/newsfirstlive-kannada/media/post_attachments/wp-content/uploads/2025/01/RADHIKA-REJE.jpg)
ಸಾರಿ ಕಲೆಕ್ಷನ್ ಅಂದ ತಕ್ಷಣ ನಮಗೆ ಈ ಹಿಂದೆ ತಮಿಳುನಾಡಿನ ಜಯಲಲಿತಾ ನೆನಪಾಗುತ್ತಿದ್ದರು. ಈಗೀನ ಕಾಲಕ್ಕೆ ದೇಶದ ಅತ್ಯಂತ ಶ್ರೀಮಂತರಲ್ಲಿ ಒಬ್ಬರಾದ ಮುಖೇಶ್ ಅಂಬಾನಿಯವರ ಪತ್ನಿ ನೀತಾ ಅಂಬಾನಿ ನೆನಪಾಗುತ್ತಾರೆ. ಅವರ ಬಳಿ ಇರುವ ಕಾಂಜೀವರಂ ಗೋಲ್ಡನ್ ಸಾರಿ ಅಂದ್ರೆ ಅವರಿಗೆ ಎಲ್ಲಿಲ್ಲದ ಪ್ರೀತಿ. ಕೈಮಗ್ಗದಲ್ಲಿ ವಿಶೇಷವಾಗಿ ತಯಾರಾಗಿರುವ ಸೀರೆಯನ್ನು ಅವರು ಖರೀದಿಸುತ್ತಾರೆ. ಈ ವಿಚಾರವಾಗಿ ಅವರು ಬಹಳ ಬಾರಿ ಸುದ್ದಿಯೂ ಆಗಿದ್ದಾರೆ.
ಅವರ ಸೀರೆಯ ಸೊಬಗಗಿಗೆ ಇಂಟರ್ನೆಟ್ ಜಗತ್ತೇ ಕೂಡ ಫಿದಾ ಆಗಿ ಹೋಗುತ್ತದೆ. ಭಾರತ ಕಂಡು ಇಂತಹ ಸೀರೆಯ ಪ್ರೇಮಿ ಹಾಗೂ ಸೌಂದರ್ಯವತಿ ನಮ್ಮ ದೇಶದಲ್ಲಿ ಇನ್ನೂ ಒಬ್ಬರು ಇದ್ದಾರೆ . ಅವರನ್ನು ಭಾರತದ ಅತ್ಯಂತ ಸುಂದರ ಮಹಾರಾಣಿ ಎಂದೇ ಕರೆಯಲಾಗುತ್ತದೆ. ಅವರ ಬಳಿಯೂ ಇಂತಹುದೇ ಸಾವಿರ ಸಾವಿರ ಸೀರೆಗಳ ಸಂಗ್ರಹಗಳಿವೆ. ಈ ಭಾರತ ದೇಶ ಕಂಡ ಅತ್ಯಂತ ಸೌಂದರ್ಯವತಿ ರಾಣಿಯರಲ್ಲಿ ಅವರು ಕೂಡ ಒಬ್ಬರು. ಅವರ ಹೆಸರು ಮಹಾರಾಣಿ ರಾಧಿಕಾ ರಾಜೆ.ಬರೋಡಾದ ಮಹಾರಾಣಿ ರಾಧಿಕಾ ರಾಜೆ.
ವಾನ್ಕರ್ ರಾಜ್ಯದ ಅತ್ಯಂತ ಶ್ರೀಮಂತ ಕುಟುಂಬದಿಂದ ಬಂದ ಮಹಾರಾಣಿ ರಾಧಿಕಾ ರಾಜೆ, ಅಂದಿನ ಬರೋಡಾದ ಮಹಾರಾಜ ಸಮರ್ಜೀತ್ ಸಿಂಹ್ ಗಾಯಕ್ವಾಡ್ ಅವರನ್ನು ಮದುವೆಗಿದ್ದಾರೆ,. ರಾಧಿಕಾ ರಾಜೆ ಅವರ ಐಷಾರಾಮಿ ಬದುಕು ಯಾವ ರಾಣಿಗೂ ಕೂಡ ಕಡಿಮೆ ಇರಲಿಲ್ಲ. ಅವರು ಲಕ್ಷ್ಮೀ ಪ್ಯಾಲೆಸ್ ಎಂಬ ಮಹಾ ಭವ್ಯ ಬಂಗಲೆಯಲ್ಲಿ ವಾಸವಿದ್ದಾರೆ. ಅದರ ವಿಸ್ತಿರ್ಣ ಬಕ್ಕಿಂಗ್ ಹ್ಯಾಮ್ ಅರಮನೆಯ ನಾಲ್ಕು ಪಟ್ಟು ದೊಡ್ಡದು. ಇದು ದೇಶದ ಅತ್ಯಂತ ಭವ್ಯ ಅರಮನೆಯಲ್ಲಿ ಒಂದು . ಇದು ಮಾತ್ರವಲ್ಲ ಈ ರಾಯಲ್ ಫ್ಯಾಮಮಿಲಿ ಅಂ್ರೆ ಮಹಾರಾಣಿ ಹಾಗೂ ಅವರ ಪತಿ ಮೋತಿ ಭಾಗ್ ಸ್ಟೇಡಿಯಂನ ಮಾಲೀಕರು ಹೌದು ಮತ್ತು ಫತೇಹ್ ಸಿಂಗ್ ಮ್ಯೂಸಿಯಮ್ನ ಮಾಲೀಕರು ಹೌದು.
2002ರಲ್ಲಲಿ ರಾಧಿಕಾ ರಾಜೆ ಹಾಗೂ ಸಮರ್ಜೀತ್ ಸಿಂಹ್ ಅವರ ಮದುವೆ ದೆಹಯಲಿಯಲ್ಲಾಯಿತು. ಅಂದು ರಾಧಿಕಾ ರಾಜೆ ಅವರ ಮದುವೆಯ ಉಡುಗೆಯ ಬಗ್ಗೆ ದೊಡ್ಡ ಚರ್ಚೆಯಾಗಿತ್ತು. ಅವರ ಪಾಲಿಗೆ ಅದು ದೊಡ್ಡ ದಿನ. ಅವರು ರಜಪೂತ ಶೈಲಿಯ ಪೋಶಾಖ್ ಲೆಹಂಗಾದಲ್ಲಿ ಮಿಂಚಿದ್ದರು ರಾಧಿಕಾ ರಾಜೆ.
ನಂತರ ಚೆಂದಾರಿ ಡ್ರೆಸ್ನಲ್ಲಿ ಮಿಂಚಿದ್ದರು.ಮಹಾರಾಣಿ ರಾಧಿಕಾ. ಕೂಡ ನೀತಾ ಅಂಬಾನಿಯವರಂತೆ ಸಾರಿ ಕಲೆಕ್ಷನ್ನಲ್ಲಿ ಇವರದು ಕೂಡ ದೊಡ್ಡ ಹೆಸರು . ಅವರಲ್ಲಿ ಅತ್ಯಂತ ಜನಪ್ರಿಯ ಹಾಗೂ ದುಬಾರಿ ಸಾರಿಗಳ ಸಂಗ್ರಹವಿದೆ. ದೇಶದ ಎಲ್ಲಾ ಜನಪ್ರಿಯ ಸಾರಿಗಳ ಸಂಗ್ರಹವನ್ನು ಅವರು ಮಾಡಿಕೊಂಡಿದ್ದಾರೆ. ಅವರು ಕೂಡ ಸಾರಿ ವಿಷಯದಲ್ಲಿ ನೀತಾ ಅಂಬಾನಿಯವರ ರೀತಿ ಫ್ಯಾಷನ್ ಐಕಾನ್ ಆಗಿ ನಿಲ್ಲುತ್ತಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ