17 ಬೌಂಡರಿ, ಮಯಾಂಕ್ ಅಗರ್ವಾಲ್ ಭರ್ಜರಿ ಸೆಂಚುರಿ.. ಕರ್ನಾಟಕ ತಂಡವನ್ನ ಗೆಲ್ಲಿಸಿದ ಕ್ಯಾಪ್ಟನ್

author-image
Bheemappa
Updated On
17 ಬೌಂಡರಿ, ಮಯಾಂಕ್ ಅಗರ್ವಾಲ್ ಭರ್ಜರಿ ಸೆಂಚುರಿ.. ಕರ್ನಾಟಕ ತಂಡವನ್ನ ಗೆಲ್ಲಿಸಿದ ಕ್ಯಾಪ್ಟನ್
Advertisment
  • 9 ವಿಕೆಟ್​ ಕಳೆದುಕೊಂಡಿದ್ರು ಎದೆ ಗುಂದದ ಮಯಾಂಕ್
  • ಏಕಾಂಗಿ ಹೋರಾಟ, ಕರ್ನಾಟಕ ಗೆಲ್ಲುವವರೆಗೂ ಬಿಡಲಿಲ್ಲ
  • ​ಎದುರಳಿಗಳಿಗೆ ಉತ್ತರಕೊಟ್ಟ ಮಯಾಂಕ್ ಅಗರ್ವಾಲ್

ವಿಜಯ್ ಹಜಾರೆ ಟ್ರೋಫಿಯಲ್ಲಿ ಕನ್ನಡಿಗ ಮಯಾಂಕ್ ಅಗರ್ವಾಲ್ ಅವರು ಅಮೋಘವಾದ ಶತಕ ಸಿಡಿಸುವ ಮೂಲಕ ಪಂಜಾಬ್​​ ವಿರುದ್ಧ ಕರ್ನಾಟಕ ತಂಡವನ್ನು​ ಗೆಲ್ಲಿಸಿದ್ದಾರೆ.

ಸತತ ವೈಫಲ್ಯಗಳಿಂದ ಟೀಕೆಗೆ ಗುರಿಯಾಗಿದ್ದ ಕರ್ನಾಟಕ ತಂಡದ ಕ್ಯಾಪ್ಟನ್ ಹಾಗೂ ಬ್ಯಾಟ್ಸ್​ಮನ್ ಮಯಾಂಕ್ ಅಗರ್ವಾಲ್ ಸ್ಟ್ರಾಂಗ್ ಕಮ್​ಬ್ಯಾಕ್ ಮಾಡಿದ್ದಾರೆ. ವಿಜಯ್ ಹಜಾರೆ ಟ್ರೋಫಿಯ ಏಕದಿನ ಪಂದ್ಯದಲ್ಲಿ ಏಕಾಂಗಿಯಾಗಿ ಹೋರಾಡಿ ಕರ್ನಾಟಕಕ್ಕೆ ಗೆಲುವು ತಂದುಕೊಟ್ಟಿದ್ದಾರೆ. ಕೇವಲ 90 ಎಸೆತಗಳಲ್ಲಿ ಸೆಂಚುರಿ ಸಿಡಿಸಿದ್ದಾರೆ. ತಂಡದ ಪರ ನಾಯಕನಾಗಿ ಏಕಾಂಗಿಯಾಗಿ ಹೋರಾಡಿದ ಮಯಾಂಕ್ ಅಗರ್ವಾಲ್ ಕೊನೆವರಿಗೂ ಬ್ಯಾಟ್ ಬೀಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.

ಅಹಮದಾಬಾದ್‌ನ ಸ್ಟೇಡಿಯಂನಲ್ಲಿ ನಡೆದ ವಿಜಯ್ ಹಜಾರೆ ಟ್ರೋಫಿಯ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಂಜಾಬ್ 49.2 ಓವರ್​ಗಲ್ಲಿ 247 ರನ್​ಗಳ ಟಾರ್ಗೆಟ್ ನೀಡಿತ್ತು. ಈ ಗುರಿ ಬೆನ್ನು ಹತ್ತಿದ ಕರ್ನಾಟಕ ತಂಡ ಬ್ಯಾಟಿಂಗ್​​ನಲ್ಲಿ ವಿಫಲವಾಯಿತು. ಪಂಜಾಬ್​ ಟೀಮ್ ಅದ್ಭುತ ಬೌಲಿಂಗ್​​ನಿಂದ ಕರ್ನಾಟಕದ ಆಟಗಾರರು ಪೆವಿಲಿಯನ್ ಪರೇಡ್ ನಡೆಸಿದರು.

ಇದನ್ನೂ ಓದಿ:RCBಗೆ ಬಿಗ್ ಶಾಕ್​ ಕೊಡ್ತಾರಾ ಇಂಗ್ಲೆಂಡ್​ನ ಯುವ ಪ್ಲೇಯರ್​.. ಜೇಕಬ್ ಬೆಥೆಲ್ ಈ ಮ್ಯಾಚ್ ಆಡಲ್ವಾ?

publive-image

ಆದರೆ ಇನ್ನೊಂದೆಡೆ ಬಿರುಸಿನ ಬ್ಯಾಟಿಂಗ್​ ಮುಂದುವರೆಸಿದ್ದ ನಾಯಕ ಮಯಾಂಕ್ ಅಗರ್ವಾಲ್ 90 ಎಸೆತಗಳಲ್ಲಿ ಶತಕ ಸಿಡಿಸಿದರು. ಪಂದ್ಯದಲ್ಲಿ ಒಟ್ಟು 127 ಎಸೆತಗಳನ್ನು ಎದುರಿಸಿದ ಮಯಾಂಕ್, 17 ಬೌಂಡರಿ, 3 ಅಮೋಘವಾದ ಸಿಕ್ಸರ್​ ಸಮೇತ 137 ರನ್​ಗಳಿಸಿ ತಂಡವನ್ನು ಗೆಲುವಿನ ದಡಕ್ಕೆ ಸೇರಿಸಿದರು. ಈ ಮೂಲಕ 15ನೇ ಶತಕವನ್ನು ತಮ್ಮ ಖಾತೆಗೆ ಸೇರಿಸಿಕೊಂಡರು.

ಕರ್ನಾಟಕ ತಂಡ 47.3 ಓವರ್​​ಗಳಲ್ಲಿ 9 ವಿಕೆಟ್​ಗೆ 251 ಗಳಿಸುವ ಮೂಲಕ ಜಯಭೇರಿ ಬಾರಿಸಿತು. ಮಯಾಂಕ್ ಅಗರ್ವಾಲ್ ಇದುವರೆಗೂ 23 ಹಾಫ್​ ಸೆಂಚುರಿ, 15 ಸೆಂಚುರಿಗಳನ್ನು ಬಾರಿಸಿದ್ದಾರೆ. ಅಲ್ಲದೇ ಸ್ಟೈಲಿಶ್ ಬ್ಯಾಟರ್ ಸ್ವರೂಪದಲ್ಲಿ 600ಕ್ಕೂ ಅಧಿಕ ಬೌಂಡರಿಗಳನ್ನ ಹೊಡೆದಿದ್ದು 116 ಪಂದ್ಯಗಳಿಂದ 46 ಕ್ಕಿಂತ ಹೆಚ್ಚಿನ ಸರಾಸರಿಯಲ್ಲಿ ಒಟ್ಟು 5,170 ರನ್ ಗಳಿಸಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment