RCB ಗೆಲುವಿಗೆ ಇವರನ್ನು ಮರೆಯುವಂತಿಲ್ಲ.. ಪಂದ್ಯ ಮುಗಿದ ಬಳಿಕ ಕನ್ನಡಿಗ ಮಯಾಂಕ್ ಏನಂದ್ರು..?

author-image
Bheemappa
Updated On
RCB ಗೆಲುವಿಗೆ ಇವರನ್ನು ಮರೆಯುವಂತಿಲ್ಲ.. ಪಂದ್ಯ ಮುಗಿದ ಬಳಿಕ ಕನ್ನಡಿಗ ಮಯಾಂಕ್ ಏನಂದ್ರು..?
Advertisment
  • ಬ್ಯಾಟಿಂಗ್ ಮಾಡುವಾಗ ಕನ್ನಡಿಗ ಮಯಾಂಕ್ ಪ್ಲಾನ್​ ಏನಾಗಿತ್ತು?
  • ಜಿತೇಶ್​ ಶರ್ಮಾ ಜೊತೆ ಉತ್ತಮ ಬ್ಯಾಟಿಂಗ್ ಮಾಡಿದ ಕನ್ನಡಿಗ
  • ದೇವದತ್ ಪಡಿಕ್ಕಲ್​ ಇಂಜುರಿಯಿಂದ RCB ಸೇರಿದ ಮಯಾಂಕ್

ನಾಯಕ ಜಿತೇಶ್ ಶರ್ಮಾ ಹಾಗೂ ಕನ್ನಡಿಗ ಮಯಾಂಕ್ ಅಗರ್ವಾಲ್ ಅವರ ಬಿರುಸಿನ ಬ್ಯಾಟಿಂಗ್​ನಿಂದ ರಾಯಲ್ ಚಾಲೆಂಜರ್ಸ್​ ಬೆಂಗಳೂರು ರಣರೋಚಕ ವಿಜಯ ಸಾಧಿಸಿದೆ. ಲಕ್ನೋ ನೀಡಿದ್ದ 228 ರನ್ ಟಾರ್ಗೆಟ್ ಅನ್ನು ಚೇಸ್ ಮಾಡಿದ ಆರ್​ಸಿಬಿ ಕೊನೆವರೆಗೂ ಹೋರಟದ ಫಲದಿಂದ ಪಾಯಿಂಟ್​ ಟೇಬಲ್​ನಲ್ಲಿ 2ನೇ ಸ್ಥಾನ ಪಡೆದುಕೊಂಡಿದೆ. ಪಂದ್ಯದಲ್ಲಿ ಗೆಲುವಿಗೆ ಕಾರಣರಾದ ಒಬ್ಬರಲ್ಲಿ ಕನ್ನಡಿಗ ಮಯಾಂಕ್ ಅಗರ್ವಾಲ್ ಅವರು ಮಾತನಾಡಿ ಸಂತಸ ಹಂಚಿಕೊಂಡಿದ್ದಾರೆ.

ಪಂದ್ಯ ಮುಗಿದ ನಂತರ ಮಾತನಾಡಿದ ಕನ್ನಡಿಗ ಮಯಾಂಕ್ ಅಗರ್ವಾಲ್ ಅವರು, ಪಂದ್ಯದಲ್ಲಿ ವಿಜಯ ಸಾಧಿಸಿರುವುದು ಖುಷಿ ನೀಡುತ್ತಿದೆ. ಏನು ಹೇಳಬೇಕು ಎಂದು ಗೊತ್ತಾಗುತ್ತಿಲ್ಲ. ಯಾವಾಗಲೂ ನಾನು ಮಾತನಾಡುವುದು ತುಂಬಾ ಕಡಿಮೆ. ಪಂದ್ಯದಲ್ಲಿ ಜಿತೇಶ್ ಶರ್ಮಾ ಔಟ್​ಸ್ಟ್ಯಾಂಡಿಂಗ್​ ಪರ್ಫಾಮೆನ್ಸ್​ ನೀಡುತ್ತಿದ್ದರು. ಅವರ ಬ್ಯಾಟಿಂಗ್​ಗೆ ನಾನು ಸ್ಟ್ರೈಕ್ ನೀಡುವುದು ಅವಶ್ಯಕ ಆಗಿತ್ತು. ಅದನ್ನು ಸಂಪೂರ್ಣವಾಗಿ ನಿಭಾಯಿಸಿದೆ ಎಂದು ಹೇಳಿದರು.

ಕ್ರೀಸ್​ನಲ್ಲಿ ಇರುವಾಗ ಇಬ್ಬರು ಲೆಕ್ಕಾಚಾರ ಮಾಡಿ ವೇಗದ ಬೌಲರ್​ಗಳನ್ನು ದಂಡಿಸಬೇಕು ಎಂದು ಮಾತನಾಡಿ ಕೊನೆವರೆಗೂ ವಿಕೆಟ್​ ಕಾಪಾಡಿಕೊಂಡೇವು. ಇದು ನಮ್ಮಿಬ್ಬರಲ್ಲಿ ಸಾಕಷ್ಟು ಆತ್ಮವಿಶ್ವಾಸ, ಮೂಮೆಂಟಮ್ ಹಾಗೂ ನಂಬಿಕೆಕೆಯನ್ನು ದೃಢ ಪಡಿಸಿತು. ಕೊನೆಯ ಪಂದ್ಯದಲ್ಲಿ ಅನುಭವಿಸಿದ ನಷ್ಟವನ್ನು ಸರಿಯಾಗಿ ತಿದ್ದಿಕೊಂಡಿದ್ದರಿಂದ ಈ ಪಂದ್ಯದಲ್ಲಿ ಒಳ್ಳೆಯ ಪ್ರದರ್ಶನ ನೀಡಲು ಸಹಕಾರಿ ಆಯಿತು ಎಂದು ಹೇಳಿದರು.

ಇದನ್ನೂ ಓದಿ:ಕನ್ನಡಿಗ ಅನಿಲ್ ಕುಂಬ್ಳೆಗೆ ಹೊಸ ಜವಾಬ್ದಾರಿ.. ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ

publive-image

ಈ ರೋಚಕ ಪಂದ್ಯದಲ್ಲಿ ನಾನು ಕ್ರೀಸ್​ಗೆ ಬ್ಯಾಟಿಂಗ್ ಹಿಡಿದು ಬಂದಾಗ ಪ್ರಮುಖ ಎರಡು ವಿಕೆಟ್​ಗಳು ಉರುಳಿದ್ದವು. ಹೀಗಾಗಿ ಪಾರ್ಟನರ್​ಶಿಪ್​​ನಲ್ಲಿ ಬ್ಯಾಟಿಂಗ್ ಮಾಡಬೇಕು ಎನ್ನುವುದು ನಮ್ಮ ಯೋಜನೆ ಆಗಿತ್ತು. ಅದರಲ್ಲಿ ಜಿತೇಶ್ ಹಾಗೂ ನಾನು ಯಶಸ್ಸು ಕಂಡೇವು. ವಿಕೆಟ್​ಗಳು ಇದ್ದಿದ್ದರಿಂದ ವೇಗದ ಬ್ಯಾಟಿಂಗ್​ಗೆ ನೆರವಾಯಿತು ಎಂದು ಕನ್ನಡಿಗ ಮಯಾಂಕ್ ಅಗರ್ವಾಲ್ ಅವರು ಹೇಳಿದ್ದಾರೆ.

ಈ ಪಂದ್ಯದಲ್ಲಿ ಮಯಾಂಕ್ ಅಗರ್ವಾಲ್ ಹಾಗೂ ಜಿತೇಶ್ ಶರ್ಮಾ ಜೊತೆಯಾಟ ಆರ್‌ಸಿಬಿ ಪಂದ್ಯದ ಗತಿ ಅನ್ನೇ ಬದಲಿಸಿತು. ಸ್ಫೋಟಕ ಬ್ಯಾಟಿಂಗ್ ಮೂಲಕ ಆರ್‌ಸಿಬಿ ರನ್ ವೇಗ ಪಡೆದುಕೊಂಡಿತು. ಜಿತೇಶ್ ಶರ್ಮಾ 49 ರನ್ ಸಿಡಿಸಿದ್ದಾಗ ವಿಕೆಟ್ ಪತನಗೊಂಡಿತ್ತು. ಆದರೆ ನೋ ಬಾಲ್ ಆಗಿರುವ ಸೈರನ್​ ಸೌಂಡ್​ ಬಂದ ಕಾರಣ ಆರ್‌ಸಿಬಿ ಅಭಿಮಾನಿಗಳು ಖುಷಿ ಇಮ್ಮಡಿ ಆಯಿತು. ಕ್ಯಾಪ್ಟನ್​ ಜಿತೇಶ್ ಶರ್ಮಾ ಅಜೇಯ 85 ರನ್ ಬಾರಿಸಿದರೆ, ಮಯಾಂಕ್ ಅಗರ್ವಾಲ್ ಅಜೇಯ 41 ರನ್ ಸಿಡಿಸಿ ಆರ್‌ಸಿಬಿ ಗೆಲುವಿಗೆ ಕಾರಣರಾದರು.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment