/newsfirstlive-kannada/media/post_attachments/wp-content/uploads/2025/03/DIET.jpg)
ಇದು ಸೋಷಿಯಲ್ ಮೀಡಿಯಾ ಜಗತ್ತು. ಇಲ್ಲಿ ಸಾಕಷ್ಟು ಇತಿಹಾಸ ತಜ್ಞರು, ಆಹಾರ ತಜ್ಞರು, ಆರ್ಥಿಕ ತಜ್ಞರು, ಡಯಟಿಷನ್ಗಳು ತುಂಬಿ ತುಳುಕುತ್ತಿದ್ದಾರೆ. ಎಲ್ಲವನ್ನು ನಾವು ನೋಡುತ್ತೇವೆ. ಆದ್ರೆ ಅವುಗಳನ್ನು ಕುರುಡುತನದಿಂದ ಒಪ್ಪಿಕೊಂಡು, ಅದನ್ನೇ ಪಾಲಿಸುವ ಮುನ್ನ ಎಚ್ಚರವಿರಲಿ. ಖ್ಯಾತ ಇನ್ಫ್ಲೂಯೆನ್ಸರ್ ಒಬ್ಬರು ಹೇಳಿದ ಡಯೆಟ್ ಪ್ಲ್ಯಾನ್ ಪಾಲಿಸಿದ 23 ವರ್ಷದ ಹುಡುಗಿ ಈಗ ಆಸ್ಪತ್ರೆಯ ಹಾಸಿಗೆ ಮೇಲೆ ಮಲಗಿ ಈಗ ಒದ್ದಾಡುತ್ತಿದ್ದಾಳೆ.
23 ವರ್ಷದ ಎವೆ ಕ್ಯಾಥರೈನ್ ಎಂಬ ಯುವತಿ, ಸೋಷಿಯಲ್ ಮೀಡಿಯಾದ ಕಂಟೆಂಟ್ ಕ್ರಿಯೇಟರ್ ಒಬ್ಬರು ಹೇಳಿದ ಡೈಯಟ್ ಪ್ಲ್ಯಾನ್ನ್ನು ಅಳವಡಿಸಿಕೊಂಡು ಅದೇ ಆಹಾರ ಪದ್ಧತಿಯನ್ನು ಅನುಸರಿಸಿದ್ದಾರೆ. ಕೇವಲ ಮಾಂಸಾಹಾರ ಹಾಗೂ ಮೀನನ್ನು ಮಾತ್ರ ತಿನ್ನುವುದರಿಂದ ಹೆಚ್ಚು ಪ್ರೊಟೀನ್ ಸಿಗತ್ತದೆ ಎಂದು ಆ ಆಹಾರ ತಜ್ಞೆ ತನ್ನ ಸೋಷಿಯಲ್ ಮಿಡಿಯಾ ಖಾತೆಯಲ್ಲಿ ಹೇಳಿಕೊಂಡಿದ್ದಾಳೆ. ಬೆಳಗ್ಗೆ ಎರಡೇ ಎರಡು ಮೊಟ್ಟೆಯನ್ನು ಉಪಹಾರವಾಗಿ ಸೇವಿಸಬೇಕು ಎಂಬ ಸಲಹೆಯನ್ನು ನೀಡಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಎವೆ ಕ್ಯಾಥರೈನ್, ಆ ಡಯೆಟ್ ಪ್ಲ್ಯಾನ್ನ್ನು ಕಟ್ಟುನಿಟ್ಟಾಗಿ ಪಾಲಿಸಿದ್ದಾಳೆ. ಆಮೇಲೆ ಆ 23 ವರ್ಷದ ಯುವತಿಯ ಗತಿ ಏನಾಗಿದೆ ಗೊತ್ತಾ?
ಇದನ್ನೂ ಓದಿ:ಮನೆಯಿಂದ ಹೊರಬರೋ ಮುನ್ನ ಹುಷಾರ್.. ಬಿಸಿಲಿನಿಂದ ಆರೋಗ್ಯದ ಮೇಲೆ ಆಗೋ ಪರಿಣಾಮವೇನು?
ಹೀಗೆ ಕೆಲವು ತಿಂಗಳುಗಳ ಕಾಲ ಈ ಡಯೆಟ್ ಫಾಲೋವ್ ಮಾಡಿದ ಬಳಿಕ ಒಂದು ದಿನ ಆಕೆಯ ಮೂತ್ರದಲ್ಲಿ ರಕ್ತ ಕಂಡು ಬಂದಿದ್ದು ಗಮನಿಸಿದ್ದಾಳೆ. ಕೂಡಲೇ ಆಕೆ ಆಸ್ಪತ್ರೆಗೆ ಹೋಗಿದ್ದಾಳೆ. ಆಕೆಯ ಆರೋಗ್ಯವನ್ನು ತಪಾಸಣೆ ಮಾಡಿದ ವೈದ್ಯರು, ರಕ್ತದಲ್ಲಿ ವಿಪರೀತ ಪ್ರೊಟೀನ್ ಸೇರಿರುವುದು ಗೊತ್ತಾಗಿದೆ. ದೇಹಕ್ಕೆ ಬೇಕಿರುವ ಅಗತ್ಯಕ್ಕಿಂತ ಪೌಷ್ಠಿಕಾಂಶ ದೇಹದಲ್ಲಿ ಶೇಖರಣೆಯಾಗಿದೆ. ಇದರಿಂದಾಗಿ ಮೂತ್ರಪಿಂಡದಲ್ಲಿ ಕಲ್ಲುಗಳು ಇರುವುದು ಕೂಡ ಕಂಡು ಬಂದಿದೆ. ಕೂಡಲೇ ವೈದ್ಯರು ನೀನು ಕೂಡಲೇ ಡಯೆಟ್ ನಿಲ್ಲಿಸದೇ ಹೋದರೆ ಇದರ ಪರಿಣಾಮ ಇನ್ನೂ ಗಂಭೀರವಾಗಿರಲಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ:ನೀವು ಸ್ಲಿಮ್ ಅಂಡ್ ಫಿಟ್ ಆಗಿ ಕಾಣಬೇಕೇ? ಯೋಗಾಸನದಿಂದ ಇರೋ ಲಾಭಗಳೇನು?
ಸದ್ಯ ಕೆಲವು ದಿನಗಳ ಕಾಲ ಆಸ್ಪತ್ರೆಯಲ್ಲಿ ಆಕೆಯನ್ನು ದಾಖಲೆ ಮಾಡಿಕೊಂಡ ವೈದ್ಯರು ಕಿಡ್ನಿ ಸ್ಟೋನ್ಗಳನ್ನು ಕರಗುವಂತೆ ಚಿಕಿತ್ಸೆ ನೀಡಿ. ಸರಿಯಾದ ಪ್ರಮಾಣದ ಪ್ರೋಟಿನ್ ಮಾತ್ರ ಸೇವಿಸಲು ಸೂಚನೆಯನ್ನು ನೀಡಿ ಕಳುಹಿಸಿದ್ದಾರೆ. ಅದಕ್ಕೆ ಯಾವುದೇ ಸೋಷಿಯಲ್ ಮೀಡಿಯಾ ಕಂಟೆಂಟ್ ಕ್ರಿಯೆಟರ್ಗಳ ಸಲಹೆಗಳನ್ನು ಸುಮ್ಮನೆ ಕಣ್ಮುಚ್ಚಿ ನಂಬುವ ಮೊದಲು ಸಾವಿರ ಬಾರಿ ಯೋಚನೆ ಮಾಡಿ. ಕೇವಲ ಡಯೆಟ್ಗೆ ಸಂಬಂಧಿಸದ ವಿಷಯಲ್ಲ. ಪ್ರತಿಯೊಂದು ವಿಷಯದಲ್ಲೂ ನಾವು ಜಾಗರೂಕರಾಗಿರಬೇಕು. ಅದರಲ್ಲೂ ಹೆಲ್ತ್ ಟಿಪ್ಸ್, ಲೈಫ್ಸ್ಟೈಲ್ ಹಾಗೂ ಡಯೆಟ್ ವಿಷಯ ಬಂದಾಗ ತುಂಬಾ ಅಂದ್ರೆ ತುಂಬಾನೆ ಜಾಗೃತರಾಗಿರಬೇಕು. ತಜ್ಞರನ್ನು ಭೇಟಿಯಾಗಿ ಸಲಹೆ ಕೇಳದೆ ಕುರುಡಾಗಿ ಅದನ್ನು ಪಾಲಿಸಿ ಆಪತ್ತು ತಂದುಕೊಳ್ಳಬೇಡಿ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ