newsfirstkannada.com

ಬೆಲೆ ಏರಿಕೆಗೆ ಬೆಚ್ಚಿಬಿದ್ದ ಜನ; ಕೆಜಿ ಟೊಮ್ಯಾಟೋ ಬೆಲೆ 100 ಅಲ್ಲ, 150 ಅಲ್ಲ, ಅಬ್ಬಬ್ಬಾ ಎಷ್ಟು ಗೊತ್ತಾ?

Share :

Published July 7, 2023 at 8:58pm

Update July 7, 2023 at 9:51pm

    ಒಂದು ಲೀಟರ್ ಪೆಟ್ರೋಲ್ ಬೇಕಾದ್ರೂ ತಗೊಬಹುದು ಟೊಮ್ಯಾಟೋ ಕಷ್ಟ!

    160 ರೂಪಾಯಿ ಇರೋ ರೇಟ್ 200, 300 ರೂಪಾಯಿಗೂ ತಲುಪುವ ಸಾಧ್ಯತೆ

    ಮುಂಬೈ, ದೆಹಲಿ, ಕೋಲ್ಕತ್ತಾ, ಬೆಂಗಳೂರಲ್ದಿ ಟೊಮ್ಯಾಟೋ ರೇಟ್ ಎಷ್ಟು?

ಒಂದು ಲೀಟರ್ ಪೆಟ್ರೋಲ್ ಬೇಕಾದ್ರೂ ಕೊಂಡು ಕೊಳ್ಳಬಹುದು ಆದ್ರೆ ಟೊಮ್ಯಾಟೋ ಖರೀದಿಸಲು ಆಗುತ್ತಿಲ್ಲ. ಅಬ್ಬಾ.. ದಿನ ಕಳೆದಂತೆ ರೆಡ್ ಬ್ಯೂಟಿ ರೇಟ್ ಗಗನಕ್ಕೇರುತ್ತಿದೆ. 60-70 ರೂಪಾಯಿಯಿಂದ ಶತಕ ಸಿಡಿಸಿದ ಟೊಮ್ಯಾಟೋ ದರ ಡಬಲ್ ಸೆಂಚುರಿಯ ಸನಿಹದಲ್ಲಿದೆ. ಟೊಮ್ಯಾಟೋ ರೇಟ್ ಹೆಚ್ಚಾಗುತ್ತಿದ್ದಂತೆ ದೇಶದಲ್ಲಿ ಬಹಳಷ್ಟು ಬದಲಾವಣೆಗಳಾಗುತ್ತಿವೆ. ಇನ್ಮುಂದೆ ಮೆಕ್‌ಡೊನಾಲ್ಡ್ಸ್ ಬರ್ಗರ್‌ನಲ್ಲೂ ಟೊಮ್ಯಾಟೋ ಇರಲ್ವಂತೆ. ರೆಡ್ ಬ್ಯೂಟಿಯ ದಿಢೀರ್‌ ಬೆಲೆ ಏರಿಕೆಗೆ ಮೆಕ್‌ಡೊನಾಲ್ಡ್ಸ್ ಕಂಪನಿಯೇ ಬೆಚ್ಚಿಬಿದ್ದಿದೆ.

ಬರ್ಗರ್‌ ಸೇರಿದಂತೆ ಹಲವು ವೆಜ್‌ ಅಂಡ್‌ ನಾನ್‌ವೆಜ್‌ ಸ್ನ್ಯಾಕ್ಸ್‌ಗೆ ಫೇಮಸ್‌ ಆದ ಮೆಕ್‌ಡೊನಾಲ್ಡ್ಸ್ ಇವತ್ತು ಮಹತ್ವದ ನಿರ್ಧಾರ ಘೋಷಿಸಿದೆ. ದೇಶದ ಹಲವು ನಗರಗಳಲ್ಲಿ ಟೊಮ್ಯಾಟೋ ರೇಟ್ ಜಾಸ್ತಿ ಆಗಿರೋದ್ರಿಂದ ಬರ್ಗರ್‌ನಲ್ಲಿ ಇನ್ಮುಂದೆ ಟೊಮ್ಯಾಟೋ ಹಾಕದಿರಲು ತೀರ್ಮಾನಿಸಿದೆ. ಮೆಕ್‌ಡೊನಾಲ್ಡ್ಸ್ ಈ ನಿರ್ಧಾರ ಬರ್ಗರ್‌ ಪ್ರಿಯರಿಗೆ ನಿರಾಸೆ ತರಿಸಿದೆ.

ಇತ್ತೀಚೆಗೆ ದೇಶಾದ್ಯಂತ ಟೊಮ್ಯಾಟೋ ರೇಟ್ ಸಿಕ್ಕಾಪಟ್ಟೆ ಜಾಸ್ತಿಯಾಗಿದೆ. ಸದ್ಯ ಮಾರುಕಟ್ಟೆಯಲ್ಲಿ 160 ರೂಪಾಯಿ ಇದ್ದು ಕೆಲವೇ ದಿನಗಳಲ್ಲಿ 200, 300 ರೂಪಾಯಿಗೂ ತಲುಪುವ ಸಾಧ್ಯತೆ ಇದೆ. ದರ ಹೆಚ್ಚಾಗೋದ್ರ ಜೊತೆಗೆ ಉತ್ತಮ ಗುಣಮಟ್ಟದ ಟೊಮ್ಯಾಟೋಗಳು ಮಾರುಕಟ್ಟೆಯಲ್ಲಿ ಸಿಗುತ್ತಿಲ್ಲ. ಒಂದು ವೇಳೆ ಟ್ಯೊಮಾಟೋ ರೇಟ್ ಹೆಚ್ಚಾದಂತೆ ಬರ್ಗರ್ ರೇಟ್ ಹೆಚ್ಚಿಸಿದರೆ ಗ್ರಾಹಕರು ಖರೀದಿ ಮಾಡಲು ಹಿಂದೇಟು ಹಾಕುತ್ತಾರೆ. ಹೀಗಾಗಿ ಇವತ್ತು ಮೆಕ್‌ಡೊನಾಲ್ಡ್ಸ್ ತನ್ನ ಬರ್ಗರ್‌ ತಯಾರಿಕೆಯ ಮೆನುನಿಂದ ಟೊಮ್ಯಾಟೋ ಅನ್ನೇ ಕೈ ಬಿಟ್ಟಿದೆ. ಭಾರತೀಯರು ಟೊಮ್ಯಾಟೋ ದರ ಹೆಚ್ಚಾದಾಗ ಅದನ್ನ ತಿನ್ನುವುದನ್ನು ಕಡಿಮೆ ಮಾಡುತ್ತಾರೆ ಎಂದು ಮ್ಯಾಕ್‌ಡೊನಾಲ್ಡ್ಸ್‌ ಹೇಳಿದೆ.

ಇದನ್ನೂ ಓದಿ: VIDEO: ಅಯ್ಯೋ.. ಎಂಥಾ ಕಾಲ ಬಂತು ನೋಡ್ರಪ್ಪಾ.. ಸಿಸಿಟಿವಿ ಕಣ್ಗಾವಲಿನಲ್ಲಿದೆ ಟೊಮ್ಯಾಟೋ!

ಇನ್ನು, ದೇಶಾದ್ಯಂತ ವಿವಿಧ ರಾಜ್ಯಗಳಲ್ಲಿ ಟೊಮ್ಯಾಟೋ ಬೆಲೆ ಏರಿಕೆ ಮುಂದುವರಿದಿದೆ. ಯಾವ್ಯಾವ ರಾಜ್ಯದಲ್ಲಿ ಒಂದು ಕೆಜಿ ಟೊಮ್ಯಾಟೋಗೆ ಎಷ್ಟು ರೂಪಾಯಿ ಅನ್ನೋದರ ವಿವರ ಇಲ್ಲಿದೆ ನೋಡಿ.

  1. ಉತ್ತರಾಖಂಡ – 250 ರೂಪಾಯಿ
  2. ಉತ್ತರಕಾಶಿ – 200 ರೂಪಾಯಿ
  3. ಕೋಲ್ಕತ್ತಾ – 152 ರೂಪಾಯಿ
  4. ನವದೆಹಲಿ – 120 ರೂಪಾಯಿ
  5. ಚೆನ್ನೈ – 117 ರೂಪಾಯಿ
  6. ಮುಂಬೈ – 108 ರೂಪಾಯಿ
  7. ಬೆಂಗಳೂರು- 100-120 ರೂಪಾಯಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

ಬೆಲೆ ಏರಿಕೆಗೆ ಬೆಚ್ಚಿಬಿದ್ದ ಜನ; ಕೆಜಿ ಟೊಮ್ಯಾಟೋ ಬೆಲೆ 100 ಅಲ್ಲ, 150 ಅಲ್ಲ, ಅಬ್ಬಬ್ಬಾ ಎಷ್ಟು ಗೊತ್ತಾ?

https://newsfirstlive.com/wp-content/uploads/2023/07/tamato.jpg

Load More