newsfirstkannada.com

×

ಮ್ಯಾಕ್​ಡೊನಾಲ್ಡ್ಸ್​ ತಿಂಡಿ ತಿನ್ನುವ ಮುನ್ನ ಎಚ್ಚರ! ಅಮೆರಿಕಾದಲ್ಲಿ 1 ಬಲಿ, ಡಜನ್ ಜನರ ಒದ್ದಾಟ, ಏನಾಯ್ತು?

Share :

Published October 23, 2024 at 4:41pm

Update October 23, 2024 at 4:43pm

    ಮ್ಯಾಕ್​ಡೊನಾಲ್ಡ್ಸ್​ನಲ್ಲಿ ಆ ಒಂದು ತಿಂಡಿಯನ್ನು ತಿಂದವರ ಒದ್ದಾಟ

    ಯುಎಸ್​ನ ಆ 10 ರಾಜ್ಯಗಳಲ್ಲಿ ಯಮನಂತೆ ಕಾಡಿದ ಮ್ಯಾಕ್​ಡೊನಾಲ್ಡ್ಸ್​

    ಸೆಪ್ಟಂಬರ್​ನಿಂದ ಇಲ್ಲಿವರೆಗೂ 49 ಜನರಿಗೆ ಕಂಟಕವಾಗಿದ್ದೇಕೆ ಆಹಾರ?

ಅಮೆರಿಕಾದ ಮ್ಯಾಕ್​ಡೊನಾಲ್ಡ್ಸ್​ ತಿಂಡಿಗಳನ್ನು ತಿಂದವರು ಇಲ್ಲದ ಸಮಸ್ಯೆಗಳಿಗೆ ಬಲಿಯಾಗುತ್ತಿದ್ದಾರೆ. ಹೀಗಂತ ಅಮೆರಿಕಾದ ರೋಗ ನಿಯಂತ್ರಣ ಹಾಗೂ ತಡೆಗಟ್ಟುವಿಕೆ ಕೇಂದ್ರ (CDC) ಹೇಳಿದೆ. ಇತ್ತೀಚೆಗೆ ಮ್ಯಾಕ್​ಡೊನಾಲ್ಡ್ಸ್​ನಲ್ಲಿ ಕ್ವಾರ್ಟರ್ ಪೌಂಡರ್ ಹಮ್​ಬರ್ಗರ್ಸ್​ ಸೇವಿಸಿದವರಲ್ಲಿ ಒಬ್ಬ ವ್ಯಕ್ತಿ ಬಲಿಯಾಗಿದ್ದು ಚಿಕ್ಕ ಮಗು ಸೇರಿ 12 ಜನರು ಆಸ್ಪತ್ರೆಗೆ ದಾಖಲಾದ ಬಗ್ಗೆ ಮಾಹಿತಿ ನೀಡಿದೆ ಸಿಡಿಸಿ

ಇದನ್ನೂ ಓದಿ: ಆಹಾ ನನ್ನ ಮದ್ವೆಯಂತೆ! ಕೆಂಪು ಸಮುದ್ರದ ಆಳದಲ್ಲಿ ವಿವಾಹವಾದ ಜೋಡಿ!

ಕಳೆದ ಸೆಪ್ಟಂಬರ್​ನಿಂದ ಒಂದಲ್ಲ ಒಂದು ರೀತಿಯಲ್ಲಿ ಈ ರೀತಿಯ ಪ್ರಕರಣಗಳು ದಾಖಲಾಗುತ್ತಿವೆ. ಯುಎಸ್​ನ 10 ಪಶ್ಚಿಮ ರಾಜ್ಯಗಳಲ್ಲಿ ಒಟ್ಟು 49 ಪ್ರಕರಣಗಳು ಮ್ಯಾಕ್​ಡೊನಾಲ್ಡ್ಸ್ ತಿಂಡಿಗೆ ಸಂಬಂಧಪಟ್ಟಂತೆ ದಾಖಲಾಗಿವೆ ಎಂದು ಆರೋಗ್ಯ ಕೇಂದ್ರ ಮಾಹಿತಿ ನೀಡಿದೆ. ಈ ಎಲ್ಲಾ ಪ್ರಕರಣಗಳನ್ನು ಕಂಡ ಯುಎಸ್​ ಜನರು ಸದ್ಯ ಮ್ಯಾಕ್​ಡೊನಾಲ್ಡ್ಸ್​ ಕಡೆ ತಲೆ ಹಾಕಿ ಮಲಗುತ್ತಿಲ್ಲ. ಕಳೆದ ಒಂದು ವಾರದಲ್ಲಿ ಮ್ಯಾಕ್​ಡೊನಾಲ್ಡ್ಸ್​ನ ಫುಡ್ ಚೈನ್ ಸುಮಾರು ಶೇಕಡಾ 6 ರಷ್ಟು ಕುಸಿದಿದೆ ಎಂದು ಹೇಳಲಾಗುತ್ತಿದೆ.

ಸದ್ಯ ಯುಎಸ್​ನ ಹಲವು ಭಾಗಗಳಲ್ಲಿ ಒಂದಲ್ಲ ಒಂದು ಮ್ಯಾಕ್​ಡೊನಾಲ್ಡ್ಸ್​ ತಿಂಡಿಗೆ ಸಂಬಂಧಿಸಿದ ಪ್ರಕರಣಗಳು ದಾಖಲಾಗುತ್ತಿವೆ. ಒಂದು ಮಗುವನ್ನು ಸೇರಿ 10 ಜನಲ್ಲಿ ಯೂರಿಕ್ ಸಿಂಡ್ರೋಮ್ಸ್ ಅಂದ್ರೆ ಮೂತ್ರಪಿಂಡ ವೈಫಲ್ಯದಂತಹ ಸಮಸ್ಯೆಗಳು ಕಂಡಿವೆ ಎಂದು ವರದಿಯಾಗಿದೆ. ಜೊತೆಗೆ ಹಿರಿಯ ನಾಗರಿಕರೊಬ್ಬರು ಅಸುನೀಗಿದ್ದಾರೆ ಎಂದು ಕೂಡ ಅಮೆರಿಕಾದ ಸಿಡಿಸಿ ಹೇಳಿದೆ.

ಇದನ್ನೂ ಓದಿ: ಹಬೀಬಿ.. ಉಬರ್​ನಲ್ಲಿ ಇನ್ಮುಂದೆ ಒಂಟೆ ರೈಡ್​​ ಮಾಡ್ಬೋದು!

ಮ್ಯಾಕ್​ಡೊನಾಲ್ಡ್ಸ್​ನ ಕ್ವಾರ್ಟರ್ ಫೌಂಡರ್​ ತಿಂದವರಲ್ಲಿ E-coliಯಂತಹ ಸಮಸ್ಯೆಗಳು ಅಂದ್ರೆ ಹೊಟ್ಟೆ ನೋವು, ಡಯೆರಿಯಾ,ವಾಂತಿ ಜ್ವರದಂತಹ ಸಮಸ್ಯೆಗಳು ಕಂಡು ಬಂದಿವೆ ಎಂದು ಹೇಳಲಾಗುತ್ತಿದೆ.

ಇಲ್ಲಿಯವರೆಗೂ ನಡೆದ ತನಿಖೆಯಲ್ಲಿ ಕ್ವಾರ್ಟರ್ ಫೌಂಡರ್​ನಲ್ಲಿ ಸೇರಿರುವ ಯಾವ ಪದಾರ್ಥದಿಂದ ಈ ರೀತಿಯ ಸಮಸ್ಯೆಗಳು ಶುರುವಾಗಿವೆ ಎಂದು ಸ್ಪಷ್ಟವಾಗಿ ಹೇಳಲು ಸಾಧ್ಯವಾಗಿಲ್ಲ. ಆದ್ರೆ ಅದರಲ್ಲಿ ಬಳಸುವ ಸಿಲ್ವರ್ ಆನಿಯನ್ಸ್ ಹಾಗೂ ಬೀಫ್ ಪ್ಯಾಟೀಸ್ ಬಳಕೆಯನ್ನು ಮ್ಯಾಕ್​ಡೊನಾಲ್ಡ್ಸ್​ ಕೆಲವು ರಾಜ್ಯಗಳಲ್ಲಿ ನಿಲ್ಲಿಸಿದೆ. ಈ ಬಗ್ಗೆ ಮಾತನಾಡಿರುವ ಮ್ಯಾಕ್​ಡೊನಾಲ್ಡ್ಸ್​ ಕಂಪನಿಯ ಅಧ್ಯಕ್ಷ ಜಿಯೋ ಇರ್ಲಿಂಗರ್ ನಮಗೆ ಆಹಾರ ಸುರಕ್ಷತೆ ಎಂಬುದು ಮೊದಲ ಪ್ರಾಧಾನ್ಯತೆಯಾಗಿದೆ. ಹೀಗಾಗಿಯೇ ಇನ್ಮುಂದೆ ನಮ್ಮ ತಿಂಡಿಯಲ್ಲಿ ಸಿಲ್ವರ್ ಆನಿಯನ್ ಹಾಗೂ ಬೀಫ್ ಪ್ಯಾಟೀಸ್​ ಬಳಕೆಯನ್ನು ನಿಲ್ಲಿಸಲಾಗಿದೆ ಎಂದು ಹೇಳಿದ್ದಾರೆ. ಅದು ಮಾತ್ರವಲ್ಲ ಸದ್ಯಕ್ಕೆ ತಾತ್ಕಾಲಿಕವಾಗಿ ಕ್ವಾರ್ಟರ್ ಫೌಂಡರ್​ ತಿಂಡಿಯನ್ನು ಕೂಡ ಬಂದ್ ಮಾಡಿದ್ದೇವೆ ಎಂದು ಇರ್ಲಿಂಗರ್ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮ್ಯಾಕ್​ಡೊನಾಲ್ಡ್ಸ್​ ತಿಂಡಿ ತಿನ್ನುವ ಮುನ್ನ ಎಚ್ಚರ! ಅಮೆರಿಕಾದಲ್ಲಿ 1 ಬಲಿ, ಡಜನ್ ಜನರ ಒದ್ದಾಟ, ಏನಾಯ್ತು?

https://newsfirstlive.com/wp-content/uploads/2024/10/WhatsApp-Image-2024-10-23-at-4.08.23-PM.jpeg

Load More