VIDEO: ತಮ್ಮನಿಗೆ ಅಣ್ಣನ ಹೃದಯಸ್ಪರ್ಶಿ ಸ್ವಾಗತ; ಚಿರಂಜೀವಿ ನೋಡಿ ಪವನ್ ಕಲ್ಯಾಣ್ ಕಣ್ಣೀರು

author-image
Veena Gangani
Updated On
VIDEO: ತಮ್ಮನಿಗೆ ಅಣ್ಣನ ಹೃದಯಸ್ಪರ್ಶಿ ಸ್ವಾಗತ; ಚಿರಂಜೀವಿ ನೋಡಿ ಪವನ್ ಕಲ್ಯಾಣ್ ಕಣ್ಣೀರು
Advertisment
  • ಪವನ್ ಕಲ್ಯಾಣ್​ಗೆ ಭರ್ಜರಿ ಸ್ವಾಗತ ಕೋರಿದ ಮೆಗಾಸ್ಟಾರ್ ಚಿರಂಜೀವಿ
  • ಪೀಠಾಪುರ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾದ ಪವರ್ ಸ್ಟಾರ್
  • ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ ಪವನ್ ಕಲ್ಯಾಣ್‌ ವಿಡಿಯೋ

ಜನಸೇನಾ ಪಾರ್ಟಿ ಸ್ಥಾಪಿಸಿ ಚುನಾವಣಾ ಅಖಾಡಕ್ಕೆ ಎಂಟ್ರಿ ಕೊಟ್ಟಿದ್ದ ನಟ ಪವರ್ ಸ್ಟಾರ್ ಪವನ್ ಕಲ್ಯಾಣ್‌ ಅವರಿಗೆ ಕೊನೆಗೂ ಜಯ ದಕ್ಕಿದೆ. 2024ರ ಆಂಧ್ರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಜನಸೇನಾ ಪಾರ್ಟಿಯು ಗಮನಾರ್ಹ ಸಾಧನೆ ಮಾಡಿದೆ. ಪೀಠಾಪುರ ವಿಧಾನಸಭಾ ಕ್ಷೇತ್ರದಿಂದ ಪವನ್ ಕಲ್ಯಾಣ್‌ ಶಾಸಕರಾಗಿ ಆಯ್ಕೆ ಆಗಿದ್ದಾರೆ.

publive-image

ಇದನ್ನೂ ಓದಿ:VIDEO: ಏರ್‌ಪೋರ್ಟ್‌ನಲ್ಲಿ ಕಂಗನಾ ರನೌತ್‌ಗೆ ಕಪಾಳ ಮೋಕ್ಷ; ಅಸಲಿಗೆ ಆಗಿದ್ದೇನು?

ಇದೀಗ ಪವನ್ ಕಲ್ಯಾಣ್ ಅವರಿಗೆ ಕುಟುಂಬಸ್ಥರು ಬಹಳ ಅದ್ಧೂರಿಯಾಗಿ ಅವರನ್ನು ಸ್ವಾಗತಿಸಿದ್ದಾರೆ. ಆಂಧ್ರಪ್ರದೇಶ ಅಸೆಂಬ್ಲಿ ಚುನಾವಣೆಯಲ್ಲಿ ಪವನ್ ಕಲ್ಯಾಣ್​ ಯಶಸ್ಸು ಕಂಡ ಹಿನ್ನಲೆಯಲ್ಲಿ ಸಹೋದರನಿಗೆ ಮೆಗಾಸ್ಟಾರ್ ಚಿರಂಜೀವಿ ಅವರು ಭರ್ಜರಿ ಸ್ವಾಗತ ಕೋರಿದ್ದಾರೆ. ಪವನ್​ ಕಲ್ಯಾಣ್​ ಅವರು ತಮ್ಮ ಕಾರಿನಿಂದ ಇಳಿಯುತ್ತಿದ್ದಂತೆ ಚಿರಂಜೀವಿ ಅವರು ಹೂಮಳೆ ಸುರಿದು ಮನೆಗೆ ಸ್ವಾಗತಿಸಿದ್ದಾರೆ. ಇದಾದ ಬಳಿಕ ಪವನ್ ಕಲ್ಯಾಣ್ ತಾಯಿ ಅಂಜನಾ ದೇವಿ ಅವರ ಆರತಿ ಬೆಳಗಿ ಅವರನ್ನು ಬರಮಾಡಿಕೊಂಡಿದ್ದಾರೆ. ತಮಟೆ ಹಾಗೂ ವಾದ್ಯದ ಮೂಲಕ ಚಿಕ್ಕಪ್ಪನಿಗೆ ರಾಮ್ ಚರಣ್ ವೆಲ್​ಕಮ್​ ಮಾಡಿದ್ದಾರೆ. ಇದೇ ವೇಳೆ ಚಿರಂಜೀವಿ ಫ್ಯಾಮಿಲಿ ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ. ಈ ಸಂಭ್ರಮದಲ್ಲಿ ಚಿರಂಜೀವಿ, ಪವನ್ ಕಲ್ಯಾಣ್, ರಾಮ್ ಚರಣ್, ಪವನ್ ಕಲ್ಯಾಣ್ ಪತ್ನಿ, ಪವನ್ ಕಲ್ಯಾಣ್ ತಾಯಿ ಹಾಗೂ ಮಗ ಸೇರಿ ಇಡೀ ಕುಟುಂಬ ಭಾಗಿಯಾಗಿತ್ತು.

ಸದ್ಯ ಭರ್ಜರಿ ಸಂಭ್ರಮದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ. ಇನ್ನು, ಸಾಮಾಜಿಕ ಜಾಲತಾಣದಲ್ಲಿ ತಮ್ಮನಿಗೆ ಅಭಿನಂದನೆ ತಿಳಿಸಿರುವ ನಟ ಚಿರಂಜೀವಿ ಅವರು ಹೆಮ್ಮೆ ವ್ಯಕ್ತಪಡಿಸಿದ್ದರು. ನನ್ನ ಪ್ರೀತಿಯ ಕಲ್ಯಾಣ್ ಬಾಬು, ಆಂಧ್ರಪ್ರದೇಶದ ಜನರ ಬೃಹತ್ ಮತ್ತು ಅದ್ಭುತ ಜನಾದೇಶದಿಂದ ನಾನು ರೋಮಾಂಚನಗೊಂಡಿದ್ದೇನೆ. ನೀನು ನಿಜವಾಗಿಯೂ ಈ ಚುನಾವಣೆಯ ಗೇಮ್ ಚೇಂಜರ್. ಮ್ಯಾನ್ ಆಫ್ ದಿ ಮ್ಯಾಚ್ ನಿನಗೆ ಸಲ್ಲಬೇಕು! ಆಂಧ್ರಪ್ರದೇಶದ ಜನರ ಬಗ್ಗೆ ನಿನಗಿರುವ ಆಳವಾದ ಕಾಳಜಿ, ನಿನ್ನ ದೂರದೃಷ್ಟಿ, ರಾಜ್ಯದ ಅಭಿವೃದ್ಧಿಯ ಬಗ್ಗೆ ನೀನು ಹೊಂದಿರುವ ಬಯಕೆ, ನಿನ್ನ ತ್ಯಾಗ, ನಿನ್ನ ರಾಜಕೀಯ ತಂತ್ರಗಳು ಈ ಅದ್ಭುತ ಫಲಿತಾಂಶದಲ್ಲಿ ಪ್ರಭಾವ ಬೀರಿವೆ. ನಾನು ನಿನ್ನ ಬಗ್ಗೆ ಹೆಮ್ಮೆಪಡುತ್ತೇನೆ, ನಿನಗೆ ಹೃತ್ಪೂರ್ವಕ ಅಭಿನಂದನೆಗಳು ಅಂತ ಬರೆದುಕೊಂಡಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment