ಮೆಗಾ ಪವರ್ ಸ್ಟಾರ್‌ ಅಭಿಮಾನಿಗಳಿಗೆ ಗುಡ್‌ನ್ಯೂಸ್.. ರಾಮ್ ಚರಣ್ ತೇಜ 17ನೇ ಸಿನಿಮಾ ಘೋಷಣೆ

author-image
admin
Updated On
ಮೆಗಾ ಪವರ್ ಸ್ಟಾರ್‌ ಅಭಿಮಾನಿಗಳಿಗೆ ಗುಡ್‌ನ್ಯೂಸ್.. ರಾಮ್ ಚರಣ್ ತೇಜ 17ನೇ ಸಿನಿಮಾ ಘೋಷಣೆ
Advertisment
  • ಪುಷ್ಪ ಸಿನಿಮಾ ನಿರ್ದೇಶಕ ಸುಕುಮಾರ್ ಜೊತೆ ರಾಮ್ ಚರಣ್!
  • RRR ಬಳಿಕ ರಾಮ್ ಚರಣ್ ಸಿನಿಮಾಗೆ ಟಾಲಿವುಡ್‌ನಲ್ಲಿ ಮೆಗಾ ಪ್ಲಾನ್
  • ಹೋಳಿ ಹಬ್ಬದ ಸಂಭ್ರಮದಲ್ಲಿ ಹೊಸ ಸಿನಿಮಾದ ಸುಳಿವು ಕೊಟ್ಟ RC

ಹೋಳಿ ಹಬ್ಬದ ದಿನವೇ ಟಾಲಿವುಡ್‌ ಮೆಗಾ ಪವರ್ ಸ್ಟಾರ್ ರಾಮ್ ಚರಣ್ ತೇಜ ಅವರು ತಮ್ಮ ಅಭಿಮಾನಿಗಳಿಗೆ ಗುಡ್‌ನ್ಯೂಸ್ ಕೊಟ್ಟಿದ್ದಾರೆ. ರಾಮ್‌ ಚರಣ್ ಅಭಿನಯದ 17ನೇ ಸಿನಿಮಾ ಅನೌನ್ಸ್ ಮಾಡಲಾಗಿದೆ.

ರಾಮ್‌ ಚರಣ್ ಅವರು ಸೋಷಿಯಲ್ ಮೀಡಿಯಾದಲ್ಲಿ ಸ್ಟಾರ್ ಡೈರೆಕ್ಟರ್, ಪುಷ್ಪ ಸಿನಿಮಾ ನಿರ್ದೇಶಕ ಸುಕುಮಾರ್ ಜೊತೆ ಫೋಟೋ ಹಂಚಿಕೊಂಡಿದ್ದಾರೆ. ಪುಷ್ಪ 2 ಬಳಿಕ ಸುಕುಮಾರ್ ಅವರು ರಾಮ್‌ ಚರಣ್‌ ಅವರ ಸಿನಿಮಾ ಕೈಗೆತ್ತಿಕೊಳ್ಳುತ್ತಿದ್ದಾರೆ. ಈ ಸೂಪರ್ ಜೋಡಿಯ ಸಿನಿಮಾಗೆ ದೇವಿಶ್ರೀ ಪ್ರಸಾದ್ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ.

2022ರಲ್ಲಿ ಸೂಪರ್ ಹಿಟ್ ಆದ RRR ಬಳಿಕ ರಾಮ್ ಚರಣ್ ಸಿನಿಮಾ ರಿಲೀಸ್ ಆಗಿರಲಿಲ್ಲ. ಚಿರಂಜೀವಿ ಅವರ ಆಚಾರ್ಯ ಸಿನಿಮಾದಲ್ಲಿ ಅಭಿನಯಿಸಿದ್ದು, ಬಿಟ್ಟರೆ ರಾಮ್‌ ಚರಣ್ ಸಿನಿಮಾಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ರಾಮ್‌ ಚರಣ್ ಅವರ 16ನೇ ಸಿನಿಮಾ ಬುಚ್ಚಿ ಬಾಬು ಸನಾ ಈಗಾಗಲೇ ಸೆಟ್ಟೇರಿದೆ.

ಇದನ್ನೂ ಓದಿ:ರಾಮ್ ಚರಣ್ v/s ಶಾರುಖ್ ಖಾನ್.. ಅಂಬಾನಿ ಮಗನ ಮದುವೆ ಹಬ್ಬದಲ್ಲಿ ನಿಜಕ್ಕೂ ನಡೆದಿದ್ದೇನು?

ಇದಾದ ಬಳಿಕ ಪುಷ್ಪ ನಿರ್ದೇಶಕ ಸುಕುಮಾರ್ ಜೊತೆ ರಾಮ್ ಚರಣ್ ಸಿನಿಮಾ ಮಾಡುತ್ತಿರೋದು ಅಭಿಮಾನಿಗಳಿಗೆ ಸಂತಸ ತಂದಿದೆ. ಹೋಳಿ ಹಬ್ಬದ ಸಂಭ್ರಮದಲ್ಲಿ ಹೊಸ ಸಿನಿಮಾ ಅನೌನ್ಸ್ ಮಾಡಿ ರಾಮ್ ಚರಣ್ ಎಲ್ಲರಿಗೂ ಸರ್‌ಪ್ರೈಸ್ ಕೊಟ್ಟಿದ್ದಾರೆ. ಸುಕುಮಾರ್ ಹಾಗೂ ರಾಮ್ ಚರಣ್ ಜೋಡಿಯ ಮೋಸ್ಟ್ ಎಕ್ಸ್‌ಪೆಕ್ಟೆಟ್ ಸಿನಿಮಾ ಕುತೂಹಲ ಹೆಚ್ಚಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment