Advertisment

ಭಾರತದಲ್ಲಿದ್ದ ಅತಿದೊಡ್ಡ ಹಾವಿನ ಪಳೆಯುಳಿಕೆ ಪತ್ತೆ.. ಇದು ಅನಕೊಂಡಗಿಂತ ಅತಿ ದೊಡ್ಡ ವಾಸುಕಿ ಸರ್ಪ..!

author-image
Bheemappa
Updated On
ಭಾರತದಲ್ಲಿದ್ದ ಅತಿದೊಡ್ಡ ಹಾವಿನ ಪಳೆಯುಳಿಕೆ ಪತ್ತೆ.. ಇದು ಅನಕೊಂಡಗಿಂತ ಅತಿ ದೊಡ್ಡ ವಾಸುಕಿ ಸರ್ಪ..!
Advertisment
  • ದೈತ್ಯ ಹಾವಿನ ಕುರುಹು ಕಂಡು ಇಡೀ ಜಗತ್ತು ಭಾರತದತ್ತ ನೋಡ್ತಿದೆ
  • ಸಂಶೋಧನೆ ಮತ್ತಷ್ಟು ಮುಂದುವರಿದಿದ್ದು ಸರ್ಪದ ಬಗ್ಗೆ ಕುತೂಹಲ
  • ಕಲ್ಲಿದ್ದಲು ಗಣಿಯಲ್ಲಿ ಭಾರೀ ಗಾತ್ರದ 27 ಪಳೆಯುಳಿಕೆಗಳು ಪತ್ತೆ

ಪುರಾಣದಲ್ಲಿ ವಾಸುಕಿ ಸರ್ಪದ ಕಥೆಗಳನ್ನ ನೀವು ಕೇಳಿರ್ತೀರಾ. ಇಂಥ ಬೃಹತ್ ಸರ್ಪ ನಿಜವಾಗ್ಲೂ ಇತ್ತಾ? ಇತ್ತು ಅಂತಿದೆ ಹೊಸ ಅನ್ವೇಷಣೆ. ಹೌದು, ಭಾರತದಲ್ಲಿ ವಾಸವಿದ್ದ ಅತಿದೊಡ್ಡ ಹಾವಿನ ಪಳೆಯುಳಿಕೆಗಳು ಪತ್ತೆಯಾಗಿದೆ. ಅನಕೊಂಡಾಗಿಂತಲೂ ದೈತ್ಯದ್ದು ಎಂದು ಅಂದಾಜಿಸಲಾಗಿದೆ.

Advertisment

ವಾಸುಕಿ ನಾಗ.. ಹಿಂದೂಧರ್ಮದಲ್ಲಿ ಈ ಸರ್ಪ ವಿಶೇಷ ನಂಬಿಕೆ ಒಳಗೊಂಡಿದೆ. ಸಮುದ್ರ ಮಂಥನದ ಸಮಯದಲ್ಲಿ, ದೇವತೆಗಳು ಮತ್ತು ಅಸುರರು ಇದೇ ವಾಸುಕಿ ಸರ್ಪವನ್ನು ಹಗ್ಗವಾಗಿ ಬಳಸಿ ಮೇರು ಪರ್ವತವನ್ನು ಮಂಥನ ಮಾಡಿದ್ರು ಅಂತಾ ನಂಬಲಾಗಿದೆ. ಅಲ್ಲದೇ ಶ್ರೀಕೃಷ್ಣನನ್ನು ಕಂಸನಿಂದ ರಕ್ಷಿಸಲು ಅವರ ತಂದೆ ಮಳೆಯಲ್ಲಿ ಕರೆದೊಯ್ಯುವಾಗ ಆ ಮಳೆಹನಿ ಮಗುವಾಗಿದ್ದ ಶ್ರೀಕೃಷ್ಣನ ಮೇಲೆ ಬೀಳದಂತೆ ಕಾಪಾಡಿದ್ದು ಕೂಡ ಇದೇ ವಾಸುಕಿ ನಾಗ. ಇದು ಕೇವಲ ಪುರಣಾದ ಕಥೆಯಲ್ಲಿ ನಿಜಕ್ಕೂ ವಾಸುಕಿ ಸರ್ಪ ಇತ್ತು ಅನ್ನೋದಕ್ಕೆ ಸಂಬಂಧಿಸಿದಂತೆ ಪುರಾವೆ ಸಿಕ್ಕಿದೆ.

publive-image

ಅನಕೊಂಡಗಿಂತ ದೊಡ್ಡ ಹಾವಿನ ಕುರುಹು ಕಂಡು ಸಂಶೋಧಕರೇ ಶಾಕ್

ಸುಮಾರು 4.7 ಕೋಟಿ ವರ್ಷಗಳ ಹಿಂದೆ ಭಾರತದಲ್ಲಿ ಸಂಚರಿಸಿದ್ದ ಅತಿದೊಡ್ಡ ಹಾವಿನ ಪಳೆಯುಳಿಕೆಗಳನ್ನ ಸಂಶೋಧಕರು ಕಂಡು ಹಿಡಿದಿದ್ದಾರೆ. ಇಂಥದ್ದೊಂದು ದೈತ್ಯ ಹಾವಿನ ಕುರುಹು ಕಂಡು ಇಡೀ ಜಗತ್ತು ಭಾರತದತ್ತ ತಿರುಗಿ ನೋಡ್ತಿದೆ.

‘ವಾಸುಕಿ’ಸರ್ಪದ ಪಳೆಯುಳಿಕೆ ಪತ್ತೆ

  • ಗುಜರಾತ್​ನ ಕಚ್​​ನ ಕಲ್ಲಿದ್ದಲು ಗಣಿಯಲ್ಲಿ ಪಳೆಯುಳಿಕೆ ಪತ್ತೆ
  • ಕಲ್ಲಿದ್ದಲು ಗಣಿಯಲ್ಲಿ ಭಾರೀ ಗಾತ್ರದ 27 ಪಳೆಯುಳಿಕೆಗಳು ಪತ್ತೆ
  • 2005ರಲ್ಲಿ ಪತ್ತೆಯಾಗಿದ್ದು, ಅಂದಿನಿಂದ ಈ ಬಗ್ಗೆ ಸಂಶೋಧನೆ
  • ಮೊದಲಿಗೆ ಇದು ಮೊಸಳೆ ರೀತಿಯ ಜೀವಿ ಎಂದು ಸಂಶೋಧನೆ
  • ಆದ್ರೀಗ ಬೃಹತ್ ಹಾವಿನ ಪಳೆಯುಳಿಕೆ ಅನ್ನೋದು ಬಯಲು
  • ಈ ಹಾವು ಬರೋಬ್ಬರಿ 1,000 ಕೆಜಿ ತೂಕ ಇತ್ತು ಎಂದು ಅಂದಾಜು
  • ಸುಮಾರು 36ರಿಂದ 50 ಅಡಿ ಉದ್ದ ಇದ್ದಿರೋ ಬಗ್ಗೆ ಅಂದಾಜು
  • ವಿಜ್ಞಾನಿಗಳ ಸಂಶೋಧನಾ ವರದಿಯಲ್ಲಿ ಈ ಬಗ್ಗೆ ಉಲ್ಲೇಖ
  • ರೂರ್ಕಿ ಐಐಟಿಯ ಪ್ರೊಫೆಸರ್ ದೇಬ್​ಜಿತ್‌ ದತ್ತಾರಿಂದ ವರದಿ
  • ಈ ಬೃಹತ್ ಹಾವಿಗೆ ವಾಸುಕಿ ಇಂಡಿಕಸ್‌ ಅಂತಾ ನಾಮಕರಣ
  • ಪುರಾಣಗಳಲ್ಲಿ ಹಾವಿನ ರಾಜ ಎಂದೇ ನಂಬಿರುವ ವಾಸುಕಿ ಹೆಸರು
Advertisment

ಈ ಹಾವಿನ ಜೀವನ ಶೈಲಿ ಹೇಗಿತ್ತು ಅನ್ನೋದ್ರ ಬಗ್ಗೆ ಈ ಸಂಶೋಧನಾ ವರದಿಯಲ್ಲಿ ಒಂದಷ್ಟು ವಿವರಗಳನ್ನ ನೀಡಲಾಗಿದೆ.

ಇದನ್ನೂ ಓದಿ:ಸಿಲಿಕಾನ್ ಸಿಟಿಯಲ್ಲಿ ಇಂದು ಮೋದಿ ಮೇನಿಯಾ.. ಈ ರಸ್ತೆಗಳಲ್ಲಿ ವಾಹನ ಸವಾರರಿಗೆ ನೋ ಎಂಟ್ರಿ

publive-image

‘ವಾಸುಕಿ’ ಸರ್ಪದ ರಹಸ್ಯ!

  • ಅತಿಹೆಚ್ಚು ತೂಕವಿದ್ದ ಕಾರಣ ನಿಧಾನಗತಿಯಲ್ಲಿ ನಡೀತಿದ್ದ ಹಾವು
  • ಈ ಬೃಹತ್ ಹಾವಿನ ಆಹಾರ ಏನಾಗಿತ್ತು ಅನ್ನೋದು ತಿಳಿದುಬಂದಿಲ್ಲ.
  • ತಿಮಿಂಗಿಲ, ಮೊಸಳೆ ಮುಂತಾದ ಜೀವಿಗಳು ಆಹಾರ ಆಗಿದ್ದಿರಬಹುದು
  • ವಾಸುಕಿ ಇಂಡಿಕಸ್ ಹೆಚ್ಚಾಗಿ ಭೂಮಿಯಲ್ಲಿ ವಾಸಿಸಿರೋ ಅಂದಾಜು
  • ದೊಡ್ಡ ಗಾತ್ರದ ಕಾರಣದಿಂದ ಮರಗಳನ್ನು ಹತ್ತಲು ಸಾಧ್ಯವಾಗ್ತಿರಲಿಲ್ಲ
  • ನಿಧಾನಗತಿಯಲ್ಲಿ ಸಾಗುವ ಡೇಂಜರಸ್ ಹಂಟರ್ ಆಗಿದ್ದ ಈ ಹಾವು
Advertisment

ಇಡೀ ಜಗತ್ತಿನಲ್ಲಿ ವಾಸವಿದ್ದ ಅತಿದೊಡ್ಡ ಹಾವು ಇದಾಗಿದೆ. ಇಲ್ಲಿಯವರೆಗೆ ಕೊಲಂಬಿಯಾದಲ್ಲಿ 6 ಕೋಟಿ ವರ್ಷಗಳ ಹಿಂದೆ ಜೀವಿಸಿದ್ದ ಸುಮಾರು 43 ಅಡಿ ಉದ್ದದ ಟಿಟನೋಬೋವಾ ಎಂಬ ಹಾವು ಅತಿ ಉದ್ದದ ಹಾವು ಅಂತಾ ಗುರುತಿಸಲಾಗಿತ್ತು. ಇದೀಗ ವಾಸುಕಿ ಇಂಡಿಕಸ್‌, ಅತಿದೊಡ್ಡ ಹಾವಿನ ಜಾತಿ ಎನಿಸಿಕೊಂಡಿದೆ. ಈ ಬಗ್ಗೆ ಸಂಶೋಧನೆ ಮತ್ತಷ್ಟು ಮುಂದುವರಿದಿದೆ. ದೈತ್ಯ ಸರ್ಪದ ಬಗ್ಗೆ ಕುತೂಹಲವೂ ಹೆಚ್ಚಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment