ಈಕೆ ಪಾಕಿಸ್ತಾನದ ಪ್ರಿಯಾಂಕ ಚೋಪ್ರಾ..! 5 ನಿಮಿಷದ ಜಾಹೀರಾತಿಗೆ ಪಡೆಯುವ ಸಂಭಾವನೆ ಎಷ್ಟು ಗೊತ್ತಾ?

author-image
Gopal Kulkarni
Updated On
ಈಕೆ ಪಾಕಿಸ್ತಾನದ ಪ್ರಿಯಾಂಕ ಚೋಪ್ರಾ..! 5 ನಿಮಿಷದ ಜಾಹೀರಾತಿಗೆ ಪಡೆಯುವ ಸಂಭಾವನೆ ಎಷ್ಟು ಗೊತ್ತಾ?
Advertisment
  • ಪಾಕಿಸ್ತಾನದಲ್ಲಿದ್ದಾರೆ ಪ್ರಿಯಾಂಕ ಚೋಪ್ರಾ ಹೋಲುವ ಸುರಸುಂದರಿ
  • ಪಾಕಿಸ್ತಾನಿ ಪ್ರಿಯಾಂಕ ಚೋಪ್ರಾ ಅಂತಲೇ ಪ್ರಸಿದ್ಧಿ ಪಡೆದಿರುವ ನಟಿ
  • ಒಂದು ಜಾಹಿರಾತಿಗೆ ಈಕೆ ಪಡೆಯುವ ಸಂಭಾವನೆ ಎಷ್ಟು ಲಕ್ಷ ಗೊತ್ತಾ?

ಭಾರತದಂತೆಯೇ ಪಾಕಿಸ್ತಾನದಲ್ಲಿಯೂ ಅನೇಕ ನಟಿಯರು ಫೇಮಸ್ ಆಗಿದ್ದಾರೆ. ಭಾರತೀಯ ಹೀರೋಯಿನ್​​ಗಳ ಸ್ಟೈಲ್​ಗಳನ್ನು ಹೆಚ್ಚು ನಕಲು ಮಾಡುತ್ತಲೇ ಅವರು ಕೂಡ ಒಂದು ನೇಮ್ ಫೇಮ್ ಗಳಿಸುತ್ತಿದ್ದಾರೆ. ಸದ್ಯ ಒಬ್ಬರು ಹೀರೋಯಿನ್​ ಪಾಕಿಸ್ತಾನದ ಜನರ ಮನ ಸೆಳೆಯುತ್ತಿದ್ದಾಳೆ. ಫ್ಯಾಶನ್ ಲೋಕದಲ್ಲಿ ದೊಡ್ಡ ಜನಪ್ರಿಯತೆ ಪಡೆದಿದ್ದಾರೆ. ಈ ಹಿಂದೆ ಹಾನಿಯಾ ಆಮಿರ್ ಎಂಬ ಮಾಡಲೆ್​ ಪಾಕಿಸ್ತಾನದ ಆಲಿಯಾ ಭಟ್ ಎಂದು ಹೆಸರು ಪಡೆದಿಂತೆ ಈಗ ಸೋನ್ಯಾ ಹುಸೈನ್​ ಪಾಕಿಸ್ತಾನದ ಪ್ರಿಯಾಂಕ ಚೋಪ್ರಾ ಎಂದು ಹೆಸರು ಗಳಿಸಿ ಭಾರೀ ಜನಪ್ರಿಯತೆ ಪಡೆದಿದ್ದಾರೆ.

ಸೋನ್ಯಾ ಇತ್ತೀಚಿನ ದಿನಗಳಲ್ಲಿ ತುಂಬಾ ಟ್ರೆಂಡಿಂಗ್​ನಲ್ಲಿ ಇದ್ದಾರೆ. ಪ್ರಿಯಾಂಕ ಚೋಪ್ರಾದ ಪ್ರತಿರೂಪದಂತಿರುವುದೇ ಇವರ ಅಂದದ ಬಂಡವಾಳ. ಕೆಲವು ದಿನಗಳ ಹಿದೆ ಸೋನ್ಯಾ ಹುಸೈನ್ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದರು. ಅನೇಕರು ಸೋನ್ಯಾರನ್ನ ನೀವು ಪ್ರಿಯಾಂಕ ಚೋಪ್ರಾರಂಎಯೇ ಕಾಣುತ್ತಿದ್ದೀರಿ ಎಂದು ಹಾಡಿ ಹೊಗಳಿದರು. ಈ ಪೋಟೋಗಳ ಮೂಲಕ ಸೋನ್ಯಾ ಹುಸೈನ್ ಕೇವಲ ಪಾಕಿಸ್ತಾನದಲ್ಲಿ ಮಾತ್ರವಲ್ಲ ಭಾರತದಲ್ಲಿಯೂ ಬಹುಬೇಗನೇ ಫೇಮ್ ಗಳಸಿಕೊಂಡರು.

ಇದನ್ನೂ ಓದಿ: ಮೊದಲ ಬಾರಿಗೆ ಯಕ್ಷಗಾನದಲ್ಲೂ ಅಭಿನಯಿಸಿದ ಉಮಾಶ್ರೀ.. ಮಂಥರೆಯಾಗಿ ಮನಗೆದ್ದ ಪುಟ್ಟಮಲ್ಲಿ

ಸದ್ಯ ಜಾಹಿರಾತಿನಲ್ಲಿ ಕಾಣಿಸಿಕೊಳ್ಳುತ್ತಿರುವ ಸೋನ್ಯಾ ಹುಸೈನ್. ಐದು ನಿಮಿಷದ ಆ್ಯಂಡ್​ಗೆ ಬರೋಬ್ಬರಿ ಒಂದು ಲಕ್ಷ ರೂಪಾಯಿ ಸಂಭಾವನೆ ಪಡೆಯುತ್ತಾರೆ. ಸದ್ಯ ಅವರು ಗಳಿಸಿರುವ ಒಟ್ಟು ಆಸ್ತಿ ಸುಮಾರು 57 ಕೋಟಿ ರೂಪಾಯಿ ಎಂದು ಹೇಳಲಾಗುತ್ತಿದೆ. ಈ ಹಿಂದೆ ಪಾಕಿಸ್ತಾನದ ಆಲಿಯಾಭಟ್ ಎಂದು ಹೆಸರು ಗಳಿಸಿದ್ದ ಹನಿಯಾ ಆಮಿರ್​​ ಅವರ ಒಟ್ಟು ಆಸ್ತಿ ಸುಮಾರು 48 ಕೋಟಿ ರೂಪಾಯಿ ಇದೆ.
ಸೋನ್ಯಾ ಹುಸೈನ್​ ಇನ್​ಸ್ಟಾಗ್ರಾಮ್​ನಲ್ಲಿಯೂ ಕೂಡ ತುಂಬಾ ಫೇಮಸ್ ಸುಮಾರು 30 ಲಕ್ಷಕ್ಕೂ ಅಧಿಕ ಫಾಲೋವರ್ಸ್​​ಗಳನ್ನು ಹೊಂದಿದ್ದಾರೆ. ಗ್ಲಾಮರಸ್ ಹಾಗೂ ಸ್ಟೈಲಿಶ್ ಫೋಟೋಗಳನ್ನು ಅಪ್​ಲೋಡ್ ಮಾಡುವ ಮೂಲಕ ಪಡ್ಡೆ ಹುಡಗರ ಹೃದಯದ ಜೊತೆಗೆ ನಿದ್ದೆಯನ್ನು ಕದಿಯುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment