/newsfirstlive-kannada/media/post_attachments/wp-content/uploads/2024/12/JOB_MDL_1.jpg)
ಮಜಗಾನ್ ಡಾಕ್ ಶಿಪ್ ಬಿಲ್ಡರ್ಸ್ ಲಿಮಿಟೆಡ್ (ಎಂಡಿಎಲ್) ಸಂಸ್ಥೆಯು ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನ ಮಾಡಿದೆ. ಖಾಯಂ ಆಧಾರದ ಮೇಲೆ ನಾನ್ ಎಕ್ಸಿಕ್ಯೂಟಿವ್ ಹುದ್ದೆಗಳ ನೇಮಕಾತಿಯನ್ನು ಸಂಸ್ಥೆ ಮಾಡುತ್ತಿದ್ದು ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದು. ಅರ್ಜಿಗೆ ಇಂದೇ ಕೊನೆ ದಿನವಾಗಿದ್ದರಿಂದ ಸಂಜೆ ಒಳಗೆ ಅಪ್ಲೇ ಮಾಡಬೇಕು. ಸಂಸ್ಥೆಯ ಅಧಿಕೃತ ವೆಬ್‌ಸೈಟ್ mazagondock.in ನಲ್ಲಿ ಖಾಲಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.
ಒಟ್ಟು 234 ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಲಾಗಿದೆ. ಅರ್ಜಿದಾರರಿಗೆ 18 ವರ್ಷದಿಂದ 38 ವರ್ಷಗಳ ಒಳಗಿನವರು ಆಗಿರಬೇಕು. ಈ ಹುದ್ದೆಗೆ ಸಂಬಂಧಿಸಿದ ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ, ವಯಸ್ಸಿನ ಮಿತಿ, ಯಾವ ವಿದ್ಯಾರ್ಹತೆ ಕೇಳಲಾಗಿದೆ ಎಂಬುದರ ಮಾಹಿತಿ ಇಲ್ಲಿ ನೀಡಲಾಗಿದೆ.
ಯಾವ್ಯಾವ ಹುದ್ದೆಗಳು ಮತ್ತು ಎಷ್ಟು ಹುದ್ದೆ ಖಾಲಿ ಇವೆ?
ಕಾಂಪೊಸಿಟ್ ವೆಲ್ಡರ್ 27, ಚಿಪ್ಪರ್ ಗ್ರೈಂಡರ್ 06, ಎಲೆಕ್ಟ್ರಿಕ್ ಕ್ರೆನ್ ಆಪರೇಟರ್ 07, ಎಲೆಕ್ಟ್ರೀಷಿಯನ್ 24, ಎಲೆಕ್ಟ್ರಾನಿಕ್ ಮೆಕಾನಿಕ್ 10, ಫಿಟ್ಟರ್ 14, ಗ್ಯಾಸ್ ಕಟ್ಟರ್ 10, ಜೂ. ಹಿಂದಿ ಟ್ರಾನ್ಸಲೇಟರ್ 01, ಜೂ. ಟ್ರಾಟ್ಮ್ಯಾನ್ 10, ಜೂ. ಟ್ರಾಟ್ಮ್ಯಾನ್ (Electrical/Electronics) 03, ಕ್ವಾಲಿಟಿ ಕಂಟ್ರೋಲ್ ಇನ್ಸ್ಟೆಕ್ಟರ್ ಮೆಕಾನಿಕಲ್ 07, ಕ್ವಾಲಿಟಿ ಕಂಟ್ರೋಲ್ ಇನ್ಸ್ಟೆಕ್ಟರ್ (Electrical/ Electronics) 03, ಮಿಲ್ವೈಟ್ ಮೆಕಾನಿಕ್ 06 ಸೇರಿದಂತೆ ಇನ್ನಿತೆರೆ ಸೇರಿ ಒಟ್ಟು 234 ಹುದ್ದೆಗಳನ್ನು ಖಾಲಿ ಇವೆ.
ವಿದ್ಯಾರ್ಹತೆ
ಎಸ್ಎಸ್ಎಲ್ಸಿ, ಡಿಪ್ಲೋಮಾ, ಬಿಇ, ಎಲೆಕ್ಟ್ರಿಷಿಯನ್,
ಕೆಲ ಹುದ್ದೆಗಳಿಗೆ ನ್ಯಾಕ್ (National Apprenticeship Certificate) ಕೋರ್ಸ್ ಮಾಡಿರಬೇಕು
ಇದನ್ನೂ ಓದಿ: Karnataka Bank; ಪ್ರೊಬೆಷನರಿ ಅಧಿಕಾರಿ ಹುದ್ದೆಗೆ ಅರ್ಜಿ ಹಾಕಲು ನಾಳೆ ಕೊನೆ ದಿನ
ಅರ್ಜಿ ಶುಲ್ಕ ಈ ಕೆಳಕಂಡಂತೆ ಇದೆ
ಸಾಮಾನ್ಯ, ಒಬಿಸಿ, ಇಡಬ್ಲುಎಸ್ ಅಭ್ಯರ್ಥಿಗಳು- 354 ರೂಪಾಯಿ
ಎಸ್‌ಸಿ, ಎಸ್‌ಟಿ, ವಿಶೇಷ ಚೇತನ, Ex ಸೈನಿಕರು- ವಿನಾಯಿತಿ ಇದೆ
ಆಯ್ಕೆ ಪ್ರಕ್ರಿಯೆ
ಆನ್‌ಲೈನ್ ಅರ್ಜಿಗಳು ಒದಗಿಸಿದ ಮಾಹಿತಿಯ ಆಧಾರದ ಮೇಲೆ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ನಡೆಸಲಾಗುತ್ತದೆ. ಈ ಪರೀಕ್ಷೆ ಬರೆದ ಬಳಿಕ ಅಭ್ಯರ್ಥಿಗಳ ಹೆಸರನ್ನು ಶಾರ್ಟ್‌ಲಿಸ್ಟ್ ಮಾಡಲಾಗುತ್ತದೆ. ಇದಾದ ಮೇಲೆ ಅಭ್ಯರ್ಥಿಗಳಿಗೆ Trade/skill ಪರೀಕ್ಷೆಯ ನಡೆಸಲಾಗುತ್ತದೆ.
ಅಧಿಕೃತ ವೆಬ್‌ಸೈಟ್- mazagondock.in ಭೇಟಿ ನೀಡಿ ತಕ್ಷಣ ಅರ್ಜಿ ಸಲ್ಲಿಸಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ