/newsfirstlive-kannada/media/post_attachments/wp-content/uploads/2024/11/FASHION-ICON-GRANDMAA.jpg)
ಬದುಕನ್ನು ಪ್ರೀತಿಸಲು, ಉಲ್ಲಾಸದಿಂದ ಬದಕಲು, ಪ್ರತಿ ನಿಮಿಷವನ್ನೂ ನಮ್ಮದೇ ಎಂದು ಉತ್ಕಟವಾಗಿ ಬದುಕುವುದಕ್ಕೆ ವಯಸ್ಸಿನ ಹಂಗಿರುವುದಿಲ್ಲ. ಜೀವನ ಸವಿಯಲು ನಾವು ಹೆಚ್ಚೇನು ಮಾಡಬೇಕಿಲ್ಲ ನಮ್ಮನ್ನು ನಾವು ಉತ್ಕಟವಾಗಿ, ಅದಮ್ಯವಾಗಿ ಪ್ರೀತಿಸಬೇಕು. ಬದುಕಿನ ಪ್ರತಿ ಹೆಜ್ಜೆಯನ್ನು ಸಂತಸದಿಂದಲೇ ಸ್ವೀಕರಿಸಬೇಕು. ಅದು ಎಲ್ಲರಿಗೂ ಸರಳವಾಗಿ ಒಲಿಯುವುದಿಲ್ಲ. ಒಲಿದವರು ಎಲ್ಲವನ್ನೂ ಕಳೆದುಕೊಂಡಂತೆ ಎಂದಿಗೂ ಕುಳಿತುಕೊಳ್ಳುವುದಿಲ್ಲ ಅದಕ್ಕೆ ಜೀವಂತ ಸಾಕ್ಷಿಯಾಗಿ ನಿಂತಿದ್ದಾರೆ ಜಾಂಬಿಯಾದ ಈ 80ರ ಹರೆಯದ ವೃದ್ಧೆ
ಹೆಸರು ಮಾರ್ಗರೇಟ್ ಚೋಲಾ.
ಒಂದು ಕಟ್ಟಿಗೆ ಚೇರು ಹಾಕಿ ಅದರ ಮೇಲೆ ಕಾಲು ಮೇಲೆ ಕಾಲು ಹಾಕಿಕೊಂಡು, ಕಣ್ಣಿಗೆ ಒಂದು ಚಂಕಿ ಗ್ಲಾಸ್ ಹಾಕಿಕೊಂಡು ಕುಳತಿಕೊಂಡರೇ ಮುಗೀತು.ಇಡೀ ಫ್ಯಾಶನ್ ಎಂಬ ಫ್ಯಾಶನ್ ಲೋಕವೇ ಈ ವೃದ್ಧೆಯ ಕಾಲಡಿ ಬಂದು ಬೀಳಬೇಕು ಅಂತಹ ಲುಕ್ನಲ್ಲಿ ಮಿಂಚುತ್ತಾರೆ ಮಾರ್ಗರೇಟ್ ಚೋಲಾ ಜಾಂಬಿಯಾದ ತಮ್ಮದೇ ಆದ ಒಂದು ವಿಲಕ್ಷಣ ಮನೆಯಲ್ಲಿ ವಾಸಿಸುತ್ತಾರೆ. ತಮ್ಮ 80ನೇ ವಯಸ್ಸಿನಲ್ಲಿ ಫ್ಯಾಶನ್ ಲೋಕವನ್ನೇ ಆಳುತ್ತಿದ್ದಾರೋ ಎನೋ ಎಂಬ ಮಟ್ಟದಲ್ಲಿ ಅವರ ಕಾಸ್ಟ್ಯೂಮ್ಗಳು ಇರುತ್ತವೆ, ಒಂದೇ ಒಂದು ಫೋಟೋ ಇನ್ಸ್ಟಾಗ್ರಾಂನಲ್ಲಿ ಅಪ್ ಆದ್ರೆ ಸಾಕು ಅದಕ್ಕೆ ಲಕ್ಷಾಂತರ ಲೈಕ್ಸ್ಗಳು ಹರಿದು ಬರುತ್ತವೆ. ಇವರಿಗೆ ಇರುವ ಫಾಲೋವರ್ಸ್ಗಳ ಸಂಖ್ಯೆಯೇ 1 ಲಕ್ಷ 13 ಸಾವಿರರದಷ್ಟು.
ಇವರ ಜನಪ್ರೀಯತೆ ಎಷ್ಟರ ಮಟ್ಟಿಗೆ ಇದೆ ಅಂದ್ರೆ. ಅಂತಾರಾಷ್ಟ್ರೀಯ ಸುದ್ದಿ ಮಾಧ್ಯಮಗಳೇ ಇವರನ್ನು ಸಂದರ್ಶನ ಮಾಡಿವೆ. ಸಂದರ್ಶನದಲ್ಲಿ ಮಾರ್ಗರೇಟ್ ಹೇಳೋದು ಅದೇ ಜೀವನ ಪ್ರೀತಿ. ನಾನು ಈ ರೀತಿಯ ಉಡುಗೆ ತೊಡುಗೆಗಳನ್ನು ಹಾಕಿಕೊಳ್ಳುವುದರಿಂದ ನನ್ನನ್ನು ನಾನು ಉಳಿದವರಿಗಿಂತ ಭಿನ್ನ ಎಂದುಕೊಳ್ಳುವಂತಹ ಭಾವ ಬರುತ್ತದೆ. ನಾನು ಈ ಇಂತಹ ಬಟ್ಟೆಗಳನ್ನು ತೊಟ್ಟುಕೊಳ್ಳುತ್ತಾ ಮತ್ತಷ್ಟು ಮತ್ತಷ್ಟು ಜೀವಂತಗೊಳ್ಳುತ್ತೇನೆ ಎಂದು ಹೇಳಿದ್ದಾರೆ.
ಇದನ್ನೂ ಓದಿ:1000 ರೂಪಾಯಿ ಹೂಡಿಕೆ ಮಾಡಿ ಲಕ್ಷ ಲಕ್ಷ ಗಳಿಸುತ್ತಿರುವ ಮಹಿಳೆ! ಇದು ಗೃಹಿಣಿಯೊಬ್ಬಳ ಯಶೋಗಾಥೆ
ಅಜ್ಜಿಯಂದಿರು ಯಾವತ್ತಿಗೂ ಮೊಮ್ಮಕ್ಕಳಿಗೆ ಚೀಯರ್ ಲೀಡರ್ಸ್. ಅದರಲ್ಲೂ ಮೊಮ್ಮಕ್ಕಳ ಆಸೆಯನ್ನು ಈಡೇರಿಸಲು ಅವರಿಗೆ ಎಲ್ಲಿಲ್ಲದ ಪ್ರೀತಿ. ಇದೇ ಮಾರ್ಗೆರೇಟ್ ಬದುಕಿನಲ್ಲೂ ಆಗಿದ್ದು. ತನ್ನ ಮೊಮ್ಮಗಳು ಡಿಯಾನಾ ಕುಂಬಾ ನ್ಯೂಯಾರ್ಕ್ ಮೂಲದ ಸ್ಟೈಲಿಸ್ಟ್. 2023ರಲ್ಲಿ ತನ್ನ ತಂದೆಯ ಎರಡನೇ ಪುಣ್ಯ ತಿಥಿಗೆ ಬಂದಾಗ ಅಜ್ಜಿಯನ್ನು ಹೊಸ ಅವತಾರದಲ್ಲಿ ನೋಡಲು ಇಷ್ಟಪಟ್ಟು ಹೊಸ ಹೊಸ ಬಗೆಯ ಕಾಸ್ಟ್ಯೂಮ್ ಹಾಕಿ ಖುಷಿ ಪಟ್ಟರು. ಅದು ಪ್ರತಿ ಹದಿನೈದು ದಿನಗಳಿಗೊಮ್ಮೆ ಶುರುವಾಯ್ತು. ಅಜ್ಜಿಯ ಫೋಟೋ ಅವರದೇ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಲು ಶುರುವಾಯ್ತು. ಅಜ್ಜಿಯ ಹೊಸ ಹೊಸ ಅವತಾರಗಳಿಗೆ ನೆಟ್ಟಿಗರು ಫಿದಾ ಆದರೂ. ಫಾಲೋವರ್ಸ್ಗಳ ಸಾಗರವೇ ಹರಿದು ಬಂತು.
ಮೊಮ್ಮಗಳ ಆಸೆಗೆ ನಾನೆಂದೂ ವಿರೋಧ ಮಾಡಿಲ್ಲ. ನಿನಗಿಷ್ಟ ಬಂದಂತೆ ನನ್ನ ರೆಡಿ ಮಾಡು ಕಂದ ಅಂತಷ್ಟೇ ಹೇಳಿದ್ದೇನೆ ನಾನುಟ್ಟ ಮೊದಲ ಸಿಲ್ವರ್ ಪ್ಯಾಂಟ್ ಸೂಟ್ ಸೋಷಿಯಲ್ ಮೀಡಿಯಾದಲ್ಲಿ ಮೊದಲ ಬಾರಿ ದೊಡ್ಡ ಸದ್ದು ಮಾಡಿತು. ನನ್ನನ್ನು ಜನರು ಫ್ಯಾಶನ್ ಐಕಾನ್ ರೀತಿ ಗುರುತಿಸಿದರು ಅಲ್ಲಿಂದ ಈ ಪ್ರಯಾಣ ಇಲ್ಲಿಯವರೆಗೆ ಬಂದು ನಿಂತಿದೆ ಎಂದು ಹೇಳುತ್ತಾರೆ.
ಇದನ್ನೂ ಓದಿ:ಕೋಳಿ ಮುಂಜಾನೆ ಯಾಕೆ ಕೂಗುತ್ತದೆ..? ನಿಮಗೆ ಗೊತ್ತಾ ಈ ಅಚ್ಚರಿ ವಿಚಾರಗಳು..?
ಅವರ ಮೊಮ್ಮಗಳು ಕುಂಬುವಾ ನಾನು ನನ್ನ ಅಜ್ಜಿಯನ್ನು ಚೆನ್ನಾಗಿ ಡ್ರೆಸ್ ಮಾಡಿಸಿ ಕಣ್ತುಂಬಿಕೊಳ್ಳಬೇಕು ಎಂದು ಮೊದಲ ಬಾರಿ ಆಕೆಯನ್ನು ರೆಡಿ ಮಾಡಿ ಫೋಟೋ ತೆಗೆದು ಇನ್ಸ್ಟಾದಲ್ಲಿ ಹಾಕಿದೆ. ಅವಳ ಮೊಬೈಲ್ನಲ್ಲಿ ಸುಮಾರು 1 ಸಾವಿರ ಲೈಕ್ಸ್ಗಳು ಕೆಲವೇ ಗಂಟೆಗಳಲ್ಲಿ ಹರಿದು ಬಂದವು ಆಗ ನನ್ನ ಮನಸಲ್ಲಿ ಹೊಳೆದಿದ್ದು ನನ್ನ ಅಜ್ಜಿಯನ್ನು ಫ್ಯಾಶನ್ ಐಕಾನ್ ಆಗಿ ಮಾಡಬೇಕು ಎಂದು ಅಂದಿನಿಂದ ಶುರುವಾದ ಫೋಟೋಶೂಟ್ ಇಂದಿಗೂ ಕೂಡ ನಡೆಯುತ್ತಾ ಬಂದಿದೆ. ಆಕೆಗೆ ನಿತ್ಯ ಖುಷಿಯಿಂದ ಎದ್ದೇಳಲು ಇದೊಂದು ಪ್ರಮುಖ ಕಾರಣವಾಗಿದೆ. 12-13 ವರ್ಷದಲ್ಲಿಯೇ ಶಿಕ್ಷಣಕ್ಕೆ ಕೈ ಮುಗಿದು 30ನೇ ವರ್ಷಕ್ಕೆ ಮದುವೆಯಾಗಿ, ಬಡತನ ಕಷ್ಟ ಎಲ್ಲವನ್ನೂ ಕಂಡ ಜೀವವದು. ಈಗ ಆಕೆಯ ಮುಖದಲ್ಲಿ ಖುಷಿ ಬುಗ್ಗೆ ಉಕ್ಕುತ್ತದೆ ಅದನ್ನು ನೋಡಲು ನನಗೆ ಬಹಳ ಸಂತೋಷವಾಗುತ್ತದೆ ಎಂದು ಮಾರ್ಗರೆಟ್ ಮೊಮ್ಮಗಳು ಡಿಯಾನಾ ಕುಂಬುವಾ ಹೇಳುತ್ತಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ