/newsfirstlive-kannada/media/post_attachments/wp-content/uploads/2024/06/Chiranjeevi-Son-in-law-death.jpg)
ಹೈದರಾಬಾದ್: ಮೆಗಾ ಸ್ಟಾರ್ ಚಿರಂಜೀವಿ ಅವರ ಮಾಜಿ ಅಳಿಯ ಶಿರೀಶ್ ಭಾರದ್ವಾಜ್ ಅವರು ನಿಧನರಾಗಿದ್ದಾರೆ. ಶಿರೀಶ್ ಅವರು 2007ರಲ್ಲಿ ಮೆಗಾಸ್ಟಾರ್ ಕಿರಿಯ ಪುತ್ರಿ ಶ್ರೀಜಾ ಅವರನ್ನು ಪ್ರೀತಿಸಿ ಮದುವೆ ಆಗಿದ್ದರು.
ಶ್ರೀಜಾ ಹಾಗೂ ಶಿರೀಶ್ ಅವರ ಮದುವೆಗೆ ಚಿರಂಜೀವಿ ಅವರ ಕುಟುಂಬ ಒಪ್ಪಿಕೊಂಡಿರಲಿಲ್ಲ. ಮನೆಯವರು ಮದುವೆಗೆ ಒಪ್ಪದ ಹಿನ್ನೆಲೆಯಲ್ಲಿ ಶ್ರೀಜಾ, ಶಿರೀಶ್ ಮನೆ ಬಿಟ್ಟು ಹೋಗಿ ಮದುವೆಯಾಗಿದ್ದರು. 2014ರಲ್ಲಿ ಶ್ರೀಜಾ ಮತ್ತು ಶಿರೀಶ್ ದಾಂಪತ್ಯ ಮುರಿದು ಬಿದ್ದಿತ್ತು.
ಇದನ್ನೂ ಓದಿ: ದರ್ಶನ್ ಮಾತ್ರವಲ್ಲ.. ಅಭಿಮಾನಿಗಳಿಗೂ ಇದೆ ಹಬ್ಬ.. ಬಾಲ ಕಟ್ ಮಾಡಲು ಲಿಸ್ಟ್ ರೆಡಿ..!
2007ರಲ್ಲಿ ಶಿರೀಶ್ ಅವರನ್ನು ಮೆಗಾಸ್ಟಾರ್ ಕಿರಿಯ ಪುತ್ರಿ ಶ್ರೀಜಾ ಮದುವೆಯಾಗಿದ್ದರು. 2014ರಲ್ಲಿ ಡಿವೋರ್ಸ್ ಪಡೆದ ನಂತರ 2016ರಲ್ಲಿ ಉದ್ಯಮಿ ಕಲ್ಯಾಣ್ ದೇವ್ ಜೊತೆ ಶ್ರೀಜಾ ಎರಡನೇ ಮದುವೆ ಆಗಿದ್ದರು.
ಶ್ರೀಜಾ ಅವರ ಮಾಜಿ ಪತಿ ಶಿರೀಶ್ ಅವರು ಶ್ವಾಸಕೋಶದ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು ಎನ್ನಲಾಗಿದೆ. ಹಲವು ದಿನಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದ ಶಿರೀಶ್ ಅವರು ಕ್ಯಾನ್ಸರ್ ರೋಗಕ್ಕೆ ತುತ್ತಾಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ