AI ತಾಯಿಯ ಬಗ್ಗೆ ಎಂದಾದರು ಕಲ್ಪನೆ ಇತ್ತಾ? ಬಂದಿದ್ದಾಳೆ ಭಾರತದಲ್ಲಿ ಮೊದಲ ಎಐ ಮದರ್​! ಹೆಸರೇನು ಗೊತ್ತಾ?

author-image
Gopal Kulkarni
Updated On
AI ತಾಯಿಯ ಬಗ್ಗೆ ಎಂದಾದರು ಕಲ್ಪನೆ ಇತ್ತಾ? ಬಂದಿದ್ದಾಳೆ ಭಾರತದಲ್ಲಿ ಮೊದಲ ಎಐ ಮದರ್​! ಹೆಸರೇನು ಗೊತ್ತಾ?
Advertisment
  • ಇನ್​ಸ್ಟಾಗ್ರಾಮ್​ನಲ್ಲಿ ಹವಾ ಸೃಷ್ಟಿಸಿದ್ದಾಳೆ ಕೃತಕ ಬುದ್ಧಿಮತ್ತೆಯ ತಾಯಿ
  • ಕಾವ್ಯಾ ಮೆಹ್ರಾ ಎಂಬ ತಾಯಿ ಏನೆಲ್ಲಾ ಮಾಡುತ್ತಾಳೆ ಅಂತಾ ಗೊತ್ತಾ?
  • ಈ AI ತಾಯಿ ಅಡುಗೆ ಮಾಡಬಲ್ಲಳು, ಪೇಂಟಿಂಗ್ ಮಾಡಬಲ್ಲಳು

ಜಗತ್ತನ್ನು ಹಾಗೂ ಸೋಷಿಯಲ್ ಮೀಡಿಯಾಗಳನ್ನು ಸದ್ಯ ಸಂಪೂರ್ಣವಾಗಿ ಆವರಿಸಿಕೊಂಡಿದ್ದು ವರ್ಚುವಲ್ ಇನ್ಫ್ಯೂಯೆನ್ಸರ್​ಗಳು. ಅದರಲ್ಲೂ ಕಂಪ್ಯೂಟರ್ ನಿರ್ಮಿತ ವಸ್ತುಗಳಂತೂ ಈಗ ವ್ಯಾಪಕವಾಗಿ ಜನಪ್ರಿಯತೆಗಳನ್ನು ಪಡೆಯುತ್ತಿವೆ. ಕಲ್ಪನೆ ಹಾಗೂ ವಾಸ್ತವದ ನಡುವಿನ ಮುಸುಕನ್ನು ಈ ಕಂಪ್ಯೂಟರ್ ನಿರ್ಮಿತ ವಸ್ತುಗಳು ಅಳಸಿ ಹಾಕುತ್ತಿವೆ. ಅದಕ್ಕೆ ದೊಡ್ಡ ನಿದರ್ಶನವಾಗಿ ನಿಂತಿದೆ ಕಾವ್ಯಾ ಮೆಹ್ರಾ ಎಂಬ ಈ ಎಐ ಮದರ್. ಭಾರತೀಯ ಎಐ ಪವರ್ಡ್​ ಇನ್ಫ್ಲೂಯೆನ್ಸರ್​ನಿಂದ ನಿರ್ಮಿತವಾದ ಈ ಎಐ ತಾಯಿಯ ಹೆಸರು ಕಾವ್ಯ ಮೆಹ್ರಾ. ಸದ್ಯ ಈ ತಾಯಿ, ಭಾರತೀಯ ಸೆಲೆಬ್ರೆಟಿಗಳಲ್ಲಿ ಒಬ್ಬಳಾಗಿದ್ದಾಳೆ.

ಸದ್ಯ ಕಾವ್ಯಾ ಮೆಹ್ರಾ ತನ್ನ ಇನ್​ಸ್ಟಾಗ್ರಾಮ್​ನಲ್ಲಿ 300ಕ್ಕೂ ಹೆಚ್ಚು ಫಾಲೋವರ್ಸ್​ ಹೊಂದಿದ್ದಾಳೆ. ಇಲ್ಲಿ ಈ ಎಐ ಆಧುನಿಕ ತಾಯ್ತನದ ಬಗ್ಗೆ ಮಾಹಿತಿ ಹಂಚಿಕೊಳ್ಳುತ್ತದೆ. ಕಾವ್ಯಾ ಮೆಹ್ರಾ ಅಡುಗೆ, ಪೇಂಟಿಂಗ್, ಸೇರಿ ಹಲವು ರೀತಿಯ ಕಾರ್ಯಗಳಲ್ಲಿ ತೊಡಗುತ್ತಾಳೆ. ಅಡುಗೆ ಏನು ಮಾಡಬೇಕು ಎಂಬ ಪ್ಲಾನ್​ ಕೂಡ ಕಾವ್ಯಾ ಮೆಹ್ರಾ ಮಾಡುತ್ತಾಳೆ.

ಇದನ್ನೂ ಓದಿ: ಬರೋಬ್ಬರಿ 2 ಗಂಟೆ ಡಿಜಿಟಲ್ ಅರೆಸ್ಟ್.. ಖ್ಯಾತ ಮಾಡೆಲ್​ನಿಂದ ಭಾರೀ ಹಣ ದೋಚಿದ ಕಳ್ಳರು..!

ಕಾವ್ಯಾ ಮೆಹ್ರಾ ವಿನ್ಯಾಸ ಮಾಡಿದ್ದೇ ನಿಜ ಜೀವನದ ತಾಯಿಯ ಅನುಭವಗಳ ಆಧಾರದ ಮೇಲೆಯೇ  ಎಂದು ಅದರ ವಿನ್ಯಾಸಕರು ಹೇಳುತ್ತಾರೆ. ಕಾವ್ಯಾ ಮೆಹ್ರಾ ಕೇವಲ ಒಂದು ಡಿಜಿಟಲ್ ಆಕಾರವಲ್ಲ. ಅದು ಅಕ್ಷರಶಃ ಆಧುನಿಕ ತಾಯಿತನದ ಸಾಕಾರರೂಪ ಎನ್ನುತ್ತಾರೆ. ಎಐ ರೂಪವದರೂ ಕೂಡ ಇದು ಮನುಷ್ಯ ಅನುಭವಗಳ ಆಳವಾದ ಬೇರುಗಳೊಂದಿಗೆ ಇದು ನಿರ್ಮಾಣವಾಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ:ಡಿಜಿಟಲ್​ ವಂಚನೆಗೆ ಮರ್ಮಾಘಾತ ಕೊಟ್ಟ ಕೇಂದ್ರ ಗೃಹ ಇಲಾಖೆ..59 ಸಾವಿರ ವಾಟ್ಸಾಪ್​ ಖಾತೆಗಳು ಬ್ಲಾಕ್​!

publive-image

ಸದ್ಯ ಕಾವ್ಯಾ ಮೆಹ್ರಾ ಇನ್​ಸ್ಟಾಗ್ರಾಮ್​ನಲ್ಲಿ ಹಲವು ವಿಚಾರಗಳನ್ನು ಹಂಚಿಕೊಳ್ಳುತ್ತಾಳೆ. ಉದಾಹರಣೆಗೆ ಅವರ ಫೆವರೆಟ್​ ಡಿಶ್, ದೀಪಾವಳಿ ಆಚರಣೆ ಹೇಗೆ ಮಾಡಬೇಕು. ಅದರ ಜೊತೆಗೆ ಕಾವ್ಯಾ ತಾನು ಗರ್ಭಿಣಿಯಿದ್ದ ಸಮಯ ಹಾಗು ಮಗು ಹಂತ ಹಂತವಾಗಿ ಬೆಳವಣಿಗೊಂಡ ಅನುಭವಗಳನ್ನು ಕೂಡ ಹಂಚಿಕೊಳ್ಳುತ್ತಾಳೆ.
ಕಾವ್ಯಾ ಮೆಹ್ರಾಳ ಇನ್​ಸ್ಟಾಗ್ರಾಮ್​ನ ಒಂದು ಪೋಸ್​​ನಲ್ಲಿ ತಾನು ಯಾವ ರೀತಿಯ ತಾಯಿಯಾಗಬೇಕು ಎಂಬುದರ ಬಗ್ಗೆ ಚರ್ಚೆಯನ್ನು ಮಾಡಿದ್ದಾಳೆ. ನಾನು ತುಂಬಾ ಭಾವನಾತ್ಮಕವಾಗಿ ಹಾಗೂ ತನ್ನ ಕಾಲಲ್ಲಿ ತಾನು ನಿಲ್ಲುವ ಮಕ್ಕಳನ್ನು ಅವಡುಗಚ್ಚಿ ಪ್ರೀತಿಸುವಂತ ತಾಯಿಯಾಗಬೇಕು ಎಂದುಕೊಂಡಿದ್ದೆ. ಮಕ್ಕಳು ನನ್ನ ಹತ್ತಿರ ಬಂದಾಗ ಅವರಿಗೆ ಸುರಕ್ಷತಾ ಭಾವ ಹುಟ್ಟಬೇಕು ಅಂತಹ ತಾಯಿಯಾಗಬೇಕು ಎಂದುಕೊಂಡಿದ್ದೆ ಎಂದು ಆಕೆ ಹೇಳಿಕೊಂಡಿದ್ದಾಳೆ.

ಕಾವ್ಯ, ಕೇವಲ ಒಂದ ತಂತ್ರಜ್ಞಾನದ ಪ್ರತಿರೂಪಕವಲ್ಲ. ಈ ಸಮಾಜದ ಅನುಭವಗಳ ನಿಜವಾದ ಪ್ರತಿಫಲನ ಎನ್ನುತ್ತಾರೆ ಕಲೆಕ್ಟಿವ್ ಆರ್ಟಿಸ್ಟ್ ನೆಟ್ವರ್ಕ್​ನ ಸಿಇಓ ವಿಜಯ್ ಸುಬ್ರಮಣಿಯಮ್ ಅವರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment