Advertisment

ಗುಟ್ಕಾ ತಂದುಕೊಟ್ಟಿಲ್ಲ ಎಂದು ಬಾಲಕಿಯ ಭೀಕರ ಹತ್ಯೆ.. ಗೋಣಿ ಚೀಲದಲ್ಲಿ ಸುತ್ತಿ ಪಾಳುಬಿದ್ದ ಮನೆಯಲ್ಲೆಸೆದ ಮೆಕ್ಯಾನಿಕ್

author-image
AS Harshith
Updated On
ಗುಟ್ಕಾ ತಂದುಕೊಟ್ಟಿಲ್ಲ ಎಂದು  ಬಾಲಕಿಯ ಭೀಕರ ಹತ್ಯೆ.. ಗೋಣಿ ಚೀಲದಲ್ಲಿ ಸುತ್ತಿ ಪಾಳುಬಿದ್ದ ಮನೆಯಲ್ಲೆಸೆದ ಮೆಕ್ಯಾನಿಕ್
Advertisment
  • 7 ವರ್ಷದ ಮಗಳು ನಾಪತ್ತೆ.. ಕಂಗಾಲಾದ ತಂದೆಯಿಂದ ದೂರು
  • ಮನೆ ಸಮೀಪದ ಹಳೆ ಮನೆಯಲ್ಲಿ ಬಾಲಕಿ ಶವ ಪತ್ತೆ
  • 50 ದಿನಗಳ ಬಳಿಕ ಪ್ರಕರಣವನ್ನ ಭೇಧಿಸಿದ ಪೊಲೀಸರು

ಕೊಲೆ. ಇದು ಒಬ್ಬ ವ್ಯಕ್ತಿಯ ಪ್ರಾಣವನ್ನೇ ತೆಗೆಯುವ ಕೃತ್ಯ. ಆದ್ರೀಗ ಇತ್ತೀಚಿನ ದಿನಗಳಲ್ಲಿ ಚಿಕ್ಕಪುಟ್ಟ ವಿಚಾರಗಳಿಗೂ ಹತ್ಯೆಯೇ ನಡೆದು ಹೋಗುತ್ತಿವೆ. ಇದೀಗ ಕೊಪ್ಪಳದಲ್ಲಿ ವ್ಯಕ್ತಿಯೊಬ್ಬನ ದುಷ್ಚಟಕ್ಕೆ ಬಾಲಕಿಯೊಬ್ಬಳು ಬಲಿಯಾಗಿದ್ದಾಳೆ. ಪೊಲೀಸರ ಬಂಧನದಲ್ಲಿ ಕೊಲೆಯ ರಹಸ್ಯ ಬಯಲಾಗಿದೆ.

Advertisment

publive-image

ಹೀಗೆ ಮುಗುಳ್ನಗುತ್ತಾ ಮುಗ್ದತೆಯಲ್ಲಿ ಫೋಟೋದಲ್ಲಿ ಕಾಣ್ತಿರೋ ಬಾಲಕಿ ಈಗ ಬದುಕಿಲ್ಲ. ದುಷ್ಟನ ದುಷ್ಚಟಕ್ಕೆ ಈ ಮುದ್ದಾದ ಬಾಲಕಿ ಬಲಿಯಾಗಿದ್ದಾಳೆ. ಕಳೆದ 2 ತಿಂಗಳಿನಿಂದ ಈಕೆಯ ಸಾವಿನ ಹಿಂದಿನ ಕಾರಣವನ್ನ ಭೇಧಿಸಲಾಗದೇ ಪೊಲೀಸರೇ ಕಂಗಾಲಾಗಿದ್ರು. ಇದೀಗ ಬಾಲಕಿಯ ಭೀಕರ ಹತ್ಯೆಯ ಆರೋಪಿ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಬಂಧನದ ಬಳಿಕ ಕೊಲೆಯ ಅಸಲಿ ಸತ್ಯ ಬಯಲಾಗಿದೆ.

50 ದಿನದ ಬಳಿಕ ಹಂತಕನ ಅರೆಸ್ಟ್ ಮಾಡಿದ ಪೊಲೀಸ್‌

ಕಳೆದ ಏಪ್ರಿಲ್ 18ರಂದು ಕೊಪ್ಪಳ ಜಿಲ್ಲೆಯ ಕಿನ್ನಾಳ ಗ್ರಾಮದ 7 ವರ್ಷದ ಬಾಲಕಿ ಅನುಶ್ರೀ ನಾಪತ್ತೆಯಾಗಿದ್ದಳು. ಈ ಸಂಬಂಧ ಏಪ್ರಿಲ್ 20 ರಂದು ಕೊಪ್ಪಳ ಮಹಿಳಾ ಠಾಣೆಯಲ್ಲಿ ಬಾಲಕಿ ತಂದೆ ರಾಘವೇಂದ್ರ ಮಡಿವಾಳ ದೂರು ದಾಖಲಿಸಿದ್ರು. ಬಳಿಕ ಏಪ್ರಿಲ್ 21 ರಂದು ಬಾಲಕಿಯ ಮನೆಯ ಸಮೀಪದ ಹಳೆಯ ಮನೆಯಲ್ಲಿ ಚೀಲದಲ್ಲಿ ಶವ ಪತ್ತೆಯಾಗಿತ್ತು. ಬಳಿಕ ಅನುಶ್ರೀ ಸಾವಿನ ಬಗ್ಗೆ ಕೊಪ್ಪಳ ಪೊಲೀಸರು ತನಿಖೆ ಕೈಗೊಂಡಿದ್ದರು. ಇದೀಗ ಕೊಲೆ ಆರೋಪಿ ಸಿದ್ದಲಿಂಗಯ್ಯನ ಪೊಲೀಸರು ಬಂಧಿಸಿದ್ದಾರೆ. 60 ದಿನಗಳ ಬಳಿಕ ಪ್ರಕರಣವನ್ನ ಭೇಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

publive-image

ಇದನ್ನೂ ಓದಿ: ಇಂದು ದರ್ಶನ್​​ರನ್ನು ಮೈಸೂರಿಗೆ ಕರೆದೊಯ್ಯಲಿದ್ದಾರೆ ಪೊಲೀಸರು! ಮತ್ತೊಂದು ಎವಿಡೆನ್ಸ್​ ಸಿಕ್ತಾ?

Advertisment

ಪೊಲೀಸರೇನೋ ಆರೋಪಿಯನ್ನ ಪತ್ತೆ ಹಚ್ಚಿ ಬಂಧಿಸಿದ್ರು. ಆದ್ರೆ, ಕೊಲೆಗೆ ಕಾರಣವನ್ನ ಕೇಳಿದಾಗ ಪೊಲೀಸರೇ ಬೆಚ್ಚಿ ಬಿದ್ದಿದ್ರು. ಅಂದ್ಹಾಗೆ ಈ ಆರೋಪಿ ಸಿದ್ದಲಿಂಗಯ್ಯ ಅನುಶ್ರೀ ತಂದೆ ರಾಘವೇಂದ್ರಗೆ ಪರಿಚಯವಂತೆ. ವೃತ್ತಿಯಲ್ಲಿ ಮೆಕ್ಯಾನಿಕ್ ಆಗಿದ್ದ ಇವ್ನಿಗೆ ಗುಟ್ಕಾ ಹಾಕೋ ಚಟ. ಹೀಗೆ ಮನೆ ಬಳಿ ಕೂತಿದ್ದ ಮಗುಗೆ ಗುಟ್ಕಾ ತಂದುಕೊಡು ಅಂತ ಹೇಳಿದ್ದಾನೆ. ಆದ್ರೆ ಬಾಲಕಿ ತರಲ್ಲ ಅಂತ ಎಂದಿದ್ದಾಳೆ. ಹೀಗೆ ಹೇಳ್ತಿದ್ದಂತೆ ಕೋಲಿನಿಂದ ಜೋರಾಗಿ ಹೊಡೆದಿದ್ದಾನೆ. ಇದ್ರಿಂದ ಬಾಲಕಿ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಆಗ ಯಾರಿಗೂ ಗೊತ್ತಾಗದಂತೆ ಗೋಣಿಚೀಲದಲ್ಲಿ ಮಗುವನ್ನ ಸುತ್ತಿ ಪಾಳು ಮನೆಯಲ್ಲಿ ಎಸೆದು ಎಸ್ಕೇಪ್ ಆಗಿದ್ದನಂತೆ. ಹೀಗೆ ಬಂಧನದ ಬಳಿಕ ಸಿದ್ದಲಿಂಗಯ್ಯ ಪೊಲೀಸರ ಮುಂದೆ ಎಲ್ಲಾ ಮ್ಯಾಟರ್ ಬಾಯ್ಬಿಟ್ಟಿದ್ದಾನೆ.

ಇದನ್ನೂ ಓದಿ: Today Horoscope: ಆಸ್ತಿ ವಿಚಾರದಲ್ಲಿ ಭಿನ್ನಾಭಿಪ್ರಾಯ, ವಿದ್ಯಾರ್ಥಿಗಳಿಗೆ ಶುಭಸುದ್ದಿ; ಇಲ್ಲಿದೆ ಇಂದಿನ ಭವಿಷ್ಯ

ಒಟ್ಟಾರೆ, ಈತನ ದುಷ್ಚಟಕ್ಕೆ ಏನೂ ಅರಿಯದ ಕಂದಮ್ಮ ಬಲಿಯಾಗಿದೆ. ಹೆತ್ತವರು ಮಗಳನ್ನ ಕಳೆದುಕೊಂಡು ಕಂಗಾಲಾಗಿದ್ದಾರೆ.. ಇದೀಗ ಈತನಿಗೆ ತಕ್ಕ ಶಿಕ್ಷೆ ಆಗಲಿ ಅಂತ ಆಗ್ರಹಿಸುತ್ತಿದ್ದಾರೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment