/newsfirstlive-kannada/media/post_attachments/wp-content/uploads/2024/10/SONAM-ANAND-AHUJA.jpg)
ಬಾಲಿವುಡ್ ಸಿನಿಮಾದಲ್ಲಿ ಪ್ರಮುಖ ವ್ಯಕ್ತಿಗಳ ಸಾಲಿನಲ್ಲಿ ಬರುವ ಹೆಸರು ಸೋನಮ್ ಕಪೂರ್ ಅಹುಜಾ. ಬಾಲಿವುಡ್ನಲ್ಲಿ ದಶಕಗಳ ಕಾಲ ಸಿನಿಮಾ ಬದುಕನ್ನು ಬದುಕಿದವರು ಸೋನಮ್ ಕಪೂರ್. ಸೋನಮ್ ಕಪೂರ್ ಅಂದ್ರೆ ಬೇಗ ಗುರುತು ಹಿಡಿಯುವುದಕ್ಕಿಂತ ಹೆಚ್ಚು ಅನಿಲ್ ಕಪೂರ್ ಪುತ್ರಿ ಎಂದ ತಕ್ಷಣ ಬೇಗ ಗೊತ್ತಾಗುತ್ತೆ. ಬಾಲಿವಡ್ನ ಸದಾ ತರುಣ ಅನಿಲ್ ಕಪೂರ್ ಪುತ್ರಿ 2007ರಲ್ಲಿ ಸಿನಿಮಾ ಜಗತ್ತಿಗೆ ಎಂಟ್ರಿ ಕೊಟ್ಟರು ಸಾವರಿಯಾ ಸಿನಿಮಾ ಮೂಲಕ ಸಿನಿಮಾಗೆ ಪದಾರ್ಪಣೆ ಮಾಡಿದ ಸೋನಮ್, ಇತ್ತೀಚೆಗಷ್ಟೇ ತಮ್ಮ 39ನೇ ವರ್ಷದ ಹುಟ್ಟು ಹಬ್ಬವನ್ನೂ ಕೂಡ ಆಚರಿಸಿಕೊಂಡ್ರು. ಈಗಲೂ ಕೂಡ ಸೋನಮ್ ಕಪೂರ್ ಸೋಷಿಯಲ್ ಮೀಡಿಯಾಗಳಲ್ಲಿ ಸಖತ್ ಆ್ಯಕ್ಟಿವ್ ಆಗಿದ್ದಾರೆ. ಆದ್ರೆ ಸದ್ಯ ಸುದ್ದಿಯಾಗ್ತಿರೋದು ಸೋನಮ್ ಅವರ ಪತಿ ಆನಂದ ಅಹುಜಾ ಅವರ ಆ ಒಂದು ಭವ್ಯ ಬಂಗಲೆಯ ಬೆಲೆಯ ಬಗ್ಗೆ
ವರದಿಗಳ ಪ್ರಕಾರ ಸೋನಮ್ ತನ್ನ ಸಿನಿಮಾಗಳ ಮೂಲಕ ಹಾಗೂ ಪ್ರಮುಖ ಉತ್ಪನ್ಗಳಿಗೆ ರಾಯಭಾರಿಯಾಗುವ ಮೂಲಕ ಗಳಿಸಿದ ಒಟ್ಟು ಆಸ್ತಿ 115 ಕೋಟಿ ಎಂದು ಇದೆ. ವರ್ಷಕ್ಕೆ 12 ಕೋಟಿ ರೂಪಾಯಿ ಆದಾಯವನ್ನ ಸೋನಮ್ ಕಪೂರ್ ಪಡೆಯುತ್ತಾರೆ. ಆದ್ರೆ ಇವರ ಪತಿ ಆನಂದ್ ಅಹುಜಾ ಒಬ್ಬ ದೇಶ ಕಂಡ ಯಶಸ್ವಿ ಉದ್ಯಮಿಗಳಲ್ಲಿ ಒಬ್ಬರು. ಈ ಇಬ್ಬರು 2018ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು
ಸದ್ಯ ಆನಂದ ಅಹುಜಾ ಅವರ ಒಟ್ಟು ಆಸ್ತಿ 4 ಸಾವಿರ ಕೋಟಿ ರೂಪಾಯಿ ಎಂದೇ ಹೇಳಲಾಗುತ್ತಿದೆ. ಅವರು ದೆಹಲಿಯ ಪ್ರಥ್ವಿರಾಜ್ ರಸ್ತೆಯಲ್ಲಿರುವ ಭವ್ಯ ಬಂಗಲೆಯ ಬೆಲೆಯೇ ಸುಮಾರು 173 ಕೋಟಿ ರೂಪಾಯಿದ್ದು. 3170 ಚದುರಡಿಯಲ್ಲಿ ಚಾಚಿಕೊಂಡಿರುವ ಈ ಭವ್ಯ ಬಂಗಲೆಯನ್ನ 2015ರಲ್ಲಿ ಆನಂದ ಅಹುಜಾ ಅವರ ತಂದೆ ಹರೀಶ್ ಅನುಜಾ ಅವರು ಖರೀದಿ ಮಾಡಿದ್ದರು. ಯಾವಾಗ ಆನಂದ ಹಾಗೂ ಸೋನಮ್ ಕೈ ಕೈ ಹಿಡಿದು ದಾಂಪತ್ಯ ಜೀವನಕ್ಕೆ ಕಾಲಿಟ್ಟರೋ ಅಂದ್ರೆ 2018ರಲ್ಲಿ ಅವರು ಲಂಡನ್ನಲ್ಲಿರುವ ಮತ್ತೊಂದು ಭವ್ಯ ಬಂಗಲೆಗೆ ಶಿಫ್ಟ್ ಆದ್ರು.
ಇದನ್ನೂ ಓದಿ:ನವರಾತ್ರಿಗೆ ಉಪವಾಸ ಮಾಡ್ತೀರಾ? ಈ ಎರಡು ಪದಾರ್ಥ ತ್ಯಜಿಸಿದ್ರೆ ಆಗೋ ಲಾಭವೇನು?
ಸದ್ಯ ಸೋನಮ್ ಹಾಗೂ ಅವರ ಪತಿ ಆನಂದ ಅಹುಜಾ ಈ ಬಂಗಲೆಯಲ್ಲಿ ಇರುತ್ತಾರೆ. ಸದ್ಯ ಇದರ ಮೌಲ್ಯ 173 ಕೋಟಿ ರೂಪಾಯಿಯಷ್ಟು ಅಂತ ಹೇಳಲಾಗುತ್ತಿದೆ. ಆನಂದ ಅಹುಜಾ ಅವರ ಆದಾಯ ಹಲವು ಬಾಲಿವುಡ್ ನಟರನ್ನು ಮೀರಿಸುತ್ತದೆ. ಅಕ್ಷಯ್ ಕುಮಾರ್ ಹಾಗೂ ಸಲ್ಮಾನ್ ಖಾನ್ರ ಆದಾಯವನ್ನು ಮೀರಿ ಆನಂದ ಅವರ ಆಸ್ತಿಯಿದೆ ಎಂದು ಹೇಳಲಾಗುತ್ತೆ.
ಇದನ್ನೂ ಓದಿ:ಕನಸೇ ನಮ್ಮ ಅನಾರೋಗ್ಯದ ಬಗ್ಗೆ ಎಚ್ಚರಿಸುತ್ತೆ ಎಂದರೆ ನಂಬಲೇಬೇಕು! ಏನಿದು ಹೊಸ ಸ್ಟಡಿ?
ಈ ಐಷಾರಾಮಿ ಜೋಡಿಯ ಮತ್ತೊಂದು ವಿಶೇಷ ವಿಷಯ ಅಂದ್ರೆ ಈ ಜೋಡಿ ತಮ್ಮ ರಿಯಲ್ ಎಸ್ಟೇಟ್ ಉದ್ಯಮವನ್ನು ಮತ್ತಷ್ಟು ವಿಸ್ತರಿಸುವ ಗುರಿಯನ್ನು ಹೊಂದಿದ್ದಾರೆ. ಇತ್ತೀಚೆಗಷ್ಟೇ ಆನಂದ ಅಹುಜಾರ ತಂದೆ ಹರೀಶ್ ಲಂಡನ್ನ ನಾಟಿಂಗ್ ಹಿಲ್ನಲ್ಲಿ ದೊಡ್ಡ ಮೊತ್ತದ ಆಸ್ತಿಯನ್ನು ಖರೀದಿ ಮಾಡಿರುವ ಬಗ್ಗೆ ಹಲವು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಲಂಡನ್ನಲ್ಲಿ ಖರೀದಿ ಮಾಡಿರುವ ಒಟ್ಟು ಮೌಲ್ಯ 231.47 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ
ಒಂದು ರೀತಿಯಲ್ಲಿ ಬಾಲಿವುಡ್ ಕಂಡ ಅತ್ಯಂತ ಶ್ರೀಮಂತ ದಂಪತಿ ಅಂದ್ರೆ ಅದು ಸೋನಮ್ ಹಾಗೂ ಆನಂದ ಅಹುಜಾ. ಸದ್ಯ ಸೋನಮ್ ಬಾಲಿವುಡ್ ಅಂಗಳದಿಂದ ದೂರ ಸರಿದಿದ್ದು. ಪತಿಯ ರಿಯಲ್ ಎಸ್ಟೇಟ್ ಉದ್ಯಮದೊಂದಿಗೆ ಕೈ ಜೋಡಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ