Advertisment

93ರ ವಯಸ್ಸಿನಲ್ಲಿ 5ನೇ ಮದುವೆಯಾದ ಮಾಧ್ಯಮ ಲೋಕದ ದೊರೆ; ಮುರ್ಡೋಕ್ ಕೈ ಹಿಡಿದ ಚೆಲುವೆ ಯಾರು?

author-image
Bheemappa
Updated On
93ರ ವಯಸ್ಸಿನಲ್ಲಿ 5ನೇ ಮದುವೆಯಾದ ಮಾಧ್ಯಮ ಲೋಕದ ದೊರೆ; ಮುರ್ಡೋಕ್ ಕೈ ಹಿಡಿದ ಚೆಲುವೆ ಯಾರು?
Advertisment
  • 5ನೇ ಮದುವೆಗೆ ಡಾರ್ಕ್​​ ಸೂಟ್​ನಲ್ಲಿ ಮಿಂಚಿದ ರೂಪರ್ಟ್ ಮುರ್ಡೋಕ್
  • 3-4 ತಿಂಗಳ ಹಿಂದೆ ಈ ಜೋಡಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು
  • ಯಾರು ಈ ಎಲೆನಾ ಝುಕೋವಾ? ಮುರ್ಡೋಕ್ ಮದುವೆ ಆಗಿದ್ದು ಎಲ್ಲಿ?

ಮಾಧ್ಯಮ ಲೋಕದ ದೊರೆ ಎಂದೇ ಕರೆಸಿಕೊಳ್ಳುವ ದಿಗ್ಗಜ ರೂಪರ್ಟ್ ಮುರ್ಡೋಕ್ ಅವರು 5ನೇ ಬಾರಿಗೆ ವಿವಾಹವಾಗಿದ್ದಾರೆ. 93 ವರ್ಷದ ರೂಪರ್ಟ್ ಮುರ್ಡೋಕ್ ಅವರು 67 ವರ್ಷದ ಎಲೆನಾ ಝುಕೋವಾ ಅವರನ್ನ ವರಿಸಿದ್ದಾರೆ ಎಂದು ಹೇಳಲಾಗಿದೆ.

Advertisment

ಅಮೆರಿಕದ ಲಾಸ್​ ಏಂಜಲೀಸ್​ನ ಬೆಲ್​ಏರ್​ನ ವೈನ್‌ಯಾರ್ಡ್​​​ನಲ್ಲಿ ನಡೆದ ಸುಂದರ ವಿವಾಹ ಸಮಾರಂಭದಲ್ಲಿ ರೂಪರ್ಟ್ ಮುರ್ಡೋಕ್ ಅವರು ಎಲೆನಾ ಝುಕೋವಾ ಅವರ ಕೈ ಹಿಡಿದಿದ್ದಾರೆ. ಕಳೆದ ವರ್ಷ ಫಾಕ್ಸ್ ಮತ್ತು ನ್ಯೂಸ್ ಕಾರ್ಪೊರೇಶನ್‌ನ ಮಂಡಳಿಗಳಿಂದ ನಿವೃತ್ತಿ ಪಡೆದ ಮುರ್ಡೋಕ್ ಅವರು ಎಲೆನಾ ಝುಕೋವಾ ಅವರೊಂದಿಗೆ 5ನೇ ಮದುವೆ ಆಗಿದ್ದಾರೆ. 3-4 ತಿಂಗಳ ಹಿಂದೆ ಈ ಇಬ್ಬರು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿತ್ತು.

ಇದನ್ನೂ ಓದಿ: 10ನೇ ಮಹಡಿಯಿಂದ ಜಿಗಿದು IAS ಆಫೀಸರ್​ ಮಗಳು ಅನುಮಾನಾಸ್ಪದ ಸಾವು.. ಕಾರಣವೇನು?

publive-image

ಆದರೆ ಈ ಸಂಗತಿ ಎಲ್ಲೆಡೆ ಹರಿದಾಡಿ ಭಾರೀ ಸುದ್ದಿಯಾಗಿದ್ರು ಕೆಲವರು ಇದನ್ನು ನಂಬಿರಲಿಲ್ಲ. ಆದ್ರೆ ಇದೀಗ 5ನೇ ವಿವಾಹ ಆಗಿರೋದು ಬಹಿರಂಗಗೊಂಡಿದೆ. ಸದ್ಯ ಈ ಸುದ್ದಿಯನ್ನು ಕೇಳಿದ ಕೆಲವರು ಆಶ್ಚರ್ಯಗೊಂಡಿದ್ದಾರೆ. 93ರಲ್ಲೂ ನವಯುವಕನಂತೆ ಕಂಗೊಳಿಸಿದ ಮುರ್ಡೋಕ್ ಅವರು ಮದುವೆ ವೇಳೆ ಡಾರ್ಕ್ ಸೂಟ್​ನಲ್ಲಿ ಕಾಣಿಸಿಕೊಂಡರು. ಬಳಿಕ ಝುಕೋವಾಗೆ ಬಿಳಿ ಹೂವಿನ ಬೊಕ್ಕೆ ನೀಡುವ ಮೂಲಕ ಹೊಸ ಜೀವನಕ್ಕೆ ಕಾಲಿರಿಸಿದರು. ಮದುವೆಯಲ್ಲಿ ನ್ಯೂ ಇಂಗ್ಲೆಂಡ್ ಪೇಟ್ರಿಯಾಟ್ಸ್‌ನ ಮಾಲೀಕ ರಾಬರ್ಟ್ ಕೆ ಕ್ರಾಫ್ಟ್ ಮತ್ತು ನ್ಯೂಸ್ ಕಾರ್ಪ್‌ನ ಸಿಇಒ ರಾಬರ್ಟ್ ಥಾಮ್ಸನ್ ಸೇರಿದಂತೆ ಮಾಧ್ಯಮದ ಕೆಲ ಗಣ್ಯರು ಹಾಜರಾಗಿದ್ದರು ಎಂದು ಹೇಳಲಾಗಿದೆ.

Advertisment

ಇದನ್ನೂ ಓದಿ:ಮನೆಗೆ ನುಗ್ಗಿದ್ದು ಕಳ್ಳತನಕ್ಕೆ.. ಆದ್ರೆ ಎಸಿ ಆನ್ ಮಾಡಿ ಗಡದ್ ನಿದ್ದೆ ಹೊಡೆದ.. ಖದೀಮನನ್ನ ಬೆಳಗ್ಗೆ ಎಬ್ಬಿಸಿದ್ಯಾರು?

ವಿಶ್ವದ್ಯಾಂತ ಅತ್ಯಂತ ಜನಪ್ರಿಯ ಮಾಧ್ಯಮಗಳ ಮಾಲೀಕ ರೂಪರ್ಟ್ ಮುರ್ಡೋಕ್ ಆಗಿದ್ದಾರೆ. ದಿ ಸನ್, ದಿ ಟೈಮ್ಸ್, ನ್ಯೂಯಾರ್ಕ್ ಪೋಸ್ಟ್, ದಿ ವಿಲ್ ಸ್ಟ್ರೀಟ್ ಜರ್ನಲ್, ಹೆರಾಲ್ಡ್ ಸನ್ ಮತ್ತು ದಿ ಡೈಲಿ ಟೆಲಿಗ್ರಾಫ್ ಇತರೆ ಮಾಧ್ಯಮಗಳ ಮಾಲೀಕರಾಗಿದ್ದರು. ಈ ಎಲ್ಲ ಕಂಪನಿಗಳಿಗೆ ಪೋಷಕ ಕಂಪನಿಗಳನ್ನ ಹುಟ್ಟು ಹಾಕಿದ್ದೇ ಇದೇ ಮುರ್ಡೋಕ್ ಆಗಿದ್ದಾರೆ. ಇವರು 2022ರ ಪೋರ್ಬ್ಸ್ ಶ್ರೀಮಂತರ ಪಟ್ಟಿಯಲ್ಲೂ ಸ್ಥಾನ ಪಡೆದಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment