newsfirstkannada.com

NEET ಪರೀಕ್ಷೆ ಫಲಿತಾಂಶ ಪ್ರಕಟ; ಟಾಪ್ 5 ಱಂಕ್​ ಲಿಸ್ಟ್​ನಲ್ಲಿ ರಾಜ್ಯದ ಓರ್ವ ವಿದ್ಯಾರ್ಥಿ

Share :

14-06-2023

  20.38 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು

  ನೀಟ್ ಪರೀಕ್ಷೆಯಲ್ಲಿ ದಕ್ಷಿಣ ಭಾರತವೇ ಮೇಲುಗೈ

  ತಮಿಳುನಾಡು, ಆಂಧ್ರದ ಇಬ್ಬರು ವಿದ್ಯಾರ್ಥಿಗಳು ಟಾಪರ್ಸ್

ಮೆಡಿಕಲ್ ಪ್ರವೇಶ ಪರೀಕ್ಷೆಯ (NEET-UG: National Eligibility cum Entrance Test) ಫಲಿತಾಂಶ ಪ್ರಕಟವಾಗಿದೆ. ವಿಶೇಷ ಅಂದರೆ ಟಾಪ್ 5 ಱಂಕ್​ ಲಿಸ್ಟ್​ನಲ್ಲಿ ಕರ್ನಾಟಕದ ಧ್ರುವ ಅಡ್ವಾಣಿ ಇದ್ದಾರೆ. ಧ್ರುವ ಅಡ್ವಾಣಿ 720 ಕ್ಕೆ 715 ಅಂಕ ಪಡೆದು‌‌‌ ಐದನೇ ಱಂಕ್ ಪಡೆದುಕೊಂಡಿದ್ದಾರೆ.

ದಕ್ಷಿಣ ಭಾರತವೇ ಮೇಲುಗೈ

ನೀಟ್ ಎಕ್ಸಾಂನಲ್ಲಿ ಈ ಬಾರಿ ದಕ್ಷಿಣ ಭಾರತದವರು ಮೇಲುಗೈ ಸಾಧಿಸಿದ್ದಾರೆ. ಟಾಪ್ 10 ಱಂಕ್​​​ನಲ್ಲಿ ದಕ್ಷಿಣ ಭಾರತದ 6 ವಿದ್ಯಾರ್ಥಿಗಳಿದ್ದಾರೆ. ತಮಿಳುನಾಡಿನ ಪ್ರಬಂಜನ್ ಜೆ ಮತ್ತು ಆಂಧ್ರ ಪ್ರದೇಶದ ಬೋರಾ ವರುಣ್ ಚಕ್ರವರ್ತಿ ಶೇ. 99.99 ಅಂಕಗಳೊಂದಿಗೆ ಫಸ್ಟ್​ ಱಂಕ್ ಬಂದಿದ್ದಾರೆ. ಈ ಮೂಲಕ ಇಬ್ಬರೂ ಟಾಪರ್ಸ್​ ಆಗಿ ಹೊರಹೊಮ್ಮಿದ್ದಾರೆ.

ಅರ್ಹತೆ ಪಡೆದವರಲ್ಲಿ ಹೆಚ್ಚು ಉತ್ತರ ಪ್ರದೇಶದವರು

ಈ ವರ್ಷ ಒಟ್ಟು 20.38 ಲಕ್ಷ ಅಭ್ಯರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದರು. ಅವರಲ್ಲಿ 11.45 ಲಕ್ಷ ಅಭ್ಯರ್ಥಿಗಳು ಅರ್ಹತೆ ಪಡೆದುಕೊಂಡಿದ್ದಾರೆ. ಉತ್ತರ ಪ್ರದೇಶದಲ್ಲಿ ಅತಿ ಹೆಚ್ಚು ವಿದ್ಯಾರ್ಥಿಗಳು ಱಂಕ್ ಪಡೆದುಕೊಂಡಿದ್ದಾರೆ. 1.39 ಲಕ್ಷ ವಿದ್ಯಾರ್ಥಿಗಳು ಮೆಡಿಕಲ್ ಕೋರ್ಸ್​ಗೆ ಅರ್ಹತೆ ಪಡೆದುಕೊಂಡರೆ, ಮಹಾರಾಷ್ಟ್ರ (1.31 ಲಕ್ಷ) ಮತ್ತು ರಾಜಸ್ಥಾನ (1 ಲಕ್ಷಕ್ಕೂ ಹೆಚ್ಚು) ವಿದ್ಯಾರ್ಥಿಗಳು ಱಂಕ್ ಬಂದಿದ್ದಾರೆ.

ಮೇ 7 ರಂದು ನಡೆದ ಪರೀಕ್ಷೆ

NTA (National Testing Agency) ಮೇ 7 ರಂದು ನೀಟ್ ಪರೀಕ್ಷೆಯನ್ನು ನಡೆಸಿತ್ತು. ಈ ಪರೀಕ್ಷೆಯನ್ನು 13 ಭಾಷೆಗಳಲ್ಲಿ ಬರೆಯಲು ಅವಕಾಶ ಮಾಡಿಕೊಡಲಾಗಿತ್ತು. ಅಸ್ಸಾಮಿ, ಬಂಗಾಳಿ, ಇಂಗ್ಲಿಷ್, ಗುಜರಾತಿ, ಹಿಂದಿ, ಕನ್ನಡ, ಮಲಯಾಳಂ, ಮರಾಠಿ, ಒಡಿಯಾ, ಪಂಜಾಬಿ, ತಮಿಳು, ತೆಲುಗು ಮತ್ತು ಉರ್ದು ಭಾಷೆಗಳಲ್ಲಿ ಪರೀಕ್ಷೆ ನಡೆಸಲಾಗಿತ್ತು. ದೇಶದ ಹೊರಗೂ ಪರೀಕ್ಷೆಗಳು ನಡೆದಿದ್ದವು. ಅಬುಧಾಬಿ, ಬ್ಯಾಂಕಾಕ್, ಕೊಲಂಬೊ, ದೋಹಾ, ಕಠ್ಮಂಡು, ಕೌಲಾಲಂಪುರ್, ಲಾಗೋಸ್, ಮನಾಮಾ, ಮಸ್ಕತ್, ರಿಯಾದ್, ಶಾರ್ಜಾ, ಸಿಂಗಾಪುರ್ ಜೊತೆಗೆ ದುಬೈ ಮತ್ತು ಕುವೈತ್ ಸಿಟಿಯಲ್ಲೂ ಪರೀಕ್ಷೆ ನಡೆಸಲಾಗಿತ್ತು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

NEET ಪರೀಕ್ಷೆ ಫಲಿತಾಂಶ ಪ್ರಕಟ; ಟಾಪ್ 5 ಱಂಕ್​ ಲಿಸ್ಟ್​ನಲ್ಲಿ ರಾಜ್ಯದ ಓರ್ವ ವಿದ್ಯಾರ್ಥಿ

https://newsfirstlive.com/wp-content/uploads/2023/06/NEET14062023.jpg

Load More