/newsfirstlive-kannada/media/post_attachments/wp-content/uploads/2024/03/megha.jpg)
ಹೆಣ್ಣಿಗೆ ಸೀರೆ ಯಾಕೆ ಅಂದ. ಆ ಅಂದ ಚಂದ ಅವಳ ಒಳಗೆ ಅಡಗಿರೋದ್ರಿಂದ ಎಂಬ ಹಾಡು ಎಲ್ಲರಿಗೂ ಗೊತ್ತೇ ಇದೆ. ಹೆಣ್ಣು ಮಕ್ಕಳು ಸೀರೆಯಲ್ಲಿ ಎಷ್ಟು ಅಂದವಾಗಿ ಕಾಣುತ್ತಾರೆ. ಸೀರೆಯನ್ನು ಉಟ್ಟುಕೊಂಡು ಮುಖದಲ್ಲೂ ಒಂದು ಚಂದದ ಮುಗುಳ್ನಗೆ ಇದ್ದರೆ ಸಾಕು ಅದರ ಕಳೆಯೇ ಬೇರೆ. ಹೀಗೆ ಸೀರಿಯಲ್​ ಲೋಕದಿಂದ ಸಿನಿಮಾ ಲೋಕಕ್ಕೆ ಕಾಲಿಟ್ಟಿರುವ ನಟಿ ಮೇಘಾ ಶೆಟ್ಟಿ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.
View this post on Instagram
ಜೊತೆ ಜೊತೆಯಲಿ ಸೀರಿಯಲ್​ನಲ್ಲಿ ಅನು ಸಿರಿಮನೆ ಎಂದೇ ಖ್ಯಾತಿ ಪಡೆದಿರುವ ಮೇಘಾ ಶೆಟ್ಟಿ ಬಿಳಿ ಬಣ್ಣದ ಸೀರೆಯಲ್ಲಿ ಅಪ್ಸರೆಯಂತೆ ಕಾಣಿಸಿಕೊಂಡಿದ್ದಾರೆ. ಇನ್ನು ಇನ್​ಸ್ಟಾಗ್ರಾಮ್​ನಲ್ಲಿ ಸಾಕಷ್ಟು ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ ನಟಿ ಮೇಘಾ ಶೆಟ್ಟಿ. ಸ್ಟೈಲಿಶ್​ ಆಗಿ ಸೀರೆಯನ್ನು ತೊಟ್ಟು ಹಾಟ್ ಬ್ಯೂಟಿಯಂತೆ ಕ್ಯಾಮೆರಾಗೆ ಪೋಸ್​ ಕೊಟ್ಟಿದ್ದಾರೆ.
/newsfirstlive-kannada/media/post_attachments/wp-content/uploads/2024/03/megha-1.jpg)
ಇನ್ನೂ, ಈ ಫೋಟೋ ನೋಡಿದ ನೆಟ್ಟಿಗರು ಮೇಘಾ ಶೆಟ್ಟಿ ಅಂದವನ್ನು ಹಾಡಿ ಹೊಗಳಿದ್ದಾರೆ. ಬೆಣ್ಣೆ ಹುಡುಗಿಗೆ ಹಾಲು ಚೆಲ್ಲಿದ ಹಾಗೇ ಈ ನಮ್ಮ ಸುರ ಸುಂದರಿ, ಸೋ ಬ್ಯೂಟಿಫುಲ್, ನಮ್ಮ ಬೆಳದಿಂಗಳ ಚೆಲುವೆ ಅಂತಾ ಭಿನ್ನ ವಿಭಿನ್ನವಾಗಿ ಅಭಿಮಾನಿಗಳು ಕಾಮೆಂಟ್​ ಮಾಡುವ ಮೂಲಕ ಹಾಡಿ ಹೊಗಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us