/newsfirstlive-kannada/media/post_attachments/wp-content/uploads/2024/10/ANURADHA-MAHINDRA-2.jpg)
ಮಹಿಂದ್ರ ಅಂಡ್ ಮಹಿಂದ್ರ ಕಂಪನಿಯ ಚೇರ್ಮನ್, ಕೋಟ್ಯಾಧಿಪತಿ ಆನಂದ್ ಮಹಿಂದ್ರ ಹೆಸರು ಯಾರಿಗೆ ತಾನೆ ಗೊತ್ತಿಲ್ಲ ಹೇಳಿ? ಅವರು ಇಂದಿಗೂ ತಮ್ಮ ವಿಶೇಷ ಪೋಸ್ಟ್ಗಳೊಂದಿಗೆ ಸೋಷಿಯಲ್ ಮಿಡಿಯಾದಲ್ಲಿ ಆ್ಯಕ್ಟಿವ್ ಆಗಿಯೇ ಇದ್ದಾರೆ. ದುಡಿಯುವ ಹುಮ್ಮನಸ್ಸುಗಳಿಗೆ ನೆರವಾಗುತ್ತಾ ಹಲವರಿಗೆ ಪ್ರೇರಣೆಯಾಗಿದ್ದಾರೆ. ಅವರ ಒಂದು ಪೋಸ್ಟ್ ಅದೆಷ್ಟೋ ದಿನಗಳ ಕಾಲ ಟ್ರೆಂಡಿಂಗ್ನಲ್ಲಿಯೇ ಇರುತ್ತೆ. ಆನಂದ್ ಮಹಿಂದ್ರ ಅವರ ಬಗ್ಗೆ ಎಲ್ಲರಿಗೂ ಗೊತ್ತು. ಆದ್ರೆ ಅವರ ಕುಟುಂಬ ಅಂದ್ರೆ ಅವರ ಪತ್ನಿ, ಅವರ ಮಕ್ಕಳ ಬಗ್ಗೆ ಬಹುತೇಕರಿಗೆ ಗೊತ್ತಿಲ್ಲ. ನಿಮಗೆ ಗೊತ್ತಿರಲಿ ಆನಂದ್ ಮಹಿಂದ್ರ ಅವರದು ಪಕ್ಕಾ ಲವ್ ಮ್ಯಾರೆಜ್. ತಮ್ಮ ಪ್ರೇಯಸಿಗೆ ಅವರು ಅಕ್ಷರಶಃ ಸಿನಿಮಾ ಶೈಲಿಯಲ್ಲಿಯೇ ಪ್ರೇಮ ನಿವೇದನೆ ಮಾಡಿದ್ದು ಅಂದ್ರೆ ನೀವು ನಂಬಲೇಬೇಕು.
ಯಾರು ಆನಂದ ಮಹಿಂದ್ರಾರ ಪತ್ನಿ
ಆನಂದ್ ಮಹಿಂದ್ರ ಅವರ ಪತ್ನಿಯ ಹೆಸರು ಅನುರಾಧ, ಕೇವಲ ಈ ಕೋಟ್ಯಾಧಿಪತಿಯ ಪತ್ನಿಯಾಗಿ ಮಾತ್ರ ಜಗತ್ತಿಗೆ ಪರಿಚಯವಾದವರಲ್ಲ. ಅವರೊಬ್ಬರು ಯಶಸ್ವಿ ಪತ್ರಕರ್ತೆಯೂ ಕೂಡ ಹೌದು. ಅವರು ಈ ಹಿಂದೆ ವೆರ್ವ್ ಎಂಬ ನಿಯತಕಾಲಿಕೆಯಲ್ಲಿ ತಮ್ಮದೊಂದು ಹೆಸರು ಗುರುತಿಸಿಕೊಂಡವರು. ಮುಂದೆ ಮ್ಯಾನ್ಸ್ ವರ್ಲ್ಡ್ ಮ್ಯಾಗ್ಜಿನ್ನಲ್ಲಿಯೂ ಕೂಡ ಪ್ರೊಡಕ್ಷನ್ ವಿಭಾಗವನ್ನು ನಿಭಾಯಿಸಿದವರು.
ಇದನ್ನೂ ಓದಿ:6 ವರ್ಷ ಡೇಟಿಂಗ್..! ರೋಹಿತ್ ಲೈಫ್ ಸ್ಟೈಲ್ ಹಿಂದಿನ ಸೂತ್ರಧಾರಿ ಈಕೆ..! Photo
ಮುಂಬೈನಲ್ಲಿ ಜನಿಸಿದ ಅನುರಾಧ ಮಹಿಂದ್ರ ಅವರು ಸೊಪಿಯಾ ಕಾಲೇಜ್ನಲ್ಲಿ ಓದಿದವರು. ಅವರು ತಮ್ಮ 17ನೇ ವಯಸ್ಸಿನಲ್ಲಿಯೇ ಮೊದಲು ಆನಂದ ಮಹಿಂದ್ರಾರರನ್ನು ಭೇಟಿಯಾಗಿದ್ದರು. ಆನಂದ ಮಹಿಂದ್ರಾ ಅವರು ತಮ್ಮದೊಂದು ಫಿಲ್ಮ್ ಪ್ರಾಜೆಕ್ಟ್ನ್ನು ಮುಗಿಸುವ ವೇಳೆ ಎರಡನೇ ಬಾರಿ ಅನುರಾಧರನ್ನ ಇಂದೋರ್ನಲ್ಲಿ ಭೇಟಿಯಾದರು. ಆನಂದ್ ಮಹಿಂದ್ರಾ ಆ ವೇಳೆ ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಫಿಲ್ಮ್ಮೇಕಿಂಗ್ ಅಂಡ್ ಆರ್ಕಿಟೆಕ್ಚರ್ ಕೋರ್ಸ್ ಕಲಿಯುತ್ತಿದ್ದರು. ಇದೇ ವೇಳೆ ಇಂದೋರ್ನಲ್ಲಿ ಮತ್ತೊಮ್ಮೆ ಅನುರಾಧರನ್ನು ಕಣ್ತುಂಬಿಕೊಂಡ ಆನಂದ ಮಹಿಂದ್ರ ಅವರಿಗೆ ಅವರ ಪ್ರೀತಿಯಲ್ಲಿ ಬೀಳಲು ಹೆಚ್ಚು ಸಮಯ ಹಿಡಿಯಲಿಲ್ಲ.
ಇದನ್ನೂ ಓದಿ: Inspiring story: ಅಂದು ಗೋಪಾಲಕನಾಗಿ ತಿಂಗಳಿಗೆ 80 ರೂ ಸಂಬಳ.. ಇಂದು ವರ್ಷಕ್ಕೆ 8 ಕೋಟಿ ಸಂಪಾದನೆ..!
ಒಂದು ದಿನ ಅಕ್ಷರಶಃ ಸಿನಿಮಾ ಶೈಲಿಯಲ್ಲಿ ತಮ್ಮ ಪ್ರೇಮ ನಿವೇದನೆಯನ್ನು ಅನುರಾಧ ಎದುರಿಗೆ ಮಾಡಿಕೊಂಡರು ಆನಂದ್. ತಮ್ಮ ತಾಯಿಯ ಉಂಗುರವನ್ನು ಅನುರಾಧಾ ಅವರಿಗೆ ನೀಡಿ ಪ್ರಪೋಸ್ ಮಾಡಿದ ಮೇಲೆ ಈ ಜೋಡಿ ಮುಂದೆ ಆತ್ಮಸಂಗಾತಿಗಳಾಗಿ ಬಾಳಲು ನಿರ್ಧಾರ ಮಾಡಿತು. 1985, ಜೂನ್ 17ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟ ಈ ಜೋಡಿ, ಹೊಸ ಬದುಕು ಸಾಗಿಸಲು ಅಮೆರಿಕಾಗೆ ಹಾರಿತು
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ