/newsfirstlive-kannada/media/post_attachments/wp-content/uploads/2024/09/Goutham-Gambhir.jpg)
ಬಾಂಗ್ಲಾದೇಶ ಎದುರಿನ ಟಿ20 ಸರಣಿ ಆರಂಭಕ್ಕೂ ಮುನ್ನ ಟೀಮ್​ ಇಂಡಿಯಾದಲ್ಲಿ ಬಿಗ್​ ಫೈಟ್​​ ಶುರುವಾಗಿದೆ. ಒಂದು ಸ್ಥಾನಕ್ಕಾಗಿ ಇಬ್ಬರು ಯುವ ವೇಗಿಗಳ ನಡುವೆ ಪೈಪೋಟಿ ಶುರುವಾಗಿದೆ. ತಂಡಕ್ಕೆ ಎಂಟ್ರಿ ಕೊಟ್ಟಿರುವ ಮಯಾಂಕ್​ ಯಾದವ್-ಹರ್ಷಿತ್​ ರಾಣಾ ನಡುವೆ ಫೈಟ್​ ನಡೀತಿದ್ದು, ಕೋಚ್​ ಗಂಭೀರ್​ ಕೃಪಾಕಟಾಕ್ಷ ಯಾರ ಮೇಲಿದೆ ಅನ್ನೋ ಮಿಲಿಯನ್​ ಡಾಲರ್​ ಪ್ರಶ್ನೆ ಕಾಡ್ತಿದೆ.
ಇಂಡೋ-ಬಾಂಗ್ಲಾ ಟೆಸ್ಟ್​ ಸರಣಿ ಅಂತ್ಯದ ಬಳಿಕ ಚುಟುಕು ಕ್ರಿಕೆಟ್​ ಸರಣಿಯತ್ತ ಎಲ್ಲರ ಚಿತ್ತ ನೆಟ್ಟಿದೆ. 3 ಪಂದ್ಯಗಳ ಟಿ20 ಸರಣಿ ಭಾನುವಾರದಿಂದ ಆರಂಭವಾಗಲಿದ್ದು, ಉಭಯ ತಂಡಗಳಲ್ಲಿ ಸಿದ್ಧತೆ ಆರಂಭವಾಗಿದೆ. ಟೆಸ್ಟ್​ ಸರಣಿ ಕ್ಲೀನ್​ಸ್ವೀಪ್​ ಮಾಡಿದ ಟೀಮ್​ ಇಂಡಿಯಾ, ಟಿ20 ಸರಣಿಯಲ್ಲೂ ವಿಜಯ ಪತಾಕೆ ಹಾರಿಸಲು ಎದುರು ನೋಡ್ತಿದೆ.
/newsfirstlive-kannada/media/post_attachments/wp-content/uploads/2024/04/MAYANK-YADAV.jpg)
T20 ಸರಣಿಗೂ ಮುನ್ನ ಕೋಚ್​ ಗಂಭೀರ್​ಗೆ ಟೆನ್ಶನ್
ಗ್ವಾಲಿಯರ್​ನಲ್ಲಿ ನಡೆಯೋ ಇಂಡೋ-ಬಾಂಗ್ಲಾ ನಡುವಿನ ಮೊದಲ ಟಿ20 ಫೈಟ್​​ಗೆ ಮುನ್ನವೇ ಕೋಚ್​ ಗೌತಮ್​ ಗಂಭೀರ್​ಗೆ ಸೆಲೆಕ್ಷನ್​​ ಟೆನ್ಶನ್​ ಶುರುವಾಗಿದೆ. ವೇಗಿಗಳ ಕೋಟಾದಲ್ಲಿ ಸ್ಥಾನಕ್ಕಾಗಿ ಬಿಗ್ ಫೈಟ್​ ಏರ್ಪಟ್ಟಿದೆ. ಆಲ್​​ರೌಂಡರ್​ ಹಾರ್ದಿಕ್​ ಪಾಂಡ್ಯ ತಂಡದಲ್ಲಿರೋದ್ರಿಂದ ಇಬ್ಬರು ಸ್ಪೆಷಲಿಸ್ಟ್​ ವೇಗಿಗಳಿಗೆ ಪ್ಲೇಯಿಂಗ್​ ಇಲೆವೆನ್​ನಲ್ಲಿ ಸ್ಥಾನ ಸಿಗಲಿದೆ. ಒಂದು ಸ್ಲಾಟ್​ನಲ್ಲಿ ಆರ್ಷ್​​ದೀಪ್​ ಸಿಂಗ್​ ಫಿಕ್ಸ್​. ಇನ್ನೊಂದು ಸ್ಥಾನಕ್ಕೆ ಗೌತಮ್​ ಗಂಭೀರ್​ರ ಇಬ್ಬರು ನೆಚ್ಚಿನ ಶಿಷ್ಯರ ನಡುವೆ ಪೈಪೋಟಿ ಶುರುವಾಗಿದೆ.
ಯಾರಿಗೆ ಡೆಬ್ಯೂ ಚಾನ್ಸ್?
ಮಯಾಂಕ್​ ಯಾದವ್​, ಹರ್ಷಿತ್​ ರಾಣಾ. ಟೀಮ್​ ಇಂಡಿಯಾದ ನಯಾ ಪೇಸ್​​ ಸೆನ್ಸೇಷನ್ಸ್​​. ಐಪಿಎಲ್​ನಲ್ಲಿ ಬೆಂಕಿ-ಬಿರುಗಾಳಿ ಎಸೆತಗಳಿಂದ ಧೂಳೆಬ್ಬಿಸಿದ ಯುವ ವೇಗಿಗಳು. ಇಂಡಿಯನ್​​ ಪ್ರೀಮಿಯರ್​ ಲೀಗ್​ನಲ್ಲಿ ಬೊಂಬಾಟ್​ ಪ್ರದರ್ಶನ ನೀಡಿ ಇದೀಗ ಟೀಮ್​ ಇಂಡಿಯಾಗೆ ಸೆಲೆಕ್ಟ್​ ಆಗಿರೋ ಇಬ್ಬರೂ ಡೆಬ್ಯೂ ಕನಸು ಕಾಣ್ತಿದ್ದಾರೆ. ಇಬ್ಬರಲ್ಲಿ ಒಬ್ಬರಿಗೆ ಮಾತ್ರ ಅವಕಾಶವಿದ್ದು, ಕೋಚ್​ ಗಂಭೀರ್​ ಕೃಪಾಕಟಾಕ್ಷ ಯಾರ ಮೇಲಿದೆ ಅನ್ನೋದು ಕುತೂಹಲ ಮೂಡಿಸಿದೆ.
/newsfirstlive-kannada/media/post_attachments/wp-content/uploads/2024/09/HARSHIT-RAN.jpg)
ಶರವೇಗಿಯ ಸರದಾರ ಮಯಾಂಕ್​ಗೆ ಸಿಗುತ್ತಾ ಅವಕಾಶ?
ಐಪಿಎಲ್​ನಲ್ಲಿ ತನ್ನ ಪೇಸ್​ನಿಂದಲೇ ಸೆನ್ಸೇಷನ್​ ಸೃಷ್ಟಿಸಿದ ವೇಗಿ ಮಯಾಂಕ್​ ಯಾದವ್​. ಕನ್ಸಿಸ್ಟೆಂಟ್​ ಆಗಿ ಗಂಟೆಗೆ 150ಕ್ಕೂ ಹೆಚ್ಚಿನ ವೇಗದಲ್ಲಿ ಬೌಲಿಂಗ್ ಮಾಡೋ ಸಾಮರ್ಥ್ಯ ತೂಫಾನ್​ ಮಯಾಂಕ್​ ಯಾದವ್​ಗಿದೆ. ಕಳೆದ ಐಪಿಎಲ್​ನಲ್ಲಿ ಈತ ಮಾಡಿದ ಬೌಲಿಂಗ್​ಗೆ ವಿಶ್ವ ಕ್ರಿಕೆಟ್​ನ​ ದಿಗ್ಗಜರೇ ಬೆರಗಾಗಿದ್ದಾರೆ. ಬ್ಯಾಟ್ಸ್​​ಮನ್​ಗಳು ರನ್​ಗಳಿಕೆಗೆ ಪರದಾಡಿದ್ದಾರೆ.
ಅಂದ್ಹಾಗೆ ಮೂಲತಃ ದೆಹಲಿಯ ಈ ಮಯಾಂಕ್​ ಯಾದವ್​, ಗೌತಮ್​ ಗಂಭೀರ್​ರ ನೆಚ್ಚಿನ ಶಿಷ್ಯ ಕೂಡ ಹೌದು. ಗಂಭೀರ್​ ಲಕ್ನೋ ಸೂಪರ್​ ಜೈಂಟ್ಸ್​​ ತಂಡದ ಮೆಂಟರ್​ ಆಗಿದ್ದ ಸಂದರ್ಭದಲ್ಲಿ ಮಯಾಂಕ್​ ಯಾದವ್​ ತಂಡಕ್ಕೆ ಎಂಟ್ರಿ ಕೊಟ್ಟಿದ್ದು. ಮಯಾಂಕ್​​ ಟ್ಯಾಲೆಂಟ್​​ ಗುರುತಿಸಿದ್ದ ಗಂಭೀರ್​, ತಪ್ಪು ಸರಿಗಳನ್ನ ತಿದ್ದಿ-ತೀಡಿ ಬೆಳೆಸಿದ್ರು. ಆ ಬಳಿಕ ಕಳೆದ ಐಪಿಎಲ್​ನಲ್ಲಿ ಡೆಬ್ಯೂ ಮಾಡಿದ ಮಯಾಂಕ್​, ಆಡಿದ 4 ಪಂದ್ಯಗಳಲ್ಲೇ 7 ವಿಕೆಟ್​ ಬೇಟೆಯಾಡಿದ್ರು. ದುರಾದೃಷ್ಟವಶಾತ್​​ ಇಂಜುರಿಗೆ ತುತ್ತಾಗಿ ಅರ್ಧ ಟೂರ್ನಿಗೆ ಹೊರಬಿದ್ರು.
ಹರ್ಷಿತ್​ ರಾಣಾಗೆ ತೆರೆಯುತ್ತಾ ಭಾಗ್ಯದ ಬಾಗಿಲು
2022ರಿಂದ ಐಪಿಎಲ್​ ಟೂರ್ನಿಯ ಭಾಗವಾಗಿದ್ರೂ ಹರ್ಷಿತ್​ ರಾಣಾಗೆ ಬಿಗ್​ ಸಕ್ಸಸ್​​ ಸಿಕ್ಕಿರಲಿಲ್ಲ. 2022ರ ಐಪಿಎಲ್​ನಲ್ಲಿ 2 ಪಂದ್ಯಕ್ಕೆ ಸೀಮಿತವಾದ್ರೆ, 2023ರಲ್ಲಿ 6 ಪಂದ್ಯ ಆಡಿದ್ರಷ್ಟೇ. ಕಳೆದ ಸೀಸನ್​ನಲ್ಲಿ ಗಂಭೀರ್​ ಕೆಕೆಆರ್​ನ ಮೆಂಟರ್​ ಆದ ಮೇಲೆ ಹರ್ಷಿತ್​ ರಾಣಾಗೆ ಹೆಚ್ಚು ಅವಕಾಶವೂ ಸಿಗ್ತು. ಸಕ್ಸಸ್​​ ಕೂಡ ಸಿಗ್ತು. ಗಂಭೀರ್​​ ಕೆಕೆಆರ್​ ತಂಡ ಸೇರಿದ ಬಳಿಕ 13 ಪಂದ್ಯಗಳಲ್ಲಿ ಹರ್ಷಿತ್​ ರಾಣಾಗೆ ಅವಕಾಶ ಸಿಗ್ತು. ಈ ಪೈಕಿ 11 ಇನ್ನಿಂಗ್ಸ್​ಗಳಲ್ಲಿ ಬೌಲಿಂಗ್​ ಮಾಡಿ ಬರೋಬ್ಬರಿ 19 ವಿಕೆಟ್​​ಗಳನ್ನ ಬೇಟೆಯಾಡಿದ್ರು. ಗಂಭೀರ್​ ಮಾರ್ಗದರ್ಶನದಲ್ಲಿ ಸಕ್ಸಸ್​​ ಕಂಡ ಹರ್ಷಿತ್​ ರಾಣಾ ಇದೀಗ ಟೀಮ್​ ಇಂಡಿಯಾಗೆ ಎಂಟ್ರಿ ಕೊಟ್ಟಿದ್ದಾರೆ.
ತಮ್ಮ ಅದ್ಭುತ ಬೌಲಿಂಗ್​ನಿಂದ ಗಮನ ಸೆಳೆದ ಹರ್ಷಿತ್​ ರಾಣಾ ಹಾಗೂ ಮಯಾಂಕ್​ ಯಾದವ್​ ಟೀಮ್​ ಇಂಡಿಯಾದ ಭವಿಷ್ಯದ ಸೂಪರ್​ ಸ್ಟಾರ್​ಗಳು ಎನಿಸಿಕೊಂಡಿದ್ದಾರೆ. ಇಬ್ಬರಿಗೂ ಆ ನಿರೀಕ್ಷೆಯನ್ನು ನಿಜವಾಗಿಸುವ ಸಾಮರ್ಥ್ಯ ಇದೆ. ಬಾಂಗ್ಲಾ ಎದುರಿನ ಸರಣಿಯಲ್ಲಿ ಇಬ್ಬರಲ್ಲಿ ಒಬ್ಬರಿಗೆ ಮಾತ್ರ ಚಾನ್ಸ್​ ಸಿಗಲಿದೆ. ಇಬ್ಬರು ನೆಚ್ಚಿನ ಶಿಷ್ಯರ ಪೈಕಿ ಕೋಚ್​ ಗಂಭೀರ್​ ಕೃಪಾಕಟಾಕ್ಷ ಯಾರ ಮೇಲಿರುತ್ತೆ ಅನ್ನೋದೇ ಕುತೂಹಲ ಮೂಡಿಸಿದೆ.
ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us