10 ವರ್ಷದ ಈ ಪೋರ ಐನ್​ಸ್ಟೈನ್​, ಸ್ಟೀಫನ್ ಹಾಕಿಂಗ್​​ರನ್ನೇ ಮೀರಿಸಿದ; ಇವನ ಬುದ್ಧಿವಂತಿಕೆ ಬಗ್ಗೆ ಕೇಳಿದ್ರೆ ಶಾಕ್ ಆಗ್ತೀರಾ!

author-image
Gopal Kulkarni
Updated On
10 ವರ್ಷದ ಈ ಪೋರ ಐನ್​ಸ್ಟೈನ್​, ಸ್ಟೀಫನ್ ಹಾಕಿಂಗ್​​ರನ್ನೇ ಮೀರಿಸಿದ; ಇವನ ಬುದ್ಧಿವಂತಿಕೆ ಬಗ್ಗೆ ಕೇಳಿದ್ರೆ ಶಾಕ್ ಆಗ್ತೀರಾ!
Advertisment
  • 10 ವರ್ಷದ ಈ ಬಾಲಕನ ಬುದ್ಧಿಶಕ್ತಿಗೆ ಕಂಡು ಬೆಚ್ಚಿ ಬಿತ್ತು ಜಗತ್ತು!
  • ಐನ್​ಸ್ಟೈನ್​, ಹಾಕಿಂಗ್ಸ್​ರ ಐಕ್ಯೂ ಸ್ಕೋರ್​ ಮೀರಿಸಿದ್ದಾನೆ ಈ ಪೋರ
  • ಭಾರತೀಯ ಮೂಲದ ಕ್ರಿಶ್ ಅರೋರ ಈ ಬಗ್ಗೆ ಹೇಳೋದೇನು?

10 ವರ್ಷದ ಭಾರತೀಯ ಮೂಲದ ಬ್ರಿಟಷ್​ ಬಾಲ ಕ್ರಿಶ್​ ಈಗ ದೊಡ್ಡ ಸುದ್ದಿಯಲ್ಲಿದ್ದಾನೆ. ಕ್ರಿಶ್ ಅರೋರಾ ಇತ್ತೀಚೆಗೆ ವಿಶ್ವದಾದ್ಯಂತ ಮೀಡಿಯಾಗಳ ಮುಖಪುಟದಲ್ಲಿ ಹೆಡ್​ಲೈನ್ ಆಗಿ ಮಿಂಚಿದ್ದ. ಸೋಷಿಯಲ್ ಮೀಡಿಯಾಗಳಲ್ಲಿ ಹೈಲೆಟ್ ಆಗಿದ್ದ. ಅದಕ್ಕೆ ಕಾರಣ ಅವನು ಗುರಿ ಮುಟ್ಟಿದ ಐಕ್ಯೂ ಸ್ಕೋರ್ ಲೇವಲ್. ಈ 10 ವರ್ಷದ ಪೋರನ ಐಕ್ಯೂ ಸ್ಕೋರ್ ಲೇವಲ್​, ವಿಜ್ಞಾನಿ ಅಲ್ಬರ್ಟ್​ ಐನ್​ಸ್ಟೈನ್​ ಹಾಗೂ ಸ್ಟಿಫನ್ ಹಾಕಿಂಗ್​ ಅವರನ್ನೇ ಮೀರಿಸುವ ಮಟ್ಟಕ್ಕೆ ಇದೆ ಎಂದು ಹೇಳಲಾಗುತ್ತಿದೆ.

ಈ ಕ್ರಿಶ್ ಅರೋರಾ ಐಕ್ಯೂ ಸ್ಕೋರ್ ಲೇವಲ್ 162ರಷ್ಟಿದೆ ಎಂದು ಹೇಳಲಾಗುತ್ತಿದೆ. ಜಾಗತಿಕ ಅತ್ಯಂತ ಬುದ್ಧಿವಂತರ ಸಾಲಿನಲ್ಲಿ ಮೊದಲಿನಾಗಿ ಗುರುತಿಸಿಕೊಂಡಿದ್ದಾನೆ ಕ್ರಿಶ್ ಅರೋರಾ. ಅತ್ಯಂತ ಚುರುಕಾದ ಬುದ್ಧಿಮತ್ತೆಯನ್ನು ಹೊಂದಿದ ವ್ಯಕ್ತಿಗಳನ್ನು ಗುರುತಿಸುವ ಸೊಸೈಟಿ ಮೆನ್ಸಾ ಕೂಡ ಕ್ರಿಶ್​​ನ ಬುದ್ಧಿವಂತಿಕೆಯನ್ನು ಹಾಡಿ ಹೊಗಳಿ ಅವನನ್ನು ತಮ್ಮ ಸೊಸೈಟಿಗೆ ಆಹ್ವಾನಿಸಿದೆ.

ಇದನ್ನೂ ಓದಿ:ಕಳೆದ 4 ದಿನಗಳಿಂದ ತನ್ನ ಮಾಲೀಕನಿಗಾಗಿ ಕಾಯುತ್ತಿರೋ ನಾಯಿ; ನೀವು ಓದಲೇಬೇಕಾದ ಸ್ಟೋರಿ

ಇಷ್ಟು ಮಾತ್ರವಲ್ಲ 10 ವರ್ಷದ ಈ ಭಾರತೀಯ ಮೂಲದ ಬಾಲಕ ಸದ್ಯದಲ್ಲಿಯೇ ಕ್ವೀನ್ ಎಲಿಜಬೆತ್ ಶಾಲೆಯನ್ನು ಮುಂದಿನ ವರ್ಷದಿಂದ ಸೇರಿಕೊಳ್ಳಲಿದ್ದಾನೆ. ಇದನ್ನು ಯುನೈಟೆಡ್ ಕಿಂಗ್​ಡಮ್​ನಲ್ಲೇ ಅತ್ಯಂತ ಗೌರವಾನ್ವಿತ ಶಾಲೆಯೆಂದು ಗುರುತಿಸಲಾಗುತ್ತದೆ.

ತನ್ನ ಪರೀಕ್ಷೆಗಳ ಬಗ್ಗೆ ಮಾತನಾಡಿರುವ ಕ್ರಿಶ್ ಅರೋರಾ. 11ಪ್ಲಸ್ ಪರೀಕ್ಷೆಗಳೆಲ್ಲವೂ ತುಂಬಾನೇ ಸರಳವಾಗಿದ್ದವು. ನಾನು ಮುಂದೆ ಸೇರುತ್ತಿರುವ ಶಾಲೆ ನನಗೆ ಇನ್ನೂ ದೊಡ್ಡ ಚಾಲೆಂಜ್​ಗಳನ್ನು ನನಗೆ ನೀಡಲಿದೆ ಎಂದು ಭಾವಿಸಿದ್ದೇನೆ. ಪ್ರೈಮರಿ ಶಾಲೆ ಅಂದ್ರೆ ನನಗೆ ಬೋರಿಂಗ್, ನಾನು ಅಲ್ಲಿ ಏನನ್ನೂ ಕಲಿಯಲಿಲ್ಲ. ಕೇವಲ ಗುಣಿಸಿ ಭಾಗಿಸುವ, ವಾಖ್ಯಗಳನ್ನು ಬರೆಯುವದನ್ನೇ ನಿತ್ಯ ಮಾಡಿದೇವು ನನಗೆ ಬೀಜಗಣಿತ ಬಿಡಿಸುವುದು ಅಂದ್ರೆ ತುಂಬಾ ಇಷ್ಟ ಎಂದು ಕ್ರಿಶ್ ಅರೋರಾ ಹೇಳಿಕೊಂಡಿದ್ದಾನೆ.

ಇದನ್ನೂ ಓದಿ:ಬಾಂಗ್ಲಾ ಹಿಂದೂಗಳ ಮೇಲಿನ ದಾಳಿಗೆ RSS ಖಂಡನೆ.. ಪ್ರಧಾನಿ ಮೋದಿ ಸರ್ಕಾರಕ್ಕೆ ಆಗ್ರಹ; ಹೇಳಿದ್ದೇನು?

ಈ ಬಾಲಕನ ತಂದೆ ತಾಯಿಗಳಾದ ಮೌಳಿ ಹಾಗೂ ನಿಶ್ಚಲಾ ತಮ್ಮ ಪುತ್ರನ ಈ ಸಾಧನೆಯ ಬಗ್ಗೆ ತುಂಬಾ ಹೆಮ್ಮೆ ಪಡುತ್ತಾರೆ. ಅವನು ನಾಲ್ಕು ವರ್ಷದವನಿದ್ದಾಗಲೇ ಅವನ ಸಾಮರ್ಥ್ಯವನ್ನು ಕಂಡಿದ್ದರು. ಅವರ ತಂದೆ ಹೇಳುವ ಪ್ರಕಾರ ಕ್ರಿಶ್​ಗೆ ಗಣಿತ ಅಂದ್ರೆ ತುಂಬಾ ಇಷ್ಟಪಡ್ತಿದ್ದ. ಇಡೀ ಒಂದು ವರ್ಷದ ಗಣಿತ ಸಮಸ್ಯೆಗಳಲ್ಲಿ ಒಂದೇ ದಿನದಲ್ಲಿ ಮುಗಿಸಿಹಾಕಿದ್ದ ಆತ ಎಂಟು ವರ್ಷದವನಿದ್ದಾಗ ಎಂದು ಕ್ರಿಶ್ ತಂದೆ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment