/newsfirstlive-kannada/media/post_attachments/wp-content/uploads/2024/10/TATHAGAT-AVATAR-TULASI.jpg)
ಒಂದು ಕಾಲದಲ್ಲಿ ತಥಾಗತ ಅವತಾರ ತುಳಸಿ ಎನ್ನುವ ಹೆಸರು ಜಗತ್ತಿನ ಎಲ್ಲ ಪತ್ರಿಕೆಗಳಲ್ಲಿ ಹೆಡ್ಲೈನ್ ಆಗಿ ಹೋಗಿತ್ತು. ಅನೇಕ ಹೆಸರುಗಳಿಂದ ಈ ವ್ಯಕ್ತಿಯನ್ನು ಕರೆಯಲಾಗುತ್ತಿತ್ತು. ಪಿಜಿಕ್ಸ್ ಜಗತ್ತೆ ಒಂದು ಬಾರಿ ದಂಗು ಬಡಿಯುವ ರೀತಿ ಈತನ ಸಾಧನೆಯಿತ್ತು. ಆದರೆ ಬದುಕಿನ ಯಾವುದೋ ಒಂದು ತಿರುವು ಏನೇನೋ ಮಾಡಿ ಹಾಕುತ್ತದೆ ಅನ್ನವುದಕ್ಕೆ ಈ ವ್ಯಕ್ತಿ ದೊಡ್ಡ ಸಾಕ್ಷಿ. ಅತ್ಯಂತ ಚಿಕ್ಕ ವಯಸ್ಸಿನಲ್ಲಿಯೇ ಈ ಮಟ್ಟದ ಸಾಧನೆ ಮಾಡಿದ ಈ ವ್ಯಕ್ತಿ ಈಗ ನಿರುದ್ಯೋಗಿಯಾ ಅಂದರೆ ನೀವು ನಂಬಲೇಬೇಕು. ಆದರೆ ಜೀವನೋತ್ಸಾಹ ಮಾತ್ರ ಇವರು ಕಳೆದುಕೊಂಡಿಲ್ಲ. ಬೇರೆ ದಿಕ್ಕಿನತ್ತ ದೃಷ್ಟಿನೆಟ್ಟು ಆ ದಾರಿಯ ಕಡೆ ಹೊರಳಿದ್ದಾರೆ. 9ನೇ ವಯಸ್ಸಿನಲ್ಲಿ ಶಾಲಾ ಶಿಕ್ಷಣ ಮುಗಿಸಿದ ಕೀರ್ತಿ ತುಳಸಿ ಅವರದ್ದು. ಆ ರೋಚಕ ಬದುಕಿನ ರೋಚಕ ಕಥೆಯನ್ನು ನಾವು ನಿಮಗೆ ಈ ಲೇಖನದಲ್ಲಿ ಹೇಳ್ತೀವಿ.
ತಥಾಗತ ಅವತಾರ ತುಳಸಿ 1987ರಲ್ಲಿ ಬಿಹಾರದಲ್ಲಿ ಜನಿಸಿದರು. 9ನೇ ವಯಸ್ಸಿನಲ್ಲಿ ಶಾಲಾ ಶಿಕ್ಷಣ ಮುಗಿಸಿದ ತುಳಸಿ ತಮ್ಮ 11ನೇ ವಯಸ್ಸಿನಲ್ಲಿ ಎಂಎಸ್ಸಿ ಮುಗಿಸುತ್ತಾರೆ. ತಮ್ಮ 21ನೇ ವಯಸ್ಸಿಗೆ ಭಾರತೀಯ ವಿಜ್ಞಾನ ಸಂಸ್ಥೆ ಬೆಂಗಳೂರಿನಲ್ಲಿ ಪಿಹೆಚ್ಡಿಯನ್ನು ಕೂಡ ಪಡೆಯುತ್ತಾರೆ.
ಇದನ್ನೂ ಓದಿ:ಕನ್ನಡತಿ ಐಶ್ವರ್ಯ ರೈ ಬಚ್ಚನ್ ಬಾಡಿಗಾರ್ಡ್ ಸಂಬಳ ಎಷ್ಟು? ಗೊತ್ತಾದ್ರೆ ಒಂದು ಕ್ಷಣ ಬೆಚ್ಚಿ ಬೀಳ್ತೀರಾ?
ಇದೆಲ್ಲ ಆದ ನಂತರ 2010ರಲ್ಲಿ ಅಂದ್ರೆ ತಮ್ಮ 23ನೇ ವಯಸ್ಸಿನಲ್ಲಿ ತುಳಸಿ ಮುಂಬೈ ಐಐಟಿಯಲ್ಲಿ ಅತಿಥಿ ಉಪನ್ಯಾಸಕರಾಗಿ ಸೇರಿಕೊಳ್ಳುತ್ತಾರೆ. ಆದ್ರೆ ಒಂದು ವರ್ಷದ ಬಳಿಕ ಅವರ ಬದುಕಿನಲ್ಲಿ ವಿಧಿ ಬೇರೆಯದ್ದೇ ಆಟವನ್ನು ಆಡಲು ಶುರು ಮಾಡುತ್ತದೆ. 2011ರಲ್ಲಿ ತಥಾಗತ ಅವತಾರ ತುಳಸಿ ಕಾಯಿಲೆಯಿಂದ ಬಳಲು ಶುರುಮಾಡುತ್ತಾರೆ. ವಿಪರೀತ ಜ್ವರ, ಅಲರ್ಜಿಗಳಿಂದ ಅವರನ್ನು ಹೈರಾಣು ಮಾಡಿ ಹಾಕುತ್ತದೆ. 2013ರಲ್ಲಿ ಸುಮಾರು ನಾಲ್ಕು ವರ್ಷಗಳ ಕಾಲ ಸುದೀರ್ಘ ರಜೆ ಹಾಕಿ ಪಾಟ್ನಾಗೆ ಬಂದು ಸೇರುತ್ತಾರೆ. ಕೊನೆಗೆ 2019ರಲ್ಲಿ ಅವರ ದೀರ್ಘಕಾಲದ ಗೈರುಹಾಜರಿಯನ್ನು ಗಮಿಸಿದ ಐಐಟಿ ಮುಂಬೈ ಅವರನ್ನು ಕೆಲಸದಿಂದ ತೆಗೆದು ಹಾಕುತ್ತದೆ. ಅತ್ಯಂತ ಚಿಕ್ಕ ವಯಸ್ಸಿನಲ್ಲಿಯೇ ದೊಡ್ಡದಾಗಿ ಹೆಸರು ಮಾಡಿದ್ದ ಟೈಮ್ಸ್, ವೀಕ್ಲಿ ಪತ್ರಿಕೆಯಿಂದ ಹಲವು ಬಿರುದ ಪಡೆದಿದ್ದ ತುಳಸಿ ಅಕ್ಷರಶಃ ನಿರುದ್ಯೋಗಿಯಾಗಿಬಿಡುತ್ತಾರೆ.
ಇದನ್ನೂ ಓದಿ:ತಂದೆಗೆ ಪ್ಲಾಸ್ಮಾ ದಾನ ಮಾಡಿದ ಅಮೆರಿಕಾದ ಕೋಟ್ಯಾಧೀಶ; ಇದರಿಂದ ಆದ ಲಾಭ ಗೊತ್ತಾದ್ರೆ ಶಾಕ್ ಆಗ್ತೀರಾ!
ಒಂದು ಕಾಲದಲ್ಲಿ ಏಷಿಯಾದ ಅತ್ಯಂತ ಬುದ್ಧಿವಂತ ಬಾಲಕ ಎಂದೇ ಖ್ಯಾತಿಯಾಗಿದ್ದ, ಟೈಮ್ಸ್ನಿಂದ ಮಾಸ್ಟರ್ ಮೈಂಡ್ ಎಂದು ವೀಕ್ಲಿ ಪತ್ರಿಕೆಯಿಂದ ಪಿಜಿಕ್ಸ್ ಪ್ರೊಡಿಜಿ ಎಂದು ಬಿರುದುಗಳನ್ನು ಪಡೆದುಕೊಂಡ ತುಳಸಿ ಈಗ ಅಕ್ಷರಶಃ ನಿರುದ್ಯೋಗಿಯಾಗಿದ್ದಾರೆ. ಆದರೆ ಇಷ್ಟು ದಿನ ಬದುಕಿದ್ದು ಒಂದು ಲೆಕ್ಕವಾದ್ರೆ ಇನ್ಮೇಲೆ ಬದುಕೋದು ಇನ್ನೊಂದು ಲೆಕ್ಕ ಎಂದು ನಿರ್ಧರಿಸಿರುವ ತುಳಸಿ, ಸದ್ಯ ಲಾ ಅಧ್ಯಯನಕ್ಕೆ ಮುಂದಾಗಿದ್ದಾರೆ. ಅಲ್ಲಿ ಬೇರೆಯದ್ದೇ ಸಾಧನೆ ಮಾಡಲ ಸನ್ನದ್ಧರಾಗಿ ನಿಂತಿದ್ದಾರೆ. ತಮ್ಮ ಬಾಲ್ಯದಲ್ಲಿಯೇ ದೊಡ್ಡ ಸಾಧನೆ ಮಾಡಿ, ಇಡೀ ಜಗತ್ತು ತಮ್ಮತ್ತ ನೋಡುವಂತೆ ಮಾಡಿದ್ದ ತಥಾಗತ ಅವತಾರ ತುಳಸಿ ಅವರ ಬದುಕೇ ಎಲ್ಲಿರಿಗೂ ಒಂದು ಪ್ರೇರಣೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ