/newsfirstlive-kannada/media/post_attachments/wp-content/uploads/2024/10/ryan-fernando-2.jpg)
ಬಾಲಿವುಡ್ ನಟರು ಹಾಗೂ ಭಾರತೀಯ ಆಟಗಾರರು ತಮ್ಮ ಆಹಾರ ಪದ್ಧತಿಯನ್ನು ತುಂಬಾ ಕಟ್ಟುನಿಟ್ಟಾಗಿ ಪಾಲಿಸುತ್ತಾರೆ. ಅವರು ತಮ್ಮ ಕೆಲಸ ಸಮಯದಲ್ಲಿಯೂ ಕೂಡ ಅವರು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಡಯಟ್​ನ್ನು ಕಟ್ಟುನಿಟ್ಟಾಗಿಯೇ ಪಾಲಿಸುತ್ತಾರೆ. ಅದರಲ್ಲಿ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಮೊದಲ ಪಟ್ಟಿಯಲ್ಲಿ ಬಂದು ನಿಲ್ಲುತ್ತಾರೆ. ಈ ಜೋಡಿ ಇಷ್ಟು ಫಿಟ್ ಆಗಿರಲು ಕಾರಣ ಅವರ ಹಿಂದಿರುವ ಒಬ್ಬ ಪೌಷ್ಠಿಕತಜ್ಞ, ಅಂದ್ರೆ ನ್ಯೂಟ್ರೀಷಿಯನಿಷ್ಟ್​. ಭಾರತದ ಪ್ರತಿಯೊಬ್ಬ ಸೆಲೆಬ್ರೆಟಿಯ ಫಿಟ್​ನೆಸ್ ಹಿಂದೆಯೂ ಒಬ್ಬ ಪೌಷ್ಠಿಕ ತಜ್ಞ ಇದ್ದೇ ಇರುತ್ತಾರೆ. ವಿರಾಟ್ ಹಾಗೂ ಅನುಷ್ಕಾಗೆ ಸದಾ ಪಿಟ್​ನೆಸ್ ಬಗ್ಗೆ ಸಲಹೆ ನೀಡುವ ಇವರು ಅನುಷ್ಕಾ ಗರ್ಭಿಣಿ ಇದ್ದಾಗಲೂ ಕೂಡ ಅವರಿಗೆ ಸರಿಯಾದ ಆಹಾರ ಪದ್ಧತಿಯ ಬಗ್ಗೆ ಸಲಹೆ ನೀಡಿ ಅವರು ಫಿಟ್​ ಆಗಿರಲು ಸಹಾಯ ಮಾಡಿದ್ದಾರೆ.
ಈ ವ್ಯಕ್ತಿ ಬಾಲಿವುಡ್ ಹಾಗೂ ಕ್ರಿಕೆಟ್ ಅಂಗಳದಲ್ಲಿಯೇ ದೊಡ್ಡ ಹೆಸರು ಮಾಡಿದ್ದಾರೆ. ಇವರು ನ್ಯೂಟ್ರೀಷಿಯನಿಷ್ಟ್ ಆಗಲು ಭದ್ರ ಬುನಾದಿ ಹಾಕಿದ್ದೇ ಇವರ ಶೈಕ್ಷಣಿಕ ಬದುಕು ಐಐಎಂನಲ್ಲಿ ಕಲಿತ ಇವರು ಆಹಾರ ಕ್ರಮದ ಬಗ್ಗೆ ವೈಜ್ಞಾನಿಕವಾಗಿ ಆಳವಾದ ಅಧ್ಯಯನ ಮಾಡಿದವರು ಹಾಗೂ ಸಲಹೆಗಳು ಹೇಗಿರಬೇಕು ಎಂಬುದನ್ನು ಸ್ಪಷ್ಟವಾಗಿ ಅರಿತುಕೊಂಡವರು. ಇದು ಮಾತ್ರವಲ್ಲ ಬಯೋಟೆಕ್ನಾಲಜಿಯಲ್ಲಿ ಕೂಡ ಇವರು ಸ್ನಾತಕೋತ್ತರ ಪದಿವೆ ಪಡೆದಿದ್ದಾರೆ. ವಿರಾಟ್, ಅನುಷ್ಕಾ, ರೋಹಿತ್ ಶರ್ಮಾ ಶಾಹೀದ್ ಕಪೂರ್, ದಂಗಲ್ ಸಿನಿಮಾದಲ್ಲಿ ಅಮಿರ್​ ಖಾನ್, ಅಭಿಷೇಕ್ ಬಚ್ಚನ್ ಸುಶೀಲ್ ಕುಮಾರ್ ಹೀಗೆ ಅನೇಕ ಸೆಲೆಬ್ರೆಟಿಗಳೊಂದಿಗೆ ಇವರು ಕೆಲಸ ಮಾಡಿದ್ದಾರೆ. ಇವರ ಹೆಸರು ರಿಯಾನ್ ಫರ್ನಾಂಡೊ.
/newsfirstlive-kannada/media/post_attachments/wp-content/uploads/2024/10/ryan-fernando-1.jpg)
ರಿಯಾನ್ ಫರ್ನಾಂಡೊ ಭಾರತದಲ್ಲೀಗ ಅತ್ಯಂತ ಜನಪ್ರಿಯ ನ್ಯೂಟ್ರೀಷಿಯನಿಷ್ಟ್​ಗಳ ಸಾಲಿನಲ್ಲಿ ಅಗ್ರಪಂಕ್ತಿಯಲ್ಲಿ ಬಂದು ನಿಲ್ಲುತ್ತಾರೆ. ಆರಂಭದಲ್ಲಿ ಅವರು ಸಾಮಾನ್ಯ ಜನರಿಗೆ ನೀಡುತ್ತಿದ್ದ ಆಹಾರ ಕ್ರಮಗಳ ಬಗ್ಗೆ ಹಾಗೂ ನ್ಯೂಟ್ರಿಷಿಯನ್ ಬಗೆಗಿನ ಸಲಹೆಗಳು ಹೆಚ್ಚು ಪರಿಣಾಮಕಾರಿಯಾಗಿ ಕಾಣಿಸತೊಡಗಿದವು. ಆಮೇಲೆ ಅವರು ಒಂದು ಕ್ವಾ ನ್ಯೂಟ್ರಿಷಿಯನ್ ಎಂಬ ಕನ್ಸಲ್ಟೆನ್ಸಿಯನ್ನು ಆರಂಭಿಸಿದ ಮೇಲೆ ಅವರ ಜನಪ್ರಿಯತೆ ಹೆಚ್ಚಾಯಿತು ಅದರಲ್ಲೂ ಅವರು ಅನುಷ್ಕಾ ಶರ್ಮಾ ಗರ್ಭಿಣಿಯಿದ್ದ ವೇಳೆ ಅವರನ್ನು ವೈಯಕ್ತಿಕವಾಗಿ ಕಾಳಜಿವಹಿಸಿ ನೀಡಿದ ಸಲಹೆಗಳು ಹೆಚ್ಚು ಸದ್ದು ಮಾಡಿದವು. ಈಗ ಸದ್ಯ ಈ ರಿಯಾನ್ ಫರ್ನಾಂಡೋ 6 ತಿಂಗಳ ನ್ಯೂಟ್ರಿಷಿಯನ್ ಪ್ಲಾನ್​ಗೆ 1 ಲಕ್ಷ 77 ಸಾವಿರ ರೂಪಾಯಿ ಚಾರ್ಜ್ ಮಾಡುತ್ತಾರೆ. 1 ವರ್ಷದ ಪ್ಲಾನ್​ಗೆ 2 ಲಕ್ಷ 95 ಸಾವಿರ ರೂಪಾಯಿ ಚಾರ್ಜ್ ಮಾಡುತ್ತಾರೆ.
/newsfirstlive-kannada/media/post_attachments/wp-content/uploads/2024/10/ryan-fernando.jpg)
ರಿಯಾನ್ ಫರ್ನಾಂಡೊ ನಿಮ್ಮ ನಿತ್ಯದ ಊಟದ ಅಭ್ಯಾಸದ ಬಗ್ಗೆ ಸಲಹೆ ನೀಡುತ್ತಾರೆ. ಯಾವ ಸಂದರ್ಭದಲ್ಲಿ ಯಾವ ರೀತಿಯ ಊಟ ಮಾಡಬೇಕು ಎಷ್ಟು ಪ್ರಮಾಣದಲ್ಲಿ ಮಾಡಬೇಕು. ಎಷ್ಟು ಪೌಷ್ಠಿಕಾಂಶ, ಪೋಷಕಾಂಶ ದೇಹಕ್ಕೆ ನೀಡಬೇಕು. ಈ ಬಗೆಯ ಸಲಹೆಗಳನ್ನು ನೀಡುತ್ತಾರೆ. ಅದರಲ್ಲೂ ಭಾರತೀಯ ಸಾಂಪ್ರಾದಾಯಿಕ ಊಟದ ಬಗ್ಗೆ ಇವರು ಹೆಚ್ಚು ಸಲಹೆಗಳನ್ನು ನೀಡುತ್ತಾರೆ ಎಂದು ಹೇಳಲಾಗುತ್ತದೆ. ಅವರು ವೈಯಕ್ತಿಕವಾಗಿ ನೀಡುವ ಸಲಹೆಗಳು ಧನಾತ್ಮಕ ಪರಿಣಾವನ್ನೇ ಬೀರುತ್ತವೆ ಹೀಗಾಗಿ ಬಾಲಿವುಡ್ ನಟರೆ ಆಗಲಿ ಕ್ರಿಕೆಟ್ ಆಟಗಾರರೇ ಆಗಲಿ ಭಾರತೀಯ ಕೋಟ್ಯಾಧಿಪತಿಗಳೇ ಆಗಲಿವೆ ಅವರಿಗೆ ಆಹಾರ ಕ್ರಮದ ಬಗ್ಗೆ ಟಿಪ್ಸ್ ಬೇಕಾದಾಗ ರಿಯಾನ್ ಫರ್ನಾಂಡೊ ನೆನಪಾಗುತ್ತಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us