newsfirstkannada.com

ಯೂಟ್ಯೂಬ್​​ ನೋಡಿ 6 ಬಾರಿ ಟ್ರೀಟ್ಮೆಂಟ್.. ಇಂಜೆಕ್ಷನ್ ಕೊಟ್ಟು 10 ಸಾವಿರ ಪೀಕಿದ್ರಂತೆ ಮೆಡಿಕಲ್ ಓನರ್..!

Share :

Published January 16, 2024 at 2:56pm

Update January 16, 2024 at 2:58pm

    ಯೂಟ್ಯೂಬ್​ ನೋಡಿ ಟ್ರೀಟ್ಮೆಂಟ್ ಕೊಡ್ತಾರೆ ಹುಷಾರು

    ಬೆಂಗಳೂರಲ್ಲಿ ಮೆಡಿಕಲ್ ಮಾಲೀಕನಿಂದ ಸುಲಿಗೆ

    ಸ್ಥಳೀಯರಿಂದ ತರಾಟೆ, ಪೊಲೀಸರಿಗೆ ಹಸ್ತಾಂತರ

ಬೆಂಗಳೂರು: ಮೆಡಿಕಲ್ ಮಾಲೀಕನೊಬ್ಬ ರೋಗಿಗೆ ಯೂಟ್ಯೂಬ್ ಮೂಲಕ ಟ್ರೀಟ್​​​ಮೆಂಟ್ ಕೊಟ್ಟು 10 ಸಾವಿರ ರೂಪಾಯಿ ವಸೂಲಿ ಮಾಡಿದ ಆರೋಪ ಕೇಳಿಬಂದಿದೆ. ಅಶ್ವಥ್ ನಗರದಲ್ಲಿರುವ ಮೆಡ್ ಜೋನ್ ಮೆಡಿಕಲ್ ಸ್ಟೋರ್​​ನ ಮಾಲೀಕ ಮಹೇಶ್ ಕುಮಾರ್ ವಿರುದ್ಧ ಈ ಆರೋಪ ಇದೆ.

ಏನಿದು ಆರೋಪ..?

ಕಾಲಿಗೆ ಏಟು ಮಾಡಿಕೊಂಡಿದ್ದ ಬಿಹಾರದ ಕಾರ್ಮಿಕರೊಬ್ಬರಿಗೆ ಮಹೇಶ್ ಕುಮಾರ್ ಮೆಡಿಕಲ್​​ಗೆ ಕರೆಸಿಕೊಂಡು ಟ್ರೀಟ್ಮೆಂಟ್ ನೀಡಿದ್ದಾರಂತೆ. ಯೂಟ್ಯೂಬ್ ನೋಡಿಕೊಂಡು ಇಂಜೆಕ್ಷನ್ ಹಾಗೂ ಬ್ಯಾಂಡೇಜ್ ಹಾಕಿದ್ದಾರಂತೆ. ಅದು ಒಂದಲ್ಲ, ಎರಡಲ್ಲ ಬರೋಬ್ಬರಿ 6 ಬಾರಿ ಇದೇ ರೀತಿ ಟ್ರೀಟ್ಮೆಂಟ್ ಮಾಡಿ 10 ಸಾವಿರ ರೂಪಾಯಿ ವಸೂಲಿ ಮಾಡಿದ್ದಾರೆ ಎಂಬ ಆರೋಪ ಇದೆ.
ಇದು ಅಲ್ಲಿನ ಸ್ಥಳೀಯರ ಗಮನಕ್ಕೆ ಬಂದಿದೆ.

ಕಾಲು ನೋವಿಗೆ ಎಂದು ಇಂಜೆಕ್ಷನ್ ಕೊಟ್ಟು, ಕಾಲಿಗೆ ಬ್ಯಾಂಡೇಜ್ ಕಟ್ಟುತ್ತಿದ್ದನ್ನು ಸ್ಥಳೀಯರು ಗಮನಿಸಿದ್ದಾರೆ. ಈ ವೇಳೆ ಅಲ್ಲಿಗೆ ಪೊಲೀಸರೊಂದಿಗೆ ಸ್ಥಳೀಯರು ಆಗಮಿಸಿ, ಮೆಡಿಕಲ್ ಮಾಲೀಕನನ್ನು ರೆಡ್​ಹ್ಯಾಂಡ್ ಆಗಿ ಹಿಡಿದಿದ್ದಾರೆ. ಕೊನೆಗೆ ಸಂಜಯನಗರ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ವಾರ್ನ್ ಮಾಡಿ ಕಳುಹಿಸಿದ್ದಾರೆ ಎನ್ನಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಯೂಟ್ಯೂಬ್​​ ನೋಡಿ 6 ಬಾರಿ ಟ್ರೀಟ್ಮೆಂಟ್.. ಇಂಜೆಕ್ಷನ್ ಕೊಟ್ಟು 10 ಸಾವಿರ ಪೀಕಿದ್ರಂತೆ ಮೆಡಿಕಲ್ ಓನರ್..!

https://newsfirstlive.com/wp-content/uploads/2024/01/BNG-MED.jpg

Load More