ಗಡ್ಡಧಾರಿ ಗಂಡನ ಬಿಟ್ಟು ಕ್ಲೀನ್ ಶೇವ್‌ ವ್ಯಕ್ತಿಯ ಜೊತೆ ಓಡಿ ಹೋದ ಮಹಿಳೆ; 3 ತಿಂಗಳ ಬಳಿಕ ಏನಾಯ್ತು?

author-image
admin
Updated On
ಗಡ್ಡಧಾರಿ ಗಂಡನ ಬಿಟ್ಟು ಕ್ಲೀನ್ ಶೇವ್‌ ವ್ಯಕ್ತಿಯ ಜೊತೆ ಓಡಿ ಹೋದ ಮಹಿಳೆ; 3 ತಿಂಗಳ ಬಳಿಕ ಏನಾಯ್ತು?
Advertisment
  • ಮದುವೆಯಾದ ಕೆಲವೇ ದಿನಗಳಲ್ಲಿ ಗಡ್ಡ ಬಿಟ್ಟಿದ್ದು ಇಷ್ಟವಾಗಲಿಲ್ಲ
  • ಮೊದಲ ರಾತ್ರಿಯಿಂದಲೇ ಕ್ಲೀನ್ ಶೇವ್ ಮಾಡಲು ಕೇಳಿದ ಮಹಿಳೆ
  • 3 ತಿಂಗಳಿಂದ ಅರ್ಶಿಗಾಗಿ ಹುಡುಕಾಟ ನಡೆಸಿ ಸುಸ್ತಾಗಿದ್ದ ಗಡ್ಡಧಾರಿ

ಉತ್ತರಪ್ರದೇಶದ ಮೀರತ್ ಮತ್ತೊಮ್ಮೆ ದೇಶಾದ್ಯಂತ ಸುದ್ದಿಯಾಗಿದೆ. ಇತ್ತೀಚೆಗೆ ಮೀರತ್‌ನ ಮಹಿಳೆ ಗಂಡನ ಸಾಯಿಸಿ ನೀಲಿ ಡ್ರಮ್‌ನಲ್ಲಿ ಬಚ್ಚಿಟ್ಟಿದ್ದು ಸಂಚಲನ ಸೃಷ್ಟಿಸಿತ್ತು. ಇದೀಗ ಗಡ್ಡಧಾರಿ ಗಂಡನ ಬಿಟ್ಟು ಹೋದ ಮಹಿಳೆ 3 ತಿಂಗಳ ಬಳಿಕ ವಾಪಸ್ ಬಂದು ಶಾಕ್ ಕೊಟ್ಟಿದ್ದಾಳೆ.

7 ತಿಂಗಳ ಹಿಂದೆ ಅರ್ಶಿ ಅನ್ನೋ ಈ ಮಹಿಳೆ ಶಾಕಿರ್‌ನನ್ನು ಮದುವೆಯಾಗಿದ್ದಳು. ಮದುವೆಯಾದ ಕೆಲವೇ ದಿನಗಳಲ್ಲಿ ಶಾಕಿರ್ ಗಡ್ಡ ಬಿಟ್ಟಿದ್ದು ಅರ್ಶಿ ಇಷ್ಟವಿರಲಿಲ್ಲ. ಮೊದಲ ರಾತ್ರಿಯಿಂದಲೇ ಅರ್ಶಿ ತನ್ನ ಗಂಡನಿಗೆ ಗಡ್ಡ ತೆಗೆದು ಕ್ಲೀನ್ ಶೇವ್ ಮಾಡಲು ಹೇಳುತ್ತಿದ್ದಳಂತೆ. ಪದೇ ಪದೇ ಕೇಳಿದರೂ ಶಾಕಿರ್ ಗಡ್ಡ ತೆಗೆಯದ ಹಿನ್ನೆಲೆಯಲ್ಲಿ ಶಾಕಿರ್ ತಮ್ಮ ಸಬೀರ್ ಜೊತೆ ಅರ್ಶಿ ಮನೆ ಬಿಟ್ಟು ಹೋಗಿದ್ದಾಳೆ ಎನ್ನಲಾಗಿದೆ.

publive-image

ಶಾಕಿರ್ ತಮ್ಮ ಸಬೀರ್ ಕ್ಲೀನ್ ಶೇವ್ ಮಾಡುತ್ತಿದ್ದು ಅರ್ಶಿಯ ಮನಗೆದ್ದಿದ್ದಾನೆ. ಬಾಮೈದನ ಜೊತೆ ಸಲುಗೆಯಿಂದ ಇದ್ದ ಅರ್ಶಿ ಕೊನೆಗೆ ಗಡ್ಡಧಾರಿ ಗಂಡನ ಬಿಟ್ಟು ಹೋಗಿದ್ದಾಳೆ. 3 ತಿಂಗಳ ಬಳಿಕ ವಾಪಸ್ ಬಂದಿರುವ ಅರ್ಶಿ ನನ್ನ ಗಂಡ ಶಕ್ತಿಹೀನನಾಗಿದ್ದಾನೆ. ಅವನ ಜೊತೆ ನಾನು ಸಂಸಾರ ಮಾಡಲು ಸಾಧ್ಯವಿಲ್ಲ. ಹೀಗಾಗಿ ಬಾಮೈದ ಸಬೀರ್ ಜೊತೆ ಶಾದಿ ಮಾಡುವಂತೆ ಮನವಿ ಮಾಡುತ್ತಿದ್ದಾಳೆ.

ಇದನ್ನೂ ಓದಿ: ಬಿಗ್ ಬಾಸ್ ಮಾಜಿ ಸ್ಪರ್ಧಿ, ನಟಿ ಲಾಸ್ಯ ನಾಗರಾಜ್‌ ತಾಯಿ ಮೇಲೆ ಮಾರಣಾಂತಿಕ ಹಲ್ಲೆ; ಆಗಿದ್ದೇನು? 

ಗಡ್ಡವೇ ಈಗ ಶಾಕಿರ್ ಬದುಕಿಗೆ ಗಂಡಾಂತರವಾಗಿದೆ. ಕಳೆದ 3 ತಿಂಗಳಿಂದ ಅರ್ಶಿಗಾಗಿ ಹುಡುಕಾಟ ನಡೆಸಿ ಸುಸ್ತಾಗಿದ್ದ. ಕೊನೆಗೆ ಹೆಂಡತಿ ನಾಪತ್ತೆಯಾದ ಪ್ರಕರಣವನ್ನು ಪೊಲೀಸ್ ಠಾಣೆಯಲ್ಲಿ ದಾಖಲಿಸಿದ್ದ. ಇದೀಗ ಅರ್ಶಿ ವಾಪಸ್ ಬಂದಿದ್ದಾಳೆ.

ಅರ್ಶಿ ಹೇಳಿದ್ದೇನು?
ಗಡ್ಡಧಾರಿ ಗಂಡನ ಮೇಲೆ ಆರೋಪ ಮಾಡುತ್ತಿರುವ ಅರ್ಶಿ ಪೊಲೀಸರ ಮುಂದೆ ಡಿವೋರ್ಸ್‌ ಕೇಳಿದ್ದಾಳೆ. ಅಲ್ಲದೇ ತನ್ನ ಗಂಡ 5 ಲಕ್ಷ ರೂಪಾಯಿ ವರದಕ್ಷಿಣೆ ಪಡೆದುಕೊಂಡಿದ್ದಾನೆ. ಅದರಲ್ಲಿ ಎರಡೂವರೆ ಲಕ್ಷ ರೂಪಾಯಿಯನ್ನು ವಾಪಸ್ ಕೊಡಬೇಕು ಎಂದು ಪಟ್ಟು ಹಿಡಿದಿದ್ದಾಳೆ. ತನ್ನ ಉಳಿದ ಬದುಕನ್ನು ಶಾಕಿರ್ ತಮ್ಮ ಸಬೀರ್‌ ಜೊತೆಗೆ ಕಳೆಯುವುದಾಗಿ ಅರ್ಶಿ ಸ್ಪಷ್ಟಪಡಿಸಿದ್ದಾಳೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment