/newsfirstlive-kannada/media/post_attachments/wp-content/uploads/2025/06/Ahamadabad-Plane-Crash-1.jpg)
ಅಹ್ಮದಾಬಾದ್ ವಿಮಾನ ದುರಂತಕ್ಕೆ ಸಂಬಂಧಿಸಿ ಮತ್ತೊಂದು ಅಪ್ಡೇಟ್ ಸಿಕ್ಕಿದೆ. ಏರ್ ಇಂಡಿಯಾ ವಿಮಾನ AI-171 ಪತನಕ್ಕೂ ಮುನ್ನ ಕಾಕ್ಪಿಟ್ನಿಂದ MAYDAY.. MAYDAY.. MAYDAY.. ಎಂದು ಕೂಗಿದ್ದಾರೆ. ಆಮೇಲೆ ಯಾವುದೇ ಸಂದೇಶ ಬರಲಿಲ್ಲ ಎಂಬ ಮಾಹಿತಿ ಆರಂಭದಲ್ಲಿ ಸಿಕ್ಕಿತ್ತು.
ಇದೀಗ ದುರಂತ ನಡೆದ ಮೂರು ದಿನ ಕಳೆದ ನಂತರ, ಪತನಗೊಳ್ಳುವ ಮುನ್ನ ವಿಮಾನದ ಸಿಬ್ಬಂದಿ ಏನು ಸಂದೇಶ ಕಳುಹಿಸಿದ್ದರು ಅನ್ನೋ ಆಡಿಯೋ ಕ್ಲಿಪ್ನ ವಿವರ ಲಭ್ಯವಾಗಿದೆ. ಬೋಯಿಂಗ್ ವಿಮಾನವು ಮೇಘನಿನಗರದಲ್ಲಿರುವ ಮೆಡಿಕಲ್ ಕಾಲೇಜಿನ ಹಾಸ್ಟೆಲ್ ಮೇಲೆ ಪತನಗೊಳ್ಳುವ ವೇಳೆ ಆತಂಕದ ಸಂದೇಶ ಕಳುಹಿಸಿದ್ದು ಹಿರಿಯ ಪೈಲಟ್. ಸುಮಿತ್ ಸಭರ್ವಾಲ್, ಅವರು ಆತಂಕದಲ್ಲಿ ಅಹ್ಮದಾಬಾದ್ನಲ್ಲಿರುವ ಏರ್ ಟ್ರಾಫಿಕ್ ಕಂಟ್ರೋಲ್ (ATC)ಗೆ ತುರ್ತು ಕರೆ ಮೆಸ್ಸೇಜ್ ನೀಡಿದ್ದಾರೆ.
ಆ ಮೆಸೇಜ್ ಕೇವಲ ಐದು ಸೆಕೆಂಡ್ ಮಾತ್ರ ರೆಕಾರ್ಡ್ ಆಗಿದೆ. ಐದು ಸೆಕೆಂಡ್ನ ಭಯಾನಕ ಆಡಿಯೋ ಮುಂದಾಗುವ ಭಯಾನಕತೆಯನ್ನ ಬಿಚ್ಚಿಟ್ಟಿದೆ.
ಇದನ್ನೂ ಓದಿ: ಇಸ್ರೇಲ್ ಮೇಲೆ ಮಿಸೈಲ್ ಮಳೆ ಸುರಿಸಿದ ಇರಾನ್; ಟೆಲ್ ಅವೀವ್ ನಗರದ ದೊಡ್ಡ, ದೊಡ್ಡ ಕಟ್ಟಡಗಳು ಧ್ವಂಸ
ಆಡಿಯೋ ಮೆಸೇಜ್ ಏನಾಗಿತ್ತು..?
“MAYDAY.. MAYDAY.. MAYDAY.. NO POWER.. NO THRUST.. GOING DOWN.." ಎಂದು ಕೂಗಿದ್ದಾರೆ. ಅಷ್ಟರಲ್ಲೇ ವಿಮಾನ ಪತನಗೊಂಡಿದೆ. ಆಗ ಪೈಲಟ್ ಜೊತೆ ಏರ್ ಕಂಟ್ರೋಲರ್ ಸಂಪರ್ಕಿಸಲು ಪ್ರಯತ್ನಿಸಿದ್ದಾರೆ. ಆದರೆ ಸಂಪರ್ಕಕ್ಕೆ ಸಿಕ್ಕಿಲ್ಲ ಎಂದು ವಿಮಾನಯಾನ ಇಲಾಖೆ ಇಂದು ಮಾಹಿತಿ ನೀಡಿದೆ.
ಮೇಡೇ ಎಂದರೆ ಏನು..?
ಮೇಡೇ ಕರೆ ಅನ್ನೋದು.. ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಟ್ಟ ಒಂದು ಸಂಕಷ್ಟಕ್ಕೆ ಸಂಕೇತವಾಗಿರುವ ಕರೆಯಾಗಿದೆ. ಈ ಕರೆಯನ್ನ ಪ್ರಾಥಮಿಕವಾಗಿ ಏರ್ಫೊರ್ಸ್ನಲ್ಲಿ ಮತ್ತು ಸಮುದ್ರಯಾನದ ಸಮಯದಲ್ಲಿ, ಜೀವಕ್ಕೆ ಅಪಾಯಕಾರಿ ಅನಿಸಿದಾಗ, ಎಮೆರ್ಜೆನ್ಸಿ ಪರಿಸ್ಥಿತಿಯಲ್ಲಿ ಈ ಕರೆಯನ್ನ ಬಳಸಲಾಗುತ್ತದೆ.. ಈ ಕರೆ ಫ್ರೆಂಚ್ ಪದವಾದ ‘ಮೈಡರ್’ ನಿಂದ ಬಂದಿದೆ, ಇದರರ್ಥ "Help me" ಅಂದರೇ ನನಗೆ ಸಹಾಯ ಮಾಡಿ" ಎಂಬ ಅರ್ಥ ಕೊಡ್ತಿದೆ.
ವಿಮಾನದಲ್ಲಿ ಒಟ್ಟು 242 ಪ್ರಯಾಣಿಕರು ಇದ್ದರು. ಅವರಲ್ಲಿ ಓರ್ವ ಮಾತ್ರ ಪವಾಡ ರೀತಿಯಲ್ಲಿ ಬದುಕುಳಿದಿದ್ದಾರೆ. ಉಳಿದವರೆಲ್ಲರೂ ಜೀವ ಕಳೆದುಕೊಂಡಿದ್ದಾರೆ. ಮಾತ್ರವಲ್ಲ, ವಿಮಾನ ಮೆಡಿಕಲ್ ಕಾಲೇಜಿನ ಕಟ್ಟಡದ ಮೇಲೆ ಬಿದ್ದಿದ್ದರಿಂದ 25 ಮಂದಿ ಪ್ರಾಣಬಿಟ್ಟಿದ್ದಾರೆ. ಆ ಮೂಲಕ ವಿಮಾನ ದುರಂತದಲ್ಲಿ ಜೀವ ಕಳೆದುಕೊಂಡವರ ಸಂಖ್ಯೆ 265ಕ್ಕೆ ಏರಿಕೆ ಆಗಿದೆ.
ಇದನ್ನೂ ಓದಿ: ವಿಮಾನ ದುರಂತ: ಮಗಳಿಗೆ MBBS ಓದಿಸಲು ಸಾಲ ಮಾಡಿದ್ದ ಆಟೋ ಡ್ರೈವರ್ ಕಣ್ಣೀರು
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ