/newsfirstlive-kannada/media/post_attachments/wp-content/uploads/2025/01/Mayank_RCB.jpg)
ಸೀಸನ್-18ರ ಐಪಿಎಲ್ ನಿರ್ಣಾಯಕ ಘಟ್ಟದತ್ತ ಸಾಗ್ತಿದೆ. ಈಗಾಗಲೇ ಪ್ಲೇಆಫ್ ರೇಸ್ನಿಂದ 3 ತಂಡಗಳು ಹೊರ ಬಿದ್ದಿದ್ದು, 7 ತಂಡಗಳ ನಡುವೆ ಜಿದ್ದಾಜಿದ್ದಿನ ಹೋರಾಟ ನಡೆಯುತ್ತಿದೆ. ಹೀಗಿರುವಾಗಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಬಿಗ್ ಶಾಕ್ ಎದುರಾಗಿದೆ. ತಂಡದ ಸ್ಟಾರ್ ಬ್ಯಾಟ್ಸ್ಮನ್ ದೇವದತ್ ಪಡಿಕ್ಕಲ್, ಇಂಜುರಿ ಕಾರಣಕ್ಕೆ ಟೂರ್ನಿಯಿಂದಲೇ ಹೊರಬಿದ್ದಿದ್ದಾರೆ. ಇದೀಗ ದೇವದತ್ ಸ್ಥಾನಕ್ಕೆ ಮತ್ತೋರ್ವ ಕನ್ನಡಿಗ ಮಯಾಂಕ್ ಅಗರ್‌ವಾಲ್ ಸೇರ್ಪಡೆಯಾಗಿದ್ದಾರೆ.
ಬರೋಬ್ಬರಿ 12 ವರ್ಷಗಳ ಬಳಿಕ ಕನ್ನಡಿಗ ಮಯಾಂಕ್ ಅಗರ್ವಾಲ್ ಮರಳಿ ಗೂಡು ಸೇರಿದ್ದಾರೆ. ಮಯಾಂಕ್ ಆರ್ಸಿಬಿ ಕೊಡುಕೊಂಡ ಬೆನ್ನಲ್ಲೇ, ನಾನಾ ಡಿಬೇಡ್ಗಳು, ಲಾಭ ನಷ್ಟದ ಚರ್ಚೆಗಳು ಶುರುವಾಗಿವೆ. ಆರ್ಸಿಬಿ ಮ್ಯಾನೇಜ್ಮೆಂಟ್ ಸುಖಾಸುಮ್ಮನೇ ಮಯಾಂಕ್ಗೆ ಮಣೆ ಹಾಕಿಲ್ಲ. ಮಯಾಂಕ್ ಆಯ್ಕೆಯ ಹಿಂದೆ ಹಲವು ಲೆಕ್ಕಾಚಾರಗಳಿವೆ.
ಇದನ್ನೂ ಓದಿ: ಕಿಂಗ್ ಕೊಹ್ಲಿ ಜೊತೆ ಓಪನಿಂಗ್ ಬ್ಯಾಟಿಂಗ್ ಮಾಡೋದು ಯಾರು.. ಸಾಲ್ಟ್, ಬೆಥೆಲ್ ಯಾರಿಗೆ ಚಾನ್ಸ್?
ಮಯಾಂಕ್ ಅನುಭವವೇ ಪ್ಲಸ್
ಆರ್ಸಿಬಿ ಪ್ಲೇ ಆಫ್ಗೆ ಎಂಟ್ರಿಯ ಅಂಚಿನಲ್ಲಿದೆ. ಈ ಮಹತ್ವದ ಘಟ್ಟದಲ್ಲಿ ತಂಡಕ್ಕೆ ಆಸರೆಯಾಗುವಂತ ಆಟಗಾರನ ಅವಶ್ಯಕತೆ ಇತ್ತು. ಇದಕ್ಕೆ ಮಯಾಂಕ್ ಅಗರ್ವಾಲ್ ಬೆಸ್ಟ್ ಚಾಯ್ಸ್. 14 ಐಪಿಎಲ್ ಸೀಸನ್ಗಳಲ್ಲಿ ಆಡಿರುವ ಅನುಭವ ಹೊಂದಿರುವ ಮಯಾಂಕ್, ಎಲ್ಲಾ ಕಂಡೀಷನ್ಸ್ಗೂ ಒಗ್ಗಿಕೊಳ್ಳುವ ಆಟಗಾರ. ಆಟಗಾರನಾಗಿ ಮಾತ್ರವಲ್ಲದೇ, ಐಪಿಎಲ್ನಲ್ಲಿ ತಂಡವನ್ನು ಮುನ್ನಡೆಸಿರುವ ಅನುಭವ ಮಯಾಂಕ್ಗಿದೆ. ಕನ್ನಡಿಗ ಫೀಲ್ಡ್ನಲ್ಲಿದ್ರೆ ತಂಡಕ್ಕೆ ಒಂದಿಲ್ಲೊಂದು ರೀತಿಯಲ್ಲಿ ಸಹಾಯವಾಗೋದ್ರಲ್ಲಿ ಡೌಟಿಲ್ಲ.
ಓಪನಿಂಗ್ಗೂ ಸೈ!
ಪಡಿಕ್ಕಲ್ ಸ್ಥಾನಕ್ಕೆ ಮಯಾಂಕ್ ಅಗರ್ವಾಲ್ ಆಯ್ಕೆ ಹಿಂದಿರೋ ಮೇನ್ ರೀಸನ್ ಮಯಾಂಕ್ ಫ್ಲೆಕ್ಸಿಬಿಲಿಟಿ. ಮಯಾಂಕ್ ಅಗರ್ವಾಲ್ ಕೇವಲ ಓಪನರ್ ಆಗಿ ಮಾತ್ರವಲ್ಲ. 3ನೇ ಕ್ರಮಾಂಕಕ್ಕೂ ಸೂಕ್ತ ಆಟಗಾರ. ಈ ಹಿಂದೆ ಹಲವು ತಂಡಗಳ ಪರ 3ನೇ ಕ್ರಮಾಂಕದಲ್ಲಿ ಆಡಿರುವ ಅನುಭವವಿದೆ. ಅಗತ್ಯ ಬಿದ್ರೆ ವಿರಾಟ್ ಕೊಹ್ಲಿ ಜೊತೆ ಓಪನಿಂಗ್ ಮಾಡಲು ನೆರವಾಗ್ತಾರೆ.
ಇದನ್ನೂ ಓದಿ: ಆರ್ಸಿಬಿಯಲ್ಲಿ ಈಗ ಮತ್ತೊಬ್ಬ ಕನ್ನಡಿಗ.. ಬ್ಯಾಟಿಂಗ್ ವಿಭಾಗಕ್ಕೆ ಬಂದಿದೆ ಸೂಪರ್ ಪವರ್..!
ಸ್ಪಿನ್ ಎದುರು ಅದ್ಭುತ ಆಟ
ಮಯಾಂಕ್ ಒಬ್ಬ ಕ್ಲಾಸ್ ಬ್ಯಾಟ್ಸ್ಮನ್. ಆದ್ರೆ ಇದೇ ಕ್ಲಾಸ್ ಬ್ಯಾಟರ್ನಲ್ಲಿ ಒಬ್ಬ ಟಿ20 ಸ್ಪೆಷಲಿಸ್ಟ್ ಕೂಡ ಇದ್ಧಾನೆ. ಸ್ಪಿನ್ ಎದುರು ಅದ್ಭುತವಾಗಿ ಆಟವಾಡಬಲ್ಲ ಕಲೆಗಾರನಿದ್ದಾನೆ. ಮಿಡಲ್ ಓವರ್ಗಳಲ್ಲಿ ಸುಲಭಕ್ಕೆ ರನ್ ಗಳಿಸೋ ಮಯಾಂಕ್ ಸೈಲೆಂಟ್ ಆಟದಿಂದಲೇ ಎದುರಾಳಿಗಳ ಮೇಲೆ ಒತ್ತಡ ಹೇರ್ತಾರೆ. ಒತ್ತಡದ ಸಂದರ್ಭಗಳಲ್ಲಿ ನೆಲಕಚ್ಚಿ ಆಡುವ ಮಯಾಂಕ್, ಎದುರಾಳಿ ತಂಡಕ್ಕೆ ಯಾವುದೇ ಕ್ಷಣದಲ್ಲಾದರು ಅಪಾಯಕಾರಿಯೇ.
ಚಿನ್ನಸ್ವಾಮಿ ಮತ್ತು ಆರ್ಸಿಬಿ ಕಲ್ಚರ್
ಬ್ಯಾಟಿಂಗ್ ಹೊರತಾಗಿ ಮಯಾಂಕ್ ಒಬ್ಬ ಸೇಫ್ ಹ್ಯಾಂಡ್ ಫೀಲ್ಡರ್. ಕಷ್ಟಕರ ಕ್ಯಾಚ್ಗಳನ್ನು ಸುಲಭಕ್ಕೆ ತೆಗೆದುಕೊಳ್ಳಬಲ್ಲ ಸಾಮರ್ಥ್ಯವಿದೆ. ಹೋಮ್ಗ್ರೌಂಡ್ ಚಿನ್ನಸ್ವಾಮಿಯ ಗ್ರೌಂಡ್ ಮತ್ತು ಪ್ಲೇಯಿಂಗ್ ಕಂಡಿಷನ್ಸ್ ಬಗ್ಗೆ ಇಂಚಿಂಚೂ ಮಾಹಿತಿಯಿದೆ. ಇದಲ್ಲಕ್ಕಿಂತ 2011ರಿಂದ 2013ರ ತನಕ ಆರ್ಸಿಬಿ ಪರವಾಗಿಯೇ ಆಡಿರುವ ಮಯಾಂಕ್ಗೆ, ಫ್ರಾಂಚೈಸಿಯ ಕಲ್ವರ್, ಎಕ್ಸ್ಪೆಕ್ಟೇಷನ್ಸ್ ಏನು ಅನ್ನೋದು ಗೊತ್ತಿದೆ. ಹೀಗಾಗಿ ತಂಡಕ್ಕೂ ಬೇಗ ಹೊಂದಿಕೊಳ್ತಾರೆ.
ಬೆಟ್ಟದಷ್ಟು ನಿರೀಕ್ಷೆ
14 ವರ್ಷಗಳ ಕಾಲ ಐಪಿಎಲ್ ಆಡಿ ಡಿಸೆಂಟ್ ಪರ್ಫಾಮೆನ್ಸ್ ನೀಡಿದ್ರೂ ಮೆಗಾ ಹರಾಜಿನಲ್ಲಿ ಕನ್ನಡಿಗ ಮಯಾಂಕ್ ಅನ್ಸೋಲ್ಡ್ ಆಗಿದ್ದರು. ಹರಾಜಿನಲ್ಲಿ ಅನ್ಸೋಲ್ಡ್ ಆಗಿ ರಿಪ್ಲೇಸ್ಮೆಂಟ್ ಆಟಗಾರರಾಗಿ ಬಂದ ಆಟಗಾರರು ಸದ್ಯ ಐಪಿಎಲ್ನಲ್ಲಿ ಅಬ್ಬರಿಸ್ತಾ ಇದ್ದಾರೆ. ಚೆನ್ನೈನ ಆಯುಷ್ ಮ್ಹಾತ್ರೆ, ಡೆವಾಲ್ಡ್ ಬ್ರೇವಿಸ್, ಊವ್ರಿಲ್ ಪಟೇಲ್ ಇದಕ್ಕೆ ಬೆಸ್ಟ್ ಎಕ್ಸಾಂಪಲ್. ಇದೀಗ ಆರ್ಸಿಬಿಗೆ ರೀ ಎಂಟ್ರಿಯಾಗಿರೋ ಮಯಾಂಕ್ ಮೇಲೂ ಅದೇ ನಿರೀಕ್ಷೆಯಿದೆ. ಕಳೆದ ಮಹಾರಾಜ ಟ್ರೋಫಿ, ವಿಜಯ್ ಹಜಾರೆ ಟ್ರೋಫಿಯಲ್ಲಿ ಅಬ್ಬರಿಸಿದ್ದ ಮಯಾಂಕ್, ಮೆಗಾ ಹರಾಜಿನಲ್ಲಿ ಕಡೆಗಣಿಸಿದವರಿಗೆ ಬ್ಯಾಟ್ನಿಂದ ಆನ್ಸರ್ ಕೊಡ್ತಾರಾ.? ಆರ್ಸಿಬಿ ಭರವಸೆ ಉಳಿಸಿಕೊಳ್ತಾರಾ? ಕಾದು ನೋಡೋಣ.
ಇದನ್ನೂ ಓದಿ: ಪಾಕ್ ಜೊತೆಗೆ ಲಿಂಕ್.. ದೇಶಕ್ಕೆ ದ್ರೋಹ ಬಗೆದ ಆರೋಪ; ಫೇಮಸ್ ಯೂಟ್ಯೂಬರ್ ಅರೆಸ್ಟ್..!
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್