Advertisment

ಜನಸಂಖ್ಯೆಯನ್ನೂ ಮೀರಿಸಿದ ಆಡುಗಳು; ಉಪಟಳ ತಾಳಲಾರದೆ ಉಚಿತವಾಗಿ ನೀಡ್ತಿದೆ ಇಲ್ಲಿನ ಸರ್ಕಾರ

author-image
AS Harshith
Updated On
ಜನಸಂಖ್ಯೆಯನ್ನೂ ಮೀರಿಸಿದ ಆಡುಗಳು; ಉಪಟಳ ತಾಳಲಾರದೆ ಉಚಿತವಾಗಿ ನೀಡ್ತಿದೆ ಇಲ್ಲಿನ ಸರ್ಕಾರ
Advertisment
  • ಅಯ್ಯೋ ಶಿವನೇ.. ಇಲ್ಲಿ ಜನಸಂಖ್ಯೆಗಿಂತ ಆಡುಗಳ ಸಂಖ್ಯೆಯೇ ಜಾಸ್ತಿ
  • ಯಾರಾದ್ರೂ ಆಡುಗಳನ್ನು ಉಚಿತವಾಗಿ ಕೊಂಡೊಗ್ರಪ್ಪಾ ಅಂತಿದೆ ಅಲ್ಲಿನ ಸರ್ಕಾರ
  • ಆಡುಗಳ ಉಪಟಳದಿಂದ ‘ದತ್ತು ಒಂದು ಮೇಕೆ’ ಎಂಬ ಕಾರ್ಯಕ್ರಮ ಹಮ್ಮಿಕೊಂಡಿದೆ

ಜನಸಂಖ್ಯಾ ಸ್ಫೋಟದ ಬಗ್ಗೆ ಕೇಳಿರಬಹುದು. ಆದರೆ ಮೇಕೆಗಳ ಸಂಖ್ಯಾ ಸ್ಫೋಟದಿಂದ ದ್ವೀಪವೊಂದು ಸಮಸ್ಯೆ ಎದುರಿಸುತ್ತಿದೆ ಎಂದರೆ ನಂಬ್ತೀರಾ?. ಇಟಲಿಯ ಅಲಿಕುಡಿ ಎಂಬ ದ್ವೀಪದಲ್ಲಿ ಜನಸಂಖ್ಯೆಗಿಂತ ಆಡುಗಳ ಸಂಖ್ಯೆಯೇ ಜಾಸ್ತಿಯಿದೆ. ಅದಕ್ಕಾಗಿ ಇಲ್ಲಿನ ಮೇಯರ್​ ವಿಶೇಷ ಮನವಿ ಮಾಡಿದ್ದಾರೆ. ಅದೇನು ಗೊತ್ತಾ?

Advertisment

ಅಲಿಕುಡಿ ದ್ವೀಪ ಸರಿಸುಮಾರು 100 ನಿವಾಸಿಗಳನ್ನು ಹೊಂದಿದೆ. ಆದರೆ ಇಲ್ಲಿ ಪಳಗಿಸದ ಆಡುಗಳ ಸಂಖ್ಯೆಯೇ 600 ಹತ್ರತ್ರ ಇವೆ. ಆಡುಗಳನ್ನು ನಿಯಂತ್ರಿಸಲಾಗದೆ ಇಲ್ಲಿನ ನಿವಾಸಿಗಳು ಪರದಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಅದಕ್ಕೆಂದೇ ಅಲ್ಲಿನ ಮೇಯರ್​ ‘ದತ್ತು ಒಂದು ಮೇಕೆ’ ಎಂಬ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.

publive-image

ಉಚಿತವಾಗಿ ಕೊಂಡೊಯ್ಯಿರಿ

ಯಾರಾದರು ಈ ದ್ವೀಪಕ್ಕೆ ಭೇಟಿ ನೀಡಿದರೆ ಮತ್ತು ಅವರಿಗೆ ಆಡುಗಳನ್ನು ಖರೀದಿಸಲು ಮನಸಿದ್ದರೆ ಉಚಿತವಾಗಿ ಕೊಂಡೊಯ್ಯಬಹುದಾಗಿದೆ. ಅದಕ್ಕಾಗಿ ಅರ್ಜಿಯನ್ನು ಸಲ್ಲಿಸುವುದರ ಜೊತೆಗೆ ದೋಣಿ ತರುವುದು ಮುಖ್ಯ ಎಂದು ಹೇಳಿದೆ. ಇದಲ್ಲದೆ ಆಡುಗಳನ್ನು ಅವರೇ ಹಿಡಿದು ಕೊಂಡೊಯ್ಯಬೇಕಿದೆ. ಅರ್ಜಿದಾರರು 50 ಮೇಕೆಗಳನ್ನು ಕೊಂಡೊಯ್ಯಬಹುದು ಎಂದು ಹೇಳಿದೆ. ಏಪ್ರಿಲ್​ 10ರವರೆಗೆ ಅಪ್ಲಿಕೇಶನ್​ ಹಾಕಲು ಅವಕಾಶ ನೀಡಿದೆ.

ಇದನ್ನೂ ಓದಿ: ಇಟ್ಟಲ್ಲಿಯೇ 19 ಕೆಜಿ ಗಾಂಜಾ ಮಾಯ, ಇಲಿ ತಿಂದು ಕಿಕ್ಕೇರಿಸಿಕೊಂಡಿವೆ ಎಂದ ಪೊಲೀಸರು..!

Advertisment

publive-image

ಉಪಟಳ ನೀಡುವ ಆಡುಗಳು

ಆಡುಗಳು ವಸತಿ ಪ್ರದೇಶ, ಸಾರ್ವಜನಿಕ ಸ್ಥಳಗಳನ್ನು ಆಕ್ರಮಿಸಿ ಅಲ್ಲಿನ ಉದ್ಯಾನವನದಲ್ಲಿರುವ ಗಿಡಗಳನ್ನು ತಿನ್ನುತ್ತಿವೆ. ಇದರಿಂದ ಅಲ್ಲಿನ ನಿವಾಸಿಗಳಿಗೆ ತಲೆನೋವಾಗಿ ಪರಿಣಮಿಸಿವೆ.

ಸುಮಾರು 20 ವರ್ಷದ ಹಿಂದೆ ರೈತರೊಬ್ಬರು ಅಲಿಕುಡಿ ದ್ವೀಪಕ್ಕೆ ಆಡುಗಳನ್ನು ಕೊಂಡೊಯ್ದರು. ಬಳಿಕ ಅವುಗಳ ಸಂಖ್ಯೆ ಹೆಚ್ಚಾಗತೊಡಗಿತು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment