/newsfirstlive-kannada/media/post_attachments/wp-content/uploads/2025/06/anaya.jpg)
ಇಂಡೋ-ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯ ಅಂತಿಮ ಘಟ್ಟ ತಲುಪಿದೆ. ಗೆಲುವಿಗಾಗಿ ಉಭಯ ತಂಡಗಳು ಜಿದ್ದಾಜಿದ್ದಿನ ಹೋರಾಟ ನಡೆಸ್ತಿದ್ದು, ಇಂದಿನ ಕೊನೆಯ ದಿನದಾಟ ಸಖತ್ ಕುತೂಹಲ ಹುಟ್ಟು ಹಾಕಿದೆ. ಈ ಟೆಸ್ಟ್ ಮ್ಯಾಚ್ನ ಇಂಟರೆಸ್ಟಿಂಗ್ ಫೈಟ್ನ ನಡುವೆ ಮಿಸ್ಟರಿ ಗರ್ಲ್ ಒಬ್ಬಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡ್ತಿದ್ದಾಳೆ.
ಇದನ್ನೂ ಓದಿ:ಶತಕ ಬಾರಿಸ್ತಿದ್ದಂತೆ ಪಲ್ಟಿ ಹೊಡಿ ಎಂದ ಗವಾಸ್ಕರ್.. ಪಂತ್ ಪ್ರತಿಕ್ರಿಯೆ ಹೇಗಿತ್ತು? ಹೃದಯಗೆದ್ದ ವಿಡಿಯೋ..!
[caption id="attachment_128845" align="alignnone" width="800"] ರಾಜಲ್ ಅರೋರಾ[/caption]
ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ಟಫ್ ಫೈಟ್ ನೀಡಿರುವ ಟೀಮ್ ಇಂಡಿಯಾ, ಸರಣಿಯಲ್ಲಿ ಶುಭಾರಂಭ ಮಾಡೋ ಲೆಕ್ಕಾಚಾರ ಹಾಕ್ತಿದೆ. ಡ್ರೆಸ್ಸಿಂಗ್ ರೂಮ್ನಲ್ಲಿ ಗೆಲುವಿನ ಚರ್ಚೆ ಜೋರಾಗಿ ನಡೀತಿದ್ದು, ಇಡೀ ತಂಡ ತಂತ್ರ-ರಣತಂತ್ರಗಳ ಮೊರೆಹೋಗಿದೆ. ಇದೇ ಸಮಯದಲ್ಲಿ ಟೀಮ್ ಇಂಡಿಯಾದ ಡ್ರೆಸ್ಸಿಂಗ್ ರೂಮ್ನಲ್ಲಿರೋ ಮಿಸ್ಟರಿ ಗರ್ಲ್ ಬಗ್ಗೆ ಚರ್ಚೆ ನಡೀತಿದೆ.
ರೂಮ್ನಲ್ಲಿ ‘ಮಿಸ್ಟರಿ’ ಗರ್ಲ್.!
ಲೀಡ್ಸ್ ಟೆಸ್ಟ್ ಪಂದ್ಯದ ಮೊದಲ ದಿನದಾಟ ಅಂತ್ಯವಾದ ಬಳಿಕ ಬಿಸಿಸಿಐ ಒಂದು ವಿಡಿಯೋ ಹಂಚಿಕೊಂಡಿತ್ತು. ಟೆಸ್ಟ್ನ ಮೊದಲ ದಿನದಾಟದಲ್ಲೇ ಬಿಗಿ ಹಿಡಿತ ಸಾಧಿಸಿದ ಸಂಭ್ರಮ ಡ್ರೆಸ್ಸಿಂಗ್ ರೂಮ್ನಲ್ಲಿ ಮನೆ ಮಾಡಿತ್ತು. ಆಟಗಾರರು ತಂಡಕ್ಕೆ ವಾಪಾಸ್ಸಾಗ್ತಿದ್ದ ವೇಳೆ ಸಪೋರ್ಟ್ ಸ್ಟಾಫ್ ಚಪ್ಪಾಳೆ ತಟ್ಟಿ ಸ್ವಾಗತಿಸ್ತಾ ಇದ್ರು. ಇದೇ ವೇಳೆ ನೋಡಿ ಈ ಮಿಸ್ಟರಿ ಗರ್ಲ್ ಕಾಣಿಸಿಕೊಂಡಿದ್ದು.
ಈ ಮಿಸ್ಟರಿ ಗರ್ಲ್ ಟೀಮ್ ಇಂಡಿಯಾ ಡ್ರೆಸ್ಸಿಂಗ್ ರೂಮ್ನಲ್ಲಿ ಕಾಣಿಸಿಕೊಂಡಿದ್ದೇ ತಡ ಸೋಷಿಯಲ್ ಮೀಡಿಯಾ ಟ್ರೆಂಡ್ ಸೃಷ್ಟಿಯಾಗಿದೆ.
[caption id="attachment_128846" align="alignnone" width="800"] ರಾಜಲ್ ಅರೋರಾ[/caption]
ಈಕೆ ಯಾರು ಅನ್ನೋ ಪ್ರಶ್ನೆಗೆ ಉತ್ತರದ ಹುಡುಕಾಟ ಜೋರಾಗಿ ನಡೀತಿದೆ. ಅಂದ್ಹಾಗೆ ಆ ಮಿಸ್ಟರಿ ಗರ್ಲ್ ಬೇರ್ಯಾರೋ ಹೊರಗಿನವರಲ್ಲ. ಟೀಮ್ ಇಂಡಿಯಾದ ಒನ್ ಆಫ್ ದ ಸಪೋರ್ಟ್ ಸ್ಟಾಫ್. ಹೆಸರು ಅನಯಾ ಶ್ರೀಧರ್ ಅಂತಾ.. sports and exercise psychologist. ಹೊಸದಾಗಿ ಟೀಮ್ ಇಂಡಿಯಾಗೆ ಎಂಟ್ರಿ ಕೊಟ್ಟಿರೋ ಅನಯಾ ಶ್ರೀಧರ್ ವಿಶೇಷ ಜವಾಬ್ದಾರಿ ನಿಭಾಯಿಸ್ತಿದ್ದಾರೆ.
ಅನಯಾ ಶ್ರೀಧರ್ ಕೆಲಸ ಏನು.?
sports and exercise psychologist ಅನಯಾ ಶ್ರೀಧರ್ ಪ್ರಮುಖವಾಗಿ ಆಟಗಾರರಿಗೆ ಮಾನಸಿಕವಾಗಿ ಧೈರ್ಯ ತುಂಬುವ ಕೆಲಸವನ್ನ ಮಾಡ್ತಾರೆ. ಸ್ಟ್ರೆಸ್ ಮ್ಯಾನೇಜ್ಮೆಂಟ್ ಹಾಗೂ ಆಂಗ್ಸೈಟಿಯನ್ನ ಪರಿಣಾಮಕಾರಿಯಾಗಿ ನಿಭಾಯಿಸಲು ಅಗತ್ಯ ನೆರವು ನೀಡ್ತಾರೆ. ಆಟಗಾರರ ಅಥ್ಲೆಟಿಕ್ ಹಾಗೂ ಎಕ್ಸಸೈಸ್ ಆ್ಯಕ್ಟಿವಿಟಿಗಳ ನಡುವೆ ಹೊಂದಾಣಿಕೆ, ಇಂಜುರಿ ರಿಹ್ಯಾಬ್ ವೇಳೆಯೂ ಆಟಗಾರರಿಗೆ ಅಗತ್ಯ ನೆರವು ನೀಡ್ತಾರೆ. ಟೀಮ್ ಇಂಡಿಯಾ ಡ್ರೆಸ್ಸಿಂಗ್ ರೂಮ್ನಲ್ಲಿ ಅನಯಾ ಶ್ರೀಧರ್ ಮಾತ್ರವಲ್ಲ. ಮತ್ತೊಬ್ಬರು ಮಹಿಳೆ ಕೂಡ ಇದ್ದಾರೆ. ಅವ್ರ ಹೆಸರು ರಾಜಲ್ ಅರೋರಾ.
[caption id="attachment_128843" align="alignnone" width="800"] ರಾಜಲ್ ಅರೋರಾ[/caption]
ರಾಜಲ್ ಅರೋರಾ ಟೀಮ್ ಇಂಡಿಯಾದ ಡಿಜಿಟಲ್ ಮೀಡಿಯಾದ ಮ್ಯಾನೇಜರ್. ಬಿಸಿಸಿಐನ ಸೋಷಿಯಲ್ ಮೀಡಿಯಾ ಅಕೌಂಟ್ಗಳನ್ನ ಹ್ಯಾಂಡಲ್ ಮಾಡೋದು, ಕಂಟೆಟ್ ಕ್ರಿಯೇಟ್ ಮಾಡೋದು ಇವ್ರ ಮುಖ್ಯ ಕೆಲಸ. ಆಗಾಗ ಬಿಸಿಸಿಐ ಹಂಚಿಕೊಳ್ಳೋ ಸ್ಪೆಷಲ್ ಇಂಟರ್ ವ್ಯೂಗಳ ಹಿಂದಿನ ರೂವಾರಿ ಇವ್ರೆ. ಟೀಮ್ ಇಂಡಿಯಾ ಅಂದಾಕ್ಷಣ ಥಟ್ ಅಂತಾ ನೆನಪಾಗೋದು ಆಟಗಾರರು ಮಾತ್ರ. ಆದ್ರೆ, ಆಟಗಾರರ ಪರ್ಫಾಮೆನ್ಸ್ ಹಿಂದೆ ಒಂದು ದೊಡ್ಡ ಟೀಮೇ ಇರುತ್ತೆ. ಆ ಟೀಮ್ನಲ್ಲಿ ಇಬ್ಬರು ಮಹಿಳಾ ಮಣಿಗಳೂ ಇರೋದು ಹೆಮ್ಮೆಯ ವಿಚಾರ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ