆದ 2ನೇ ಆಟಗಾರ ಎನಿಸಿಕೊಂಡಿದ್ದಾರೆ. ಕರ್ನಾಟಕದ ಮಯಾಂಕ್ ಅಗರ್ವಾಲ್ ಹಾಗೂ ಮಹಾರಾಷ್ಟ್ರದ ಪೃಥ್ವಿ ಶಾ ಅವರು ಅನ್​ಸೋಲ್ಡ್ ಆಗಿದ್ದಾರೆ.

ಕನ್ನಡಿಗ ಮಯಾಂಕ್ ಅಗರ್ವಾಲ್ ಅವರು ಬೆಂಗಳೂರು ತಂಡ ಸೇರಿದಂತೆ ಹೈದ್ರಾಬಾದ್, ಪುಣೆ, ಡೆಲ್ಲಿ ಕ್ಯಾಪಿಟಲ್ಸ್, ಪಂಜಾಬ್​ ಟೀಮ್​ನಲ್ಲಿ ಬ್ಯಾಟ್ ಬೀಸಿದ್ದರು. ಅದರಂತೆ ಈ ಬಾರಿ 1 ಕೋಟಿ ರೂಪಾಯಿ ಮೂಲ ಬೆಲೆಯೊಂದಿಗೆ ಹರಾಜಿಗೆ ಬಂದಿದ್ದರು. ಕಳೆದ ಬಾರಿ ಹೈದ್ರಾಬಾದ್ ಟೀಮ್​​ನಲ್ಲಿದ್ದ ಮಯಾಂಕ್ ಉತ್ತಮ ಪ್ರದರ್ಶನ ಮಾಡಿರಲಿಲ್ಲ. ಹೀಗಾಗಿ ಹೈದ್ರಾಬಾದ್ ರಿಟೈನ್ ಮಾಡಿಕೊಂಡಿರಲಿಲ್ಲ. ಸದ್ಯ ಮಯಾಂಕ್ ಅಗರ್ವಾಲ್ ಅವರನ್ನು ಕೊಂಡುಕೊಳ್ಳಲು ಯಾರು ಮುಂದೆ ಬಾರದ ಕಾರಣ ಅನ್​ಸೋಲ್ಡ್ ಆಗಿದ್ದಾರೆ.

ಇದನ್ನೂ ಓದಿ: Auction; ನಾಯಕನನ್ನ ಕೈಬಿಟ್ಟ RCB.. ಡು ಪ್ಲೆಸಿಸ್​​ ಖರೀದಿ ಮಾಡಿದ ಫ್ರಾಂಚೈಸಿ ಯಾವುದು?

publive-image

ಮಹಾರಾಷ್ಟ್ರದ ಯುವ ಆಟಗಾರ ಪೃಥ್ವಿ ಶಾ ಅವರು ಈ ಬಾರಿ ಅನ್​ಸೋಲ್ಡ್ ಆಗಿದ್ದಾರೆ. 75 ಲಕ್ಷ ರೂಪಾಯಿಗಳ ಮೂಲ ಬೆಲೆಯೊಂದಿಗೆ ಆಕ್ಷನ್​​ಗೆ ಶಾ ಬಂದಿದ್ದರು. ಆದರೆ ಹರಾಜಿನಲ್ಲಿ ಪೃಥ್ವಿ ಶಾ ಅವರ ಹೆಸರನ್ನು ಯಾರು ಕರೆಯಲಿಲ್ಲದ ಕಾರಣ ಅವರು ಅನ್​ಸೋಲ್ಡ್ ಆಗಿದ್ದಾರೆ. ಈ ಮೊದಲು ಇವರು ಡೆಲ್ಲಿ ಟೀಮ್​​ನಲ್ಲಿ ಆಡಿದ್ದರು. ಐಪಿಎಲ್​​ನಲ್ಲಿ ಆಡಿದ ಅತ್ಯಂತ ಕಿರಿಯ ಪ್ಲೇಯರ್ ಎನ್ನುವ ಹೆಸರು ಇವರಿಗೆ ಇದೆ. ಆದರೆ ಈ ಬಾರಿ ಇವರನ್ನು ಯಾರೂ ಕೂಡ ಕೊಂಡುಕೊಳ್ಳಲಿಲ್ಲ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment