ಫೈನಲ್​ ವೇಳೆ ಹೊರ ಬಿದ್ದ ಹೊಸ ಲವ್ ಸ್ಟೋರಿ.. ಇದು ಕ್ರಿಕೆಟರ್​ನ ಸುಂದರ್ ಪ್ರೇಮ್ ಕಹಾನಿ!

author-image
Bheemappa
Updated On
ಫೈನಲ್​ ವೇಳೆ ಹೊರ ಬಿದ್ದ ಹೊಸ ಲವ್ ಸ್ಟೋರಿ.. ಇದು ಕ್ರಿಕೆಟರ್​ನ ಸುಂದರ್ ಪ್ರೇಮ್ ಕಹಾನಿ!
Advertisment
  • ಟೀಮ್​ ಇಂಡಿಯಾ ಕ್ಯಾಂಪ್​ನಲ್ಲಿ​ ಪ್ರೀತಿ- ಪ್ರೇಮ ನಡೆಯುತ್ತಿರುತ್ತೆ
  • ದುಬೈನಲ್ಲಿ ಬ್ಯೂಟಿ ಜೊತೆ ಡೇಟಿಂಗ್, ಮೀಟಿಂಗ್​ ಹೇಗೆಲ್ಲಾ ಇದೆ?
  • ಅಸಿಸ್ ಪ್ರವಾಸದಲ್ಲೇ ಆರಂಭವಾಗಿತ್ತಾ ಈ ಗಪ್​ಚುಪ್​ ಪ್ರೇಮ.?

ಜಸ್​ಪ್ರಿತ್​​ ಬೂಮ್ರಾ- ಸಂಜನಾ ಗಣೇಶನ್​, ಕ್ರಿಕೆಟರ್​​-ಆ್ಯಂಕರ್​ ನಡುವಿನ ಈ ಲವ್​ ಸ್ಟೋರಿ ನಿಮಗೆ ಗೊತ್ತು. ಇಂತದ್ದೇ ಮತ್ತೊಂದು ಪ್ರೇಮ್​ ಕಹಾನಿ ಟೀಮ್​ ಇಂಡಿಯಾದಲ್ಲೀಗ ಸದ್ದು ಮಾಡ್ತಿದೆ. ಆ್ಯಂಕರ್​ ಬ್ಯೂಟಿಗೆ ಆಲ್​​ರೌಂಡರ್​ ವಾಷಿಂಗ್ಟನ್​ ಸುಂದರ್​ ಮಾರು ಹೋಗಿದ್ದಾರೆ. ಸುಂದರ್​ ಸುಂದರ ಪ್ರೇಮ್​​ ಕಹಾನಿ ಇಲ್ಲಿದೆ.

ಚಾಂಪಿಯನ್ಸ್​ ಟ್ರೋಫಿ ಫೈನಲ್​​ ಕದನದ ಕುತೂಹಲ ಕ್ರಿಕೆಟ್​ ಜಗತ್ತಿನಲ್ಲಿ ಮನೆ ಮಾಡಿದೆ. ಸೆಮಿಸ್​ ಸಮರದಲ್ಲಿ ಬಲಿಷ್ಠ ಆಸಿಸ್​ ಪಡೆಯನ್ನ ಸೆದೆ ಬಡಿದ ಬಳಿಕ ಟೀಮ್​ ಇಂಡಿಯಾ ಆತ್ಮವಿಶ್ವಾಸ ಮತ್ತಷ್ಟು ಹೆಚ್ಚಿದೆ. ಎದುರಾಳಿಗಳನ್ನ ಬಗ್ಗು ಬಡಿದು ಅಜೇಯವಾಗಿ ಫೈನಲ್​ಗೆ ಪ್ರವೇಶಿಸಿರುವ ಟೀಮ್​ ಇಂಡಿಯಾ ಟ್ರೋಫಿ ಗೆಲುವಿನ ಮೇಲೆ ಕಣ್ಣಿಟ್ಟಿದ್ದು ಸಿದ್ಧತೆಯನ್ನ ಆರಂಭಿಸಿದೆ. ಈ ಫೈನಲ್​ ಪ್ರಿಪರೇಶನ್​ನ ನಡುವೆ ಟೀಮ್​ ಇಂಡಿಯಾ ಕ್ಯಾಂಪ್​ನಿಂದ ಹೊಸ ಲವ್​ ಸ್ಟೋರಿಯ ಸುದ್ದಿ ಹೊರಬಿದ್ದಿದೆ.

publive-image

ಡೇಟಿಂಗ್​, ಮೀಟಿಂಗ್​.. ದುಬೈನಲ್ಲಿ ಫುಲ್​ ಸುತ್ತಾಟ.!

ಟೀಮ್​ ಇಂಡಿಯಾ ಕ್ಯಾಂಪ್​ನಲ್ಲಿ ಪ್ರೀತಿ ಪ್ರೇಮದ ಸದ್ದು ಜೋರಾಗಿದೆ. ಆಲ್​​ರೌಂಡರ್ ಹಾರ್ದಿಕ್​ ಪಾಂಡ್ಯ ರೂಮರ್ಡ್​​​ ಗರ್ಲ್​ ಫ್ರೆಂಡ್​​ ಕಾಣಿಸಿಕೊಂಡಿದ್ದು ಈಗ ಹಳೆ ವಿಚಾರ. ಇದೀಗ ಮತ್ತೊಬ್ಬ ಆಲ್​​ರೌಂಡರ್​​ ಪ್ರೇಮ್​ ಕಹಾನಿಯ ಸುದ್ದಿ ಸದ್ದು ಮಾಡ್ತಿದೆ. ಪಾಂಡ್ಯಗಿಂತ ಒಂದೆಜ್ಜೆ ಮುಂದೆ ಹೋಗಿರೋ ಈತ ಡೇಟಿಂಗ್​​, ಮೀಟಿಂಗ್​ ಅಂತಾ ಹುಡುಗಿ ಜೊತೆಗೆ ದುಬೈನಲ್ಲಿ ಜೋರು ಸುತ್ತಾಟ ನಡೆಸಿದ್ದಾರೆ. ಈ ಸುತ್ತಾಟದ ವೇಳೆ ಕಾಫಿ ಶಾಪ್​ನಲ್ಲಿ ಹುಡುಗಿ ಕಾಣಿಸಿಕೊಂಡು ಈಗ ಸುದ್ದಿಯಾಗಿದ್ದಾನೆ.

ಆಲ್​​ರೌಂಡರ್​ ವಾಷಿಂಗ್ಟನ್​ ಸುಂದರ್​.. ಈ ವಾಷಿಂಗ್ಟನ್​ ಸುಂದರ್​ರ ಸುಂದರ ಪ್ರೇಮ್​ ಕಹಾನಿ ಸದ್ಯ ಎಲ್ಲೆಡೆ ಹಲ್​ ಚಲ್​ ಎಬ್ಬಿಸಿದೆ. ಕಾಫಿ ಶಾಪ್​​​ನಲ್ಲಿ ಹುಡುಗಿಯೊಬ್ಬಳ ಜೊತೆಗೆ ಸುಂದರ್​ ಕಾಣಿಸಿಕೊಂಡಿರೋ ವಿಡಿಯೋ ಸಖತ್​ ವೈರಲ್​ ಆಗಿದೆ. ಡೇಟಿಂಗ್​ ರೂಮರ್ಸ್​​ ಬಿರುಗಾಳಿಯಂತೆ ಹಬ್ಬಿದೆ. ಅಸಲಿಗೆ ಇದು ಮತ್ತೊಂದು ಪ್ರೇಮ ಕಾವ್ಯ ಅಂತಿವೆ ಬಲ್ಲ ಮೂಲಗಳು.

ಆ್ಯಂಕರ್​ ಅಂದಕ್ಕೆ ಮಾರು ಹೋದ್ರಾ ಆಲ್​​ರೌಂಡರ್​.?

ಕಾಫಿ ಡೇಟ್​ನ ವಿಡಿಯೋದಲ್ಲಿ ಸುಂದರ್​ ಜೊತೆಗಿರುವ ಸುಂದರಿಯ ಹೆಸರು ಸಾಹಿಬಾ ಬಾಲಿ. ಬಾಲಿವುಡ್​ನ ಆ್ಯಕ್ಟರ್​ & ಸ್ಪೋರ್ಟ್ಸ್​ ಪ್ರೆಸೆಂಟರ್​​.​ ಚಾಂಪಿಯನ್ಸ್​ ಟ್ರೋಫಿಯಲ್ಲಿ ಟೀಮ್​ ಇಂಡಿಯಾ ಪರ ಸುಂದರ್ ಆಡ್ತಿದ್ರೆ, ಸಾಹಿಬಾ ಬಾಲಿ ಪ್ರೆಸೆಂಟರ್​ ಆಗಿ ಬ್ರಾಡ್​​​ಕಾಸ್ಟಿಂಗ್​ ಚಾನೆಲ್​ಗೆ ಕೆಲಸ ಮಾಡ್ತಿದ್ದಾರೆ. ಬ್ಯುಸಿ ಶೆಡ್ಯೂಲ್​ ನಡುವೆ ಸಿಗುವ ಫ್ರಿ ಟೈಮ್​ನಲ್ಲಿ ಇವರಿಬ್ಬರು ಒಟ್ಟಾಗಿ ದುಬೈ ರೌಂಡ್ಸ್​ ಹಾಕ್ತಿದ್ದಾರೆ.

ಅಸಿಸ್ ಪ್ರವಾಸದಲ್ಲೇ ಶುರುವಾಗಿತ್ತಾ ಗಪ್​ಚುಪ್​ ಪ್ರೇಮ.?

ಸುಂದರ್​ ಹಾಗೂ ಸಾಹಿಬಾ ಈಗ ದುಬೈನಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ದಾರೆ. ಆದ್ರೆ, ಇವರಿಬ್ಬರ ಪರಿಚಯಕ್ಕೆ ವೇದಿಕೆಯಾಗಿದ್ದು ಆಸ್ಟ್ರೇಲಿಯಾ ಪ್ರವಾಸ. ಬಾರ್ಡರ್​​-ಗವಾಸ್ಕರ್​​ ಟೆಸ್ಟ್​ ಸರಣಿಯ ವೇಳೆ ಸುಂದರ್ ತಂಡದೊಂದಿಗಿದ್ರೆ, ಬ್ರಾಡ್​ಕಾಸ್ಟಿಂಗ್​ ಟೀಮ್​ ಜೊತೆಗೆ ಸಾಹಿಬಾ ಇದ್ದರು. ಈ ಪ್ರವಾಸದ ವೇಳೆಯೇ ಇವರಿಬ್ಬ ನಡುವೆ ಪರಿಚಯವಾಗಿ, ಸ್ನೇಹ ಶುರುವಾಗಿದ್ದು ಎಂಬ ಸುದ್ದಿಯಿದೆ. ಆ ಸ್ನೇಹವೇ ಇದೀಗ ಪ್ರೀತಿಯ ರೂಪ ಪಡೆದುಕೊಂಡಿದೆ ಎನ್ನಲಾಗ್ತಿದೆ.

ಸುಂದರ್​ ಮನಗೆದ್ದಿರುವ ಸಾಹಿಬಾ ಬಾಲಿವುಡ್​ನ ಅಂಗಳದಲ್ಲಿ ಬಾಕ್ಸ್​ ಆಫೀಸ್​ ಕೊಳ್ಳೆ ಹೊಡೆದ ಕಬೀರ್​ ಸಿಂಗ್​, ಸುಲ್ತಾನ್​ ಚಿತ್ರ ಸಪೋರ್ಟಿಂಗ್​ ಕ್ಯಾರೆಕ್ಟರ್​ ಮಾಡಿದ್ದರು. ಲೈಲಾ ಮಜ್ನು, ತಾನಾವ್, ಡಿಯರ್​ ಮಾಯಾ ಸೇರಿದಂತೆ ಹಲವು ಚಿತ್ರಗಳಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಹಲವು ಮ್ಯೂಸಿಕ್​ ಆಲ್ಬಂಗಳಲ್ಲಿಯೂ ಸಾಹಿಬಾ ಕಾಣಿಸಿಕೊಂಡಿದ್ದಾರೆ.

ಜೊಮ್ಯಾಟೋ TO ಬಾಲಿವುಡ್​, ಬಾಲಿವುಡ್​ TO ಆ್ಯಂಕರ್​​.!

ಈ ಸಾಹಿಬಾ ಬಾಲಿಯ ಜರ್ನಿ ಸಖತ್​ ಇಂಟರೆಸ್ಟಿಂಗ್​ ಆಗಿದೆ ಕಣ್ರಿ. ಈಕೆಗೆ ಆರಂಭದಲ್ಲಿ ಆಸಕ್ತಿ ಇದ್ದಿದ್ದು ಬ್ಯುಸಿನೆಸ್​ ಮೇಲೆ. ಹೀಗಾಗಿ ಡೆಲ್ಲಿ ಯುನಿವರ್ಸಿಟಿಯಲ್ಲಿ ಎಕಾನಾಮಿಕ್ಸ್​ ಡಿಗ್ರಿ ಪಡೆ ಸಾಹಿಬಾ, ಡರ್ಹಾಮ್​ ಯುನಿವರ್ಸಿಟಿ ಆಫ್​​ ಬ್ಯುಸಿನೆಸ್​ ಸ್ಕೂಲ್​ನಲ್ಲಿ ಮಾಸ್ಟರ್ಸ್​ ಡಿಗ್ರಿ ಕಂಪ್ಲೀಟ್ ಮಾಡಿದ್ದಾರೆ. ಆ ಬಳಿಕ ಜೋಮ್ಯಾಟೋ ಇದ್ಯಲ್ಲ ಅದ್ರಲ್ಲಿ ಬ್ರ್ಯಾಂಡ್​ ಮ್ಯಾನೇಜರ್​ ಆಗಿ ಕಾರ್ಯ ನಿರ್ವಹಿಸಿದ್ದರು.

ಇದನ್ನೂ ಓದಿ:KL ರಾಹುಲ್ ಸೈಲೆಂಟ್ ಆಟಕ್ಕೆ ಎದುರಾಳಿ ಕಥೆ ಫಿನೀಶ್​.. ಕನ್ನಡಿಗನ ಭಯದಲ್ಲಿ ಕಿವೀಸ್!​

publive-image

2 ವರೆ ವರ್ಷ ಜೊಮ್ಯಾಟೋದಲ್ಲಿ ಕೆಲಸ ಮಾಡಿದ ಸಾಹಿಬಾ ಬಾಲಿಗೆ ಅದೇನಾಯ್ತೋ ಗೊತ್ತಿಲ್ಲ. ಸಡನ್​ ಆಗಿ ಆ್ಯಕ್ಟಿಂಗ್​ ಮೇಲೆ ಇಂಟರೆಸ್ಟ್​ ಬಂದು ಕೆಲಸ ಬಿಟ್ಟು ಬಾಲಿವುಡ್​ ಅಂಗಳದಲ್ಲಿ ಅದೃಷ್ಟ ಪರೀಕ್ಷೆ ನಡೆಸಿದರು. ಅದಾದ ಬಳಿಕ ಈಗ ಬಾಲಿವುಡ್​ನೂ ಬಿಟ್ಟು ಸ್ಪೋರ್ಟ್ಸ್​​ ಪ್ರೆಸೆಂಟರ್​ ಆಗಿ ಸ್ಪೋರ್ಟ್ಸ್​ ಚಾನೆಲ್​ ಸೇರಿದ್ದಾರೆ.

ಕ್ರಿಕೆಟರ್ಸ್​ & ಸ್ಪೋರ್ಟ್ಸ್​ ಪ್ರೆಸೆಂಟರ್​​ ಲವ್​ ಕತೆ ಹೊಸದೇನಲ್ಲ. ಗಪ್​ಚುಪ್​ ಆಗಿ ಲವ್​ ಮಾಡಿ ಬಳಿಕ ಹಸೆಮಣೆ ಏರಿದ ಜಸ್​ಪ್ರೀತ್​ ಬೂಮ್ರಾ- ಸಂಜನಾ ಗಣೇಶನ್​ ಪ್ರೇಮ್​ ಕಹಾನಿ ಬಹುತೇಕ ಹೀಗೆ ಇತ್ತು. ಅದೇ ರೀತಿ ಇದೀಗ ಸುಂದರ್​-ಸಾಹಿಬಾ ಪ್ರೇಮಕಾವ್ಯ ಶುರುವಾಗಿದೆ. ಸದ್ಯಕ್ಕಿದು ಗಾಸಿಪ್​​ ರೂಪದಲ್ಲಿದ್ರೂ, ಈ ಲವ್​ ಕಹಾನಿಗೆ ಅಧಿಕೃತ ಮುದ್ರೆ ಬೀಳುವ ಸಾಧ್ಯತೆ ಹೆಚ್ಚಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment