newsfirstkannada.com

ಬಾಲಿವುಡ್​ನಲ್ಲಿ ಮದುವೆ ಸೀಸನ್.. ಪ್ರಿಯಾಂಕ ಚೋಪ್ರಾ ತಂಗಿಯ ವಿವಾಹಕ್ಕೆ ಡೇಟ್ ಫಿಕ್ಸ್..!

Share :

Published February 29, 2024 at 7:38am

    ರಾಕುಲ್ ಪ್ರೀತ್ ಮದ್ವೆ ಬೆನ್ನಲ್ಲೇ ಮತ್ತೋರ್ವ ನಟಿ ಮದ್ವೆ ಆಗಲು ರೆಡಿ

    ಮೀರಾ ಚೋಪ್ರಾ ಕೈಹಿಡಿಯುವ ವರನ ಬಗ್ಗೆ ಇರುವ ಮಾಹಿತಿ ಏನು?

    ಪಿಂಕ್ ಸಿಟಿಯಲ್ಲಿ ಮದುವೆ, 150 ಗಣ್ಯರಿಗೆ ಮಾತ್ರ ಹೋಗಿದೆ ಆಹ್ವಾನ

ಬಾಲಿವುಡ್‌ನಲ್ಲಿ ಮದುವೆಯ ಸೀಸನ್ ಶುರುವಾಗಿದೆ. ಇತ್ತೀಚೆಗೆ ಬಾಲಿವುಡ್ ನಟಿ ರಾಕುಲ್ ಪ್ರೀತ್-ಜಾಕಿ ಭಗ್ನಾನಿ ಮದುವೆಯಾದರು. ಇದೀಗ ಪ್ರಿಯಾಂಕಾ ಚೋಪ್ರಾ ಅವರ ಸಹೋದರಿ ಮೀರಾ ಚೋಪ್ರಾ ಮದುವೆಗೆ ಸಂಬಂಧಿಸಿದ ಚರ್ಚೆಗಳು ಜೋರಾಗಿ ನಡೆಯುತ್ತಿದೆ.

ನಟಿ ಮೀರಾ ಚೋಪ್ರಾ ಮುಂದಿನ ತಿಂಗಳು ಮದುವೆಯಾಗಲು ರೆಡಿಯಾಗಿದ್ದಾರೆ. ಅದ್ದೂರಿ ಮದುವೆ ಸಮಾರಾಂಭವು ಪಿಂಕ್ ಸಿಟಿ ಜೈಪುರದಲ್ಲಿ ನಡೆಯಲಿದೆ. ಜೈಪುರ-ದೆಹಲಿ ಹೆದ್ದಾರಿ ಬಳಿಯಿರುವ ಐಷಾರಾಮಿ ರೆಸಾರ್ಟ್‌ನಲ್ಲಿ ನಟಿಯ ವಿವಾಹ ಮತ್ತು ಪ್ರೀ ವೆಡ್ಡಿಂಗ್ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಮೀರಾ ಚೋಪ್ರಾ ಮದುವೆಯು ಮಾರ್ಚ್ 11 ಮತ್ತು 12 ರಂದು ನಡೆಯಲಿದೆ. ಈ ಮದುವೆಗೆ ವಿಶೇಷ ಅತಿಥಿಗಳನ್ನು ಮಾತ್ರ ಆಹ್ವಾನಿಸಲಾಗಿದೆ. ಕೇವಲ 150 ಅತಿಥಿಗಳಿಗೆ ಮಾತ್ರ ಆಮಂತ್ರಣ ಕಳುಹಿಸಲಾಗಿದೆ.

ಹಿಂದೂ ಸಂಪ್ರದಾಯದಂತೆ ಮದುವೆ
ಮೀರಾ ಚೋಪ್ರಾ ಮದುವೆ ಹಿಂದೂ ಸಂಪ್ರದಾಯದಂತೆ ನಡೆಯಲಿದೆ. ಮದುವೆಗಾಗಿ ಮೀರಾ ತಮ್ಮ ಕುಟುಂಬದೊಂದಿಗೆ ಮಾರ್ಚ್ 9 ರಂದು ಜೈಪುರ ತಲುಪಲಿದ್ದಾರೆ. ತಮ್ಮ ಜೀವನದ ಅತ್ಯಂತ ವಿಶೇಷ ದಿನವನ್ನು ಸ್ಮರಣೀಯವಾಗಿಸಲು ಸಿದ್ಧತೆ ನಡೆಸ್ತಿದ್ದಾರೆ.

ಮೀರಾ ವರ ಯಾರು?
ಮೀರಾ ಚೋಪ್ರಾ ಸಂಗಾತಿಯ ಬಗ್ಗೆ ಸದ್ಯಕ್ಕೆ ಮಾಹಿತಿ ಇಲ್ಲ. ಮೀರಾ ತಮ್ಮ ಗಂಡನಾಗಲಿರುವ ವ್ಯಕ್ತಿಯ ಬಗ್ಗೆ ಸಸ್ಪೆನ್ಸ್ ಮೆಂಟೇನ್ ಮಾಡಿದ್ದಾರೆ. ಕೆಲವು ಊಹೆಗಳ ಪ್ರಕಾರ ಅವರೊಬ್ಬ ಉದ್ಯಮಿ ಎಂದು ಹೇಳಲಾಗಿದೆ. ಮದುವೆ ದಿನ ರಿವೀಲ್ ಆಗಲಿರುವ ಚಿತ್ರಗಳು ಮಾತ್ರ ಮೀರಾ ವರ ಯಾರು ಅನ್ನೋದು ಗೊತ್ತಾಗಲಿದೆ.

ಮೀರಾ ಚೋಪ್ರಾ ವೃತ್ತಿಜೀವನ
ಮೀರಾ ಅನೇಕ ದೊಡ್ಡ ಪ್ರಾಜೆಕ್ಟ್​​ಗಳಲ್ಲಿ ಕೆಲಸ ಮಾಡಿದ್ದಾರೆ. ನಟಿ ‘1920 ಲಂಡನ್’, ‘ಸೆಕ್ಷನ್ 375’ ಮತ್ತು ‘ಕಾಮಾತಿಪುರ’ ನಂತಹ ಹಿಟ್ ಚಿತ್ರಗಳಲ್ಲಿ ನಟಿಸಿದ್ದಾರೆ. ಸಫೇದ್ ಚಿತ್ರ ಕೂಡ ಶೀಘ್ರದಲ್ಲೇ ದೊಡ್ಡ ಪರದೆಯಲ್ಲಿ ಬಿಡುಗಡೆಯಾಗಲು ಸಿದ್ಧವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಾಲಿವುಡ್​ನಲ್ಲಿ ಮದುವೆ ಸೀಸನ್.. ಪ್ರಿಯಾಂಕ ಚೋಪ್ರಾ ತಂಗಿಯ ವಿವಾಹಕ್ಕೆ ಡೇಟ್ ಫಿಕ್ಸ್..!

https://newsfirstlive.com/wp-content/uploads/2024/02/MEERA-CHOPRA.jpg

Load More