/newsfirstlive-kannada/media/post_attachments/wp-content/uploads/2025/02/Chiranjeevi-On-daughter-2.jpg)
ಹೈದರಾಬಾದ್: ಮೆಗಾ ಸ್ಟಾರ್ ಚಿರಂಜೀವಿ ಅವರು ಹೆಣ್ಣು ಮಕ್ಕಳ ಬಗ್ಗೆ ತಾತ್ಸಾರವಾಗಿ ಮಾತನಾಡಿ ವಿವಾದಕ್ಕೆ ಗುರಿಯಾಗಿದ್ದಾರೆ. ಈ ಮಾತುಗಳಿಂದ ಸೆಲೆಬ್ರಿಟಿ ಸ್ಟಾರ್ ಚಿರಂಜೀವಿಗೂ ಹೆಣ್ಣು ಮಗು ಕಂಡರೆ ಇಷ್ಟವೇ ಇಲ್ಲ ಅನ್ನೋ ಚರ್ಚೆ ಶುರುವಾಗಿದ್ದು, ತೀವ್ರ ಟೀಕೆ, ಭಾರೀ ಆಕ್ರೋಶ ವ್ಯಕ್ತವಾಗಿದೆ.
ಖಾಸಗಿ ಕಾರ್ಯಕ್ರಮದಲ್ಲಿ ಸಾರ್ವಜನಿಕವಾಗಿ ಮಾತನಾಡಿರುವ ಚಿರಂಜೀವಿ ಅವರು ಹೆಣ್ಣು ಮಗುವಿನ ಬಗ್ಗೆ ತಾತ್ಸಾರ ಧೋರಣೆಯನ್ನು ವ್ಯಕ್ತಪಡಿಸಿದ್ದಾರೆ.
ಆ್ಯಂಕರ್ ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಚಿರಂಜೀವಿ ಅವರು ತನ್ನ ಮೊಮ್ಮಕ್ಕಳು ಮನೆಯನ್ನು ಲೇಡೀಸ್ ಹಾಸ್ಟೆಲ್ ಮಾಡಿಬಿಡುತ್ತಾರೆ. ನನಗೆ ಮತ್ತೊಂದು ಹೆಣ್ಣು ಮಗು ಹುಟ್ಟುವ ಭಯ ಇದೆ. ಹೆಣ್ಣು ಮಕ್ಕಳು ನಮ್ಮ ಕುಟುಂಬದ ಪರಂಪರೆಯನ್ನು ಮುಂದುವರಿಸಲಾಗಲ್ಲ. ಕುಟುಂಬದ ಪರಂಪರೆಯನ್ನು ಹೆಣ್ಣು ಮಕ್ಕಳು ಎತ್ತಿ ಹಿಡಿಯಲಾಗಲ್ಲ ಎಂದಿದ್ದಾರೆ.
ಇದನ್ನೂ ಓದಿ: ‘ತಂಡೇಲ್’ ತಂಡಕ್ಕೆ ಬಿಗ್ ಶಾಕ್; ರಿಲೀಸ್ ಆದ 2 ದಿನಕ್ಕೆ ಸಾರಿಗೆ ಬಸ್‌ನಲ್ಲಿ ಉಚಿತ ಪ್ರದರ್ಶನ!
ಚಿರಂಜೀವಿ ಮಗ ರಾಮಚರಣ್ ಪತ್ನಿ ಉಪಾಸನಾ ಒಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಮತ್ತೊಂದು ಹೆಣ್ಣು ಮಗು ಹುಟ್ಟುವ ಭಯ ಚಿರಂಜೀವಿಗಿದ್ದು, ಸಾರ್ವಜನಿಕ ಸಮಾರಂಭದಲ್ಲಿ ಮಗ ರಾಮಚರಣ್‌ಗೆ ನೀನು ಗಂಡು ಮಗು ಪಡೆಯುವಂತೆ ಕೇಳಿದ್ದಾರೆ.
"అరే చరణ్, ఈసారి ఓ వారసుడిని ఇవ్వారా… మన లెగసీ కొనసాగినట్టు ఉంటుంది!"
- Megastar Chiranjeevi's words at the #BrahmaAnandam pre-release event. pic.twitter.com/R8iWvABUHZ
— WC (@whynotcinemasHQ)
"అరే చరణ్, ఈసారి ఓ వారసుడిని ఇవ్వారా… మన లెగసీ కొనసాగినట్టు ఉంటుంది!"
- Megastar Chiranjeevi's words at the #BrahmaAnandam pre-release event. pic.twitter.com/R8iWvABUHZ— Whynot Cinemas (@whynotcinemass_) February 11, 2025
">February 11, 2025
ಚಿರಂಜೀವಿ ಅವರ ಈ ಮಾತುಗಳಿಂದ ಅಪಾರ ಅಭಿಮಾನಿ ಬಳಗವನ್ನು ಹೊಂದಿರುವ ಮೆಗಾ ಸ್ಟಾರ್‌ಗೆ ಹೆಣ್ಣು ಮಗು ಕಂಡರೇ ಇಷ್ಟವೇ ಇಲ್ಲ. ಇಂಥ ಮಾತುಗಳಿಂದಲೇ ಸಮಾಜದಲ್ಲಿ ಹೆಣ್ಣು ಭ್ರೂಣ ಹತ್ಯೆ ಹೆಚ್ಚಾಗುತ್ತಿದೆ ಎಂದು ಅನೇಕರು ವಿರೋಧ ವ್ಯಕ್ತಪಡಿಸಿದ್ದಾರೆ. ಸಾರ್ವಜನಿಕ ಸಮಾರಂಭದಲ್ಲಿ ಚಿರಂಜೀವಿ ಅವರ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ