/newsfirstlive-kannada/media/post_attachments/wp-content/uploads/2025/06/Meghalaya-for-honeymoon-case-1.jpg)
ತನ್ನ ಗಂಡನನ್ನ ಹೇಗೆ ಹತ್ಯೆ ಮಾಡಬೇಕು? ಆಮೇಲೆ ತಾನು ಯಾವ್ ರೀತಿಯಲ್ಲಿ ಕೇಸ್‌ನಿಂದ ಪರಾರಿಯಾಗಬೇಕು? ಅನ್ನೋದನ್ನ ಸೋನಮ್ ಪಕ್ಕಾ ಪ್ಲ್ಯಾನ್ ಮಾಡಿದ್ದಳು. 20 ಲಕ್ಷ ರೂಪಾಯಿ ಸುಪಾರಿಯನ್ನೂ ಕೊಟ್ಟಿದ್ದಳು. ಆದ್ರೆ, ಆಕೆ ಪೊಲೀಸರಿಗೆ ಸಿಕ್ಕಿ ಕೊಂಡಿದ್ದು ಹೇಗೆ? ವಿಧವೆ ಆದ್ಮೇಲೆ ಮದುವೆ ಆಗ್ತೀನಿ ಅಂತಾ ಲವರ್‌ಗೆ ಪ್ರಾಮಿಸ್ ಮಾಡಿದ್ದಳಾ ಸೋನಂ? ತಂದೆಯ ಕಾರ್ಖಾನೆಯಲ್ಲಿ ಮಗಳಿಗೆ ಲವ್ ಆಗಿದ್ದು ಹೇಗೆ?.
ಮದುವೆ ಅನ್ನೋದ್ ಸ್ವರ್ಗದಲ್ಲಿಯೇ ನಿರ್ಧಾರವಾಗಿರ್ತಾವೆ. ಇಲ್ಲಿ ಕಲ್ಯಾಣ ಮಂಟಪಗಳು ಮಾತ್ರ ಅನ್ನೋದನ್ನ ಹಿರಿಯರು ಹೇಳ್ತಾರೆ. ಆದ್ರೆ, ಸೋನಮ್ ಅನ್ನೋ ರಾಕ್ಷಸಿ ಮಾಡಿದ್ದು ಘನಘೋರ ಕೆಲ್ಸ. ಇನ್ನು ಮದುವೆಯಾಗಿ ಒಂದೆರಡು ವಾರವೂ ಆಗಿರ್ಲಿಲ್ಲ. ನೋಡೋದಕ್ಕೆ ಅಂದ ಚೆಂದವಾಗಿದ್ದ ಈ ಮಿಂಚುಳ್ಳಿ ಮನಸ್ಸಲ್ಲಿ ವಿಷ ತುಂಬಿತ್ತು. ಆ ವಿಷ ಗೊತ್ತು ಮಾಡಲು ಸಾಧ್ಯವಾಗದ ರಘುವಂಶಿ ಜೀವ ಬಿಟ್ಟಿದ್ದಾರೆ. ಆದ್ರೆ, ತನ್ಗೆ ರಘುವಂಶಿ ಇಷ್ಟವಿಲ್ಲ ಅಂತಾದ್ರೆ ಮದುವೆ ಕ್ಯಾನ್ಸಲ್ ಮಾಡಿಕೊಳ್ಳಬಹುದಾಗಿತ್ತು. ಆದ್ರೆ, ಈ ರಾಕ್ಷಸಿ ಆ ಕೆಲ್ಸ ಮಾಡಿಲ್ಲ. ಅದನ್ನ ಬಿಟ್ಟು ಲವರ್ ಜೊತೆ ಸೇರಿ ಹತ್ಯೆಗೆ ಸ್ಕೇಚ್ ಹಾಕಿದ್ದಾಳೆ. ಹನಿಮೂನ್‌ಗೆ ಬೇಡ ಅಂದ್ರೂ ಒತ್ತಾಯ ಮಾಡಿ ಕರ್ಕೊಂಡ್ ಹೋಗಿ ಗಂಡನಿಗೆ ಮುಹೂರ್ತ ಇಟ್ಟಿದ್ದಾಳೆ. ಇದು ಯಾವುದೇ ಕ್ರೈಂ ಥ್ರಿಲ್ಲರ್ ಸಿನಿಮಾಗೂ ಕಡಿಮೆ ಇಲ್ಲದ ಸ್ಟೋರಿ. ಹಾಗಾದ್ರೆ, ಆಗ ತಾನೇ ಮದುವೆಯಾಗಿದ್ದ ಸೋನಮ್ ತನ್ನ ಗಂಡನಿಗೆ ಸ್ಕೆಚ್ ಹಾಕಿದ್ದು ಯಾಕೆ? ಆಕೆಯ ಭವಿಷ್ಯದ ಪ್ಲಾನ್ ಏನಿಗಿತ್ತು ಅಂತಾ ನೋಡ್ತಾ ಹೋದ್ರೆ ಆಕೆಯ ಬಣ್ಣ ಬಟಾ ಬಯಲಾಗುತ್ತೆ.
ಪೊಲೀಸರಿಗೆ ಶರಣಾಗಿ ಕಥೆ ಕಟ್ಟಿದ್ದ ಕೊಲೆಗಾರ್ತಿ!
ಮೇ 20ಕ್ಕೆ ಹನಿಮೂನ್‌ಗೆ ಹೋಗಿದ್ದ ರಾಜಾ ರಘುವಂಶಿ ಮತ್ತು ಸೋನಮ್ ಜೋಡಿ ಮೇ 23ಕ್ಕೆ ಕಣ್ಮರೆಯಾಗಿ ಬಿಡ್ತಾರೆ. ಪೊಲೀಸ್ರು ಡ್ರೋನ್‌ಗಳನ್ನ ಬಳಸಿ, ಸ್ಥಳೀಯರನ್ನ ನೆರವು ಪಡ್ಕೊಂಡ್, ರಘುವಂಶಿ ಬಳ್ಕೆ ಮಾಡ್ತಿದ್ದ ಸ್ಮಾರ್ಟ್ ವಾಚ್ ಟ್ರ್ಯಾಕ್ ಮಾಡ್ಕೊಂಡ್ ಅಂದು ಮೃತದೇಹ ಪತ್ತೆ ಮಾಡ್ತಾರೆ. ಅದು ಮೃತಪಟ್ಟ 9 ದಿನಗಳ ಅಂತರ ಶವ ಪತ್ತೆಯಾಗುತ್ತೆ. ಹಾಗೇ ಸೋನಮ್ ಕೂಡ ದುಷ್ಕರ್ಮಿಗಳಿಂದ ಕೊಲೆಯಾಗಿರ್ಬೇಕು ಅಂತಾ ಪೊಲೀಸ್ರು ಹುಡುಕಾಡ್ತಾರೆ. ಆದ್ರೆ, ಎಲ್ಲಿಯೂ ಸೋನಮ್ ದೇಹ ಪತ್ತೆಯಾಗೋದಿಲ್ಲ. ಆದ್ರೆ, ಅದಾಗ್ಲೇ ಪೊಲೀಸ್ರು ಸೋನಮ್ ಫೋನ್ ಮೇಲೆ ಕಣ್ಣಿಟ್ಟಿದ್ರು. ಆಕೆ ಯಾರ್ ಯಾರ್ ಜೊತೆ ಮಾತಾಡಿದ್ದಾಳೆ? ಯಾರನ್ನ ಸಂಪರ್ಕ ಮಾಡಿದ್ದಾಳೆ? ಅನ್ನೋದನ್ನ ಗೊತ್ತು ಮಾಡ್ಕೊಂಡಿದ್ರು. ಈ ನಡುವೆ ಜೂನ್ 9 ರಂದು ಸೋನಮ್ ಏಕಾಏಕಿ ಉತ್ತರ ಪ್ರದೇಶದ ಗಾಜಿಪುರ್‌ದ ಪೊಲೀಸ್ ಠಾಣೆಗೆ ಬಂದು ಶರಣಾಗುತ್ತಾಳೆ. ತಾನು ಮೇಘಾಲಯದಲ್ಲಿ ಹನಿಮೂನ್‌ಗೆ ಹೋದಾಗ ದುಷ್ಕರ್ಮಿಗಳು ಬಂದವ್ರು ತನ್ನ ಗಂಡನನ್ನ ಸಾಯಿಸಿ ಬಿಟ್ರು. ಆಮೇಲೆ ತನ್ನನ್ನ ಪ್ರಜ್ಞೆ ತಪ್ಪಿಸಿ ಕಾರಿನಲ್ಲಿ ತಂದು ಡಾಬಾ ಬಳಿ ಬಿಟ್ಟು ಹೋದ್ರು ಅನ್ನೋ ಕಥೆ ಹೇಳ್ತಾಳೆ. ಆದ್ರೆ, ಸೋನಮ್ ಮೊಬೈಲ್ ಮೇಲೆ ಹದ್ದಿನ ಕಣ್ಣಿಟ್ಟಿದ್ದ ಪೊಲೀಸ್ರಿಗೆ ಸತ್ಯ ಕಥೆ ಏನು ಅನ್ನೋದ್ ಗೊತ್ತಿತ್ತು. ಹೀಗಾಗಿ ಅದನ್ನ ಪೊಲೀಸ್ರು ನಂಬೋದಕ್ಕೆ ಹೋಗಿಲ್ಲ.
ಅಪ್ಪನ ಕಾರ್ಖಾನೆಯಲ್ಲಿಯೇ ಸೋನಮ್‌ಗೆ ಹುಟ್ಟಿತ್ತು ಪ್ರೀತಿ!
ಪೊಲೀಸ್ರು ಕಾಣಿಯಾದವ್ರ ಪತ್ತೆಗೆ ಹುಡುಕುವಾಗ್ಲೇ ತನಿಖೆ ಶುರು ಮಾಡಿದ್ರು. ಆವತ್ತು ಯಾರ್ ಯಾರ್ ಆ ಪ್ರದೇಶಕ್ಕೆ ಟ್ರಕ್ಕಿಂಗ್ ಹೋಗಿದ್ರೋ? ಅವರೆಲ್ಲರನ್ನೂ ವಿಚಾರಣೆ ನಡ್ಸಿದ್ರು. ಆ ಸಂದರ್ಭದಲ್ಲಿ ರಾಜಾ ರಘವಂಶಿ ಮತ್ತು ಸೋನಮ್ ಇಬ್ಬರ ಟ್ರಕ್ಕಿಂಗ್ ಹೋಗಿಲ್ಲ. ಅವರ ಜೊತೆ ಇನ್ನೂ ಮೂವರು ಇದ್ರು ಅನ್ನೋದ್ ಕನ್ಫರ್ಮ್ ಆಗಿತ್ತು. ಹೀಗಾಗಿ ಅವರೇ ಸುಪಾರಿ ಹಂತಕರು ಅನ್ನೋದನ್ನ ಪೊಲೀಸ್ರು ಗೊತ್ತು ಮಾಡಿದ್ರು. ನಿರೀಕ್ಷೆ ಅಂತೆ ಹಾಗೇ ಆಗಿತ್ತು. ಸೋನಮ್ ತನ್ನ ಗಂಡನ ಹತ್ಯೆಗಾಗಿ 20 ಲಕ್ಷಕ್ಕೆ ಸುಪಾರಿ ಕೊಟ್ಟಿದ್ದಳು. ಆಗ ತಾನೆ ಮದುವೆಯಾಗಿದ್ದ ಸೋನಮ್ ಯಾಕೆ ಹಾಗೇ ಮಾಡಿದಳು ಅಂತಾ ನೋಡ್ತಾ ಹೋದ್ರೆ ಕಾಣಿಸೋದು ಆಕೆಗೆ ಒಬ್ಬ ಲವರ್ ಇದ್ದ ಅನ್ನೋದು.
ಸೋನಮ್ ತಂದೆಯದ್ದು ಸಣ್ಣ ಪ್ಲೇವುಡ್ ಕಾರ್ಖಾನೆಯೊಂದು ಇತ್ತು. ಅದೇ ಕಾರ್ಖಾನೆಯಲ್ಲಿ ರಾಜ್ ಕುಶ್ವಾಹ ಅನ್ನೋನು ಕೆಲ್ಸಕ್ಕೆ ಇದ್ದ. ಈ ಸೋನಮ್ ಏನಿದ್ದಾಳೆ ಈಕೆ ಆಗಾಗ ಕಾರ್ಖಾನೆಗೆ ಬಂದು ಹೋಗ್ತಾ ಇದ್ದಳು. ಅವರ ಸಂಬಳ ವ್ಯವಹಾರವನ್ನು ಈಕೆಯೇ ನೋಡಿಕೊಳ್ತಾ ಇದ್ದಳು. ಆವಾಗ್ಲೇ ನೋಡಿ ಸೋನಮ್‌ಗೂ, ರಾಜ್ ಕುಶ್ವಾಹಗೂ ಪರಿಚಯವಾಗಿದೆ. ಅದೇ ಪರೀಚಯ ಪ್ರೇಮಕ್ಕೆ ತಿರುಗಿದೆ. ಆದ್ರೆ, ಕಾರ್ಖಾನೆಯಲ್ಲಿ ಯಾರಿಗೂ ಸಂದೇಹ ಬರ್ತಾರದು ಅನ್ನೋ ಹಿನ್ನೆಲೆಯಲ್ಲಿ ಸೋನಮ್ ಅನ್ನ ದೀದಿ ಅಂತಾ ಕುಶ್ವಾಹ ಕರೆಯುತ್ತಿದ್ದ. ಆದ್ರೂ ಕಾರ್ಖಾನೆಯಲ್ಲಿ ಇದ್ದವರಿಗೆ ಇವರಿಬ್ಬರ ಪ್ರೀತಿ ಗೊತ್ತಾಗಿತ್ತು. ಆದ್ರೆ, ಸೋನಮ್ ಮದುವೆ ಆದ್ಮೇಲೆ ದೂರ ದೂರ ಆಗ್ತಾರೆ ಅಂತಾ ನಿರೀಕ್ಷೆ ಮಾಡಿದ್ದರು. ಯಾವುದೇ ಕಾರಣಕ್ಕೂ ಹತ್ಯೆ ಮಾಡೋ ಹೀನ ಕೆಲ್ಸಕ್ಕೆ ಇಳಿತಾರೆ ಅನ್ನೋ ನಿರೀಕ್ಷೆ ಅವಱರಿಗೂ ಇಲ್ಲವಾಗಿತ್ತು.
ಲವರ್ ಜೊತೆ ಸೇರಿ ಖತರ್ನಾಕ್ ಪ್ಲ್ಯಾನ್ ಮಾಡಿದ್ದ ಸೋನಮ್!
ಸೋನಮ್‌ಗೂ? ರಾಜ್ ಕುಶ್ವಾಹಗೂ? ಲವ್ ಇತ್ತು. ಹಾಗೇ ತಾವಿಬ್ಬರು ಮದುವೆ ಆಗ್ಬೇಕು ಅಂತಾನೂ ತೀರ್ಮಾನ ಮಾಡಿದ್ರು. ಆದ್ರೆ, ಅಪ್ಪಿ ತಪ್ಪಿ ಏನಾದ್ರೂ ತಾವ್ ಮದುವೆ ಆದ್ರೆ ಸೋನಮ್‌ಗೆ ತಮ್ಮ ತಂದೆ ಹಾರ್ಟ್ ಪೇಷಂಟ್ ಆಗಿರೋದ್ರಿಂದ ಸಮಸ್ಯೆ ಆಗುತ್ತೆ ಅಂತಾ ಯೋಚನೆ ಮಾಡಿದ್ದಾಳೆ. ಯಾಕಂದ್ರೆ, ರಾಜ್ ಕುಶ್ವಾಹ ಕೇವಲ ಕೆಲಸಗಾರನಾಗಿದ್ದ. ಹೀಗಾಗಿ ಯಾವುದೇ ಕಾರಣಕ್ಕೂ ತಂದೆ ಮದುವೆಗೆ ಒಪ್ಪಿಕೊಳ್ಳುವುದಿಲ್ಲ ಅನ್ನೋದ್ ಸೋನಮ್‌ಗೂ ಗೊತ್ತಿತ್ತು ಕುಶ್ವಾಹಗೂ ಗೊತ್ತಿತ್ತು. ಹೀಗಾಗಿ ಸೋನಮ್‌ಗೆ ಒಂದ್ ಮದುವೆ ಆಗ್ಲಿ ಅಂತಾ ತೀರ್ಮಾನ ಮಾಡ್ತಾರೆ. ಆವಾಗ ಮದುಮಗನನ್ನ ಸಾಯಿಸಿ ತಾವಿಬ್ಬರು ಜೊತೆಯಾಗಿ ಇರ್ಬೇಕು ಅಂತಾ ಪ್ಲಾನ್ ಮಾಡ್ಕೊಂಡಿದ್ದಾರೆ.
ಆ ಪ್ರಕಾರವೇ ರಾಜಾ ರಘುವಂಶಿಯ ಹತ್ಯೆಗೆ ಪ್ಲ್ಯಾನ್ ಮಾಡಿದ್ದಾರೆ. ಆಮೇಲೆ ರಘುವಂಶಿ ಮರ್ಡರ್ ಆದ್ಮೇಲೆ ಸೋನಮ್ ತಂದೆ ಶಾಕ್ ಆಗ್ತಾರೆ. ಅಂತಾ ಸಂದರ್ಭದಲ್ಲಿ ನಿಮ್ಮ ಮಗಳಿಗೆ ತಾನು ಬಾಳು ಕೊಡ್ತೀನಿ ಅಂತಾ ಕುಶ್ವಾಹ ಹೀರೋ ರೀತಿಯಲ್ಲಿ ಎಂಟ್ರಿಯಾಗೋ ತೀರ್ಮಾನವಾಗಿತ್ತು. ಎಲ್ಲವೂ ನಿರೀಕ್ಷೆ ಅಂತೇ ನಡೆದ್ರೆ ಖಂಡಿತ ಹಾಗೇ ಆಗ್ತಾ ಇತ್ತು. ಆದ್ರೆ, ಇಂದಿನ ತಂತ್ರಜ್ಞಾನ ಯುಗದಲ್ಲಿ ತಾವು ಏನೇ ಮಾಡಿದ್ರೂ ಪೊಲೀಸರ ಕೈಗೆ ಸಿಕ್ಕಿಕೊಳ್ತೀವಿ ಅನ್ನೋ ಸಾಮಾನ್ಯ ಜ್ಞಾನ ಇದ್ರೆ ಖಂಡಿತ ಅಂತಾ ಪ್ಲಾನ್ ಮಾಡ್ತಾ ಇರ್ಲಿಲ್ಲ. ಮರ್ಡರ್ ಮಾಡೋದಕ್ಕೂ ಹೋಗ್ತಾ ಇರ್ಲಿಲ್ಲ.
ಇದನ್ನೂ ಓದಿ:ಹೆಂಡ್ತಿ ಅಲ್ಲ ರಾಕ್ಷಸಿ; ಸೋನಮ್, ಲವರ್ ಸೇರಿ ಮಾಡಿದ್ದ ಪ್ಲಾನ್.. ಇಂಚಿಂಚೂ ಮಾಹಿತಿಯೂ ಬೆಚ್ಚಿ ಬೀಳಿಸುತ್ತೆ!
ರಘುವಂಶಿನ ಮದುವೆ ಆಗೋದಕ್ಕೆ ಸೋನಮ್‌ಗೆ ಇಷ್ಟ ಇರಲಿಲ್ಲ!
ಮೇ 11 ರಂದು ಮದುವೆಯಾಗಿತ್ತು. ಅದಕ್ಕೂ ಮುನ್ನವೇ ಸುಮಾರು 1 ತಿಂಗಳು ಹಿಂದೆ ನಿಶ್ಚಿತಾರ್ಥವಾಗಿತ್ತು. ಸಾಮಾನ್ಯವಾಗಿ ನಿಶ್ಚಿತಾರ್ಥ ಆದ್ಮೇಲೆ ಹುಡುಗು ಹುಡುಗಿ ಭೇಟಿ ಮಾಡೋದು ಸಹಜ. ಕನಿಷ್ಠ ಕಾಫಿ ಕುಡಿಯೋದಕ್ಕಾದ್ರೂ ಸೇರ್ತಾರೆ. ರಘುವಂಶಿಗೆ ತಾನು ತನ್ನ ಭಾವಿ ಪತ್ನಿ ಜೊತೆ ಮಾತಾಡ್ಬೇಕು. ಅವಳ ಜೊತೆ ಸುತ್ತಾಡ್ಬೇಕು ಅನ್ನೋ ಆಸೆ ಇತ್ತು. ಆದ್ರೆ, ಸೋನಮ್ ಒಂದೇ ಒಂದ್ ದಿನವೂ ಭೇಟಿಯಾಗಿರ್ಲಿಲ್ಲ. ಕಾರಣ ಏನು ಅಂತಾ ಕೇಳಿದ್ರೆ ಆಫೀಸ್‌ನಲ್ಲಿ ಕೆಲ್ಸ ಇರುತ್ತೆ ಅಂತಾ ಹೇಳಿಕೊಳ್ತಾ ಇದ್ದಳಂತೆ. ಆಕೆಯ ನಡೆ ನುಡಿ ನೋಡ್ತಾ ಇದ್ರೆ ಖಂಡಿತ ಆಕೆಗೆ ಮದುವೆ ಇಷ್ಟ ಇಲ್ಲ ಅನ್ನೋದ್ ಪಕ್ಕಾ ಆಗಿತ್ತು.
ಇಲ್ಲಿ ಯಾರದ್ದೋ ಸಂಚಿಗೆ ಬಲಿಯಾಗಿದ್ದು ಅಮಾನಯರಾಗಿದ್ದ ರಾಜಾ ರಂಘುವಂಶಿ. ಈ ತಪ್ಪಿಗೆ ಶಿಕ್ಷೆ ಆಗ್ಬೇಕು. ಆ ಶಿಕ್ಷೆ ಹೇಗಿರ್ಬೇಕು ಅಂದ್ರೆ ಇನ್ಮೇಲೆ ಮದುವೆ ಆದವ್ರು ಇಂತಾ ಯೋಚನೆಯನ್ನೂ ಮಾಡ್ಬಾರದು ಹಾಗಿರ್ಬೇಕು ಆ ಶಿಕ್ಷೆ.
ಸೋನಂಗೆ ರಘುವಂಶಿ ಇಷ್ಟ ಇಲ್ಲದೇ ಇದ್ರೆ ಮದುವೆ ಕ್ಯಾನ್ಸಲ್ ಮಾಡ್ಕೋಬಹುದಾಗಿತ್ತು. ಒಂದ್ ವೇಳೆ ಮದುವೆ ಆದ್ಮೇಲೆ ದೂರ ಆಗಬೇಕು ಅನಿಸಿದ್ರೆ ಅದ್ಕೆ ಕಾನೂನಿನಲ್ಲಿ ಅವಕಾಶವೂ ಇತ್ತು. ಆದ್ರೆ, ಅದೆಲ್ಲವನ್ನು ಬಿಟ್ಟು ತನ್ನ ಸ್ವಾರ್ಥಕ್ಕೆ ಇನ್ನೊಂದ್ ಜೀವ ಬಲಿ ಪಡೆದಿದ್ದು ಖಂಡಿತವಾಗಿಯೂ ತಪ್ಪು.
ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ